ಅರೆರೆ..ಇದೇನಿದು.. ಒಂದು ವರ್ಷ ಚಿಕ್ಕವರಾಗ್ತಿದ್ದಾರೆ ದಕ್ಷಿಣ ಕೊರಿಯಾ ಪ್ರಜೆಗಳು!

By Santosh NaikFirst Published Dec 10, 2022, 8:35 PM IST
Highlights

ಪ್ರಸ್ತುತ ಇರುವ ವ್ಯವಸ್ಥೆಯನ್ನು ದಿ ಕೊರಿಯನ್‌ ಏಜ್‌ ಎಂದೇ ವ್ಯಾಪಕವಾಗಿ ಹೇಳಲಾಗುತ್ತಿದೆ. ಇದರ ಪ್ರಕಾರ ಮಗು ಹುಟ್ಟಿದ ದಿನವನ್ನೇ ಒಂದು ವರ್ಷ ಎಂದು ಗುರುತಿಸಲಾಗುತ್ತದೆ. ಅದರೊಂದಿಗೆ ಪ್ರತಿ ಜನವರಿ 1 ರಂದು ಇನ್ನೊಂದು ವರ್ಷ ಸೇರ್ಪಡೆಯಾಗುತ್ತದೆ. ಜನನ ದಿನಾಂಕದಂತೆ ಅಲ್ಲಿ ವರ್ಷಗಳು ಸೇರ್ಪಡೆಯಾಗುವುದಿಲ್ಲ.

ನವದೆಹಲಿ (ಡಿ.10): ನಿಮ್ಮ ವಯಸ್ಸನ್ನು ಒಂದು ಅಥವಾ ಎರಡು ವರ್ಷ ಕಡಿಮೆ ಮಾಡುವ ಯಾವುದಾದರೂ ದೇಶ ಇದೆಯಾ ಎಂದು ಪ್ರಶ್ನೆ ಮಾಡುವಂತಿಲ್ಲ. ಅಂಥದ್ದೊಂದು ಸಾಹಸಕ್ಕೆ ದಕ್ಷಿಣ ಕೊರಿಯಾ ಕೈ ಹಾಕಿದೆ. ಹೌದು.. ದಕ್ಷಿಣ ಕೊರಿಯಾ ಹೊಸ ಮಸೂದೆಯನ್ನು ಅಂಗೀಕಾರ ಮಾಡಿದ್ದು, ಇಲ್ಲಿಯವರೆಗೂ ದೇಶದ ಪ್ರಜೆಗಳ ವಯಸ್ಸು ಲೆಕ್ಕ ಹಾಕುವ ವಿಚಾರವಾಗಿ ಇದ್ದ ಸಾಂಪ್ರದಾಯಿಕ ವ್ಯವಸ್ಥೆಯನ್ನು ರದ್ದು ಮಾಡಲು ತೀರ್ಮಾನ ಮಾಡಿದೆ. ಪ್ರಸ್ತುತ ಇರುವಂಥ ವ್ಯವಸ್ಥೆಯನ್ನು ಜಗತ್ತಿನಲ್ಲಿ ವ್ಯಾಪಕವಾಗಿ ಕೊರಿಯನ್‌ ಏಜ್‌ ಎಂದೇ ಗುರುತಿಸಲಾಗುತ್ತದೆ. ಮಗು ಹುಟ್ಟಿದ ದಿನವನ್ನು ಒಂದು ವರ್ಷ ಎಂದು ಕೊರಿಯಾದಲ್ಲಿ ಗುರುತಿಸಲಾಗುತ್ತದೆ. ಅದಲ್ಲದೆ, ಜನ್ಮದಿನದ ಬದಲಿಗೆ ಪ್ರತಿ ಜನವರಿ 1 ಕ್ಕೆ ಮಗುವಿನ ವಯಸ್ಸಿಗೆ ಇನ್ನೊಂದು ವರ್ಷ ಸೇರ್ಪಡೆಯಾಗುತ್ತಾ ಹೋಗುತ್ತದೆ. ಆದರೆ ಗುರುವಾರ, ಸಿಯೋಲ್‌ನ ರಾಷ್ಟ್ರೀಯ ಅಸೆಂಬ್ಲಿ ಅಧಿಕೃತ ದಾಖಲೆಗಳಿಗಾಗಿ ಅಂತರರಾಷ್ಟ್ರೀಯ ವಯಸ್ಸಿನ-ಎಣಿಕೆಯ ವ್ಯವಸ್ಥೆಯನ್ನು ಬಳಸಬೇಕಾದ ಮಸೂದೆಗಳನ್ನು ಅಂಗೀಕರಿಸಿತು. ಮುಂದಿನ ವರ್ಷ ಜೂನ್‌ ವೇಳೆಗೆ ಇದು ಜಾರಿಯಾಗಲಿದೆ. "ವಯಸ್ಸಿನ ಲೆಕ್ಕಾಚಾರಗಳ ಮಿಶ್ರ ಬಳಕೆ ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳಿಂದ ಉಂಟಾದ ಸಾಮಾಜಿಕ ಗೊಂದಲವನ್ನು ಪರಿಹರಿಸಲು" ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಸೆಂಬ್ಲಿ ಹೇಳಿಕೆಯಲ್ಲಿ ತಿಳಿಸಿದೆ.

ಕೊರಿಯನ್ ವಯಸ್ಸಿನ ವ್ಯವಸ್ಥೆಯನ್ನು ಹೊರತುಪಡಿಸಿ, ದೇಶವು ಕಾನೂನುಬದ್ಧವಾದ ಮದ್ಯಪಾನ ಮತ್ತು ಧೂಮಪಾನದ ವಯಸ್ಸನ್ನು ನಿರ್ಧರಿಸಲು ಹೆಚ್ಚಾಗಿ ಬಳಸಲಾಗುವ ಇನ್ನೊಂದು ವಿಧಾನವನ್ನು ಹೊಂದಿದೆ. ಜನನದ ದಿನದಂದು ಈ ವಯಸ್ಸನ್ನು ಶೂನ್ಯ ಎಂದು ಪರಿಗಣನೆ ಮಾಡಲಿದ್ದು, ಪ್ರತಿ ಜನವರಿ 1 ರಂದು ಒಂದು ವರ್ಷವನ್ನು ಅವರ ವಯಸ್ಸಿಗೆ ಸೇರಿಸಲಾಗುತ್ತದೆ. ಮತ್ತು ಇದು 1960 ರ ದಶಕದಿಂದಲೂ ಕೆಲವು ವೈದ್ಯಕೀಯ ಮತ್ತು ಕಾನೂನು ದಾಖಲೆಗಳಿಗಾಗಿ ವಿಶ್ವಾದ್ಯಂತ ಮಾನದಂಡವನ್ನು ಬಳಸುತ್ತದೆ.

ದಕ್ಷಿಣ ಕೊರಿಯಾ; ಚಿತ್ರ ವೀಕ್ಷಣೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಗಲ್ಲು ಶಿಕ್ಷೆ ನೀಡಿದ ಕಿಮ್‌!

ಇದರರ್ಥ ಏನೆಂದರೆ, 2022ರ ಡಿಸೆಂಬರ್‌ 10ರ ವೇಳೆಗೆ, 1992 ಡಿಸೆಂಬರ್‌ 31 ರಂದು ಜನಿಸಿದ ವ್ಯಕ್ತಿ ಅಂತಾರಾಷ್ಟ್ರೀಯ ವಯಸ್ಸಿನ ಮಾನದಂಡದಲ್ಲಿ 29 ವರ್ಷದ ವ್ಯಕ್ತಿ ಎನಿಸಿಕೊಳ್ಳುತ್ತಾನೆ. ಆದರೆ, ದಕ್ಷಿಣ ಕೊರಿಯಾದ ವ್ಯವಸ್ಥೆಯಲ್ಲಿ ಮದ್ಯಪಾನಕ್ಕೆ ಆತನ ವಯಸ್ಸು 30 ಎನಿಸಿಕೊಳ್ಳಲಿದ್ದರೆ, ಕೊರಿಯನ್‌ ಏಜ್‌ ವ್ಯವಸ್ಥೆಯಲ್ಲಿ ಆತನ ವಯಸ್ಸನ್ನು 31 ಎಂದು ಹೇಳಲಾಗುತ್ತದೆ.
ಅಧ್ಯಕ್ಷ ಯೂನ್ ಸುಕ್-ಯೋಲ್ ಅವರು ಬದಲಾವಣೆಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ, ಜನರ ವಯಸ್ಸನ್ನು ಎಣಿಸುವ ಹಲವಾರು ವಿಧಾನಗಳನ್ನು ಹೊಂದಿರುವ ಪರಿಣಾಮವಾಗಿ ಆಡಳಿತಾತ್ಮಕ ಮತ್ತು ಸಾಮಾಜಿಕ ವೆಚ್ಚಗಳನ್ನು ಉಲ್ಲೇಖಿಸಿದ್ದಾರೆ.

Samantha ಆರೋಗ್ಯದಲ್ಲಿ ಏರುಪೇರು; ತುರ್ತು ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್‌?

ಕೆಲವು ದಕ್ಷಿಣ ಕೊರಿಯನ್ನರು ಈ ಸುದ್ದಿಯಿಂದ ಸಾಕಷ್ಟು ಸಂತೋಷಪಟ್ಟಿದ್ದಾರೆ. "ನಾನು ಎರಡು ವರ್ಷ ಚಿಕ್ಕವನಾಗುತ್ತಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ" ಎಂದು ಒಬ್ಬರು ಟ್ವಿಟರ್‌ನಲ್ಲಿ ಬರೆದಿದ್ದಾರೆ. "ನಾನು ಡಿಸೆಂಬರ್‌ನಲ್ಲಿ ಜನಸಿದ್ದೆ. ನಾನು ಹುಟ್ಟಿದ ನಂತರ ಕೆಲವೇ ದಿನಗಳಲ್ಲಿ ನನಗೆ  ಎರಡು ವರ್ಷವಾಗಿತ್ತು. ಅಂತಿಮವಾಗಿ, ನಾನು ನನ್ನ ನಿಜವಾದ ವಯಸ್ಸನ್ನು ಮರಳಿ ಪಡೆಯಲಿದ್ದೇನೆ!' ಎಂದು ಇನ್ನೊಬ್ಬರು ಬರೆದಿದ್ದಾರೆ.

click me!