ಪ್ರೇಮ ವೈಫಲ್ಯ: ಭಾರತೀಯ ಮೂಲದ ವಿದ್ಯಾರ್ಥಿನಿ ಕೈ ಕಾಲು ಕಟ್ಟಿ ಜೀವಂತವಾಗಿ ಹೂತು ಹಾಕಿದ NRI

Published : Jul 06, 2023, 05:24 PM ISTUpdated : Jul 06, 2023, 05:25 PM IST
ಪ್ರೇಮ ವೈಫಲ್ಯ: ಭಾರತೀಯ ಮೂಲದ ವಿದ್ಯಾರ್ಥಿನಿ ಕೈ ಕಾಲು ಕಟ್ಟಿ ಜೀವಂತವಾಗಿ ಹೂತು ಹಾಕಿದ NRI

ಸಾರಾಂಶ

ತನ್ನನ್ನು ಗೆಳತಿ ತಿರಸ್ಕರಿಸಿದಳು ಎಂದು ಸಿಟ್ಟಾದ ಗೆಳೆಯನೋರ್ವ ಮಾಜಿ ಪ್ರೇಯಸಿಯ ಕೈಕಾಲುಗಳನ್ನು ಕಟ್ಟಿ ಜೀವಂತವಾಗಿ ಹೂತ ಹಾಕಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಅಡಿಲೇಡ್‌: ತನ್ನನ್ನು ಗೆಳತಿ ತಿರಸ್ಕರಿಸಿದಳು ಎಂದು ಸಿಟ್ಟಾದ ಗೆಳೆಯನೋರ್ವ ಮಾಜಿ ಪ್ರೇಯಸಿಯ ಕೈಕಾಲುಗಳನ್ನು ಕಟ್ಟಿ ಜೀವಂತವಾಗಿ ಹೂತ ಹಾಕಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಹೀಗೆ ಗೆಳತಿಯನ್ನು ಜೀವಂತವಾಗಿ ಹೂತು ಹಾಕಿ ಕೊಲೆ ಮಾಡಿದ ವ್ಯಕ್ತಿಯನ್ನು ಭಾರತೀಯ ಮೂಲದ ಪ್ರಸ್ತುತ ಆಸ್ಟ್ರೇಲಿಯಾದ ಅಡಿಲೇಡ್‌ ನಿವಾಸಿಯಾಗಿರುವ ತರಿಕ್‌ಜೋತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಭಾರತೀಯ ಮೂಲದ 21 ವರ್ಷದ  ನರ್ಸಿಂಗ್ ವಿದ್ಯಾರ್ಥಿ ಜಾಸ್ಮೀನ್ ಕೌರ್ ಎಂಬಾಕೆಯನ್ನು ಜೀವಂತವಾಗಿ ಸಮಾಧಿ ಮಾಡಿದ್ದ.

2021 ರ ಮಾರ್ಚ್‌ನಲ್ಲಿ ಈ ಕೊಲೆ ಪ್ರಕರಣ ನಡೆದಿದ್ದು, ನ್ಯಾಯಾಲಯ ಈ ಪ್ರಕರಣದಲ್ಲಿ ಆರೋಪಿ ತರಿಕ್‌ಜೋತ್ ಸಿಂಗ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಜಾಸ್ಮೀನ್ ಕೌರ್‌  ಕೈಕಾಲುಗಳನ್ನು ಕೇಬಲ್ ವೈರ್‌ನಿಂದ ಬಿಗಿದು ಕಟ್ಟಿ, ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಜೀವಂತವಾಗಿ ಸಮಾಧಿ ಮಾಡಲಾಗಿತ್ತು. ಕೈಕಾಲು ಕಟ್ಟಿ, ಜೊತೆಗೆ ಕಣ್ಣುಗಳನ್ನು ಕೂಡ ಬಟ್ಟೆಯಿಂದ ಕಟ್ಟಿದ ಸ್ಥಿತಿಯಲ್ಲಿ ಆಳವಿಲ್ಲದ ಸಮಾಧಿಯೊಂದರಲ್ಲಿ ಆಕೆಯ ಶವ ಪತ್ತೆಯಾಗಿತ್ತು. 

ಲಂಡನ್‌ನಲ್ಲಿ ವಾರದಲ್ಲಿ ಮೂವರು ಭಾರತೀಯ ಮೂಲದವರ ಹತ್ಯೆ: ಆತಂಕದಲ್ಲಿ ಅನಿವಾಸಿ ಭಾರತೀಯರು!

ಆಸ್ಟ್ರೇಲಿಯಾದ ಫ್ಲೈಂಡರ್ಸ್ ರೇಂಜ್‌ನಲ್ಲಿ  ಮಾರ್ಚ್ 2021ರಂದು ಈ ಕೊಲೆ ಪ್ರಕರಣ ನಡೆದಿತ್ತು.  ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಇಂದು ನಡೆಸಿತ್ತು. ಆತನನ್ನು ತಿರಸ್ಕರಿಸಿದಕ್ಕಾಗಿ ಸೇಡು ತೀರಿಸಿಕೊಳ್ಳಲು ತರಿಕ್‌ಜೋತ್ ಸಿಂಗ್, ಈ ಕೃತ್ಯವೆಸಗಿದ್ದಾನೆ ಎಂದು ಕೋರ್ಟ್ ಹೇಳಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.  ಕೌರ್‌ನನ್ನು ಕಿಡ್ನಾಪ್ ಮಾಡಿ ಬಳಿಕ ಕೊಲೆ ಮಾಡಿದ ಆರೋಪ ತರಿಕ್‌ಜೋತ್ ಸಿಂಗ್ ಮೇಲಿದೆ.  ಕೈಕಾಲು ಕಟ್ಟಿ ಅಳವಿಲ್ಲದ ಸಮಾಧಿಯೊಂದರಲ್ಲಿ ಕೌರ್ ದೇಹವನ್ನು  ತರಿಕ್‌ಜೋತ್ ಸಿಂಗ್ ಸಮಾಧಿ ಮಾಡಿದ್ದ

ಬ್ರೇಕಾಫ್ ಬಳಿಕ ಅದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದೇ ಆತ ಈ ಕೃತ್ಯವೆಸಗಿದ್ದಾನೆ. ಜಾಸ್ಮೀನ್ ಕೌರ್ ತಾಯಿ ರಾಸ್‌ಪೌಲ್ ಈ ಬಗ್ಗೆ ಪ್ರತಿಕ್ರಿಯಿಸಿ ಆತ ನನ್ನ ಮಗಳ ಬಗ್ಗೆ ಅತೀಯಾದ ಗೀಳು ಹೊಂದಿದ್ದ, ಇತ್ತ ಪುತ್ರಿ ಜಾಸ್ಮೀನ್ ಆಕೆಯನ್ನು 100ಕ್ಕೂ ಹೆಚ್ಚು ಬಾರಿ ತಿರಸ್ಕರಿಸಿದ್ದಳು ಎಂದಿದ್ದಾರೆ. ಮಹಿಳೆಯೊಬ್ಬಳ ಸಹಾಯದಿಂದ ಅಡಿಲೇಡ್‌ನಲ್ಲಿ ಜಾಸ್ಮೀನ್ ಕೆಲಸ ಮಾಡುತ್ತಿದ್ದ ಸ್ಥಳದಿಂದ ಆಕೆಯನ್ನು ಅಪಹರಿಸಿದ  ತರಿಕ್‌ಜೋತ್ ಸಿಂಗ್ ಕಾರಿನ ಡಿಕ್ಕಿಯಲ್ಲಿ ಆಕೆಯನ್ನು ಹಾಕಿಕೊಂಡು ನಾಲ್ಕು  ಗಂಟೆಯ ಕಾಲ ಕಾರು ಓಡಿಸಿದ್ದ. ಆಕೆಯ ದೇಹವನ್ನು ಕೇಬಲ್ ವಯರ್‌ನಿಂದ ಕಟ್ಟಲಾಗಿತ್ತು. 

ಫಾರ್ಚೂನ್ ಬ್ಯುಸಿನೆಸ್ ರಿವ್ಯೂ ಮುಖಪುಟದಲ್ಲಿ ಮಿಂಚಿದ ಕನ್ನಡತಿ; ಯಾರೀಕೆ ಶಾಂತಲಾ ಸದಾನಂದ ?

ಈ ಕೊಲೆ ಪ್ರಕರಣದಲ್ಲಿ ಸಾಮಾನ್ಯವಲ್ಲದ ಕ್ರೌರ್ಯ ಮೆರೆಯಲಾಗಿದೆ. ಪ್ರಜ್ಞಾವಸ್ಥೆಯಲ್ಲೇ ಮಣ್ಣನ್ನೇ ಉಸಿರಾಡುವ ಮಣ್ಣನ್ನೇ ನುಂಗಬೇಕಾದಂತಹ ಸ್ಥಿತಿಯಲ್ಲಿ ಆಕೆಯನ್ನು ಭಯಂಕರವಾಗಿ ಕೊಲ್ಲಲಾಗಿದೆ  ಎಂದು ಸರ್ಕಾರಿ ವಕೀಲ ಕಾರ್ಮೆನ್ ಮ್ಯಾಟಿಯೊ ಹೇಳಿದ್ದಾರೆ.  ಕೌರ್ ಅವರ ತಾಯಿ ಸೇರಿದಂತೆ ಕೌರ್ ಅವರ ಇಡೀ ಕುಟುಂಬವೇ ಈ ಹಿಂದೆ ತಮ್ಮ ಮಗಳು ತನ್ನ ಕೊನೆ ಕ್ಷಣಗಳಲ್ಲಿ ಹೇಗೆ ಹಿಂಸೆಗೆ ಒಳಗಾದಳು ಎಂಬುದನ್ನು ನೆನೆದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಗಿ ಹೇಳಿಕೊಂಡಿದ್ದರು.  ಆಕೆಯನ್ನು ಕೊನೆಕ್ಷಣದಲ್ಲಿ ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ, ಆಕೆ ತನ್ನ ಕೊನೆ ಕ್ಷಣಗಳನ್ನು ಈ ಭೂಮಿಯ ಮೇಲೆ ಬಹಳ ಕೆಟ್ಟ ಅಮಾನವೀಯ ರೀತಿಯಲ್ಲಿ ಕಳೆದಳು. ಎಳೆ  ವಯಸ್ಸಿನ ನನ್ನ ಮಗಳನ್ನು ಕಳೆದುಕೊಂಡು ನನ್ನ ಹೃದಯ ಒಡೆದು ಹೋಗಿದೆ. ಆತ ಮಾಡಿದ್ದಕ್ಕೆ ಎಂದಿಗೂ ಕ್ಷಮೆ ಇಲ್ಲ ಎಂದು ಯುವತಿಯ ತಾಯಿ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ