ಟ್ರಂಪ್‌ ವಿರುದ್ಧ ತವರಲ್ಲೇ ಭುಗಿಲೆದ್ದ ಯುದ್ಧ !

Kannadaprabha News   | Kannada Prabha
Published : Mar 30, 2026, 07:04 AM IST
donald trump protest

ಸಾರಾಂಶ

ಇರಾನ್‌ ಮೇಲಿನ ಯುದ್ಧ ಸೇರಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹಲವು ನಿಲುವುಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪ್‌ನಲ್ಲಿ ‘ನೋ ಕಿಂಗ್ಸ್‌’ (ಸರ್ವಾಧಿಕಾರ ಬೇಡ) ಹೆಸರಿನ ಬೃಹತ್‌ ರ್‍ಯಾಲಿ ಹಾಗೂ ಪ್ರತಿಭಟನೆಗಳು ಶನಿವಾರ ನಡೆದಿವೆ.

ನ್ಯೂಯಾರ್ಕ್‌: ಇರಾನ್‌ ಮೇಲಿನ ಯುದ್ಧ ಸೇರಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹಲವು ನಿಲುವುಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪ್‌ನಲ್ಲಿ ‘ನೋ ಕಿಂಗ್ಸ್‌’ (ಸರ್ವಾಧಿಕಾರ ಬೇಡ) ಹೆಸರಿನ ಬೃಹತ್‌ ರ್‍ಯಾಲಿ ಹಾಗೂ ಪ್ರತಿಭಟನೆಗಳು ಶನಿವಾರ ನಡೆದಿವೆ. ಅಮೆರಿಕದಲ್ಲಿ ಪ್ರತಿಭಟನೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದಾರೆ. 50 ರಾಜ್ಯಗಳಲ್ಲಿ 3,100ಕ್ಕೂ ಹೆಚ್ಚು ರ್‍ಯಾಲಿಗಳು ಜರುಗಿವೆ.

ಅಮೆರಿಕದ ಮಿನಿಸೋಟಾ ನಗರದಲ್ಲಿ ಪ್ರತಿಭಟನೆ

ಅಮೆರಿಕದ ಮಿನಿಸೋಟಾ ನಗರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪದಲ್ಲಿತ್ತು. ಪ್ರಸಿದ್ಧ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿನ ಮೂಲಕ ಟ್ರಂಪ್‌ ಸರ್ಕಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ಅಮೆರಿಕದಲ್ಲಿ ನ್ಯೂಯಾರ್ಕ್ ನಗರದಿಂದ ಹಿಡಿದು ಡ್ರಿಗ್ಸ್ ಎಂಬ ಸಣ್ಣ ಊರಿನವರೆಗೆ ಎಲ್ಲೆಡೆ ರ್‍ಯಾಲಿಗಳು ನಡೆದವು. ಅಮೆರಿಕ ಮಾತ್ರವಲ್ಲದೆ ರೋಮ್, ಲಂಡನ್ ಮತ್ತು ಪ್ಯಾರಿಸ್‌ ಮೊದಲಾದ ಕಡೆಗಳಲ್ಲೂ ಪ್ರತಿಭಟನೆಗಳು ನಡೆದವು.

ವಾಷಿಂಗ್ಟನ್‌ನಲ್ಲಿ ಜನರು ‘ಕಿರೀಟ ಬಿಡು, ಕೋಡಂಗಿ’ ಎಂಬ ಬ್ಯಾನರ್‌ಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಹೆಚ್ಚಿನ ರ್‍ಯಾಲಿಗಳು ಶಾಂತಿಯುತವಾಗಿದ್ದವು. ಆದರೆ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನಾಕಾರರು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಬಾಟಲಿಗಳನ್ನು ಎಸೆದಿದ್ದರಿಂದ ಪೊಲೀಸರು ಅಶ್ರುವಾಯು ಬಳಸಿ, ಕೆಲವರನ್ನು ಬಂಧಿಸಿದರು.

ಏಕೆ ಪ್ರತಿಭಟನೆ?:

ಅಧ್ಯಕ್ಷ ಟ್ರಂಪ್‌ ಅವರ ಏಪಕಕ್ಷೀಯ ಯುದ್ಧ ನೀತಿ ಅಮೆರಿಕಕ್ಕೆ ಮಾರಕವಾಗುತ್ತಿದೆ. ಕದನ ಕಣದಲ್ಲಿ ಅಮೆರಿಕ ಬಹುತೇಕ ಏಕಾಂಗಿಯಾಗಿದೆ ಎಂಬುದು ಜನರ ಆರೋಪ. ಜತೆಗೆ, ಕಠಿಣ ವಲಸೆ ನೀತಿ, ತೃತೀಯ ಲಿಂಗಿಗಳ ಹಕ್ಕನ್ನು ಕಸಿದುಕೊಳ್ಳುವುದು ಹಾಗೂ ಸಿರಿವಂತರ ಆರ್ಥಿಕ ಶಕ್ತಿಯನ್ನು ವಿರೋಧಿಸಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷದ ಜೂನ್‌ ಹಾಗೂ ಅಕ್ಟೋಬರ್‌ನಲ್ಲಿ ನಡೆದ ಪ್ರತಿಭಟನೆಯಲ್ಲೂ ಲಕ್ಷಾಂತರ ಜನರು ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೌದಿ ಏರ್‌ಬೇಸ್‌ಗೆ ಇರಾನ್‌ ದಾಳಿ : ಅಮೆರಿಕ ವಿಮಾನ ಧ್ವಂಸ
ತೈಲ ಬಿಕ್ಕಟ್ಟು ತೀವ್ರ, ಶನಿವಾರದಿಂದ ಪಾಕಿಸ್ತಾನದಲ್ಲಿ ಸ್ಮಾರ್ಟ್ ಲಾಕ್‌ಡೌನ್ ಜಾರಿ ಸಾಧ್ಯತೆ