
ಇಸ್ಲಾಮಾಬಾದ್(ಸೆ.16): ಡ್ಯಾಮ್ ನಿರ್ಮಾಣ 1980ರಲ್ಲಿ ಪೂರ್ಣಗೊಳ್ಳಬೇಕಿತ್ತು. 40 ವರ್ಷದ ಮೊದಲೇ ಸರ್ಕಾರ ಕೋಟಿ ಕೋಟಿ ರೂಪಾಯಿಗೂ ಹಣ ಬಿಡುಗಡೆ ಮಾಡಿತ್ತು. ಆದರೆ ಈ ಹಣದಲ್ಲಿ ಶಿಲನ್ಯಾಸ ಬಿಟ್ಟು ಬೇರೇನೂ ಆಗಿರಲಿಲ್ಲ. 38 ವರ್ಷ ಕಳೆದರೂ ಡ್ಯಾಮ್ ನಿರ್ಮಾಣ ಆಗಲೇ ಇಲ್ಲ. ಹೀಗಾಗಿ 2018ರಲ್ಲಿ ನಿವೃತ್ತ ಮುಖ್ಯನ್ಯಮೂರ್ತಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟರು. ಈ ಮೂಲಕ ಸರಿಸುಮಾರು 3,000 ಕೋಟಿ ಸಂಗ್ರಹ ಮಾಡಲಾಯಿತು. ಆದರೆ ಸರ್ಕಾರ ದೇಣಿಗೆ ಸಂಗ್ರಹ, ಡ್ಯಾಮ್ ನಿರ್ಮಾಣದ ಜಾಹೀರಾತಿಗಾಗಿ ಬರೋಬ್ಬರಿ 5,000 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಡ್ಯಾಮ್ ಅರ್ಧಕ್ಕೆ ನಿಂತಿದೆ. ಆತಂಕಗೊಳ್ಳಬೇಡಿ. ಈ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಪಾಕಿಸ್ತಾನದಲ್ಲಿ. ಇಂಡಸ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಜಲಾಶಯ ಕರ್ಮಕಾಂಡ ಇದು.
ಪಾಕಿಸ್ತಾನದ(Pakistan) ನೀರಿನ ಸಮಸ್ಯೆ, ಕೃಷಿ, ಪ್ರವಾಹ ಸೇರಿದಂತೆ ಹಲವು ದೃಷ್ಟಿಕೋನಗಳನ್ನು ಮುಂದಿಟ್ಟುಕೊಂಡು 1975ರಲ್ಲೇ ಡೈಯಾಮೆರ್ ಬಾಶಾ ಡ್ಯಾಮ್(Indus River Dam) ನಿರ್ಮಾಣಕ್ಕೆ ಅಂದಿನ ಪಾಕ್ ಸರ್ಕಾರ ಅನುಮೋದನೆ ನೀಡಿತ್ತು. ಅಂದಿನ ಖರ್ಚು ವೆಚ್ಚಕ್ಕಾಗುವಷ್ಟು ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. 1980ರಲ್ಲಿ ಈ ಡ್ಯಾಮ್(Diamer-Bhasha Dam) ನಿರ್ಮಾಣವಾಗಬೇಕಿತ್ತು. ಆದರೆ ಡೈಯಾಮೆರ್ ಬಾಶಾ ಡ್ಯಾಮ್ ಭ್ರಷ್ಟಾಚಾರ ಕಾರಣ ನಿರ್ಮಾಣವಾಗಲೇ ಇಲ್ಲ. ಇದಾದ ಬಳಿಕ ಹಲವು ಬಾರಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಅದರ ಲೆಕ್ಕವೂ ಇಲ್ಲ. 38 ವರ್ಷಗಳ ಬಳಿಕ ಪಾಕಿಸ್ತಾನದ ನೀರಿನ ಸಮಸ್ಯೆ(Water) ತೀವ್ರಗೊಂಡ ಬೆನ್ನಲ್ಲೇ ಪಾಕಿಸ್ತಾನದ ನಿವೃತ್ತ ಮುಖ್ಯನ್ಯಾಯಮೂರ್ತಿ ಸಾಖಿಬ್ ನಿಸಾರ್, ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ ಡ್ಯಾಮ್ ನಿರ್ಮಾಣ ಮಾಡುವ ಸಲೆಹಯನ್ನು ಸರ್ಕಾರಕ್ಕೆ ನೀಡಿದ್ದರು.
ಪಾಕ್‌ನಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ, ವಸತಿ ಒದಗಿಸಿದ ದೇವಸ್ಥಾನ!
ಇಷ್ಟು ಕೇಳಿದ್ದೇ ತಡ, ಸರ್ಕಾರ ಅತೀ ದೊಡ್ಡದಾಗಿ ಜಾಹೀರಾತು ನೀಡಿತು. ಎಲ್ಲಾ ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜಾಾಹೀರಾತು ನೀಡಿತು. ಫ್ಲೆಕ್ಸ್, ಬೋರ್ಡಿಂಗ್ ರಾರಾಜಿಸಿತು. ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿ ಎಂಬ ಟ್ಯಾಗ್ ಲೈನ ಕೂಡ ಹಾಕಲಾಗಿತ್ತು. ವಿದೇಶಗಳಲ್ಲಿರುವ ಪಾಕಿಸ್ತಾನ ಮೂಲದ ಉದ್ಯಮಿಗಳಿಗೆ ತೆರಿಗೆ ವಿನಾಯಿತಿಸಿ ಸೇರಿದಂತೆ ಹಲವು ಉಪಕ್ರಮಗಳನ್ನು ಘೋಷಿಸಿತು. ಪಾಕಿಸ್ತಾನ ಜನ ದೇಣಿಗೆ ನೀಡಿದರು. ಈ ಮೂಲಕ 3,193 ರೂಪಾಯಿ ಸಂಗ್ರಹಿಸಲಾಯಿತು.
ದೇಣಿಗೆ ನೀಡಿದ ಜನ ಇನ್ನೇನು ಅತೀ ದೊಡ್ಡ ಡ್ಯಾಮ್ ನಿರ್ಮಾಣವಾಗಲಿದೆ. ನೀರಿನ ಬವಣೆ ಮುಗಿಯಲಿದೆ. ಕೃಷಿ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜನರು ನೆಮ್ಮದಿಯೆ ನಿಟ್ಟುಸಿರು ಬಿಟ್ಟರು. ಆದರೆ ಡ್ಯಾಮ್ ನಿರ್ಮಾಣದ ದೇಣಿಗೆಗಿಂತ ಜಾಹೀರಾತಿಗಾಗಿ ಸರ್ಕಾರ 5,030,509,743 ರೂಪಾಯಿ(Corruption) ಖರ್ಚು ಮಾಡಿತ್ತು. ಇದರಲ್ಲಿ ಸಂಪೂರ್ಣ ಹಣ ಜಾಹೀರಾತಿಗಾಗಿ ಎಷ್ಟು ಖರ್ಚು ಮಾಡಿದ್ದಾರೆ, ಸಚಿವರು ಎಷ್ಟು ಜೇಬಿಗಿಳಿಸಿದ್ದಾರೆ ಅನ್ನೋ ಯಾವುದೇ ಮಾಹಿತಿ ಇಲ್ಲ.
ಲಂಡನ್‌ನಲ್ಲಿ ಕಳುವಾದ ಐಷಾರಾಮಿ Bentley Car ಪಾಕಿಸ್ತಾನದಲ್ಲಿ ಪತ್ತೆ
ಇತ್ತ ಆರಂಭದಲ್ಲಿ ಬಂದ ಹಣದಲ್ಲಿ ಡ್ಯಾಮ್ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಇದೀಗ ಡ್ಯಾಮ್ ನಿರ್ಮಾಣ ಮತ್ತೆ ಅರ್ಧಕ್ಕೆ ನಿಂತಿದೆ. ಮತ್ತೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಸಾಧ್ಯವಿಲ್ಲ, ಇತ್ತ ಪಾಕಿಸ್ತಾನ ಸರ್ಕಾರದ ಬಳಿ ನಯಾ ಪೈಸೆ ಇಲ್ಲ. ಡ್ಯಾಮ್ ನಿರ್ಮಾಣ ಕಾರ್ಯ ಹಾಗೇ ಉಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ