ಕುಲಭೂಷಣ್‌ಗೆ ರಿಲೀಫ್‌: ಗಲ್ಲು ವಿರುದ್ಧ ಮೇಲ್ಮನವಿಗೆ ಅವಕಾಶ!

Published : Nov 18, 2021, 07:11 AM ISTUpdated : Nov 18, 2021, 08:08 AM IST
ಕುಲಭೂಷಣ್‌ಗೆ ರಿಲೀಫ್‌: ಗಲ್ಲು ವಿರುದ್ಧ ಮೇಲ್ಮನವಿಗೆ ಅವಕಾಶ!

ಸಾರಾಂಶ

* ಜಾಧವ್‌ಗೆ ರಿಲೀಫ್‌: ಗಲ್ಲು ವಿರುದ್ಧ ಮೇಲ್ಮನವಿಗೆ ಅವಕಾಶ * ಪಾಕ್‌ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ * ಭಾರತ, ಐಸಿಜೆ ಒತ್ತಡಕ್ಕೆ ಮಣಿದ ಪಾಕಿಸ್ತಾನ

ಇಸ್ಲಾಮಾಬಾದ್‌(ನ.18): ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಸೇನಾ ಅಧಿಕಾರಿ ಕುಲಭೂಷಣ್‌ ಜಾಧವ್‌ (Indian Officer Kulbhushan Jadhav) ಅವರಿಗೆ ಮಿಲಿಟರಿ ಕೋರ್ಟ್‌ (Military Court) ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವಂತಹ ಕಾಯ್ದೆಗೆ ಪಾಕಿಸ್ತಾನ ಸಂಸತ್ತು (Pakistan Parliament) ಜಂಟಿ ಅಧಿವೇಶನದ ಮೂಲಕ ಅನುಮೋದನೆ ನೀಡಿದೆ.

ಗೂಢಚರ್ಯೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದಂತೆ 2017ರಲ್ಲಿ ಪಾಕ್‌ ನ್ಯಾಯಾಲಯ (Pakistan Court)ಕುಲಭೂಷಣ್‌ ಜಾಧವ್‌ಗೆ ಗಲ್ಲುಶಿಕ್ಷೆ ವಿಧಿಸಿತ್ತು. ಪಾಕಿಸ್ತಾನದ ಕಾನೂನಿನ ಪ್ರಕಾರ ಮೇಲ್ಮನವಿ ಸಲ್ಲಿಸಲು ಅವಕಾಶವಿರಲಿಲ್ಲ. ಈ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲು ಅವಕಾಶ ಸಿಗಬೇಕು ಎಂದು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಮನವಿ ಸಲ್ಲಿಸಿತ್ತು. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು 2019ರಲ್ಲಿ ಪಾಕಿಸ್ತಾನಕ್ಕೆ ಐಸಿಜೆ ಸೂಚನೆ ನೀಡಿತ್ತು. ಹಾಗಾಗಿ 2020ರಲ್ಲೇ ಇಮ್ರಾನ್‌ ಖಾನ್‌ (Imran Khan) ನೇತೃತ್ವದ ಸರ್ಕಾರ ಈ ಕುರಿತು ಸುಗ್ರೀವಾಜ್ಞೆ (Ordinance) ಹೊರಡಿಸಿತ್ತು.

ಈ ನಡುವೆ ಬುಧವಾರ ಜಂಟಿ ಅಧಿವೇಶನ ನಡೆಸಿದ ಪಾಕ್‌ ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಿದೆ. ಜಾಧವ್‌ಗೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕುಲಭೂಷಣ್‌ ಜಾಧವ್‌ ಅಪಹರಿಸಿದ್ದ ಉಗ್ರ ಪಾಕ್‌ ಸೇನೆ ಗುಂಡಿಗೆ ಬಲಿ!

 

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಇರಾನ್‌ನಿಂದ (Iran) ಅಪಹರಿಸಿ, ಪಾಕಿಸ್ತಾನಕ್ಕೆ ಕೊಂಡೊಯ್ದು ಅಲ್ಲಿನ ಸೇನೆಗೆ ನೀಡಿದ್ದ ಜೈಷ್‌ ಅಲ್‌-ಅದಲ್‌ ಸಂಘಟನೆಯ ಉಗ್ರ ಮುಲ್ಲಾ ಒಮರ್‌ನನ್ನು ಪಾಕಿಸ್ತಾನ ಸೇನೆಯೇ ಹೊಡೆದುರುಳಿಸಿದೆ.

ಕುಲಭೂಷಣ್ ಜಾಧವ್ ತೀರ್ಪು ಪರಿಶೀಲನೆಗೆ ಪಾಕ್‌ ಸಂಸತ್ತಿನಲ್ಲಿ ಅನುಮೋದನೆ

ದಕ್ಷಿಣ ಬಲೂಚಿಸ್ತಾನದ ಟಬ್ರ್ಯಾಟ್‌ ನಗರದಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮುಲ್ಲಾ ಒಮರ್‌ ಮತ್ತು ಅವನ ಪುತ್ರ ಸಹ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇರಾನ್‌ನಲ್ಲಿದ್ದುಕೊಂಡು ಪಾಕ್‌ ಪರ ಕೆಲಸ ಮಾಡುತ್ತಿದ್ದ ಮುಲ್ಲಾ ಒಮರ್‌ ಇರಾನ್‌ ಸರ್ಕಾರಕ್ಕೆ ಬೇಕಾಗಿದ್ದ ಆರೋಪಿಯಾಗಿದ್ದ. ಹೀಗಾಗಿ ಸಾಕ್ಷ್ಯ ನಾಶದ ಉದ್ದೇಶಕ್ಕಾಗಿ ಪಾಕಿಸ್ತಾನ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ.

ಕುಲಭೂಷಣ್‌ ಪರ ವಾದಕ್ಕೆ ಪಾಕಿಸ್ತಾನ ವಕೀಲರ ಹಿಂದೇಟು!

ಜಾಧವ್‌ರನ್ನು ಇರಾನ್‌ನಿಂದ ಅಪಹರಿಸಲಾಗಿತ್ತು ಎಂಬುದು ಭಾರತದ ವಾದ. ಆದರೆ ಪಾಕಿಸ್ತಾನ ಮಾತ್ರ ಆತ ಭಾರತೀಯ ಗೂಢಚರ. ಉಗ್ರ ಕೃತ್ಯಕ್ಕೆ ಯತ್ನಿಸಿದ್ದ ವೇಳೆ ಸಿಕ್ಕಿಬಿದ್ದಿದ್ದ ಎಂದು ವಾದಿಸಿಕೊಂಡೇ ಬಂದಿದೆ. ಇದೇ ಪ್ರಕರಣದಲ್ಲಿ ಜಾಧವ್‌ಗೆ ಪಾಕ್‌ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ ಅಂತಾರಾಷ್ಟ್ರೀಯ ನ್ಯಾಯಾಲಯದ ಸೂಚನೆ ಅನ್ವಯ ಸದ್ಯ ಶಿಕ್ಷೆ ಜಾರಿಗೆ ತಡೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?