"ದಯವಿಟ್ಟು ಯಾರಾದ್ರೂ ಸಹಾಯ ಮಾಡಿ"; ಪಚೀತಿಗೆ ಸಿಕ್ಕಾಕೊಂಡ ಪಾಕಿಸ್ತಾನ ಪ್ರಧಾನಿ 

Published : Sep 16, 2022, 11:39 AM IST
"ದಯವಿಟ್ಟು ಯಾರಾದ್ರೂ ಸಹಾಯ ಮಾಡಿ"; ಪಚೀತಿಗೆ ಸಿಕ್ಕಾಕೊಂಡ ಪಾಕಿಸ್ತಾನ ಪ್ರಧಾನಿ 

ಸಾರಾಂಶ

Samarkhand SCO Summit 2022: ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ನಡೆಯುತ್ತಿರುವ ಶಾಂಘಾಯ್‌ ಕಾರ್ಪೊರೇಷನ್‌ ಆರ್ಗನೈಸೇಷನ್‌ನ ಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ ಮುಂದೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಪಚೀತಿಗೆ ಸಿಲುಕಿಕೊಂಡರು. 

ಸಮರ್‌ಖಂಡ್‌: ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಶಾಂಘಾಯ್‌ ಕಾರ್ಪೊರೇಷನ್‌ ಆರ್ಗನೈಸೇಷನ್‌ ಸಭೆಯಲ್ಲಿ ಪಚೀತಿಗೆ ಸಿಲುಕಿಕೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರ ಜತೆಗಿನ ಮುಖಾಮುಖಿ ಸಭೆಯಲ್ಲಿ ಕಿವಿಗೆ ಇಯರ್‌ ಫೋನ್‌ ಹಾಕಿಕೊಳ್ಳಲು ಒದ್ದಾಡಿದ ಶರೀಫ್‌ ಯಾರಾದರೂ ದಯವಿಟ್ಟು ಸಹಾಯ ಮಾಡಿ ಎಂದು ಸಹಾಯ ಕೋರಿದ್ದಾರೆ. ಈ ವೇಳೆ ಪಾಕಿಸ್ತಾನ ಪ್ರಧಾನಿ ಶರೀಫ್‌ರ ಭದ್ರತಾ ಸಿಬ್ಬಂದಿಯೊಬ್ಬರು ಬಂದು ಕಿವಿಗೆ ಇಯರ್‌ ಫೋನ್‌ ಹಾಕಿ ಹೋಗಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್‌ ಶರೀಫ್‌ರ ಪರಿಸ್ಥಿತಿ ನೋಡಿ ನಕ್ಕಿದ್ದಾರೆ. ಗುರವಾರ ಸಮರ್‌ಖಂಡ್‌ನ ಸಭೆಯಲ್ಲಿ ಈ ಹಾಸ್ಯಾಸ್ಪದ ಘಟನೆ ನಡೆದಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಶರೀಫ್‌ ಎಷ್ಟು ಬಾರಿ ಪ್ರಯತ್ನಿಸಿದರೂ ಇಯರ್‌ ಫೋನ್‌ ಬಿದ್ದು ಹೋಗುತ್ತಿತ್ತು. ಪುಟಿನ್‌ ಕೂಡ ನೋಡುತ್ತಲೇ ಇದ್ದರು. ಶರೀಫ್‌ ಸ್ಥಿತಿ ನೋಡಿ ಮುಗುಳ್ನಗೆ ಬೀರಿದ್ದಾರೆ. ಶರೀಫ್‌ ಕೂಡ ನಗುನಗುತ್ತಲೇ ಯಾರಾದರೂ ಇಯರ್‌ ಫೋನ್‌ ಹಾಕಿ ಎಂದು ಕೈ ಬೀಸಿ ಕರೆದಿದ್ದಾರೆ. ಸಭೆಯಲ್ಲಿ ಪಾಕಿಸ್ತಾನಕ್ಕೆ ಗ್ಯಾಸ್‌ ಪೂರೈಕೆಗೆ ರಷ್ಯಾ ಬದ್ಧವಾಗಿದೆ. ಬೇಕಾದ ಮೂಲಭೂತ ಸೌಕರ್ಯ ಕೂಡ ಈಗಾಗಲೇ ಸಿದ್ಧವಿದೆ ಎಂದು ಪುಟಿನ್‌ ಹೇಳಿದ್ದಾರೆ. 

 

"ರಷ್ಯಾದಿಂದ ಪಾಕಿಸ್ತಾನಕ್ಕೆ ಸುರಂಗ ಮಾರ್ಗದಲ್ಲಿ ಗ್ಯಾಸ್‌ ಪೂರೈಕೆ ಮಾಡಲು ಬೇಕಾದ ಮೂಲಭೂತ ಸೌಕರ್ಯಗಳು ಸಿದ್ಧವಿದೆ. ಅಂದರೆ ರಷ್ಯಾ, ಕಜಕ್‌ಸ್ತಾನ್‌, ಉಜ್ಬೇಕಿಸ್ತಾನ್‌ವರೆಗೂ ಸಮಸ್ಯೆಯಿಲ್ಲ. ಆದರೆ ಅಫ್ಘಾನಿಸ್ತಾನದ ಸಮಸ್ಯೆಯನ್ನು ಬಗೆಹರಿಸಬೇಕಿದೆ," ಎಂದು ಪುಟಿನ್‌ ಹೇಳಿದ್ದಾರೆ. 

ಇದನ್ನೂ ಓದಿ: ಶಾಂಘೈ ಸಹಕಾರ ಶೃಂಗಕ್ಕಾಗಿ ಉಜ್ಬೇಕಿಸ್ತಾನ ತೆರಳಿದ ಮೋದಿ, ಕ್ಸಿ ಜತೆ ಮಾತುಕತೆ ಇಲ್ಲ

ಕೊರೋನಾ ಸಾಂಕ್ರಾಮಿಕ ರೋಗ ಬಂದ ನಂತರ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಮುಖಾಮುಖಿ ಶಾಂಘಾಯ್‌ ಕಾರ್ಪೊರೇಷನ್‌ ಆರ್ಗನೈಸೇಷನ್‌ ಸಮ್ಮಿತ್‌ ನಡೆಯುತ್ತಿದೆ. ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ಸಭೆ ನಡೆಯುತ್ತಿದೆ. ಎರಡು ದಿನಗಳ ಸಭೆ ಇದಾಗಿದ್ದು, ಸೆಪ್ಟೆಂಬರ್‌ 15 ಮತ್ತು 16ರಂದು ನಡೆಯುತ್ತಿದೆ. ಪ್ರಧಾನಿ ಮೋದಿ ಕೂಡ ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಇದನ್ನೂ ಓದಿ: ದಸರಾಗೆ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ

2001ರ ಜೂನ್‌ ತಿಂಗಳಲ್ಲಿ ಎಸ್‌ಸಿಒ ಸಮಿತಿ ಜಾರಿಗೆ ಬಂದಿದ್ದು, ಎಂಟು ದೇಶಗಳು ಈ ಸಮಿತಿಯ ಪೂರ್ಣಪ್ರಮಾಣದ ಸದಸ್ಯರಾಗಿದ್ದಾರೆ. ಆರು ದೇಶಗಳು ಸ್ಥಾಪಕ ದೇಶಗಳಾಗಿವೆ. ಚೀನಾ, ಕಜಕ್‌ಸ್ತಾನ್‌, ಕಿರ್ಗಿಸ್ತಾನ್‌, ರಷ್ಯಾ, ತಜಿಕಿಸ್ತಾನ್‌ ಮತ್ತು ಉಜ್ಬೇಕಿಸ್ತಾನ್‌ ಸ್ಥಾಪಕ ದೇಶಗಳು. ಭಾರತ ಮತ್ತು ಪಾಕಿಸ್ತಾನ 2017ರಲ್ಲಿ ಈ ಸಮಿತಿಯ ಭಾಗವಾದವು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
ನಮ್ಮ ಮಿಸೈಲ್‌ಗೆ ಭಾರತ ದೂರವಲ್ಲ, ಬಾಂಗ್ಲಾ ದೊಂಬಿಗೆ ಮೋದಿ ಸರ್ಕಾರಕ್ಕೆ ಪಾಕ್ ನಾಯಕ ವಾರ್ನಿಂಗ್