ವಿಮಾನದಲ್ಲಿ ಏಕಾಂಗಿಯಾಗಿ ಇಡೀ ಪ್ರಪಂಚ ಸುತ್ತಿದ್ದ 19ರ ಮಹಿಳಾ ಪೈಲಟ್‌

By Suvarna News  |  First Published Jan 21, 2022, 3:07 PM IST
  • ಏಕಾಂಗಿಯಾಗಿ ಪ್ರಪಂಚ ಸುತ್ತಿದ 19ರ ತರುಣಿ
  • 19 ವರ್ಷ ಪ್ರಾಯದ ಜರಾ ರುದರ್‌ಫೋರ್ಡ್‌ನಿಂದ ಸಾಹಸ
  • ಬೆಲ್ಜಿಯನ್‌ ಬ್ರಿಟಿಷ್‌ ಪೈಲಟ್‌ ಆಗಿರುವ ಜರಾ 

ಹೆಣ್ಣು ಇಂದು ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ತನ್ನ ಚಾಪು ಮೂಡಿಸುತ್ತಿದ್ದಾಳೆ.  ಇಲ್ಲೊಬ್ಳು ತರುಣಿ ಪ್ರಪಂಚವನ್ನೇ ಏಕಾಂಗಿಯಾಗಿ ಸುತ್ತಿ ಬಂದಿದ್ದಾಳೆ. ಅದೂ ವಿಮಾನದಲ್ಲಿ. ಹೌದು ಜರಾ ರುದರ್‌ಫೋರ್ಡ್ (Zara Rutherford) ಎಂಬ 19 ವರ್ಷದ ಪೈಲಟ್‌ ಈಗ ವಿಮಾನದಲ್ಲಿ ಏಕಾಂಗಿಯಾಗಿ ಇಡೀ ಪ್ರಪಂಚ ಸುತ್ತಿದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಲ್ಜಿಯಂನ (Belgium)ನಲ್ಲಿ ಈಕೆ ಲ್ಯಾಂಡ್‌ ಆಗಿದ್ದು, ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿ ಪ್ರಪಂಚ ಸುತ್ತಿದ ಅತ್ಯಂತ ಕಿರಿಯ ಮಹಿಳೆ ಎಂಬ ಸಾಧನೆ ಇವರದಾಗಿದೆ.

ಬೆಲ್ಜಿಯನ್‌ ಬ್ರಿಟಿಷ್‌ ಪೈಲಟ್‌ ಆಗಿರುವ ಈ 19 ವರ್ಷ ಪ್ರಾಯದ ಜರಾ ರುದರ್‌ಫೋರ್ಡ್ , ತಾವು ಪ್ರಪಂಚ ಪರ್ಯಾಟನೆ ನಡೆಸಲು ಶುರು ಮಾಡಿದ 155 ದಿನಗಳ ನಂತರ ಪಶ್ಚಿಮ ಬೆಲ್ಜಿಯಂನಲ್ಲಿ ಗುರುವಾರ ತನ್ನ ಸಣ್ಣ ವಿಮಾನವನ್ನು ಲ್ಯಾಂಡ್‌ ಮಾಡಿದ್ದು, ಈ ಮೂಲಕ ಪ್ರಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ ನಡೆಸಿದ ಕಿರಿಯ ಮಹಿಳೆ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದರು.

Latest Videos

undefined

ಅವಳು ಅದನ್ನು ತನಗಾಗಿ, ತನ್ನ ಕುಟುಂಬಕ್ಕಾಗಿ ಮಾಡಿದಳು ಮತ್ತು ವಿಮಾನಯಾನ ಮತ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಯಸುವ ಹಾಗೂ ನಿಖರವಾದ ವಿಜ್ಞಾನಗಳಂತಹ ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಪ್ರಯತ್ನಿಸುತ್ತಿರುವ ಎಲ್ಲಾ ಯುವತಿಯರಿಗೆ ಆಕೆ ಈ ತನ್ನ ಸಾಹಸವನ್ನು ಅರ್ಪಿಸಿದ್ದಾಳೆ. 

ಇದು ಸಾಕಷ್ಟು ಸಮಯ, ತಾಳ್ಮೆ ಹಾಗೂ ಬಹಳಷ್ಟು ಶ್ರಮವನ್ನು ತೆಗೆದುಕೊಳ್ಳುತ್ತದೆ, ಆದರೆ ಇದು ನಂಬಲಸಾಧ್ಯವಾಗಿದೆ ಎಂದು ಆಕೆ ತನ್ನ  ಸಾಹಸದ ಬಳಿಕ ಹೇಳಿದ್ದಾಳೆ. ಈ ಸಾಹಸ ಅವಳಿಗೆ ಹೆದರಿಕೆಯಷ್ಟೇ ರೋಮಾಂಚನವನ್ನು ಕೂಡ ನೀಡಿತು. ಸೈಬೀರಿಯಾದ Siberia) ಹೆಪ್ಪುಗಟ್ಟಿದ ಟಂಡ್ರಾದಿಂದ ಫಿಲಿಪೈನ್ಸ್‌ನ (Philippine) ಟೈಫೂನ್‌ಗಳವರೆಗೆ ಹಾಗೂ ಅರೇಬಿಯನ್ ಮರುಭೂಮಿಯ  ಸಂಪೂರ್ಣ ಸೌಂದರ್ಯ ಎಲ್ಲವೂ ರೋಚಕವಾಗಿತ್ತು ಎಂದು ಆಕೆ ಹೇಳಿದ್ದಾಳೆ. 

ಅಪ್ಪ ಕೋವಿಡ್‌ನಿಂದ ಸಾವು, ಅಮ್ಮ ಕ್ಯಾನ್ಸರ್‌ಗೆ ಬಲಿ : ಬುಲ್ಲಿಬೈ ಮಾಸ್ಟರ್ ಮೈಂಡ್ 18 ರ ತರುಣಿಯ ರೋಚಕ ಕತೆ

ಒಂದು ಬಾರಿ, ಅವಳ ಒಂದು ಆಸನದ ಶಾರ್ಕ್ ಮೈಕ್ರೋಲೈಟ್ ವಿಮಾನವು ಕ್ಯಾಲಿಫೋರ್ನಿಯಾ ಕಾಡ್ಗಿಚ್ಚುಗಳ ದುರ್ವಾಸನೆಯಿಂದ ತುಂಬಿತ್ತು. ಯಾವುದೇ ಸಂಭಾವ್ಯ ಅಪಾಯದಿಂದ ಪಾರು ಮಾಡಲಾಗದಷ್ಟು ದೂರದಲ್ಲಿ ಆಕೆ ಹಾರಾಡುತ್ತಿದ್ದಳು. ಆಗಾಗ್ಗೆ ಅವಳು ಸಮುದ್ರಗಳು ಅಥವಾ ನಿರ್ಜನ ಭೂಮಿಯ ಮೇಲೆ ಸಂಪೂರ್ಣ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸುತ್ತಿದ್ದಳು. ಅಲ್ಲದೇ ಆಕೆಯು ತನ್ನ ಕುಟುಂಬ ಅಥವಾ ತನಗೆ ತಿಳಿದಿರುವ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲದ ಅಯಾನ್ ಎಂಬ ಪುಟ್ಟ ಸೈಬೀರಿಯನ್ ಹಳ್ಳಿಯಲ್ಲಿ ವಾರಗಟ್ಟಲೆ ಪ್ರತ್ಯೇಕವಾಗಿ ಕಳೆಯಬೇಕಾಯಿತು ಎಂದು ಆಕೆ ತನ್ನ ಪ್ರಪಂಚ ಪರ್ಯಾಟನೆಯ ಬಗ್ಗೆ ವಿವರಿಸಿದ್ದಾಳೆ. 

ಅವಳು ಬೆಲ್ಜಿಯಂಗೆ ಆಗಮಿಸುತ್ತಿದ್ದಂತೆ ಆಕೆಯ ಪೈಲಟ್ ಪೋಷಕರು ಮತ್ತು ಸಹೋದರ ಆಕೆಯನ್ನು ಅಪ್ಪುಗೆಯಿಂದ ಸ್ವಾಗತಿಸಿದರು. ಈ ಖುಷಿಯನ್ನು ನಾವು ಮೊದಲಿಗೆ ನಮ್ಮ ಕುಟುಂಬದೊಂದಿಗೆ ಸಂಭ್ರಮಿಸುತ್ತೇವೆ ಎಂದು ಆಕೆಯ ತಾಯಿ ಬೀಟ್ರಿಸ್ (Beatrice) ಹೇಳಿದರು.  ಆದರೆ ಜರಾ ಸುಮಾರು ಎರಡು ವಾರಗಳ ಕಾಲ ನಿದ್ದೆ ಮಾಡುವ ಮೂಲಕ ಈ ಖುಷಿಯನ್ನು ಆಚರಿಸಲು ಬಯಸಬಹುದು ಎಂದು ನಾನು ಭಾವಿಸುತ್ತೇನೆ. ಅವಳು ಎಚ್ಚರವಾದಾಗ,  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕದಲ್ಲಿ ಅವಳ ಹೆಸರಿರುವುದು ಎಂದು ಅವರು ಹೇಳಿದರು. 

325 ಗ್ರಾಂ ತೂಕದ ಅತ್ಯಂತ ಸಣ್ಣ ಮಗುವಿಗೆ ಜನ್ಮ ನೀಡಿದ 17ರ ಬಾಲೆ

2017 ರಲ್ಲಿ 30 ವರ್ಷದ ಅಮೆರಿಕನ್ ಏವಿಯೇಟರ್ ಶಾಸ್ತಾ ವೈಜ್ (Shaesta Waiz) ಇದೇ ರೀತಿ ಏಕಾಂಗಿ ಹಾರಾಟ ನಡೆಸಿ ದಾಖಲೆ ಮಾಡಿದ್ದರು. ಅದಾಗ್ಯೂ ಒಟ್ಟಾರೆ ದಾಖಲೆಯು ರುದರ್‌ಫೋರ್ಡ್‌ನ ಹೆಸರಿನಲ್ಲಿ ಇರುವುದಿಲ್ಲ, ಏಕೆಂದರೆ ಬ್ರಿಟನ್‌ನ ( Briton) ಟ್ರಾವಿಸ್ ಲುಡ್ಲೋ ಎಂಬಾಕೆ ಕಳೆದ ವರ್ಷ 18 ವರ್ಷ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.

ರುದರ್‌ಫೋರ್ಡ್‌ನ ಈ ಪ್ರಪಂಚ ಪರ್ಯಾಟನೆ ಮೂರು ತಿಂಗಳುಗಳನ್ನು ತೆಗೆದುಕೊಳ್ಳಬೇಕಾಗಿತ್ತು, ಆದರೆ ನಿರಂತರ ಕೆಟ್ಟ ಹವಾಮಾನ ಮತ್ತು ವೀಸಾ ಸಮಸ್ಯೆಗಳು ಅವಳನ್ನು ಕೆಲವೊಮ್ಮೆ ವಾರಗಳವರೆಗೆ ನೆಲದಲ್ಲೇ ಕೂರುವಂತೆ ಮಾಡಿತ್ತು. ಜೊತೆಗೆ  ಅವಳ ಸಾಹಸವನ್ನು ಸುಮಾರು ಎರಡು ತಿಂಗಳು ವಿಸ್ತರಿಸಿತು. ಗುರುವಾರ, ಮಳೆ, ತುಂತುರು, ಬಿಸಿಲಿನ ಜೊತೆ ಕೊರ್ಟ್ರಿಜ್ಕ್ ವಿಮಾನ ನಿಲ್ದಾಣದಲ್ಲಿ ಕಾಮನಬಿಲ್ಲು ಕೂಡ ಕಾಣಿಸಿತ್ತು. ಇದೂ ಕೂಡ ಅವಳು ತನ್ನ ಸಾಹಸದ ವೇಳೆ ಆಗಾಗ ಎದುರಿಸುತ್ತಿದ್ದ ಬದಲಾಗುತ್ತಿರುವ  ಕೆಟ್ಟ ಹವಾಮಾನಕ್ಕೆ ಉದಾಹರಣೆಯಾಗಿತ್ತು. 

ಬೆಲ್ಜಿಯಂನಲ್ಲಿ ಆಕೆ ಲ್ಯಾಂಡ್‌ ಆಗಲು ಬಯಸಿದಾಗ ಬೃಹತ್ V ಆಕಾರದಲ್ಲಿ ನಾಲ್ಕು ವಿಮಾನಗಳು ನಿಂತು ಆಕೆಗೆ ಬೆಂಗಾವಲು ಮಾಡಿದ ನಂತರ, ಆಕೆ ಅಂತಿಮವಾಗಿ ಇಳಿಯುವ ಮೊದಲು ವಿಮಾನ ನಿಲ್ದಾಣದಲ್ಲಿ ಹಾರಾಟ ನಡೆಸಿ ಕೆಳಗಿಳಿದರು.  ಈ ವೇಳೆ ಹರ್ಷೋದ್ಗಾರ ಮಾಡಿದ ಜನಸಮೂಹಕ್ಕೆ ಕೈ ಬೀಸಿದ ನಂತರ ಅವರು  ಯೂನಿಯನ್ ಜ್ಯಾಕ್ ಮತ್ತು ಬೆಲ್ಜಿಯನ್ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಾರಾಟ ನಡೆಸಿದರು. 

ಈಕೆ 52,000 ಕಿಲೋಮೀಟರ್‌ಗಳಿಗಿಂತ ಹೆಚ್ಚು (28,000 ನಾಟಿಕಲ್ ಮೈಲುಗಳು) ದೂರ ವಿಮಾನ ಹಾರಾಟ ನಡೆಸಿದ್ದಾಳೆ. ಈ ಸಂದರ್ಭದಲ್ಲಿ ಅವಳು ಐದು ಖಂಡಗಳಲ್ಲಿ ವಿಮಾನ ನಿಲ್ಲಿಸಿದ್ದಳು. ಜೊತೆಗೆ  41 ರಾಷ್ಟ್ರಗಳಿಗೆ ಭೇಟಿ ನೀಡಿದ್ದಳು. ಮುಂದೆ ಆಕೆ ಸೆಪ್ಟೆಂಬರ್‌ನಲ್ಲಿ ಬ್ರಿಟನ್ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಲು ವಿಶ್ವವಿದ್ಯಾನಿಲಯಕ್ಕೆ ಹೋಗಬೇಕೆಂದು ಬಯಸಿದ್ದಾಳೆ ಎಂದು ತಮ್ಮ ಮುಂದಿನ ಗುರಿ ಬಗ್ಗೆ ಜರಾ ಹೇಳಿದರು.
 

click me!