ಪಾಕ್‌ ಸಂಸತ್ತಲ್ಲಿ ಅವಿಶ್ವಾಸ ಗೊತ್ತುವಳಿ: ಇಮ್ರಾನ್‌ ಖಾನ್‌ಗಿಂದು ಅಗ್ನಿಪರೀಕ್ಷೆ

Published : Apr 09, 2022, 04:29 AM IST
ಪಾಕ್‌ ಸಂಸತ್ತಲ್ಲಿ ಅವಿಶ್ವಾಸ ಗೊತ್ತುವಳಿ: ಇಮ್ರಾನ್‌ ಖಾನ್‌ಗಿಂದು ಅಗ್ನಿಪರೀಕ್ಷೆ

ಸಾರಾಂಶ

*  ಇಮ್ರಾನ್‌ ಸೋಲು ಬಹುತೇಕ ಖಚಿತ *  ಸಂಸತ್‌ ಕಲಾಪಕ್ಕೂ ಮುನ್ನವೇ ರಾಜೀನಾಮೆ ನೀಡಿ ಮುಖಭಂಗ ತಪ್ಪಿಸಿಕೊಳ್ತಾರಾ ಪ್ರಧಾನಿ? * ಪಾಕಿಸ್ತಾನ ಸಂಸತ್ತು ವಿಸರ್ಜನೆ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್‌  

ಇಸ್ಲಾಮಾಬಾದ್‌(ಏ.09):  ಪಾಕಿಸ್ತಾನದ(Pakistan) ಪ್ರಧಾನಿ ಇಮ್ರಾನ್‌ ಖಾನ್‌(Imran Khan) ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲೆ ಶನಿವಾರ ಬೆಳಗ್ಗೆ ನ್ಯಾಷನಲ್‌ ಅಸೆಂಬ್ಲಿಯಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಇಮ್ರಾನ್‌ ಅವರ ತೆಹ್ರೀಕ್‌ ಎ ಇನ್ಸಾಫ್‌ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿರುವ ಕಾರಣ, ಇಮ್ರಾನ್‌ ಸೋಲು ಬಹುತೇಕ ಖಚಿತವಾಗಿದೆ.

ಅವಿಶ್ವಾಸ ಗೊತ್ತುವಳಿಗೆ ಗೆಲುವಾಗಿ ಇಮ್ರಾನ್‌ ಪದಚ್ಯುತಿಯಾದರೆ, ಇಂಥ ಕುಖ್ಯಾತಿಗೆ ಗುರಿಯಾದ ಮೊದಲ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ. ಹೀಗಾಗಿ ಶನಿವಾರ ಅವರು ಅವಿಶ್ವಾಸ ಗೊತ್ತುವಳಿ ಎದುರಿಸುತ್ತಾರೋ? ಅಥವಾ ಅದಕ್ಕೆ ಮುನ್ನವೇ ರಾಜೀನಾಮೆ ನೀಡಿ ಮುಖಭಂಗ ತಪ್ಪಿಸಿಕೊಳ್ಳುತ್ತಾರೋ ಎಂಬ ಕುತೂಹಲ ಇದೆ.

Political Crisis ಇಮ್ರಾನ್ ಖಾನ್ ಇನ್ಮುಂದೆ ಪಾಕಿಸ್ತಾನ ಪ್ರಧಾನಿ ಅಲ್ಲ, ಕ್ಯಾಬಿನೆಟ್ ಕಾರ್ಯದರ್ಶಿ!

ಅವಿಶ್ವಾಸ ಏಕೆ?:

ಬೆಲೆ ಏರಿಕೆ, ಭ್ರಷ್ಟಾಚಾರ(Corruption) ನಿಯಂತ್ರಣದಲ್ಲಿ ಇಮ್ರಾನ್‌ ವೈಫಲ್ಯ ಖಂಡಿಸಿ ವಿಪಕ್ಷಗಳು ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಆದರೆ ಏ.3ರಂದು ನ್ಯಾಷನಲ್‌ ಅಸೆಂಬ್ಲಿಯ ಸ್ಪೀಕರ್‌ ಖಾಸಿಂ ಸೂರಿ, ಗೊತ್ತುವಳಿ ಮಂಡನೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡದ ಕಾರಣ ನೀಡಿ ಗೊತ್ತುವಳಿ ವಜಾಗೊಳಿಸಿದ್ದರು. ಬಳಿಕ ಪ್ರಧಾನಿ ಇಮ್ರಾನ್‌ ಸೂಚನೆ ಅನ್ವಯ ಅಧ್ಯಕ್ಷ ಆರಿಫ್‌ ಅಲ್ವಿ ಅವರು ನ್ಯಾಷನಲ್‌ ಅಸೆಂಬ್ಲಿ ವಿಸರ್ಜಿಸಿ, 3 ತಿಂಗಳಲ್ಲಿ ಚುನಾವಣೆಗೆ(Election) ಆದೇಶಿಸಿದ್ದರು.

ಇಮ್ರಾನ್‌ಗೆ ಶಾಕ್‌:

ಆದರೆ ಇಡೀ ರಾಜಕೀಯ(Politcs)ಗೊಂದಲದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದ ಪಾಕ್‌ ಸುಪ್ರೀಂಕೋರ್ಚ್‌ ಗುರುವಾರ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಅದರಲ್ಲಿ ಅವಿಶ್ವಾಸ ಗೊತ್ತುವಳಿ ವಜಾಗೊಳಿಸಿದ್ದ ಉಪ ಸ್ಪೀಕರ್‌ ಆದೇಶವನ್ನು ಅಸಂವಿಧಾನಿಕ ಎಂದು ಸಾರಿ, ನ್ಯಾಷನಲ್‌ ಅಸೆಂಬ್ಲಿಯನ್ನು ಮರುಸ್ಥಾಪಿಸಿತ್ತು. ಜೊತೆಗೆ ಶನಿವಾರ ಸದನದಲ್ಲಿ ವಿಶ್ವಾಸಮತದ ಮೇಲೆ ಮತದಾನ ನಡೆಸಬೇಕು. ಗೊತ್ತುವಳಿ ಮೇಲೆ ಮತದಾನ ನಡೆದು ಇಡೀ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ, ಸದನ ಮುಂದೂಡಬಾರದು ಎಂದು ಸೂಚಿಸಿತ್ತು.

ಇಮ್ರಾನ್ ಖಾನ್ 3ನೇ ಪತ್ನಿ ಆಪ್ತೆಗೆ ಬಂಧನ ಭೀತಿ, ದುಬೈಗೆ ಪಲಾಯನ!

ಲಾಹೋರ್: ಪಾಕಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಇಮ್ರಾನ್ ಖಾನ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಇಮ್ರಾನ್ ಸಂವಿಧಾನ ಬಾಹಿರ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರತಿಪಕ್ಷಗಳು ಹೋರಾಟ ನಡೆಸುತ್ತಿದೆ. ಇದರ ನಡುವೆ ಮಾಜಿ ಇಮ್ರಾನ್ ಖಾನ್ ಕುಟುಂಬಸ್ಥರು, ಆಪ್ತರು ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪ ಬಲವಾಗುತ್ತಿದೆ. ಒಬ್ಬೊಬ್ಬರೋ ಪಾಕಿಸ್ತಾನ ಬಿಟ್ಟು ದುಬೈಗೆ ಪಲಾಯನ ಮಾಡುತ್ತಿದ್ದಾರೆ. 

ಇದೀಗ ಇಮ್ರಾನ್ ಖಾನ್ 3ನೇ ಪತ್ನಿ ಬುಶ್ರಾ ಬಿಬಿ ಆಪ್ತೆಯಾಗಿರುವ ಫರಾ ಖಾನ್ ಸದ್ದಿಲ್ಲದ ದುಬೈಗೆ ಪಲಾಯನ ಮಾಡಿದ್ದಾರೆ. ಫರಾ ಖಾನ್ ಹಾಗೂ ಆಕೆಯ ಪತಿ ಅಶನ್ ಜಮೀಲ್ ಗುಜ್ಜರ್ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇವರಿಬ್ಬರು ಅಧಿಕಾರಿಗಳ ವರ್ಗಾವಣೆ, ಸಚಿವರಿಗೆ ಅನುದಾನ ಸೇರಿದಂತೆ ಸರ್ಕಾರದ ಕೆಲಸ ಮಾಡಿಕೊಡಲು 32 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆದಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದೆ ಹೀಗಾಗಿ ಫರಾ ಖಾನ್ ಸದ್ದಿಲ್ಲದೆ ದುಬೈ ಹಾರಿದ್ದಾಳೆ.

Pakistan ಪ್ರಧಾನಿ ಪದವಿಯೇ ಪಾಕ್ ಗೆ ಶಾಪ!

ಫರಾ ಪತಿ ಈಗಾಲೇ ಅಮೆರಿಕಾಗ ಪಲಾಯನ ಮಾಡಿದ್ದಾರೆ. ಅಶನ್ ಜಮೀಲ್ ಮೇಲೂ ಆರೋಪ ಗಂಭೀರವಾಗುತ್ತಿರುವ ಕಾರಣ ಬಂಧನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಮೊದಲು ಪತಿ ಪಲಾಯನ ಮಾಡಿದರೆ ಬಳಿಕ ಪತ್ನಿ ಫರಾ ಖಾನ್ ಪಾಕಿಸ್ತಾನ ತೊರೆದಿದ್ದಾರೆ.

ಇಮ್ರಾನ್ ಖಾನ್ ಪತ್ನಿಯ ಆಪ್ತೆ ಅನ್ನೋ ಹೆಸರಿನಲ್ಲಿ ಪಾಕಿಸ್ತಾನ ಸರ್ಕಾರದ ಹಲವು ಇಲಾಖೆಗಳ ಅನುದಾನ ಹಣ ಕೂಡ ನೇರಾವಾಗಿ ಫರಾ ಖಾನ್ ಖಾತೆಗೆ ಜಮಾವಣೆ ಆಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ.ಇದರ ಹಿಂದೆ ಇಮ್ರಾನ್ ಖಾನ್ ಕೈವಾಡವಿದೆ ಎಂದು ಪಾಕಿಸ್ತಾನದ ವಿಪಕ್ಷಗಳು ಆರೋಪಿಸಿದೆ. ಇವರ ಜೊತೆಗೆ ಇಮ್ರಾನ್ ಕುಟುಂಬಸ್ಥರು, ಆಪ್ತರ ಮೇಲೂ ಆರೋಪಗಳು ಕೇಳಿಬರುತ್ತಿದೆ. ಇದರಿಂದ ಬಂಧನ ಭೀತಿಯಿಂದ ಪಾರಾಗಲು ಪಾಕಿಸ್ತಾನ ತೊರೆಯುತ್ತಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ವಿರೋಧಿ ಬಾಂಗ್ಲಾದೇಶಿ ವಿದ್ಯಾರ್ಥಿ ಯುವ ನಾಯಕ ಉಸ್ಮಾನ್‌
ಸೌದಿ ಬಳಿಕ ದುಬೈ, ಅಬುದಾಭಿಯಲ್ಲೂ ಭಾರೀ ಮಳೆ