
ಇಸ್ಲಾಮಾಬಾದ್: ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಷಾಕ್ ದಾರ್ ಅವರು ಅಮೆರಿಕ-ಇರಾನ್ ಯುದ್ಧದ ಮಧ್ಯಸ್ಥಿಕೆ ಸಲುವಾಗಿ ಇಸ್ಲಾಮಾಬಾದ್‌ನಲ್ಲಿ ನಡೆದ 4 ವಿದೇಶಾಂಗ ಸಚಿವರ ಮಾತುಕತೆ ವೇಳೆ ಜಾರಿ ಬಿದ್ದ ಘಟನೆ ನಡೆಯಿತು. ಕೂಡಲೇ ಸಾವರಿಸಿಕೊಂಡು ಅವರು ಮೇಲೆದ್ದರು. ಈ ಸಭೆ ಇಂದು ಸೋಮವಾರ ಕೂಡ ಮುಂದುವರಿಯುವ ನಿರೀಕ್ಷೆ ಇದೆ.
ಭೀಕರ ಯುದ್ಧ ನಡೆಸುತ್ತಿರುವ ಇರಾನ್ ಮತ್ತು ಅಮೆರಿಕ ನಡುವೆ ಖುದ್ದು ನಾವೇ ನಿಂತು ಮಾತುಕತೆ ಆಯೋಜಿಸುತ್ತೇವೆ ಎಂದು ಮಧ್ಯಪ್ರಾಚ್ಯ ಸಮರಕ್ಕೆ ಸಂಧಾನಕಾರನಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿತ್ತು. ಸೌದಿ ಅರೇಬಿಯಾ, ಈಜಿಪ್ಟ್, ಮತ್ತು ಟರ್ಕಿ ದೇಶಗಳ ಜೊತೆ ಸಭೆ ನಡೆಸಿದ ಬಳಿಕ ಪಾಕಿಸ್ತಾನದಿಂದ ಈ ಘೋಷಣೆ ಹೊರಬಿದ್ದಿದೆ.
ಈ ದೇಶಗಳ ವಿದೇಶಾಂಗ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್, ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನವೇ ಸಂಧಾನ ಸಭೆ ಆಯೋಜಿಸುತ್ತದೆ. ಈ ಯುದ್ಧ ಯಾರಿಗೂ ಒಳಿತು ಮಾಡುವುದಿಲ್ಲ. ಇದು ಕೇವಲ ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಎಂದು ನಾವು ಒಪ್ಪಿಕೊಂಡಿದ್ದೇವೆ. ಈ ಸವಾಲಿನ ಸಮಯದಲ್ಲಿ ಮುಸ್ಲಿಂ ದೇಶಗಳ ಒಗ್ಗಟ್ಟು ಅತ್ಯಂತ ಮಹತ್ವದ್ದಾಗಿದೆ' ಎಂದರು. ಸೌದಿ, ಟರ್ಕಿ ಮತ್ತು ಈಜಿಪ್ಟ್ ಸಚಿವರೂ ತಮ್ಮ ಮಾತಿಗೆ ಒಪ್ಪಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ದೆವ್ವ ಹಿಡಿದಿದೆ ಅಂತ ಫ್ಲೈಟ್ ತುರ್ತು ದ್ವಾರ ತೆರೆಯಲೆತ್ನಿಸಿವನ ಬಂಧನ: ಬೆಂಗಳೂರು ಕಾಶಿ ವಿಮಾನದಲ್ಲಿ ಆತಂಕದ ಘಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ