
ಲಾಹೋರ್(ಮೇ.09): ಪಾಕಿಸ್ತಾನದಲ್ಲಿ ಮತ್ತೆ ಪರಿಸ್ಥಿತಿ ಕೈಮೀರಿದೆ. ಪಾಕ್ ಸೇನೆ ವಿರುದ್ಧ ದಂಗೆ ಎದ್ದಿದೆ. ಲಾಹೋರ್, ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನ ಸೇನಾ ಪ್ರಮುಖ ಹೆಡ್‌ಕ್ವಾರ್ಟರ್ ಮೇಲೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರು ದಾಳಿ ನಡೆಸಿದ್ದಾರೆ. ಇಮ್ರಾನ್ ಖಾನ್ ಬಂಧನದಬಳಿಕ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಲೆವೆಡೆ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಸಿಕ್ಕ ಸಿಕ್ಕಲ್ಲಿ ಸೇನಾ ವಾಹನಕ್ಕೆ ಕಲ್ಲು ಎಸೆಯಲಾಗುತ್ತಿದೆ. ಸೇನಾ ಕಚೇರಿಗಳು ಧ್ವಂಸಗೊಂಡಿದೆ. ಇತ್ತ ಇಮ್ರಾನ್ ಖಾನ್ ಪಕ್ಷ ಪಿಟಿಐ ಪಾಕಿಸ್ತಾನದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಇದರ ಪರಿಣಾಮ ಪಾಕಿಸ್ತಾನ ಇದೀಗ ಹೊತ್ತಿ ಉರಿಯುತ್ತಿದೆ. ನಿಯಂತ್ರಣಕ್ಕೆ ಸಿಗದೆ ತುರ್ತು ಪರಿಸ್ಥಿತಿ ನಿರ್ಮಾಣಗೊಂಡಿದೆ.
ಭ್ರಷ್ಟಾಚಾರ ಸೇರಿದಂತೆ ಹಲವು ಪ್ರಕಣಗಳಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಇಮ್ರಾನ್ ಖಾನ್ ಅಲ್ ಖಾದಿರ್ ಟ್ರಸ್ಟ್ ಕೇಸ್ ಪ್ರಕರಣಧಲ್ಲಿ ಅರೆಸ್ಟ್ ಆಗಿದ್ದಾರೆ. ಇದರಿಂದ ಒಂದೆಡೆ ಪಿಟಿಐ ಪಾಕಿಸ್ತಾನದಲ್ಲಿ ಎಲ್ಲಾ ಪ್ರಾಂತ್ಯದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇತ್ತ ಇಮ್ರಾನ್ ಖಾನ್ ಬೆಂಬಲಿಗರು ಪಾಕಿಸ್ತಾನ ಸೇನಾ ಹೆಡ್‌ಕ್ವಾರ್ಟರ್‌ಗೆ ಮುತ್ತಿಗೆ ಹಾಕಿ ಧ್ವಂಸಗೊಳಿಸಿದ್ದಾರ. ಹಲೆವೆಡೆ ಸೇನಾ ಕಚೇರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಪಾಕಿಸ್ತಾನದ ಬೀದಿ ಬಿದಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಸೇನೆ ವಿರುದ್ಧವೇ ದಂಗೆ ಎದ್ದಿರುವ ಕಾರಣ, ಪರಿಸ್ಥಿತಿ ಕೈಮೀರಿದೆ. ಪಾಕಿಸ್ತಾನ ಇತಿಹಾಸದಲ್ಲಿ ಸೇನೆ ವಿರುದ್ಧ ಈ ಮಟ್ಟಿನ ಆಕ್ರೋಶ ಇದೇ ಮೊದಲು. ಪ್ರತಿ ಭಾರಿ ಸರ್ಕಾರದ ವಿರುದ್ಧ ಆಕ್ರೋಶ ಆರಂಭಗೊಂಡಂತೆ ಪಾಕಿಸ್ತಾನ ಸೇನೆ ಪ್ರಧಾನಿ ಪದಚ್ಯುತಗೊಳಿಸಿ ಸೇನೆ ಆಡಳಿತ ಮಾಡುತ್ತಿತ್ತು. ಜನರಲ್ ಪರ್ವೇಜ್ ಮುಷರಫ್ ಇದೇ ರೀತಿ ಮಾಡಿ ಸುದೀರ್ಘ ವರ್ಷ ಪ್ರಧಾನಿಯಾಗಿದ್ದರು. ಆದರೆ ಈ ಬಾರಿ ಸೇನೆ ವಿರುದ್ಧವೇ ದಂಗೆ ಆರಂಭಗೊಂಡಿದೆ.
ಪ್ರಧಾನಿ ಶೆಹಬಾಜ್ ಶರೀಫ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ತಮ್ಮ ಪಕ್ಷವನ್ನೇ ಕಳೆದುಕೊಳ್ಳುವ ಭೀತಿಗೆ ತುತ್ತಾಗಿದ್ದಾರೆ. ಶನಿವಾರ ಕರಾಚಿ ಪೊಲೀಸರು ಇಮ್ರಾನ್ ಖಾನ್ ಮನೆ ಮೇಲೆ ದಾಳಿ ನಡೆಸಿದ ವೇಳೆ, ಮನೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದರು. ಪಾಕಿಸ್ತಾನ್ ತೆಹ್ರೀ ಕ್ ಎ ಇನ್ಸಾಫ್ ಪಕ್ಷದ ನಾಯಕರ ಮನೆಯಲ್ಲೇ ಇಂಥ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಪಕ್ಷವನ್ನು ನಿಷೇಧಿಸುವ ಸಂಬಂಧ ಕಾನೂನು ತಜ್ಞರ ಸಲಹೆ ಪಡೆಯಲು ನಿರ್ಧರಿಸಲಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ.
ಇಮ್ರಾನ್ ಮನೇಲಿ ಶಸ್ತ್ರಾಸ್ತ್ರ, ಪೆಟ್ರೋಲ್ ಬಾಂಬ್ ಪತ್ತೆ!
ಇತ್ತೀಚೆಗೆ ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಕೇಸ್ ಕೂಡ ದಾಖಲಾಗಿದೆ. ನ್ಯಾಯಾಂಗ ಆವರಣದಲ್ಲಿ ವಿಧ್ವಂಸಕ ಕೃತ್ಯವೆಸಗಿ, ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮತ್ತು ಅಶಾಂತಿ ಸೃಷ್ಟಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ 10ಕ್ಕೂ ಹೆಚ್ಚು ನಾಯಕರ ಮೇಲೆ ಪಾಕಿಸ್ತಾನ ಪೊಲೀಸರು ಭಯೋತ್ಪಾದಕ ಪ್ರಕರಣವನ್ನು ದಾಖಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ