
ನವದೆಹಲಿ (ಜು.6): ಇಡೀ ಪಾಕಿಸ್ತಾನ ದೇಶದ ಆರ್ಥಿಕತೆ ಕುಸಿದು ಹೋಗಿರುವ ಹಂತದಲ್ಲಿ ಐಎಂಎಫ್ 3 ಬಿಲಿಯನ್ ಡಾಲರ್ ಹಣಕಾಸು ಸಹಾಯ ಮಾಡುವ ಮೂಲಕ ನೆಮ್ಮದಿ ನೀಡಿದೆ. ಆದರೆ, ಇದು ಸಂಪೂರ್ಣ ಪಾಕಿಸ್ತಾನಕ್ಕೆ ಖುಷಿ ನೀಡಿಲ್ಲ. ಇಂಧನ ಖರೀದಿ ಮಾಡಲು ಸಾಧ್ಯವಾಗದೇ ಇರುವ ಹಂತ ತಲುಪಿರಿವ ಪಾಕಿಸ್ತಾನ ಸೇನೆ ತನ್ನ ಮಿಲಿಟರಿ ಡ್ರಿಲ್ ಹಾಗೂ ಯುದ್ಧಭ್ಯಾಸಗಳನ್ನು ಮುಂದಿನ ಸೂಚನೆಯವರೆಗೂ ನಿಲ್ಲಿಸಿದೆ. ಮೂಲಗಳ ಪ್ರಕಾರ, ಡಿಸೆಂಬರ್‌ವರೆಗೆ ಪಾಕಿಸ್ತಾನ ಸೇನೆಯಲ್ಲಿ ಯಾವುದೇ ಯುದ್ಧಭ್ಯಾಸಗಳು ನಡೆಯೋದಿಲ್ಲ. ಯುರೋಷ್ಯನ್ ಟೈಮ್ಸ್ ಪಡೆದ ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ ಪಾಕಿಸ್ತಾನ ಸೇನೆಯ ಸೇನಾ ತರಬೇತಿಯ ಮಹಾನಿರ್ದೇಶಕರು ಎಲ್ಲಾ ಕ್ಷೇತ್ರ ರಚನೆಗಳು ಮತ್ತು ಪ್ರಧಾನ ಕಛೇರಿಗಳಿಗೆ ಪತ್ರವನ್ನು ನೀಡಿದ್ದಾರೆ, ಡಿಸೆಂಬರ್ ವರೆಗೆ ಎಲ್ಲಾ ಯುದ್ಧಭ್ಯಾಸಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ. ಇಡೀ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಪದ್ರಮುಖ ಕಾರಣವೆಂದರೆ "ಮೀಸಲು ಇಂಧನ" ಮತ್ತು ಅಗತ್ಯ ಲೂಬ್ರಿಕಂಟ್‌ಗಳ ಕೊರತೆ. ಮೀಸಲು ಇಂಧನವು ಮಿಲಿಟರಿ ಪರಿಭಾಷೆಯಲ್ಲಿ ಯುದ್ಧ ಮೀಸಲುಗಿಂತ ಭಿನ್ನವಾಗಿದೆ.
ಯುದ್ಧದ ಮೀಸಲುಗಳು ಯುದ್ಧದ ನಿರ್ದಿಷ್ಟ ಅವಧಿಗಳಲ್ಲಿ ಅಗತ್ಯವಿರುವ ಶಸ್ತ್ರಾಸ್ತ್ರ ಮತ್ತು ಇಂಧನಕ್ಕಾಗಿ ಮೀಸಲಾಗಿದ್ದರೂ, ಮೀಸಲು ಮಳಿಗೆಗಳು ಸಾಮಾನ್ಯವಾಗಿ ಆಂತರಿಕ ಮಿಲಿಟರಿ ವ್ಯಾಯಾಮಗಳು ಮತ್ತು ಯುದ್ಧದ ಅಭ್ಯಾಸಗಳಿಗೆ ಉದ್ದೇಶಿಸಲಾಗಿರುತ್ತದೆ.
ಪಾಕಿಸ್ತಾನದ ಟಿ-80 ಟ್ಯಾಂಕ್‌ಗಳು ಪ್ರತಿ ಕಿಲೋಮೀಟರ್‌ಗೆ ಎರಡು ಲೀಟರ್ ಪೆಟ್ರೋಲ್ ಪಡೆಯುತ್ತದೆ. ಇದರಿಂದಾಗಿ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು, ಟ್ಯಾಂಕ್‌ಗಳನ್ನು ಬಳಸಿಕೊಂಡು ನಡೆಸಲಾಗುವ ಎಲ್ಲಾ ಯುದ್ಧಾಭ್ಯಾಸಗಳನ್ನು ಡಿಸೆಂಬರ್‌ವರೆಗೆ ರದ್ದು ಮಾಡಲಾಗಿದೆ ಎಂದು ಪಾಕಿಸ್ತಾನ ಸೇನಾ ವಿಚಾರಗಳ ಬಗ್ಗೆ ಸೂಕ್ತವಾಗಿ ಮಾಹಿತಿ ನೀಡುವ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಧನ್ವೀರ್ ಸಿಂಗ್ ಹೇಳಿದ್ದಾರೆ.
ಎಫ್‌ಎಟಿಎಫ್ ಬೂದು ಪಟ್ಟಿಯಿಂದ ಪಾಕಿಸ್ತಾನವನ್ನು ತೆಗೆಯಲಾಗಿದ್ದರೂ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪರಿಹಾರ ಪಡೆದುಕೊಳ್ಳುವುದು ಪಾಕಿಸ್ತಾನದ ಪಾಲಿಗೆ ಸವಾಲಾಗಿದೆ. ಅದಕ್ಕೆ ಕಾರಣ ದೇಶದ ಆರ್ಥಿಕ ಪರಿಸ್ಥಿತಿ. ಸಾಲ ಕೊಟ್ಟರೆ ಅದನ್ನು ತೀರಿಸಲಾಗದಂಥ ಪರಿಸ್ಥಿತಿಯಲ್ಲಿ ಪಾಕಿಸ್ತಾನವಿದೆ. ಆರ್ಥಿಕ ಅಸ್ಥಿರತೆ ನಡುವೆ ರಾಜಕೀಯ ಕಾರಣಗಳೂ ಪಾಕಿಸ್ತಾನಕ್ಕೆ ಹಿನ್ನಡೆ ನೀಡಿವೆ. ಅಸ್ಥಿರ ಸರ್ಕಾರ ಒಂದಡೆಯಾಗಿದ್ದರೆ, ಇನ್ನೊಂದೆಡೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೆಜ್ಜೆಹೆಜ್ಜೆಗೂ ಪಾಕಿಸ್ತಾನದ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡುತ್ತಿದ್ದಾರೆ.
ಮೇ 9 ರಂದು ಇಮ್ರಾನ್ ಖಾನ್‌ರನ್ನು ಬಂಧಿಸಿದ ಬೆನ್ನಲ್ಲಿಯೇ ಪಾಕಿಸ್ತಾನದ ಸೇನೆಯ ಹಿರಿಯ ಅಧಿಕಾರಿಗಳು, ಸೇನಾ ಕಚೇರಿಗಳ ಮೇಲೆ ಪ್ರತಿಭಟನಾಕಾರರು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದ್ದರು. ಅದರೊಂದಿಗೆ ಭಾರೀ ಪ್ರಮಾಣದ ಹಣದುಬ್ಬರ ಪಾಕಿಸ್ತಾನವನ್ನು ಇನ್ನಷ್ಟು ಕಷ್ಟಕ್ಕೆ ನೂಕಿದೆ. ಪ್ರತಿದಿನದ ಊಟಕ್ಕೆ ದೇಶದ ನಾಗರೀಕರು ಕಷ್ಟಪಡುವಂತಾಗಿದೆ. ಅಗತ್ಯ ದಿನಬಳಕೆಯ ವಸ್ತುಗಳು ಪೂರೈಕೆಯಾಗದ ಕಾರಣಕ್ಕೆ ದೇಶದ ಹಲವು ಭಾಗಗಳಲ್ಲಿ ಗಲಭೆಗಳು ಆಗುತ್ತಿದೆ. ಆದರೆ, ಇಂಧನಗಳ ಬೆಲೆಯಲ್ಲಿ ಭಾರೀ ಏರಿಕೆ, ಎಣ್ಣೆ ಹಾಗೂ ಲ್ಯೂಬ್ರಿಕೆಂಟ್‌ಗಳ ಬೆಲೆಯಲ್ಲಿ ಏರಿಕೆ ಆಗಿರುವುದು ಪಾಕಿಸ್ತಾನ ಸೇನೆಯ ಮೇಲೆ ಪರಿಣಾಮ ಬೀರಿದೆ.
PubG ಆಡ್ತಾ ಭಾರತೀಯ ಯುವಕನ ಜೊತೆ ಪಾಕ್ ಮಹಿಳೆಯ ಪ್ರೇಮ, ಗೂಢಚಾರದ ಶಂಕೆಯಲ್ಲಿ ಪೊಲೀಸ್
ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 262 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ ಇದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇದೆ. ಇನ್ನು ಸೀಮೆಎಣ್ಣೆ ಪ್ರತಿ ಲೀಟರ್‌ಗೆ 164 ರೂಪಾಯಿ ಆಗಿದೆ. ಹಣ ನೀಡಲು ಸಿದ್ಧವಿದ್ದರೂ, ಪಾಕಿಸ್ತಾನ ಸೇನೆಗೆ ಬೇಕಾದಷ್ಟು ಇಂಧನ ಸಿಗುತ್ತಿಲ್ಲ. ಅದಕ್ಕಾಗಿ ಮಿಲಿಟರಿ ಟ್ರಕ್, ಟ್ಯಾಂಕ್ ಹಾಗೂ ಶಸ್ತ್ರಸಜ್ಜಿತ ವಾಹನಗಳ ಸಾಗಾಟ ಕಡಿಮೆಯಾಗಿದೆ.
PubG ಆಡ್ತಾ ಯುಪಿ ಯುವಕನೊಂದಿಗೆ ಲವ್, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ಮಹಿಳೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ