ಕಿವಿ ಬಂದ್‌ ಆಗಿದೆ ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಶಾಕ್...

By Suvarna NewsFirst Published Jan 21, 2022, 12:12 PM IST
Highlights
  • ಕಿವಿ ಬಂದ್‌ ಆಗಿದೆ ಎಂದು ಆಸ್ಪತ್ರಗೆ ಹೋದ
  • ಕಿಯೊಳಗೆ ಸೇರಿತ್ತು ಜಿರಳೆ
  • ನ್ಯೂಜಿಲ್ಯಾಂಡ್‌ ಆಕ್ಲೆಂಡ್‌ನಲ್ಲಿ ಘಟನೆ

ನ್ಯೂಜಿಲ್ಯಾಂಡ್‌(ಜ. 21): ಜಿರಳೆ ಎಂದರೆ ಬಹುತೇಕರು ಅಸಹ್ಯ ಪಡುವುದಲ್ಲದೇ ಭಯದಿಂದ ಓಡುವುದೇ ಹೆಚ್ಚು. ಅಂತಹ ಜಿರಳೆಯೊಂದು ಕಿವಿಯೊಳಗೆ ನುಗ್ಗಿದರೆ ಪರಿಸ್ಥಿತಿ ಹೇಗಾಗಿರಬಹುದು ನೀವೇ ಯೋಚಿಸಿ. ನ್ಯೂಜಿಲ್ಯಾಂಡ್‌ನ ವ್ಯಕ್ತಿಯೊಬ್ಬ ಕಿವಿ ಬಂದ್‌ ಆಗಿದೆ ಎಂದು ವೈದ್ಯರ ಬಳಿ ಹೋಗಿದ್ದು, ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಶಾಕ್‌ಗೊಳಗಾಗಿದ್ದು, ಆತನ ಕಿವಿಯೊಳಗಿದ್ದ ಜಿರಳೆಯನ್ನು ತೆಗೆದು ಹೊರಹಾಕಿದ್ದಾರೆ. 

ನ್ಯೂಜಿಲ್ಯಾಂಡ್‌ (New Zealand) ಆಕ್ಲೆಂಡ್‌ (Auckland)ನ ವ್ಯಕ್ತಿಗೆ ಮೂರು ದಿನಗಳಿಂದ ಕಿವಿ ಬಂದ್ ಆಗಿದೆ ಎಂಬಂತೆ ಭಾಸವಾಗುತ್ತಿತ್ತು. ಅವರಿಗೆ ಈಜುವ ಅಭ್ಯಾಸವಿದ್ದುದರಿಂದ ಈಜುವಾಗ ನೀರು ಕಿವಿಯೊಳಗೆ ಹೋಗಿ ಬಂದ್ ಆಗಿರಬೇಕೆಂದು ಅವರು ಭಾವಿಸಿದ್ದರು. ಆದರೆ ಮೂರು ದಿನ ಕಳೆದರು ಕಿವಿ ಸಹಜ ಸ್ಥಿತಿಗೆ ಬಂದಿಲ್ಲ. ಅಲ್ಲದೇ ಕಿವಿಯಲ್ಲಿ ಏನೋ ಇರುವಂತೆ ಅವರಿಗೆ ಅನಿಸಲು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅವರು ವೈದ್ಯರ ಬಳಿ ಹೋಗಿ ಕಿವಿಯ ತಪಾಸಣೆ ನಡೆಸಿದ್ದಾರೆ. ಬಳಿಕ ಕಿವಿಯನ್ನು ಪರೀಕ್ಷಿಸಿದ ವೈದ್ಯರು ಕಿವಿಯೊಳಗೆ ಸೇರಿಕೊಂಡಿದ್ದ ಜಿರಳೆಯನ್ನು ಹೊರಹಾಕಿದ್ದಾರೆ.

Vanshika Ear Piercing: ಮಾಸ್ಟರ್ ಆನಂದ್ ಪುತ್ರಿ ಕಿವಿ ಚುಚ್ಚುವ ವಿಡಿಯೋ ವೈರಲ್‌!

ಮಾಮೂಲಿಯಂತೆ ಈಜುವ ಅಭ್ಯಾಸವಿದ್ದ 40 ವರ್ಷದ ಝೇನ್ ವೆಡ್ಡಿಂಗ್ (Zane Wedding) ಅವರು ಅಂದು ಕೂಡ ಈಜಲು ಹೋಗಿದ್ದರು. ಈ ವೇಳೆ ಅವರಿಗೆ ಕಿವಿಯೊಳಗೇನೋ ಚಲಿಸಿದ ಅನುಭವವಾಗಿದೆ. ಆದರೆ ಕಿವಿ ತುರಿಸುವುದು ಆಗಿರಬಹುದು ಎಂದು ಭಾವಿಸಿದ ಅವರು ಅದನ್ನು ಆಚೆಗೆ ತಳ್ಳಿಬಿಟ್ಟಿದ್ದಾರೆ. ನಂತರ ಅವರು ಮನೆಗೆ ಬಂದು ನಿದ್ದೆಗೆ ಜಾರಿದ್ದು, ನಿದ್ದೆಯಿಂದ ಎದ್ದ ಬಳಿಕ ಕಿವಿ ಬಂದ್ ಆದಂತಹ  ಅನುಭವವಾಗಿದೆ. ಅಲ್ಲದೇ ಕಿವಿಯೊಳಗೆ ಏನೋ ಸುತ್ತುತ್ತಿರುವ ಅನುಭವವಾಗಿದೆ. 

ಮರುದಿನ ಅವರು ಕ್ಲಿಕಿಕ್‌ಗೆ ಹೋಗಿದ್ದು ಈ ವೇಳೆ ಅವರಿಗೆ ಕಿವಿಗೆ ಹಾಕಲು ಔಷಧಿ ಹಾಗೂ antibiotic ಮಾತ್ರೆಗಳನ್ನು ನೀಡಲಾಯಿತು. ಅಲ್ಲದೇ ತಲೆಯ ಒಂದು ಬದಿಗೆ ಬ್ಲೋಡ್ರೈ ಮಾಡುವಂತೆ ಹೇಳಲಾಯಿತು.  ಅದಾಗ್ಯೂ ಸರಿ ಹೋಗದಿದ್ದಲ್ಲಿ ಮತ್ತೆ ಕ್ಲಿನಿಕ್‌ಗೆ ಬರುವಂತೆ ಸೂಚಿಸಲಾಗಿತ್ತು. ಅದಾಗ್ಯೂ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋದ ಅನುಭವ ಅವರಿಗಾಯಿತು. ಜೊತೆಗೆ ನಿದ್ದೆಯೂ ಹಾರಿ ಹೋಯಿತು. 

ಸತ್ತ ಜಿರಳೆಗೆ ಜೀವ ನೀಡಿದ ಫಿಲಿಫೈನ್ಸ್‌ನ ಕಲೆಗಾತಿ

ನಡೆಯುತ್ತಿದ್ದರೆ ತಕ್ಷಣ ತಲೆ ತಿರುಗುವ ಅನುಭವವಾಗುತ್ತಿತ್ತು. ಮಲಗಿದಲ್ಲಿ ಕಿವಿಯ ಸುತ್ತ ನೀರು ಹರಿದಂತಹ ಅನುಭವವಾಗುತ್ತಿತ್ತು. ಅಲ್ಲದೇ ಅವರು ಕಿವಿಯನ್ನು ಸರಿಪಡಿಸುವ ಸಲುವಾಗಿ ಏನೂ ಮಾಡಲು ಸಾಧ್ಯವೋ ಅದೆಲ್ಲಾ ಪ್ರಯತ್ನಗಳನ್ನು ಮಾಡಿದರು.  ನಂತರ ಇದ್ದಕ್ಕಿದ್ದಂತೆ ಭಾನುವಾರ ರಾತ್ರಿ, ಈ ವಿಚಿತ್ರ ಸಂವೇದನೆ ನಿಂತುಹೋಯಿತು, ಆದರೆ ಕಿವಿ ಸಂಪೂರ್ಣ ಬಂದ್‌ ಆಗಿತ್ತು. ಜೊತೆಗೆ ಆ ಕಿವಿಯಿಂದ ಏನೂ ಕೇಳಿಸುತ್ತಿರಲಿಲ್ಲ. ಮರುದಿನ ಅವರು ಇಎನ್‌ಟಿ ತಜ್ಞರನ್ನು ನೋಡಲು ಹೋದರು. ಬಳಿಕ ವೈದ್ಯರು ಕಿವಿಯೊಳಗೆ ಪರೀಕ್ಷಿಸಿದಾಗ ಕಿವಿಯೊಳಗೆ ಕೀಟ ಇರುವುದು ಕಂಡು ಬಂದಿದೆ. ಬಳಿಕ ವೈದ್ಯರು ಜಿರಳೆಯನ್ನು ಹೊರತೆಗೆದಿದ್ದಾರೆ. 

click me!