
ಟೊರಂಟೋ(ಏ. 09) ರಷ್ಯಾ ಮತ್ತು ಉಕ್ರೇನ್ ( Russia Ukraine War) ಯುದ್ಧದ ವೇಳೆ ಕರ್ನಾಟಕ ವಿದ್ಯಾರ್ಥಿ ನವೀನ್ ಬಲಿಯಾಗಿದ್ದರು. ಅವರ ಪಾರ್ಥಿವ ಶರೀರವನ್ನು ಇಪ್ಪತ್ತು ದಿನಗಳ ನಂತರ ತವರಿಗೆ ತರಲಾಗಿತ್ತು.
ಗುರುವಾರ ಕೆನಡಾದ (Canada ) ಟೊರೊಂಟೊದಲ್ಲಿ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವರದಿಗಳ ಪ್ರಕಾರ, ಕೆನಡಾದಲ್ಲಿ ಮ್ಯಾನೇಜ್‌ಮೆಂಟ್ ಓದುತ್ತಿದ್ದ ಕಾರ್ತಿಕ್ ವಾಸುದೇವ್ ಅವರ ಹತ್ಯೆಯಾಗಿದೆ. ದರೋಡೆಕೋರರ ಗುಂಪೊಂದು ಹತ್ಯೆ ಮಾಡಿದೆ.
ಕಾರ್ತಿಕ್ ಜನವರಿಯಲ್ಲಿ ಕೆನಡಾಕ್ಕೆ ತೆರಳಿದ್ದು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಕಾಲಮಾನ ಸಂಜೆ 5 ಗಂಟೆ ಸುಮಾರಿಗೆ ಸುರಂಗಮಾರ್ಗ ನಿಲ್ದಾಣದಿಂದ ಹೊರಗೆ ಬರುತ್ತಿದ್ದಾಗ ಕೆಲವರು ತಮ್ಮ ಮಗನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಸಾವಿಗೀಡಾದ ವಿದ್ಯಾರ್ಥಿಯ ತಂದೆ ಹೇಳಿದ್ದಾರೆ. ಪಾರ್ಥಿವ ಶರೀರವನ್ನು ಇನ್ನು ಮೂರು ದಿನದ ಒಳಗಾಗಿ ಭಾರತಕ್ಕೆ ತರಲಾಗುವುದು.
Chitradurga: ವ್ಯಕ್ತಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟಿದ್ದ ಸಿನಿಮಾ ಕಲಾವಿದನ ಬಂಧನ
ಭೀಕರ ರಸ್ತೆ ಅಪಘಾತ: ಕೆನಡಾದ ಟೊರೊಂಟೊ ನಗರದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟೊರೊಂಟೊದಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ತಂಡವು ಸಹಾಯಕ್ಕಾಗಿ ಸಂತ್ರಸ್ತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ. ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಈ ಮಾಹಿತಿ ನೀಡಿದ್ದರು.
ಮೃತರನ್ನು ಹರ್‌ಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರಣ್‌ಪಾಲ್ ಸಿಂಗ್, ಮೋಹಿತ್ ಚೌಹಾಣ್ ಮತ್ತು ಪವನ್ ಕುಮಾರ್ ಎಂದು ಗುರುತಿಸಲಾಗಿತ್ತು. ಅವರ ವಯಸ್ಸು 21 ರಿಂದ 24 ವರ್ಷ. ಅವರೆಲ್ಲರೂ ಗ್ರೇಟರ್ ಟೊರೊಂಟೊ ಮತ್ತು ಮಾಂಟ್ರಿಯಲ್ ಪ್ರದೇಶದ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದರು.
ಅಮೆರಿಕಾದಲ್ಲಿ ವಿದ್ಯಾರ್ಥಿನಿ ಸಾವು: ನಿದ್ರಿಸುತ್ತಿದ್ದ ವೇಳೆ ಮಹಡಿಯ ಸೀಲಿಂಗ್ ಸೀಳಿ ಬಂದ ಗುಂಡೊಂದು ತಗುಲಿ ಕೇರಳ ಮೂಲದ ತರುಣಿಯೊಬ್ಬಳು ಅಮೆರಿಕಾದ ಅಲಾಬಾಮದಲ್ಲಿ ಸಾವನ್ನಪ್ಪಿದ್ದಳು. ಮರಿಮ್ ಸುಸಾನ್ ಮ್ಯಾಥಿವ್( Mariam Susan Mathew) ಸಾವಿಗೀಡಾದ ತರುಣಿ. ಈಕೆ ಕೇರಳದ ತಿರುವಲ್ಲಾ ನಿವಾಸಿ. ನೆರೆಮನೆಯಾತನೇ ಈ ದಾಳಿ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಬಾಲಕಿ ತನ್ನ ಮನೆಯಲ್ಲಿ ಮಲಗಿದ್ದಾಗ ಮೇಲಿನ ಮಹಡಿಯನ್ನು ಸೀಳಿ ಬಂದ ಗುಂಡು ಈಕೆಗೆ ತಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಘಟನೆ ಬಗ್ಗೆ ಮಾಂಟ್ಗೊಮೇರಿ(Montgomery) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ನೈಋತ್ಯ ಅಮೆರಿಕಾದ ಮಲಂಕರ ಆರ್ಥೊಡಾಕ್ಸ್ ಚರ್ಚ್‌ನ ಡಯಾಸಿಸ್ ಆಗಿರುವ ಫಾದರ್ ಜಾನ್ಸನ್ ಪಪ್ಪಚನ್ ಅವರು, ಮರಿಯಮ್ ಸುಸಾನ್ ಮ್ಯಾಥ್ಯೂ ಅವರು ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುವವರ ಬಂದೂಕಿನಿಂದ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದರು.
ಮತ್ತೊಂದು ಘಟನೆಯಲ್ಲಿ ಮಧ್ಯಾಹ್ನ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿತ್ತು. ಗುಂಡಿನ ದಾಳಿಯಲ್ಲಿ 16 ವರ್ಷದ ಬಾಲಕ, 14 ಹಾಗೂ 17 ವರ್ಷದ ಬಾಲಕಿಯರು ಮೃತಪಟ್ಟಿದ್ದರು. ಗಾಯಗೊಂಡವರಲ್ಲಿ 8 ಮಂದಿ ಬಚಾವಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ