ಜಗತ್ತಿನ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತ ಪಾಕ್‌, ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡೋಹಾಗಿಲ್ಲ!

Published : May 09, 2025, 10:51 AM ISTUpdated : May 09, 2025, 10:57 AM IST
ಜಗತ್ತಿನ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತ ಪಾಕ್‌, ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡೋಹಾಗಿಲ್ಲ!

ಸಾರಾಂಶ

ಪಾಕಿಸ್ತಾನದ ಮಿಲಿಟರಿ ದಾಳಿಗೆ ಭಾರತ ತೀವ್ರ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಟ್ವಿಟರ್‌ನಲ್ಲಿ ಸಹಾಯಕ್ಕಾಗಿ ಮನವಿ ಮಾಡಿದ ಪಾಕಿಸ್ತಾನ ನಂತರ ಖಾತೆ ಹ್ಯಾಕ್ ಆಗಿದೆ ಎಂದಿದೆ. ಭಾರತದ ದಾಳಿಯ ನಂತರ ಷೇರುಪೇಟೆಯಲ್ಲಿ ಕುಸಿತ ಕಂಡು, ಎಟಿಎಂ ಹಣ ವಿತ್‌ಡ್ರಾ ಮಿತಿಗೊಳಿಸಲಾಗಿದೆ. ಡ್ರೋನ್ ದಾಳಿಗಳನ್ನು ಭಾರತ ತಡೆದಿದೆ.

ನವದೆಹಲಿ (ಮೇ.9): ಪಾಕಿಸ್ತಾನದ ತೀವ್ರ ಮಿಲಿಟರಿ ದಾಳಿಗೆ ಪ್ರತಿಯಾಗಿ ಅಷ್ಟೇ ತ್ವರಿತವಾಗಿ ಹಾಗೂ ಭಾರೀ ಪ್ರಮಾಣದಲ್ಲಿ ಗುರುವಾರ ರಾತ್ರಿ ಭಾರತ ತಿರುಗೇಟು ನೀಡಿದೆ. ಅದಕ್ಕೆ ಅಕ್ಷರಶಃ ಪಾಕಿಸ್ತಾನ ನಲುಗಿ ಹೋಗಿದೆ. ಇನ್ನೂ ಪೂರ್ಣ ಪ್ರಮಾಣದ ಯುದ್ಧವೇ ಆರಂಭವಾಗಿಲಿಲ್ಲ. ಭಾರತ ಇನ್ನೂ ತನ್ನ ಗ್ರೌಂಡ್‌ ಫೋರ್ಸ್‌ಅನ್ನು ಕ್ರೋಢೀಕರಣ ಮಾಡುವ ಕೆಲಸವೇ ಮಾಡಿಲ್ಲ. ಅಷ್ಟರಲ್ಲೇ ಪಾಕಿಸ್ತಾನದ ಸ್ಥಿತಿ ಹೈರಾಣಾಗಿ ಹೋಗಿದೆ.

ಶುಕ್ರವಾರ ಪಾಕಿಸ್ತಾನದ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗ ತನ್ನ ಟ್ವಿಟರ್‌ ಅಕೌಂಟ್‌ನಲ್ಲಿ ಮಾಡಿರುವ ಟ್ವೀಟ್‌ ಅಚ್ಚರಿಗೆ ಕಾರಣವಾಗಿದೆ. ಅದರೊಂದಿಗೆ ಜಗತ್ತಿನ ಎದುರು ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ನಿಂತಿರುವುದು ಕಷ್ಟವಾಗಿದೆ. 

ಶತ್ರುಗಳಿಂದ ಪಾಕಿಸ್ತಾನಕ್ಕೆ ಭಾರೀ ನಷ್ಟ ಉಂಟಾಗಿದ್ದು, ಅಂತಾರಾಷ್ಟ್ರೀಯ ಜೊತೆಗಾರರು ಹೆಚ್ಚಿನ ಸಾಲ ನೀಡುವಂತೆ ಮನವಿ ಮಾಡಿಕೊಂಡು ಟ್ವೀಟ್‌ ಮಾಡಿದೆ. ಇನ್ನೊಂದೆಡೆ ಪಾಕಿಸ್ತಾನ ಇದು ಹ್ಯಾಕರ್‌ಗಳ ಕೃತ್ಯ ಎಂದು ಜಾರಿಕೊಂಡಿದೆ. ಪಾಕಿಸ್ತಾನವು "ಅಂತರರಾಷ್ಟ್ರೀಯ ಪಾಲುದಾರರು ಪರಿಸ್ಥಿತಿಯನ್ನು ಶಮನಗೊಳಿಸಲು ಸಹಾಯ ಮಾಡುವಂತೆ" ಒತ್ತಾಯ ಮಾಡಿದೆ.

"ಶತ್ರುಗಳಿಂದ ಉಂಟಾದ ಭಾರೀ ನಷ್ಟದ ನಂತರ ಪಾಕಿಸ್ತಾನ ಸರ್ಕಾರವು ಅಂತರರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಕುಸಿತದ ಮಧ್ಯೆ, ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ನಾವು ಅಂತರರಾಷ್ಟ್ರೀಯ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ಇದು ಅಗತ್ಯವಾಗಿದೆ" ಎಂದು ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗವು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ನಂತರ, ಪಾಕಿಸ್ತಾನಿ ಸರ್ಕಾರ ತನ್ನ ಮಾತಿನಿಂದ ಹಿಂದೆ ಸರಿದು, ತಮ್ಮ ಎಕ್ಸ್ ಹ್ಯಾಂಡಲ್ ಅನ್ನು "ಹ್ಯಾಕ್ ಮಾಡಲಾಗಿದೆ" ಎಂದು ಹೇಳಿಕೊಂಡಿತು.

ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವಾಲಯವು "X" ನಲ್ಲಿನ ಪೋಸ್ಟ್ ಅನ್ನು ಟ್ವೀಟ್ ಮಾಡಿಲ್ಲ ಮತ್ತು ಅವರ "X ಖಾತೆಯನ್ನು ಹ್ಯಾಕ್ ಮಾಡಲಾಗಿದೆ" ಎಂದು ಹೇಳಿಕೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪಾಕಿಸ್ತಾನವು ಅಂತರರಾಷ್ಟ್ರೀಯ ಗಡಿಗಳು ಮತ್ತು ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಉದ್ವಿಗ್ನತೆಯನ್ನು ಪ್ರದರ್ಶಿಸಿದ ನಂತರ ಭಾರತವು ನಿನ್ನೆ ರಾತ್ರಿ ಇಸ್ಲಾಮಾಬಾದ್, ಲಾಹೋರ್ ಮತ್ತು ಸಿಯಾಲ್‌ಕೋಟ್‌ಗಳ ಮೇಲೆ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ ಈ ಘಟನೆಗಳು ಸಂಭವಿಸಿವೆ.

ಎಟಿಎಂ ವಿತ್‌ಡ್ರಾದಲ್ಲೂ ಮಿತಿ: ಮೂಲಗಳ ಪ್ರಕಾರ ಪಾಕಿಸ್ತಾನ ತನ್ನ ಜನರ ಮೇಲೂ ಕೆಲವು ನಿರ್ಬಂಧ ವಿಧಿಸಿದ್ದು, ಯುದ್ಧಕ್ಕಾಗಿ ಹಣ ಒಟ್ಟುಗೂಡಿಸಲು ಎಟಿಎಂಗಳಲ್ಲಿ ವಿತ್‌ಡ್ರಾ ಮಿತಿ ಹೇರಿದೆ. ಜನರು ಎಟಿಎಂಗಳಿಂದ ಮೂರು ಸಾವಿರ ರೂಪಾಯಿ ಮಾತ್ರವೇ ವಿತ್‌ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾಗಿ ವರದಿಯಾಗಿದೆ. 

ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಪಾಕಿಸ್ತಾನವು 50 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಭಾರತದ ಭೂಪ್ರದೇಶದ ಮೇಲೆ ಹಾರಿಸಿತು. ಆದರೆ, ಇವೆಲ್ಲವನ್ನೂ ಪ್ರತಿಯೊಂದನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳಾದ S-400 ಮತ್ತು ಆಕಾಶ್‌ ತೀರ್‌ ವ್ಯವಸ್ಥೆಯಿಂದ ಹೊಡೆದುರುಳಿಸಲಾಗಿದೆ. ಪಾಕಿಸ್ತಾನಿ ಸೇನೆಯು ಎಲ್‌ಒಸಿ ಉದ್ದಕ್ಕೂ ಕದನ ವಿರಾಮವನ್ನು ಉಲ್ಲಂಘಿಸಿ ನಾಗರಿಕ ಪ್ರದೇಶಗಳಲ್ಲಿ ಶೆಲ್ ದಾಳಿ ನಡೆಸಿ, ಕಟ್ಟಡಗಳು ಮತ್ತು ಜಾನುವಾರುಗಳಿಗೆ ಹಾನಿಯನ್ನುಂಟುಮಾಡಿತು. ಭಾರತೀಯ ಸೇನೆಯು ಸಮಾನ ಬಲದಿಂದ ಪ್ರತಿಕ್ರಿಯಿಸಿತು.

ಆರ್ಥಿಕ ದೃಷ್ಟಿಯಿಂದ, ಮೇ 7 ರಂದು ಪಾಕಿಸ್ತಾನ ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದರಿಂದ ಪಾಕಿಸ್ತಾನ ಭಾರೀ ನಷ್ಟವನ್ನು ಅನುಭವಿಸಿದೆ. ಬೆಂಚ್‌ಮಾರ್ಕ್ ಸೂಚ್ಯಂಕ 7.2% ಕುಸಿದ ನಂತರ ಪಾಕಿಸ್ತಾನ ಷೇರು ವಿನಿಮಯ ಕೇಂದ್ರವು ನಿನ್ನೆ ಒಂದು ಗಂಟೆ ವಹಿವಾಟನ್ನು ಸ್ಥಗಿತಗೊಳಿಸಿತು. ಭಾರತವು ಲಾಹೋರ್‌ನಲ್ಲಿ ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿದ ನಂತರ ಅದು ಸಂಭವಿಸಿದೆ.

ಫೇಕ್‌ ನ್ಯೂಸ್‌ ಎಂದ ಪಾಕಿಸ್ತಾನ: ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಕೃತ ಖಾತೆಯಿಂದ ಟ್ವೀಟ್‌ ಬಂದಿದ್ದರೂ ಅದನ್ನು ಪಾಕಿಸ್ತಾನ ಫೇಕ್‌ ನ್ಯೂಸ್‌ ಎಂದು ಹೇಳಿದೆ. ಈ ಅಕೌಂಟ್‌ ಹ್ಯಾಕ್‌ ಆಗಿರುವುದಾಗಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ