
ನವದೆಹಲಿ (ಮೇ.9): ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಖಂಡಿಸುವ ಸಲುವಾಗಿ ಪಾಕಿಸ್ತಾನದ ಸಂಸತ್ತು ವಿಶೇಷ ಅಧಿವೇಶನವನ್ನು ಕರೆದಿತ್ತು. ಈ ವೇಳೆ ಪಾಕಿಸ್ತಾನದ ಸಂಸದರು ಆಡಿರುವ ಮಾತುಗಳು ಪಾಕ್ ಸರ್ಕಾರ್ಕೆ ಮುಜುಗರ ಉಂಟು ಮಾಡಿದೆ.
ಶುಕ್ರವಾರ ಪಾಕಿಸ್ತಾನದ ಸಂಸದ, ಪಾಕಿಸ್ತಾನದ ಅಸೆಂಬ್ಲಿಯಲ್ಲಿಯೇ ತಮ್ಮ ದೇಶದ ಪ್ರಧಾನಿ ಹೇಡಿ ಎಂದು ಬಹಿರಂಗವಾಗಿ ವಾಗ್ದಳಿ ಮಾಡಿದ್ದಾರೆ. ಕನಿಷ್ಠ ಭಾರತದ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ಹೇಳುವ ಧೈರ್ಯ ಕೂಡ ತೋರಿಲ್ಲ. ಭಾರತದ ದಾಳಿಯನ್ನು ತಡೆಯಲು ನಮ್ಮ ಸೈನ್ಯ ವಿಫಲವಾಗಿದೆ. ಪಾಕಿಸ್ತಾನದ ಸೇನೆಯ ಮನೋಬಲವೇ ಕುಗ್ಗಿಹೋಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಟಿಪ್ಪು ಸುಲ್ತಾನ್ ಆಡಿದ್ದ ಎನ್ನಲಾದ ಮಾತನ್ನು ಉಲ್ಲೇಖಿಸಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್‌ರನ್ನು ತಿವಿದಿದ್ದಾರೆ. 'ನನಗೆ ಈ ವೇಳೆ ಟಿಪ್ಪು ಸುಲ್ತಾನನ ಮಾತು ನೆನಪಾಗುತ್ತದೆ. ಕತ್ತೆಗಳ ಗುಂಪಿಗೆ ಸಿಂಹ ನಾಯಕನಾಗಿದ್ದರೆ, ಆ ಕತ್ತೆಗಳು ಯುದ್ಧದಲ್ಲಿ ಸಿಂಹದಂತೇ ಹೋರಾಡುತ್ತದೆ. ಆದರೆ, ಸಿಂಹದಂತಿರುವ ಸೈನ್ಯಕ್ಕೆ ಕತ್ತೆಯೊಂದು ನಾಯಕನಾದರೆ ಇಡ ಸೈನ್ಸ್ ಯುದ್ಧದಲ್ಲಿ ಕತ್ತೆಯ ರೀತಿಯಲ್ಲೇ ಹೋರಾಟ ಮಾಡುತ್ತದೆ' ಎಂದು ಹೇಳಿದ್ದಾರೆ. ನಮಗೆ ಭಾರತ ಹಾಗೂ ಭಾರತದ ಸೈನ್ಯ ನೋಡಿದರೆ ಖುಷಿಯಾಗುತ್ತದೆ. ಅವರ ನಾಯಕ ಹಾಗೆ ಇರುವ ಕಾರಣ ಅವರ ಹೋರಾಟವೂ ಹಾಗೆ ಇದೆ ಎಂದಿದ್ದಾರೆ.
ಪಾಕಿಸ್ತಾನವನ್ನು ದೇವರೇ ಕಾಪಾಡಬೇಕು: ಆಪರೇಷನ್ ಸಿಂದೂರ ಬೆನ್ನಲ್ಲೇ ಪಾಕಿಸ್ತಾನದ ಕೆಲವರೇ ದೇಶದ ವಿರುದ್ಧ ಸಿಡೆದೇಳುತ್ತಿದ್ದು, ಭಾರತದಲ್ಲಿ ಮೋದಿಯಂಥ ನಾಯಕತ್ವ ಇದ್ದರೆ, ಸೇನೆಯೂ ದಾಳಿಯನ್ನು ಧೈರ್ಯವಾಗಿ ಎದುರಿಸುತ್ತೆ. ಅದು ಬಿಟ್ಟು ಇಲಿಯಂತಾದರೆ ಪ್ರತಿದಾಳಿ ಮಾಡುವುದಾದರೂ ಹೇಗೆಂದು ಪ್ರಶ್ನಿಸುತ್ತಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶಹಬಾಸ್ ಶರೀಫ್ ಸಹಾಯಕ್ಕಾಗಿ ವಿಶ್ವದೆದುರು ಕೈ ಚಾಚಿದ ಬೆನ್ನಲ್ಲೇ, ಪಾಕಿಸ್ತಾನದ ಸಂಸದ ಹಾಗೂ ನಿವೃತ್ತ ಮೇಜರ್ ತಹೀರ್ ಇಕ್ಬಾಲ್ ಸಹ ಪಾಕ್ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ದೇಶ ಇಂಥದ್ದೊಂದು ಪರಿಸ್ಥಿತಿ ಎದುರಿಸಲು ದುರ್ಬಲ ನಾಯಕತ್ವವೇ ಕಾರಣವೆಂದು ಹೇಳಿದ್ದರು..
ಪಾಕಿಸ್ತಾನದಲ್ಲಿ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಮುಸ್ಲಿಮರು ಅನುಭವಿಸುತ್ತಿದ್ದು, ದೇಶದ ದೌರ್ಬಲ್ಯದಿಂದಲೇ ಇಂಥ ವಿಶ್ವದೆದುರು ಕೈ ಚಾಚುವಂಥ ಪರಿಸ್ಥಿತಿ ಎದುರಾಗಿದೆ, ಎಂದು ತಹೀರ್ ಸಂಕಟ ತೋಡಿಕೊಂಡಿದ್ದರು. ಸಂಸತ್ತಿನಲ್ಲಿ ಮಾತನಾಡುತ್ತಲೇ ಕಣ್ಣೀರು ಹಾಕಿದ ತಾಹೀರ್, ಅಲ್ಲಾನಿಗೆ ಮಾತ್ರ ಪಾಕಿಸ್ತಾನವನ್ನು ಕಾಪಾಡಲು ಸಾಧ್ಯವೆಂದಿದ್ದರು. 'ನಮ್ಮ ದೇಶ ದುರ್ಬಲವಾಗಿದೆ. ಎಲ್ಲರೂ ಒಟ್ಟಾಗಿ ದೇವರ ಮುಂದೆ ನಮ್ಮನ್ನು ಕಾಪಾಡು,' ಎಂದು ಪ್ರಾರ್ಥಿಸಿಕೊಳ್ಳಬೇಕೆಂದು ಹೇಳಿ ಕಣ್ಣೀರು ಹಾಕಿದ್ದರು.
ಭಾರತ-ಪಾಕ್ ಯುದ್ಧ ಹಿನ್ನೆಲೆ ಏನು?: ಏಪ್ರಿಲ್ 22, 2025ರಂದು ಭಾರತದ ಮುಕುಟಮಣಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಹಿಂದೂಗಳನ್ನು ಧರ್ಮ ಕೇಳಿ ಬಲಿ ಪಡೆದ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರದ ಮೂಲಕ ಮೇ 7, 2025ರಂದು ತಕ್ಕ ಪ್ರತೀಕಾರ ತೋರಿದೆ. ನಾಗರಿಕರ ಪ್ರಾಣಕ್ಕೆ ಹಾನಿಯಾಗದಂತೆ ಪಾಕ್ ಉಗ್ರರ ಅಡಗು ತಾಣಗಳ ಮೇಲೆ ಭಾರತ ದಾಳಿ ನಡೆಸಿ, 9 ಉಗ್ರ ತಾಣಗಳನ್ನು ನಾಶ ಪಡಿಸಿದೆ. ಅಷ್ಟೇ ಅಲ್ಲ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕ.ಸೋಫಿಯಾ ಖುರೇಷಿ ಮೂಲಕ ಭಾರತೀಯ ಮಹಿಳೆಯ ಸಿಂಧೂರ ಕಿತ್ತು ಕೊಂಡಿದ್ದಕ್ಕೆ ಪ್ರತೀಕಾರವಾಗಿ ತೆಗೆದುಕೊಂಡ ಕ್ರಮಕ್ಕೆ ಇಡೀ ಜಗತ್ತಿಗೆ ಮಹಿಳೆಯರ ನೇತೃತ್ವದಲ್ಲಿಯೇ ಪ್ರತೀಕಾರ ತೀರಿಸಿದೆ. ಇಡೀ ಜಗತ್ತಿಗೆ ಈ ಮಹಿಳಾ ನಾಯಕರಿಂದಲೇ ಪತ್ರಿಕಾ ಗೋಷ್ಠಿ ಮಾಡಿಸಿ ಹೇಳಿದ್ದು ದೇಶದ ನಾರಿ ಶಕ್ತಿ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದಂತಾಗಿದೆ. ಅಷ್ಟೇ ಅಲ್ಲ ಹಿಂದೂ ಎನ್ನುವ ಕಾರಣಕ್ಕೆ 26 ಅಮಾಯಕಕನ್ನು ಬಲಿ ಪಡೆದಿದ್ದಕ್ಕೆ ಪ್ರತೀಕಾರವಾಗಿ ಹಿಂದು-ಮುಸ್ಲಿಂ ಜಂಟಿಯಾಗಿಯೇ ನಡೆದ ಕಾರ್ಯಾಚರಣೆ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿ, ದೇಶದ ಭದ್ರತಾ ವಿಷಯವಾಗಿ ಬಂದಾಗ ಭಾರತದಲ್ಲಿ ಮಹಿಳೆಯರೊಡಗೂಡಿ ಹಿಂದೂ-ಮುಸ್ಲಿಂ ಎಂದೆಂದಿಗೂ ಒಂದೇ ಎಂದು ಜಗತ್ತಿಗೆ ಸಾರಿ ಹೇಳಿದ ಭಾರತದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಭಾರತ ಅಳವಡಿಸಿಕೊಂಡಿರುವ ರಷ್ಯಾದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ಸ್ ಪಾಕಿಸ್ತಾನದ ಪಾಲಿಗೆ ದುಸ್ವಪ್ನವಾಗಿದೆ. ಭಾರತದ 15 ನಗರಗಳ ಮಿಲಿಟರಿ ಮತ್ತು ರೇಡಾರ್ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದರೂ ಅವುಗಳನ್ನೆಲ್ಲ ಆಗಸದಲ್ಲೇ ಕರಾರುವಕ್ಕಾಗಿ ಹೊಡೆದುರುಳಿಸುವಲ್ಲಿ ಈ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿದೆ. ಇದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನುಂಟುಮಾಡಿದೆ. 'ಸುದರ್ಶನ ಚಕ್ರ' ಎಂದೇ ಕರೆಯಲ್ಪಡುವ ಈ ಏರ್ ಡಿಫೆನ್ಸ್ ಸಿಸ್ಟಮ್ ಭಾರತದ ಪಾಲಿನ ರಕ್ಷಾ ಕವಚವಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ಎನ್ನಲಾದ ಈ ರಕ್ಷಣಾ ವ್ಯವಸ್ಥೆ 600 ಕಿ.ಮೀ.ದೂರದಿಂದಲೇ ತನ್ನನ್ನ ಬರುವ ಗುರಿಯನ್ನು ಗುರುತಿಸಿ, 400 ಕಿ.ಮೀ.ದ ದೂರದಲ್ಲೇ ಅವುಗಳನ್ನು ಹೊಡೆದುರುಳಿಸಬಲ್ಲದು. ಭಾರತ ಇಂಥ ನಾಲ್ಕು ಎಸ್-400 ಡಿಫೆನ್ಸ್ ಸಿಸ್ಟಮ್ ಅನ್ನು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ರಕ್ಷಣೆಗಾಗಿ ನಿಯೋಜಿಸಿದೆ.
ಭಾರತ-ಫಾಕಿಸ್ತಾನ ಸಂಘರ್ಷದ ಪ್ರತಿ ಕ್ಷಣದ ಮಾಹಿತಿಗಾಗಿ ಸುವರ್ಣ ನ್ಯೂಸ್‌ಗೆ ಟ್ಯೂನ್ ಆಗಿರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ