
ಇಸ್ಲಾಮಾಬಾದ್(ಏ.07): ವಿಶ್ವಾಸ ಮತ ಯಾಚನೆ ಮಾಡದೆ ಅಸೆಂಬ್ಲಿ ವಿಸರ್ಜಿಸಿದ ಇಮ್ರಾನ್ ಖಾನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಅವಿಶ್ವಾಸ ನಿರ್ಣಯ ಮೇಲೆ ಮತದಾನ ಅಸಂವಿಧಾನಿಕವಲ್ಲ. ಅಸೆಂಬ್ಲಿ ವಿಸರ್ಜಿಸುವ ನಿರ್ಧಾರ ಸಂವಿಧಾನ ಬಾಹಿರ ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಏಪ್ರಿಲ್ 9 ರಂದು ಅವಿಶ್ವಾಸ ನಿರ್ಣಯದ ಮೇಲೆ ಮತದಾನ ಮಾಡಲು ಆದೇಶ ನೀಡಿದೆ.
ಐವರು ನ್ಯಾಯಾಧೀಶರ ಪೀಠ ಈ ಮಹತ್ವದ ಆದೇಶ ನೀಡಿದೆ. ವಿಶ್ವಾಸ ಮತಯಾಚನೆ ಮಾಡದೆ, ಅಸೆಂಬ್ಲಿ ವಿಸರ್ಜಿಸಿದ ಇಮ್ರಾನ್ ಖಾನ್ ನಿರ್ಧಾರ ಅಸಂವಿಧಾನಿಕ ಎಂದು ಐವರು ನ್ಯಾಯಧೀಶರನ್ನೊಳಗೊಂಡ ಪೀಠ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಿಡಿಸಿದೆ.
ಇಮ್ರಾನ್ ಖಾನ್ 3ನೇ ಪತ್ನಿ ಆಪ್ತೆಗೆ ಬಂಧನ ಭೀತಿ, ದುಬೈಗೆ ಪಲಾಯನ!
ಪಾಕಿಸ್ತಾನ ಸಂಸತ್ ವಿಸರ್ಜಿಸುವ ಇಮ್ರಾನ್ ಖಾನ್ ಪ್ರಸ್ತಾವನೆಯನ್ನು ಪಾಕಿಸ್ತಾನ ಅಧ್ಯಕ್ಷ ಅರಿಫ್ ಅಲ್ವಿ ಅರ್ಧ ಗಂಟೆಯಲ್ಲಿ ಅಂಗೀಕಾರ ಮಾಡಿದ್ದರು. ಆದರೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಇದರ ವಿರಿುದ್ಧ ಆದೇಶ ನೀಡಿದೆ. ಅಸೆಂಬ್ಲಿ ಮರುಸ್ಥಾರಿಸಲು ಆದೇಶಿಸಿದೆ. ಇಷ್ಟೇ ಅಲ್ಲ ಪಾಕಿಸ್ತಾನ ವಿಪಕ್ಷಗಳಿಗೆ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಿದೆ.
ಇಮ್ರಾನ್ ಖಾನ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ವಿರೋಧ ಪಕ್ಷಗಳಿಗೆ ಈ ನಿರ್ಧಾರ ಇನ್ನಿಲ್ಲದ ಸಂತಸ ತಂದಿದೆ. ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಅವಕಾಶ ಕೇಳಿದ್ದ ವಿರುದ್ಧ ಇಮ್ರಾನ್ ಖಾನ್ ಗರಂ ಆಗಿದ್ದರು. ಇದು ಪಾಕಿಸ್ತಾದ ಬಾಹ್ಯ ಶಕ್ತಿಗಳು ಪಾಕಿಸ್ತಾನ ಸರ್ಕಾರ ನಿಯಂತ್ರಿಸಲು ಯತ್ನಿಸುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಅಸೆಂಬ್ಲಿ ವಿಸರ್ಜಿ ಚುನಾವಣೆಗೆ ಹೋಗುವುದಾಗಿ ಇಮ್ರಾನ್ ಖಾನ್ ಹೊಸ ದಾಳ ಉರುಳಿಸಿದ್ದರು.
Pakistan ಪ್ರಧಾನಿ ಪದವಿಯೇ ಪಾಕ್ ಗೆ ಶಾಪ!
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಕೆಡವಲು ವಿದೇಶಿ ಸಂಚು ನಡೆದಿತ್ತು’ ಎಂಬ ಪತ್ರದ ಬಗ್ಗೆ ಚರ್ಚಿಸಿದ್ದ ಪಾಕ್ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯ ವಿವರಗಳನ್ನು ಸುಪ್ರೀಂ ಕೋರ್ಟ್ ಕೇಳಿತ್ತು. ಈ ಕಾರಣ ನೀಡಿ ಇಮ್ರಾನ್ ಖಾನ್ ವಿದೇಶಿ ಸಂಚು ನಡೆಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ಅಸೆಂಬ್ಲಿ ವಿಸರ್ಜಿಸಲು ಪಾಕಿಸ್ತಾನ ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸರ್ಕಾರ ಕೆಡವಲು ನಡೆಸಿದ ವಿದೇಶಿ ಸಂಚಿನ ಭಾಗವೇ ಅವಿಶ್ವಾಸ ನಿರ್ಣಯ’ ಎಂದು ಹೇಳಿದ್ದ ಪಾಕ್ ಸಂಸತ್ತಿನ ಉಪ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರು, ನಿರ್ಣಯವನ್ನು ತಿರಸ್ಕರಿಸಿದ್ದರು. ಬಳಿಕ ದೇಶದ ಅಧ್ಯಕ್ಷರು ಸಂಸ್ತತನ್ನು ವಿಸರ್ಜಿಸಿದ್ದರು. ಉಮರ್ ಅಟಾ ಬಂಡಿಯಾಲ್, ವಿದೇಶಿ ಸಂಚು ನಡೆದಿದೆ ಎಂಬ ಪತ್ರದ ಬಗ್ಗೆ ಚರ್ಚಿಸಿದ್ದ ಭದ್ರತಾ ಮಂಡಳಿ ಸಭೆಯ ವಿವರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.
ಇದರ ನಡುವೆ ಇಮ್ರಾನ್ ಶೀಘ್ರದಲ್ಲೇ ಚುನಾವಣೆ ನಡೆಸಿ ಮತ್ತೆ ಅಧಿಕಾರಕ್ಕೆ ಏರಲು ಪ್ಲಾನ್ ಮಾಡಿದ್ದರು. ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ದಿನಾಂಕಗಳನ್ನು ಸೂಚಿಸುವಂತೆ ಬುಧವಾರ ಚುನಾವಣಾ ಆಯೋಗಕ್ಕೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಶೀಘ್ರ ಸಭೆ ನಡೆಸಲಾಗುವುದು ಎಂದು ಪಾಕಿಸ್ತಾನದ ಚುನಾವಣಾ ಆಯೋಗದ ವಕ್ತಾರ ಹೇಳಿದ್ದಾರೆ. ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ಮತ ನಿರ್ಣಯವನ್ನು ಮಂಡಿಸದೇ ನ್ಯಾಶನಲ್ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ ಘಟನೆಯ ಕಾನೂನುಬದ್ಧತೆಯ ಕುರಿತು ಸುಪ್ರೀಂ ಕೋರ್ಚ್ ಕಳೆದ ನಾಲ್ಕು ದಿನಗಳಿಂದ ವಿಚಾರಣೆ ನಡೆಸುತ್ತಿದ್ದು, ಈ ನಡುವೆ ಆದೇಶ ಹೊರಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ