80 ಲಕ್ಷದ ಆಫರ್ ನೀಡಿದರೂ ಮಾಸ್ಕ್ ತೆಗೆಯದೇ ಘನತೆ ಮೆರೆದ ಹೆಣ್ಣುಮಗಳು

By Anusha KbFirst Published Mar 15, 2023, 5:04 PM IST
Highlights

ಮಾಸ್ಕ್‌ ಧರಿಸಿ ವಿಮಾನವೇರಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋಟ್ಯಾಧಿಪತಿಯೋರ್ವ ಮಾಸ್ಕ್‌ ತೆಗೆದರೆ 80 ಲಕ್ಷ ರೂಪಾಯಿ ಹಣ ನೀಡುವ ಆಫರ್ ಮಾಡಿದ್ದಾನೆ. ಆದರೆ ಮಹಿಳೆ ಹಣದ ಆಸೆಗೆ ಬಲಿಯಾಗದೇ ಆತನ ಆಫರ್ ಅನ್ನು ಅಷ್ಟೇ ವೇಗವಾಗಿ ತಿರಸ್ಕರಿಸಿ ತನ್ನ ವ್ಯಕ್ತಿತ್ವದ ತೂಕವನ್ನು ಹೆಚ್ಚಿಸಿಕೊಂಡಿದ್ದಾಳೆ. 

ನವದೆಹಲಿ: ಬಸ್‌, ವಿಮಾನ ರೈಲು ಹೀಗೆ ಸಾರ್ವಜನಿಕ ಸಾರಿಗೆಯಲ್ಲಿ ಏಕಾಂಗಿಯಾಗಿ ಸಂಚರಿಸುವ ವೇಳೆ ಹಲವರಿಗೆ ಅನೇಕ ಅಪರಿಚಿತ ಸ್ನೇಹವಾಗುತ್ತದೆ. ಕೆಲವರಿಗೆ ಅಪರಿಚಿತರು ಬಹಳ ಆತ್ಮೀಯರಾಗಿ ಸ್ನೇಹ ಚಿರಕಾಲ ಉಳಿಯುತ್ತದೆ. ಮತ್ತೆ ಕೆಲವರ ಜೀವನದಲ್ಲಿ ಪ್ರಯಾಣ ಮುಗಿಯುತ್ತಿದ್ದಂತೆ ಆ ಒಡನಾಟವೂ ಮುಗಿಯುತ್ತದೆ. ಹೀಗೆ ಪ್ರಯಾಣದ ಮಧ್ಯೆ ಹಲವು ಚಿತ್ರ ವಿಚಿತ್ರ ಘಟನೆಗಳು ಕೂಡ ನಡೆಯುತ್ತವೆ. ಕೆಲವರು ಒಂಟಿಯಾಗಿರುವ ಹುಡುಗಿಯರಿಗೆ ಕಿರುಕುಳ ನೀಡಲು ಶುರು ಮಾಡಿ ಕಂಬಿ ಹಿಂದೆ ಹೋಗುವ ಪ್ರಸಂಗವೂ ನಡೆಯುತ್ತದೆ. ಒಬ್ಬೊಬ್ಬರ ವರ್ತನೆ ಒಂದೊಂದು ರೀತಿಯದ್ದು, ಹಾಗೆಯೇ ಒಬ್ಬೊಬ್ಬರ ಅನುಭವ ಒಂದೊಂದು ರೀತಿಯದ್ದು. ಅದೇ ರೀತಿ ಇಲ್ಲೊಂದು ಕಡೆ ವಿಮಾನದಲ್ಲಿ ಯುವತಿಯೊಬ್ಬರಿಗೆ ವಿಚಿತ್ರ ಅನುಭವವಾಗಿದ್ದು, ಅದನ್ನು ಆಕಗೆ ವಿಚಿತ್ರವಾಗಿ ಕಿರುಕುಳ ನೀಡಿದವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕೋವಿಡ್ (covid) ಬಂದ ಮೇಲೆ ಹೆಚ್ಚಿನ ಜನರು ಮಾಸ್ಕ್‌ನಿಂದ (Mask)ತಮ್ಮ ಮುಖವನ್ನು ಮುಚ್ಚಿಕೊಳ್ಳುವ ಪ್ರಕ್ರಿಯೆಗೆ ಇಷ್ಟವಿಲ್ಲದಿದ್ದರೂ ಒಪ್ಪಿಸಿಕೊಂಡರು. ಆದರೆ ಈಗ ಕೋವಿಡ್ ಬಹುತೇಕ ಕಡಿಮೆ ಆಗಿದೆ. ಆದರೆ ಕೆಲವರು ಮಾಸ್ಕ್‌ ಹಾಕುವುದನ್ನು ಬಿಟ್ಟಿಲ್ಲ. ಅದು ಎಂದಿನಂತೆ ರೂಢಿಯಾಗಿದೆ. ಈ ಮಾಸ್ಕ್‌ನ್ನು ನಿಮಗೆ ತೆಗೆಯುವಂತೆ ಹೇಳಿ ನಿಮಗೆ ಯಾರಾದರೂ ಲಕ್ಷಗಟ್ಟಲೇ ಹಣದ ಆಫರ್ ಮಾಡಿದರೆ ನೀವು ಈ ಆಫರ್ ಅನ್ನು ಸ್ವೀಕರಿಸುವಿರಾ ಇಲ್ಲ ಹಣ ಬೇಡ ನನಗೆ ನನ್ನ ಮಾಸ್ಕೇ ಹೆಚ್ಚು ಎಂದು ಸುಮ್ಮನಿರುವಿರಾ ಇದು ನಿಮ್ಮ ನಿಮ್ಮ ಯೋಚನೆ ಆಸೆ ಅಭಿಲಾಷೆಗೆ ಬಿಟ್ಟಿದ್ದು, ಆದರೆ ಹೀಗೆ ಮಾಸ್ಕ್‌ ಧರಿಸಿ ವಿಮಾನವೇರಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋಟ್ಯಾಧಿಪತಿಯೋರ್ವ ಮಾಸ್ಕ್‌ ತೆಗೆದರೆ 80 ಲಕ್ಷ ರೂಪಾಯಿ ಹಣ ನೀಡುವ ಆಫರ್ ಮಾಡಿದ್ದಾನೆ. ಆದರೆ ಮಹಿಳೆ ಹಣದ ಆಸೆಗೆ ಬಲಿಯಾಗದೇ ಆತನ ಆಫರ್ ಅನ್ನು ಅಷ್ಟೇ ವೇಗವಾಗಿ ತಿರಸ್ಕರಿಸಿ ತನ್ನ ವ್ಯಕ್ತಿತ್ವದ ತೂಕವನ್ನು ಹೆಚ್ಚಿಸಿಕೊಂಡಿದ್ದಾಳೆ. 

Women Driving: ಡ್ರೈವಿಂಗ್ ವಿಷ್ಯದಲ್ಲಿ ಮಹಿಳೆ ಜೋಕರ್ ಆಗೋದು ಎಷ್ಟು ಸರಿ?

ಆದರೆ ಹೀಗೆ ಮಹಿಳೆಗೆ ಹಣದ ಆಮಿಷವೊಡ್ಡಿ ಕಿರುಕುಳ ನೀಡಿದಾತನೂ ಆಗಿರುವ ಸಹ ಪ್ರಯಾಣಿಕ (Co Passenger) ಸ್ಟೀವ್ ಕಿಸ್ಚೆರ್ ಸರಣಿ ಟ್ವಿಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ.  ನಾನು  ಡೆಲ್ಟಾ ವಿಮಾನದಲ್ಲಿ ಪ್ರಯಾಣಿಸುತ್ತಿದೆ. ನನ್ನ ಪಕ್ಕದಲ್ಲಿ ಫಸ್ಟ್‌ಕ್ಲಾಸ್‌ನಲ್ಲಿ ಕುಳಿತಿದ್ದ ಮಹಿಳೆ 100000 ಡಾಲರ್ ( ಭಾರತದ 82 ಲಕ್ಷ ರೂಪಾಯಿ) ಗಾಗಿ ತಮ್ಮ ಮಾಸ್ಕ್ ತೆಗೆಯಲು ನಿರಾಕರಿಸಿದರು. ಆಕೆ ಫಾರ್ಮಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಟೀವ್ ಬರೆದುಕೊಂಡಿದ್ದಾರೆ.  

ಸ್ಟೀವ್ ಪ್ರಕಾರ, ಮಹಿಳೆ ಆತನ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾಳೆ. ಆದರೂ ಸ್ಟೀವ್ ಆಕೆಗೆ ಮುಖವಾಡವನ್ನು ತೆಗೆಯುವಂತೆ ಕೇಳುವುದನ್ನು ಮುಂದುವರೆಸುತ್ತಲೇ ಇದ್ದರು. ವಿಮಾನದಲ್ಲಿ ಬೆಳಗಿನ ಉಪಾಹಾರ ನೀಡಿದಾಗ ಈ ಮಹಿಳೆ ಮುಖವಾಡವನ್ನು ತೆಗೆದಿದ್ದಾರೆ ಎಂದು ಸ್ಟೀವ್ ಹೇಳಿಕೊಂಡಿದ್ದಾರೆ. 

ಸ್ಟೀವ್ ಪ್ರಕಾರ, ಆತ ನೀಡಿದ 80 ಲಕ್ಷದ  ಪ್ರಸ್ತಾಪವನ್ನು ಸಂಪೂರ್ಣವಾಗಿ ಮಹಿಳೆ ತಿರಸ್ಕರಿಸಿದಳು. ಆದರೂ ಸ್ಟೀವ್ ಮುಖವಾಡವನ್ನು ತೆಗೆಯುವಂತೆ ಕೇಳುವುದನ್ನು ಮುಂದುವರೆಸಿದರು. ಆದರೆ ಸ್ಟೀವ್ ಟ್ವಿಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.  ವಿಮಾನ ಪ್ರಯಾಣದಲ್ಲಿ ಮಹಿಳೆಯರಿಗೆ ಈ ರೀತಿ ಹಣದ ಆಫರ್ ಮಾಡುವುದು ನಿಮ್ಮ ಅಭ್ಯಾಸವೇ ಎಂದು ಜನರು ಆತನನ್ನು ಪ್ರಶ್ನಿಸಿದ್ದಾರೆ.  ಪ್ರಯಾಣದ ಸಮಯದಲ್ಲಿ ಬೇರೆಯವರ ವಿಚಾರಕ್ಕೆ ತಲೆ ಹಾಕದೇ ತಮ್ಮ ಕೆಲಸವಾಯ್ತು ತಾನಾಯ್ತು ಎಂಬಂತೆ ಇರಬೇಕು ಎಂದು ಬಳಕೆದಾರರು ಸ್ಟೀವ್ ನಡೆಯನ್ನು ಕಠಿಣವಾಗಿ ಟೀಕಿಸಿದ್ದಾರೆ. ನಿಮ್ಮ ಈ ರೀತಿಯ ನಡವಳಿಕೆ ಎಲ್ಲಿಯೂ ಸ್ವೀಕಾರಕ್ಕೆ ಅರ್ಹವಲ್ಲ ಎಂದು ಮತ್ತೆ ಕೆಲವು ಬಳಕೆದಾರರು ಹೇಳಿದ್ದಾರೆ. 

Solo Trips: ಮಹಿಳೆಯರ ಸೋಲೋ ಟ್ರಿಪ್ಪಿಗೆ ಈ ಜಾಗ ಬೆಸ್ಟ್

ಆದರೆ ನ್ಯೂಸ್ ವೆಬ್‌ಸೈಟೊಂದರ ಪ್ರಕಾರ, ಸ್ಟೀವ್, ಈ ಹಿಂದೆಯೂ ಇಂತಹ ಅವಾಂತರವನ್ನು ಮಾಡಿದ್ದಾರಂತೆ. ಈ ಹಿಂದೆ ಸಹ ಪ್ರಯಾಣಿಕರಿಗೆ ಮಾಸ್ಕ್ ತೆಗೆದರೆ 8 ಲಕ್ಷ ರೂಪಾಯಿ ನೀಡುವುದಾಗಿ ಅವರು  ಹೇಳಿದ್ದರಂತೆ. ಅಲ್ಲದೇ ಈ ಕೋಟ್ಯಾಧಿಪತಿ ಕೋವಿಡ್ ಸಮಯದಲ್ಲಿ ಜನರನ್ನು ತಪ್ಪುದಾರಿಗೆಳೆಯುವ ಹಲವು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಈ ಹಿಂದೆಯೂ ಚರ್ಚೆಗೆ ಗ್ರಾಸವಾಗಿದ್ದರು. 

ಹೆಣ್ಮಕ್ಕಳು ಹಣದ ಹಿಂದೆ ಹೋಗುತ್ತಾರೆ. ಅದಕ್ಕಾಗಿಯೇ ಪ್ರೀತಿಸಿದವನ ಬಿಟ್ಟು ಶ್ರೀಮಂತರನ್ನು ಮದ್ವೆಯಾಗುತ್ತಾರೆ ಎಂಬೆಲ್ಲಾ ಅಪವಾದಗಳು ಹೆಣ್ಣು ಮಕ್ಕಳ ಮೇಲಿವೆ. ಅದೇನೆ ಇರಲಿ ಹಣ ಅಂದ್ರೆ ಹೆಣನೂ ಬಾಯ್ಬಿಡುತ್ತೆ ಎಂಬ ಇಂತಹ ಕಾಲದಲ್ಲಿ ಇಷ್ಟೊಂದು ಬರೋಬ್ಬರಿ ಮೊತ್ತದ ಆಫರ್ ನೀಡಿದರೂ ಪರರ ವಸ್ತು ಪಾಶಾಣಕ್ಕೆ ಸಮವೆಂಬಂತೆ ಕಂಡು ಅದನ್ನು ತಿರಸ್ಕರಿಸಿದ ಈ ಮಹಿಳೆಗೆ ಒಂದು ಸೆಲ್ಯೂಟ್ ಹೇಳಲೇಬೇಕು.

I am on board a Delta flight right now. The person sitting next to me in first class refused $100,000 to remove her mask for the entire flight. No joke. This was after I explained they don’t work. She works for a pharma company. pic.twitter.com/Q8Hwzhkmxf

— Steve Kirsch (@stkirsch)

 

click me!