18ನೇ ವಯಸ್ಸಿಗೆ ಅಬ್ದುಲ್ಲಾಗೆ ಮೊದಲ ಮದುವೆ, ಬಳಿಕ ಎರಡಾಯ್ತು, ಮೂರಾಯ್ತು, ಕೊನೆಗೆ ಆರಾಯ್ತು. ಮಕ್ಕಳು 54 ಆಯಿತು. ಹುಮ್ಮಸ್ಸು, ಪ್ರತಿ ದಿನ ಉತ್ಸಾಹದಲ್ಲಿರುವ 75 ಹರೆಯದ ಅಬ್ದುಲ್ಲಾ ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಲೂಚಿಸ್ತಾನ್(ಡಿ.12): ಹಾಜಿ ಅಬ್ದುಲ್ಲಾ ಮಜೀಜ್ ಮೆಂಗಾಲ್.. ಈ ಹೆಸರು ಪಾಕಿಸ್ತಾನದಲ್ಲಿ ಮಾತ್ರವಲ್ಲ, ಭಾರತದಲ್ಲೂ ಜನಪ್ರಿಯ. ಕಾರಣ ಈ ಅಬ್ದುಲ್ಲಾಗೆ 6 ಪತ್ನಿಯರು, 54 ಮಕ್ಕಳು. ಇನ್ನು ಮೊಮ್ಮಕ್ಕಳನ್ನು ಸೇರಿಸಿದರೆ ಕುಟುಂಬ ಸದಸ್ಯರ ಸಂಖ್ಯೆ 150. 18ನೇ ವಯಸ್ಸಿಗೆ ಮೊದಲ ಮದುವೆಯಾದ ಅಬ್ದುಲ್ಲಾ, ಬಳಿಕ ಮತ್ತೊಂದು, ಇನ್ನೊಂದು ಎಂದು ಅಧಿಕೃತವಾಗಿ ಒಟ್ಟು 6 ಮದುವೆಯಾಗಿದ್ದಾರೆ. 6 ಪತ್ನಿಯರು ಒಟ್ಟು 54 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪ್ರತಿ ದಿನ ಉತ್ಸಾಹದಲ್ಲಿರುವ ಅಬ್ದುಲ್ಲಾ ತಮ್ಮ 75ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಲೂಚಿಸ್ತಾನದ ನೊಶಿಕಿ ಜಿಲ್ಲೆಯ ಕಾಲಿ ಮಂಗಲ್ ಗ್ರಾಮದ ಅಬ್ದುಲ್ಲಾ ಅತೀ ದೊಡ್ಡ ಕುಟಂಬವನ್ನು ಅಗಲಿದ್ದಾರೆ.
ಹಾಜಿ ಅಬ್ದುಲ್ಲಾ ಮಜೀದ್ ಮೆಂಗಾಲ್ ತಮ್ಮ 18ನೇ ವಯಸ್ಸಿಗೆ ಮೊದಲ ಮದುವೆಯಾಗಿದ್ದಾರೆ. ಬಳಿಕ ಒಂದೊಂದೆ ಮದುವೆಯಾಗುತ್ತಾ ಒಟ್ಟು 6 ಮದುವೆಯಾಗಿದ್ದಾರೆ. ವಿಶೇಷ ಅಂದರೆ ಯಾರಿಗೂ ಡಿವೋರ್ಸ್ ನೀಡಿಲ್ಲ. ಎಲ್ಲರೂ ಜೊತೆಯಾಗಿಯೇ ಇದ್ದಾರೆ. ಸದ್ಯ ಅಬ್ದುಲ್ಲಾ 6 ಪತ್ನಿಯರ ಪೈಕಿ ಈಗಾಗಲೇ 2 ಪತ್ನಿಯರು ನಿಧನರಾಗಿದ್ದಾರೆ. ಇನ್ನು 54 ಮಕ್ಕಳ ಬೈಕಿ 12 ಮಕ್ಕಳು ಮೃತಪಟ್ಟಿದ್ದಾರೆ. ಸದ್ಯ ಅಬ್ದುಲ್ಲಾ 42 ಮಕ್ಕಳು ಹಾಗೂ 4 ಪತ್ನಿಯರನ್ನು ಹೊಂದಿದ್ದಾರೆ.
ಈ Pakistaniಗೆ ಒಂದಲ್ಲ 5 ಬಾರಿ ಮದುವೆ: ಈತನಿಗೆ 11 ಮಕ್ಕಳು, 40 ಮೊಮ್ಮಕ್ಕಳು..!
42 ಮಕ್ಕಳ ಪೈಕಿ 22 ಗಂಡು ಮಕ್ಕಳು ಹಾಗೂ 20 ಹೆಣ್ಣು ಮಕ್ಕಳು. ಈ ಮಕ್ಕಳ ಬೈಕಿ ಹಲವರಿಗೆ ಮದುವೆಯಾಗಿದೆ. ಇವರಿಗೂ ಮಕ್ಕಳಿದ್ದಾರೆ. ಹೀಗಾಗಿ ಅಬ್ದುಲ್ಲಾ ಮೊಮ್ಮಕ್ಕಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಮಕ್ಕಳು ಹಾಗೂ ನೇರ ಕುಟುಂಬಸ್ಥರ ಸಂಖ್ಯೆ 150. ಹಾಜಿ ಅಬ್ದುಲ್ಲಾ ಕುಟುಂಬ ಫೋಟೋ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಜಿ ಅಬ್ದುಲ್ಲಾಗೆ 6 ಪತ್ನಿಯರು 54 ಮಕ್ಕಳು ಅನ್ನೋದು ಬಹಿರಂಗವಾಗಿರುವುದು 2017ರಲ್ಲಿ ಪಾಕಿಸ್ತಾನ ನಡೆಸಿದ ಜನಗಣತಿಯಲ್ಲಿ ಈ ವಿಚಾರ ಬಹಿರಂಗವಾಗಿತ್ತು. ಮನೆ ಮನೆಗೆ ತೆರಳಿ ಜನಗಣತಿ ನಡೆಸಲಾಗಿತ್ತು. ಈ ವೇಳೆ ಒಂದೇ ಮನೆಯಲ್ಲಿನ ಎಲ್ಲರ ಜನಗಣತಿ ಮಾಡಲು ಅಧಕಾರಿಗಳು ಎರಡು ದಿನ ಸಮಯ ತೆಗೆದುಕೊಂಡಿದ್ದಾರೆ.
ಅಬ್ದುಲ್ಲಾ ನಿಧನಕ್ಕೆ ಮೆಂಗಾಲ್ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ಲಾ ಎಲ್ಲಾ ಪತ್ನಿಯರನ್ನು ಹಾಗೂ ಮಕ್ಕಳನ್ನು ನೋಡಿಕೊಂಡಿದ್ದ. ಅತೀ ದೊಡ್ಡ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ದಿವಾಳಿ ಪಟ್ಟದಿಂದ ಪಾಕಿಸ್ತಾನ ಜಸ್ಟ್ ಮಿಸ್: ಕೊನೆಕ್ಷಣದಲ್ಲಿ 8100 ಕೋಟಿ ಪಾವತಿ
ಮನೆಯಲ್ಲಿದ್ದ ವೇಳೆ ಅಬ್ದುಲ್ಲಾಗೆ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ತೀವ್ರವಾಗಿ ಎದೆನೋವು ಕಾಣಿಸಿಕೊಂಡು ಅಬ್ದುಲ್ಲಾ ಅಸ್ವಸ್ಥರಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಕ್ಕೂ ಮೊದಲೇ ಅಬ್ದುಲ್ಲಾ ಪ್ರಾಣ ಪಕ್ಷಿ ಹಾರಿಹೋಗಿತ್ತು.