ಪಾಕಿಸ್ತಾನ ಸರ್ಕಾರಕ್ಕೆ ಮತ್ತೆ ಹಿನ್ನಡೆ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕೆ ಹೈಕೋರ್ಟ್ ತಡೆ!

Published : Mar 15, 2023, 05:19 PM IST
ಪಾಕಿಸ್ತಾನ ಸರ್ಕಾರಕ್ಕೆ ಮತ್ತೆ ಹಿನ್ನಡೆ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕೆ ಹೈಕೋರ್ಟ್ ತಡೆ!

ಸಾರಾಂಶ

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಪದೇ ಪದೇ ಅರೆಸ್ಟ್ ವಾರೆಂಟ್ ಪಡೆದರೂ ಇಮ್ರಾನ್ ಖಾನ್ ಪೊಲೀಸರ ಕೈಗೆ ಸಿಗದೆ ಜಾರಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಹೈಕೋರ್ಟ್ ಇಮ್ರಾನ್ ಪರವಾಗಿ ಆದೇಶ ನೀಡಿದರೂ, ಅದರ ಬೆನ್ನಲ್ಲೇ ಒಂದು ಶಾಕ್ ನೀಡಿದೆ.

ಲಾಹೋರ್(ಮಾ.15): ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧಿಸಿ ಜೈಲಿಗಟ್ಟಲು ಪಾಕಿಸ್ತಾನದ ಶೆಹಬಾಜ್ ಷರೀಫ್ ಸರ್ಕಾರದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಈ ಬಾರಿ ಇಮ್ರಾನ್ ಖಾನ್ ಬಂಧನ ಖಚಿತ ಎಂದೇ ಹೇಳಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಪೊಲೀಸರು ಇಮ್ರಾನ್ ಮನೆ ಮುಂದೆ ಜಮಾಯಿಸಿದ್ದರು. ನಿನ್ನೆಯಿಂದ ಇದುವರೆಗೆ ಇಮ್ರಾನ್ ಖಾನ್ ಬೆಂಬಲಿಗರ ಜೊತೆ ಭಾರಿ ಗುದ್ದಾಟ ನಡೆಸಿದ್ದೇ ಬಂತು. ಇನ್ನೇನು ಬಂಧನಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇಮ್ರಾನ್ ಖಾನ್ ಬಂಧಿಸದಂತೆ ಅಧಿಕಾರಿಗಳಿಗೆ ಲಾಹೋರ್ ಹೈಕೋರ್ಟ್ ಸೂಚನೆ ನೀಡಿದೆ.

ಇಮ್ರಾನ್ ಖಾನ್ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಹೈಕೋರ್ಟ್ ಮತ್ತೊಂದು ಚೆಕ್‌ಮೆಟ್ ನೀಡಿದೆ. ನಾಳೆ ಅಂದರೆ ಮಾರ್ಚ್ 16ರ ಬೆಳಗ್ಗೆ 10 ಗಂಟೆ ವರೆಗೆ ಇಮ್ರಾನ್ ಖಾನ್ ಬಂಧಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಹೈಕೋರ್ಟ್‌ಗೆ ಸೂಚಿಸಿದೆ. ಅಷ್ಟರೊಳಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಹೈಕೋರ್ಟ್‌ಗೆ ದಾಖಲೆ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. 

ಸೆಕ್ಸ್‌ ಕಾಲ್‌ ವಿವಾದದಲ್ಲಿ ಇಮ್ರಾನ್‌ ಖಾನ್‌: ಈ ಆಡಿಯೋ ನಕಲಿ ಎಂದ ಖಾನ್ ಪಕ್ಷ

ಹೈಕೋರ್ಟ್ ತಡೆಯಾಜ್ಞೆ ನೀಡುತ್ತಿದ್ದಂತೆ ಇಮ್ರಾನ್ ಖಾನ್ ಜಮನ್ ಪಾರ್ಕ್‌ನಲ್ಲಿರುವ ಮನೆಯ ಬಳಿ ಜಮಾಯಿಸಿರುವ ಬೆಂಬಲಿಗರು ಸಂಭ್ರಮಾಚರಿಸಿದ್ದಾರೆ. ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಇದೀಗ ಪೊಲೀಸರು ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ. ಇಮ್ರಾನ್ ಈ ಬಾರಿ ಜೈಲು ಸೇರಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಬಾರಿಯೂ ಇಮ್ರಾನ್ ಕಾನ್ ತಪ್ಪಿಸಿಕೊಂಡಿದ್ದಾರೆ.

ಪ್ರಧಾನಿಯಾಗಿ ಪಡೆದಿದ್ದ ವಿದೇಶಿ ಉಡುಗೊರೆ ಮಾರಿಕೊಂಡ ಹಾಗೂ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಮ್ರಾನ್‌ ವಿರುದ್ಧ ಜಾಮೀನು ರಹಿತ ವಾರಂಟ್‌ ನೀಡಿರುವ ಇಸ್ಲಾಮಾಬಾದ್‌ ಕೋರ್ಚ್‌ ಇಮ್ರಾನ್‌ರನ್ನು ಬಂಧಿಸಿ ಮಾ.29ರೊಳಗೆ ಕೋರ್ಚ್‌ಗೆ ಹಾಜರುಪಡಿಸುವಂತೆ ಸೂಚಿಸಿತ್ತು. ಹೀಗಾಗಿ ಪೊಲೀಸರು ಇಮ್ರಾನ್‌ ಮನೆಯತ್ತ ಮಂಗಳವಾರ ಧಾವಿಸಿದ್ದರು. ಈ ವೇಳೆ ಇಮ್ರಾನ್ ಖಾನ್ ಬೆಂಬಲಿಗರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಬಡಿದಾಟದಲ್ಲಿ 54 ಪೊಲೀಸರಿಗೆ ಗಾಯವಾಗಿದ್ದರೆ, 60ಕ್ಕೂ ಹೆಚ್ಚು ಇಮ್ರಾನ್ ಖಾನ್ ಬೆಂಬಲಿಗರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಆಶ್ರುವಾಯು ಸಿಡಿಸಲಾಗಿತ್ತು. ಜನರನ್ನು ನಿಯಂತ್ರಿಸಲು ಪ್ಯಾರಾಮಿಲಿಟರಿ ಪಡೆಯನ್ನು ನೇಮಕ ಮಾಡಲಾಗಿತ್ತು. 

ಇಮ್ರಾನ್‌ ಖಾನ್‌ ಪ್ರಧಾನಿಯಾಗಿದ್ದ ಸಮಯದಲ್ಲಿ ಕೈಗಡಿಯಾರ ಸೇರಿದಂತೆ ಹಲವು ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದು, ಇದನ್ನು ರಾಜ್ಯ ಖಜಾನೆಗೆ ತಿಳಿಸದೇ ಮಾರಿಕೊಂಡಿದ್ದಾರೆ ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿದೆ.ಈ ಪ್ರಕರಣದ ಕುರಿತು ಇಸ್ಲಾಮಾಬಾದ್ ಕೋರ್ಟ್ ಬಂಧನಕ್ಕೆ ಆದೇಶ ನೀಡಿತ್ತು. ಈ ಪ್ರಕರಣದ ಜೊತೆಗೆ ನ್ಯಾಯಮೂರ್ತಿಗೆ ಬೆದರಿಕೆ ಹಾಕಿದ ಪ್ರಕರಣವೂ ಸೇರಿಕೊಂಡಿತ್ತು.

ಬಾಲಿವುಡ್​ನ ನಾಲ್ವರು ಖ್ಯಾತ ನಟಿಯರ ಬುಟ್ಟಿಗೆ ಹಾಕಿಕೊಂಡಿದ್ದ ಈ ಮಾಜಿ ಪ್ರಧಾನಿ!

ಬಂಧನದ ಕುರಿತಾಗಿ ಹೇಳಿಕೆ ನೀಡಿರುವ ಇಮ್ರಾನ್‌, ‘ನನ್ನ ಬಂಧನವಾದ ಬಳಿಕ ದೇಶ ಸುಮ್ಮನಿರಬಹುದು ಎಂದು ಅವರು (ಸರ್ಕಾರ) ಭಾವಿಸಿದ್ದಾರೆ. ಆದರೆ ಇದನ್ನು ನೀವು ಸುಳ್ಳು ಮಾಡಬೇಕು. ಒಂದು ವೇಳೆ ನನ್ನನ್ನು ಸಾಯಿಸಿದರೂ ಸಹ ನೀವು ಹೋರಾಟವನ್ನು ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಗುಲಾಮಗಿರಿಯನ್ನು ಒಪ್ಪಿಕೊಳ್ಳಬಾರದು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!