ರೀಲ್ಸ್‌ಗಾಗಿ ಬೆಟ್ಟಕ್ಕೆ ಬೆಂಕಿ ಹಚ್ಚಿದ ಟಿಕ್‌ಟಾಕ್‌ ಸ್ಟಾರ್

Published : May 20, 2022, 10:36 AM IST
ರೀಲ್ಸ್‌ಗಾಗಿ ಬೆಟ್ಟಕ್ಕೆ ಬೆಂಕಿ ಹಚ್ಚಿದ ಟಿಕ್‌ಟಾಕ್‌ ಸ್ಟಾರ್

ಸಾರಾಂಶ

ರೀಲ್ಸ್‌ಗಾಗಿ ಬೆಟ್ಟಕ್ಕೆ ಬೆಂಕಿ ಹಚ್ಚಿದ ಟಿಕ್‌ಟಾಕ್‌ ಸ್ಟಾರ್ ವಿವಾದಕ್ಕೀಡಾಗುತ್ತಿದ್ದಂತೆ ನಾನಲ್ಲ ನಾನಲ್ಲ ಎಂದ ಹುಮೈರಾ ಬೆಂಕಿ ಹಚ್ಚಿದ್ರು ನಾ ವಿಡಿಯೋ ಮಾಡ್ದೆ ಅಷ್ಟೆ ಎಂದ ಬ್ಯೂಟಿ

ಪಾಕಿಸ್ತಾನದ ಖ್ಯಾತ ಟಿಕ್‌ಟಾಕ್ ಸ್ಟಾರ್ ಒಬ್ಬಳು ಟಿಕ್‌ಟಾಕ್‌ ವಿಡಿಯೋ ಮಾಡುವುದಕ್ಕಾಗಿ ಬೆಟ್ಟಕ್ಕೆ ಬೆಂಕಿ ಹಚ್ಚಿದ್ದಾಳೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹುಮೈರಾ ಅಸ್ಗರಾ ಎಂಬಾಕೆಯೇ ಹೀಗೆ ಬೆಟ್ಟಕ್ಕೆ ಬೆಂಕಿ ಹಚ್ಚಿದ ಟಿಕ್‌ಟಾಕ್ ಸ್ಟಾರ್. 

ಹೊತ್ತಿ ಉರಿಯುತ್ತಿರುವ ಕಾಡಿನ ಮುಂದೆ ಈಕೆ ವಿಡಿಯೋ ಮಾಡಿ ಟಿಕ್‌ಟಾಕ್‌ನಲ್ಲಿ ಹರಿ ಬಿಟ್ಟಿದ್ದಾಳೆ. ಇದನ್ನು ನೋಡಿದ ಜನರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ತನ್ನ ವಿಡಿಯೋಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಹುಮೈರಾ ಅಸ್ಗರಾ, ಬೆಂಕಿ ಹಚ್ಚಿದ್ದು ನಾನಲ್ಲ ನಾನಲ್ಲ ಎಂದು ಹೇಳಿದ್ದಾಳೆ. ಜನರಿಗೆ ವಾಸ್ತವದ ಅರಿವಿಲ್ಲ ಎಂದು ಹೇಳಿದ ಆಕೆ ತಾನು ಬೆಂಕಿ ಹಚ್ಚಿಲ್ಲ, ವಿಡಿಯೋ ಮಾಡಲು ಬೆಟ್ಟದ ಬಳಿ ಬಂದಾಗ ಬೆಂಕಿ ಹೊತ್ತಿ ಉರಿಯುತ್ತಿತ್ತು. ಅದರ ಮುಂದೆ  ವಿಡಿಯೋವನ್ನು ಮಾಡಿದ್ದು ಹಾನಿಕಾರಕವಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

ವಿಡಿಯೋದಲ್ಲಿ ಆಕೆ ಸಿಲ್ವರ್ ಬಣ್ಣದ ಗವನ್ ಹಾಕಿಕೊಂಡಿದ್ದು, ಅವಳ ಹಿಂಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಅವಳ ಪಕ್ಕದಲ್ಲೇ ವ್ಯಕ್ತಿಯೊಬ್ಬ ನಿಂತುಕೊಂಡಿದ್ದಾನೆ. ಈ ವೇಳೆ ಆಕೆ, 'ಗಯ್ಸ್‌ ಇಲ್ಲಿ ನೋಡಿ ನಾವು ಇಲ್ಲಿಗೆ ಬಂದಿದ್ದು, ಇಲ್ಲಿ ಕಾಡು ಹೊತ್ತಿ ಉರಿಯುತ್ತಿದೆ. ಈ ಬಗ್ಗೆ ಆತನನ್ನು ಕೇಳಿದಾಗ ಆತ ಏನು ಹೇಳಿದ ನೋಡಿ' ಎಂದು ಹುಮೈರಾ ಹೇಳುತ್ತಾಳೆ

ಬಾಹ್ಯಾಕಾಶದಲ್ಲೂ ಟಿಕ್‌ಟಾಕ್ ಹಾವಳಿ: ಸ್ಪೇಸ್‌ಎಕ್ಸ್ ಗಗನಯಾತ್ರಿ ಶೇರ್‌ ಮಾಡಿದ ಈ ವಿಡಿಯೋ ನೋಡಿ

ಈ ವೇಳೆ ಆತ ತಾನೇ ಬೆಟ್ಟಕ್ಕೆ ಬೆಂಕಿ ಹಚ್ಚಿದ್ದಾಗಿ ಹೇಳುತ್ತಾನೆ. ಅಲ್ಲಿ ಸಾಕಷ್ಟು ದೊಡ್ಡ ದೊಡ್ಡ ಹಾವುಗಳಿದ್ದು, ಅವುಗಳನ್ನು ಅಲ್ಲಿಂದ ಓಡಿಸಲು ಪೊದೆಗಳಿಗೆ ಬೆಂಕಿ ಹಚ್ಚಿದ್ದಾಗಿ ಆತ ಹೇಳುತ್ತಾನೆ. ಅಲ್ಲದೇ ಈ ಹಾವುಗಳು ಇಲ್ಲಿ ಮಕ್ಕಳ ಪಾಲಿಗೆ ಅಪಾಯಕಾರಿಯಾಗಿವೆ. ಈ ಕಾರಣಕ್ಕೆ ಬೆಂಕಿ ಹಚ್ಚಿ ಹಾವುಗಳನ್ನು ಓಡಿಸುತ್ತಿರುವುದಾಗಿ ಆತ ಹೇಳುತ್ತಾನೆ. ಒಟ್ಟಿನಲ್ಲಿ ಬೆಂಕಿ ಹಚ್ಚಿದ್ದು ತಾನಲ್ಲ, ಯಾರೋ ಹಚ್ಚಿದ ಬೆಂಕಿಯಲ್ಲಿ ಚಳಿ ಕಾಯ್ಸಿಕೊಂಡೆ ಅಷ್ಟೇ ಎಂಬಂತೆ ಹುಮೈರಾ ಹೇಳಿದ್ದಾಳೆ. ಟಿಕ್‌ಟಾಕ್‌ನಲ್ಲಿ ಹುಮೈರಾ ಒಂದು ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 

ಟಿಕ್‌ಟಾಕ್‌ ಮೂಲಕ ಯುವಕನ ಮೋಹಕ್ಕೆ ಮನಸೋತು ಬಂದ 2 ಮಕ್ಕಳ ತಾಯಿ, ಇದೀಗ ಕಂಗಾಲು
 

ಕೆಲವು ಟಿಕ್‌ಟಾಕ್‌ ಸ್ಟಾರ್‌ಗಳು ತಮ್ಮ ವಿಡಿಯೋಗೆ ಅತೀ ಹೆಚ್ಚು ಲೈಕ್‌ ಪಡೆಯಲು ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಈಗ ನಾವು ಹೇಳಲು ಹೊರಟಿರುವುದು ಕೂಡ ಇಂತಹದ್ದೇ ಟಿಕ್‌ಟಾಕ್‌ ಹುಚ್ಚಾಟದ ಕತೆ. ಈ ವಿಡಿಯೋ ಶ್ರೀಲಂಕಾದ್ದಾಗಿದ್ದು, ವಿಡಿಯೋ ನೋಡಿದ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟಿಕ್‌ಟಾಕರ್ ಒಬ್ಬ ರಸ್ತೆಯಲ್ಲಿ ಬರುತ್ತಿದ್ದ ಆನೆಯ ಮೇಲೆ ದೌರ್ಜನ್ಯ ಮಾಡುತ್ತಿರುವ ವಿಡಿಯೋ ಇದಾಗಿದೆ.

ಆಗಿರುವ ವಿಡಿಯೋವನ್ನು ಪೂರ್ಣಾ ಸೆನೆವಿರತ್ನ (Poorna Seneviratne) ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವಿಡಿಯೋವನ್ನು ಮೂಲತಃ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕಿರು ವೀಡಿಯೊದಲ್ಲಿ, @shashikagimhandha ಎಂಬ ಹೆಸರಿನ ಖಾತೆ ಹೊಂದಿರುವ ಟಿಕ್‌ಟಾಕ್‌ ಬಳಕೆದಾರ ತಮ್ಮ ಕಾರಿನ ಮೂಲಕ ಕಾಡಾನೆಯನ್ನು ಬೆದರಿಸುತ್ತಿರುವ ದೃಶ್ಯ ಕಾಣಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ