ಆಟಿಸಂ ಪೀಡಿತ ಬಾಲಕಿಗಿದೆ ಐನ್‌ಸ್ಟನ್ ಮೀರಿಸುವ ಬ್ರೈನ್: 11ರಲ್ಲೇ ಇಂಜಿನಿಯರಿಂಗ್‌ ಡಿಗ್ರಿ ಕಂಪ್ಲೀಟ್‌

Published : May 09, 2023, 03:20 PM ISTUpdated : May 09, 2023, 03:28 PM IST
 ಆಟಿಸಂ ಪೀಡಿತ ಬಾಲಕಿಗಿದೆ ಐನ್‌ಸ್ಟನ್ ಮೀರಿಸುವ ಬ್ರೈನ್: 11ರಲ್ಲೇ ಇಂಜಿನಿಯರಿಂಗ್‌ ಡಿಗ್ರಿ ಕಂಪ್ಲೀಟ್‌

ಸಾರಾಂಶ

ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ 11 ರ ಹರೆಯದ ಹುಡುಗಿಯೊಬ್ಬಳು,ಭೌತಶಾಸ್ತ್ರ ವಿಜ್ಞಾನಿ ಐನ್‌ಸ್ಟೈನ್ ಅವರನ್ನು ಮೀರಿಸುವ ಬುದ್ಧಿಮತ್ತೆ(ಮಿದುಳಿನ ಸಾಮರ್ಥ್ಯ) ಯನ್ನು ಹೊಂದಿದ್ದು, 11ರ ಹರೆಯದಲ್ಲೇ ಮಾಸ್ಟರ್ ಡಿಗ್ರಿಯನ್ನು ಪೂರ್ಣಗೊಳಿಸಿ ಎಲ್ಲರ ಅಚ್ಚರಿಗೆ ಕಾರಣಳಾಗಿದ್ದಾಳೆ

ಆಟಿಸಂ ಅಥವಾ ಸ್ವಲೀನತೆ ಸಮಸ್ಯೆಯಿಂದ ಬಳಲುತ್ತಿರುವ 11 ರ ಹರೆಯದ ಹುಡುಗಿಯೊಬ್ಬಳು, ವಿಜ್ಞಾನಿ, ಸಾಪೇಕ್ಷತಾ ಸಿದ್ಧಾಂತದ ಜನಕ ಐನ್‌ಸ್ಟೈನ್ ಅವರನ್ನು ಮೀರಿಸುವ ಬುದ್ಧಿಮತ್ತೆ(ಮಿದುಳಿನ ಸಾಮರ್ಥ್ಯ) ಯನ್ನು ಹೊಂದಿದ್ದು, 11ರ ಹರೆಯದಲ್ಲೇ ಮಾಸ್ಟರ್ ಡಿಗ್ರಿಯನ್ನು ಪೂರ್ಣಗೊಳಿಸಿ ಎಲ್ಲರ ಅಚ್ಚರಿಗೆ ಕಾರಣಳಾಗಿದ್ದಾಳೆ. ಜೊತೆಗೆ ಈಕೆಯ ಸ್ಪೂರ್ತಿದಾಯಕ ಕತೆ ಆಟಿಸಂ ಹೊಂದಿರುವ ಅನೇಕ ಮಕ್ಕಳಿಗೆ ಸ್ಪೂರ್ತಿ ತುಂಬಿದ್ದು, ಆಟಿಸಂ ಪೀಡಿತ ಮಕ್ಕಳ ಪೋಷಕರ ಧೈರ್ಯ ಹೆಚ್ಚಿಸಿದೆ. 

ಒಂದು ಮಗುವಿಗೆ ಆಟಿಸಂ ಇದೆ ಅಂದಾಗ ಮಗುವಿನ ಪೋಷಕರಿಗೆ ಅನಿರೀಕ್ಷಿತ ಆಘಾತ ಉಂಟಾಗುತ್ತದೆ. ಮಗುವಿನ ವರ್ತನೆಯಿಂದ ಬೇಸತ್ತು ಮಗುವಿನ ಕುಟುಂಬ, ಸಮಾಜ, ಶಾಲೆ ಎಲ್ಲವೂ ಕೈ ಬಿಟ್ಟಾಗ ಪೋಷಕರು ಪಾತಾಳಕ್ಕೆ ಕುಸಿಯುತ್ತಾರೆ. ಆದರೆ ಆಟಿಸಂ ಹೊಂದಿರುವ ಮಕ್ಕಳು ಸಾಮಾನ್ಯರಿಗಿಂತ ಹೆಚ್ಚೇ  ಬುದ್ಧಿವಂತಿಕೆಯನ್ನು  ಹೊಂದಿರುವವರಾಗಿದ್ದಾರೆ ಎಂಬುದು ಕೂಡ ಅಷ್ಟೇ ಸತ್ಯವಾದ ವಿಚಾರ. 

ಅಪರಿಚಿತನ ಹುಟ್ಟುಹಬ್ಬವನ್ನು ಸೆಲೆಬ್ರೆಟ್‌ ಮಾಡಿದ ಆಟಿಸಂ ಪುಟಾಣಿ: ವಿಡಿಯೋ ವೈರಲ್

ಹಾಗೆಯೇ ಈಗ ಮೆಕ್ಸಿಕೋದ 11 ವರ್ಷದ ಬಾಲಕಿ ಅಧಾರ ಪೆರೆಜ್ ಸ್ಯಾಂಚೆಜ್ (Adhara Pérez Sánchez) ಎಂಬಾಕೆ ವಿಶಿಷ್ಟವೆನಿಸಿದ ಬುದ್ಧಿಶಕ್ತಿಯನ್ನು ಹೊಂದಿದ್ದು,  ಆಕೆಯನ್ನು ಸಾಮಾನ್ಯರಿಗಿಂತ ವಿಭಿನ್ನ ಸ್ಥಾನದಲ್ಲಿ ನಿಲ್ಲಿಸಿದೆ. ಆಕೆಯ ಬುದ್ಧಿಮತ್ತೆ 162 ಅಂಕಗಳಿಷ್ಟಿದ್ದು, ಇದು ಪ್ರಸಿದ್ಧ ಭೌತಶಾಸ್ತ್ರಜ್ಞ ಅಲ್ಬರ್ಟ್‌ ಐನ್‌ಸ್ಟೈನ್‌ ಅವರ ಬುದ್ಧಿಮತ್ತೆಗಿಂತಲೂ ಅಧಿಕ ಎನ್ನಲಾಗುತ್ತಿದೆ. ಸ್ಯಾಂಚೆಜ್ ಈಗ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ (ಸ್ನಾತಕೋತ್ತರ ಪದವಿ) ಪಡೆಯುವ ಹಾದಿಯಲ್ಲಿದ್ದಾಳೆ. 

ಆಕೆ ಈಗಾಗಲೇ ಸಿಸ್ಟಂ ಇಂನಿಜಿಯರಿಂಗ್ ವಿಷಯದಲ್ಲಿ ಸಿಎನ್‌ಸಿಐ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದು,  ಹಾಗೆಯೇ ಮೆಕ್ಸಿಕೋದ ಟೆಕ್ನಾಲಾಜಿಕಲ್ ವಿಶ್ವವಿದ್ಯಾನಿಲಯದಿಂದ (Technological University of Mexico) ಮ್ಯಾಥಮೆಟಿಕ್ಸ್‌ನಲ್ಲಿ (specialization in mathematics) ವಿಶೇಷ ಡಿಗ್ರಿಯನ್ನು ಪಡೆದಿದ್ದಾರೆ. ತನ್ನ ಸ್ವಲೀನತೆಯ (autism) ಸಮಸ್ಯೆಯ ನಡುವೆಯೂ ಸ್ಯಾಂಚೆಜ್ ತನ್ನ ಐದನೇ ವಯಸ್ಸಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರೈಸಿದ್ದು, ಕೇವಲ ಒಂದು ವರ್ಷದಲ್ಲಿ ಮಧ್ಯಮ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಕೂಡ ಪೂರೈಸಿದ್ದಾರೆ. 

ಮಗುವಿಗೆ 2-3 ವರ್ಷವಾದ್ರೂ ಮಾತನಾಡುತ್ತಿಲ್ವಾ? ತಲೆ ಕೆಡಿಸಿಕೊಳ್ಬೇಡಿ, ಕಾರಣ ಇವಿರಬಹುದು!

ಗಗನಯಾತ್ರಿಯಾಗಲು ಬಯಸಿರುವ ಈ ಬುದ್ಧಿವಂತ ಪುಟಾಣಿ ನಿಪುಣ ಸಾರ್ವಜನಿಕ ಭಾಷಾಣಕಾರಳು ಆಗಿದ್ದಾಳೆ. ಇಷ್ಟೆಲ್ಲಾ ಬುದ್ಧಿವಂತಿಕೆ ಹೊಂದಿರುವ ಸ್ಯಾಂಚೆಜ್‌  ನಾಸಾದಲ್ಲಿ ಕೆಲಸ ಮಾಡುವ ಅಂತಿಮ ಗುರಿಯನ್ನು ಹೊಂದಿದ್ದಾಳೆ. ತನ್ನ ಗುರಿಯನ್ನು ಸಹಕಾರಗೊಳಿಸುವುದರ ಜೊತೆ ಬಾಹ್ಯಾಕಾಶ ಪರಿಶೋಧನೆ ಮತ್ತು ಗಣಿತಶಾಸ್ತ್ರದ ಕ್ಷೇತ್ರಗಳನ್ನು ಅನ್ವೇಷಿಸಲು ಮುಂದಾಗುವ ಯುವ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಲು ಆಕೆ  ಮೆಕ್ಸಿಕೋದ ಸ್ಪೇಸ್ ಏಜೆನ್ಸಿಯ (Mexican Space Agency) ಸಹಕರಿಸುತ್ತಿದ್ದಾರೆ. 

 

ಬಡ ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ಸ್ಯಾಂಚೆಜ್‌ಗೆ ಮೂರು ವರ್ಷವಿರುವಾಗ ಮಾತುಕತೆಯಲ್ಲಿ ಹಿನ್ನಡೆಯಾಗಲು ಆರಂಭವಾದಾಗ ಆಟಿಸಂ ಇರುವುದು ತಿಳಿದು ಬಂದಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ಯಾಂಚೆಜ್ (Sanchez) ತಾಯಿ ಮಾತನಾಡಿದ್ದು, ಶಾಲೆಯಲ್ಲಿ ಸ್ಯಾಚೆಂಜ್ ಸ್ಥಿತಿ ನೋಡಿ ಇತರ ಮಕ್ಕಳು ಅಪಹಾಸ್ಯ ಮಾಡಲು ಶುರು ಮಾಡಿದ್ದರು, ಜೊತೆಗೆ ಆಕೆಯ ಶಿಕ್ಷಕರು ಕೂಡ ಆಕೆಯ ಬಗ್ಗೆ ಯಾವುದೇ ಕರುಣೆ ತೋರಲಿಲ್ಲ. ಈ ಕಾರಣದಿಂದ ಆಕೆ ಶಾಲೆ ಬಿಡುವಂತಹ ಸ್ಥಿತಿ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.  

Cow Therapy: ಭಾರತೀಯ ಗೋವುಗಳನ್ನು ಬಳಸಿ ಆಟಿಸಂ ರೋಗಿಗಳಿಗೆ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ