
ನವದೆಹಲಿ(ಮೇ.20): ಕೋವಿಡ್ ಸಾಂಕ್ರಾಮಿಕ ಬೆನ್ನಲ್ಲೇ, ಯುರೋಪ್, ಉತ್ತರ ಅಮೆರಿಕದ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕು ನಿಧಾನವಾಗಿ ವ್ಯಾಪಿಸುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮಂಕಿಪಾಕ್ಸ್ ಮೇಲೆ ನಿಗಾ ಇಟ್ಟಿದ್ದು, ಅದು ಲೈಂಗಿಕ ನೆಟ್‌ವರ್ಕ್ನಿಂದ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಯುರೋಪ್‌ನ ಸ್ಲೇನ್ ಮತ್ತು ಪೋರ್ಚುಗಲ್‌ನಲ್ಲಿ 40ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಂಡಿದೆ. ಜೊತೆಗೆ ಬ್ರಿಟನ್, ಅಮೆರಿಕ, ಕೆನಡಾದಲ್ಲೂ ಪ್ರಕರಣಗಳು ದಾಖಲಾಗಿದೆ. ವೈರಸ್‌ನಿಂದ ಕಾಣಿಸಿಕೊಳ್ಳವು ಈ ಸೋಂಕು ಸಾಮಾನ್ಯವಾಗಿ ಹೆಚ್ಚಿನ ಅಪಾಯ ಮಾಡುವುದಿಲ್ಲ. ಸೋಂಕಿತರ ಸಾವಿನ ಪ್ರಮಾಣ ಶೇ.1ರಷ್ಟುಮಾತ್ರ ಇರುತ್ತದೆ. ಆದರೆ ಇದರಲ್ಲೇ ಕೆಲವು ಮಾರಣಾಂತಿಕ ಮಾದರಿಯು ಶೇ.10ರಷ್ಟುಸೋಂಕಿತರ ಸಾವಿಗೆ ಕಾರಣವಾಗಬಲ್ಲಷ್ಟು ಅಪಾಯಕಾರಿಯಾಗಿದೆ.
ಕರ್ನಾಟಕದಲ್ಲಿ 5 ರಲ್ಲಿ 4 ಮಗುವಿಗೆ ಇನ್ನೂ ಕೊರೋನಾ ಲಸಿಕೆ ಆಗಿಲ್ಲ
ಏನಿದು ಸೋಂಕು?:
ಇದೊಂದು ವೈರಲ್ ಸೋಂಕಾಗಿದ್ದು, ಬಹುಪಾಲು ಸಿಡುಬನ್ನು ಹೋಲುತ್ತದೆ. ಮೊದಲ ಬಾರಿಗೆ 1958ರಲ್ಲಿ ಪತ್ತೆಯಾದ ಈ ಸೋಂಕು, 1970ರಲ್ಲಿ ಮೊದಲ ಬಾರಿ ಮಾನವರಲ್ಲಿ ಕಾಣಿಸಿಕೊಂಡಿತ್ತು. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುತ್ತದೆ. ಸೋಂಕಿತ ಪ್ರಾಣಿಗಳು ಕಚ್ಚುವುದರಿಂದ ಅಥವಾ ಅವುಗಳ ರಕ್ತ, ವಿಸರ್ಜಿತ ವಸ್ತುಗಳ ಸಂಪರ್ಕದಿಂದ, ಸೋಂಕಿತ ಪ್ರಾಣಿಗಳ ಮಾಂಸ ತಿನ್ನುವುದರಿಂದ ಈ ವೈರಸ್ ಹಬ್ಬಬಹುದು. ಜ್ವರ, ಸ್ನಾಯುಸೆಳೆತ ಮತ್ತು ಚಳಿ ಈ ರೋಗದ ಲಕ್ಷಣಗಳಾಗಿವೆ.
ಡಬ್ಲ್ಯೂಎಚ್‌ಒ ಎಚ್ಚರಿಕೆ:
ಮಂಕಿಪಾಕ್ಸ್ ಮೇಲೆ ಗಮನ ಇರಿಸಲಾಗಿದೆ. ಕೋವಿಡ್ ನಂತರ ಈ ವೈರಸ್ ಜಗತ್ತನ್ನು ಕಾಡಬಹುದು. ಪ್ರಸ್ತುತ ಈ ಸೋಂಕು ಯಾವ ಪ್ರಮಾಣದಲ್ಲಿ ಹಬ್ಬುತ್ತಿದೆ ಮತ್ತು ಇದರಿಂದ ಉಂಟಾಗುವ ಪರಿಣಾಮಗಳನ್ನು ಪತ್ತೆ ಹಚ್ಚಲು ಅಧ್ಯಯನ ಆರಂಭಿಸಲಾಗಿದೆ. ಮೇ ಆರಂಭದಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಯಾವ ಮೂಲದಿಂದ ಮನುಷ್ಯರಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಸೋಂಕು ಲೈಂಗಿಕ ಜಾಲದಿಂದ ಹಬ್ಬುತ್ತಿದೆ ಎಂದು ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ