
ಲಂಡನ್(ಜು.05) ವಿಮಾನದಲ್ಲಿ ಅಹಿತರ ಘಟನೆಗಳು ಹೆಚ್ಚಾಗುತ್ತಿದೆ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ, ಅಸಭ್ಯ ವರ್ತನೆ, ಹೊಡೆದಾಟಗಳು ಇದೀಗ ವಿಮಾನದೊಳಗೆ ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಕ್ರೊವೇಶಿಯಾದಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಘಟನೆ ನಡೆದಿದೆ. ಈತನ ರಂಪಾಟದಲ್ಲಿ ಗಗನಸಖಿ ಸೇರಿದಂತೆ ಇತರ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಈತನ ಪ್ರಯತ್ನವನ್ನು ಸಹ ಪ್ರಯಾಣಿಕರು ತಡೆದು ದುರಂತವನ್ನು ತಪ್ಪಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
27 ವರ್ಷದ ಲಂಡನ್ ಮೂಲದ ಯುವಕ ರೈನೈರ್ ವಿಮಾನ ಹತ್ತಿದ್ದಾನೆ. ಈತ ವೃತ್ತಿಪರ ಬಾಕ್ಸರ್. ಎಲ್ಲಾ ಪ್ರಯಾಣಿಕರನ್ನು ಹತ್ತಿಸಿಕೊಂಡು ವಿಮಾನ ನಿಲ್ದಾಣದಿಂದ ಟೇಕ್ ಆಫ್‌ಗಾಗಿ ರನ್‌ವೇನಲ್ಲಿ ವೇಗವಾಗಿ ಸಾಗಿದೆ. ಆಗಸಕ್ಕೆ ಹಾರುವ ಕೆಲವೇ ಕ್ಷಣಗಳ ಮೊದಲು ಬಾಕ್ಸರ್ ಅಸಮಾಧಾನಗೊಂಡಿದ್ದಾನೆ. ತಕ್ಷಣವೇ ತನ್ನ ಸೀಟಿನಿಂದ ಸೀಟ್ ಬೆಲ್ಟ್ ತೆಗೆದು ಮೇಲೆದ್ದಿದ್ದಾನೆ. ಆಕ್ರೋಶದಿಂದ ಸಹ ಪ್ರಯಾಣಿಕರ ಮೇಲೆ ರೇಗಾಡಿದ್ದಾನೆ.
ವಿಸ್ತಾರ ಪ್ಲೈಟ್ ಅಲ್ಲಿ ವಾರ್: ಮಗಳನ್ನು ಮುಟ್ಟಿದ ಆರೋಪ: ಪ್ರಯಾಣಿಕನ ಮೇಲೆ ಹಾರಿ ಬಿದ್ದ ಅಪ್ಪ
ಹಾಕಿದ್ದ ಸನ್‌ಗ್ಲಾಸ್ ತೆಗೆದ ಈ ಬಾಕ್ಸರ್, ಗಗನಸಖಿಯರಲ್ಲಿ ವಿಮಾನದ ಬಾಗಿಲು ತೆರೆಯಲು ಸೂಚಿಸಿದ್ದಾನೆ. ದಿಢೀರ್ ಆಗಿ ಪ್ರಯಾಣಿಕನಿಗೆ ಏನಾಗಿದೆ ಅನ್ನುವಷ್ಟರಲ್ಲೇ ಈತನ ರಂಪಾಟ ಜೋರಾಗಿದೆ. ಸಹ ಪ್ರಯಾಣಿಕರಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಎದುರು ನಿಂತಿದ್ದ ಗಗನಖಿಯಲ್ಲಿ ವಿಮಾನದ ಬಾಗಿಲು ತೆಗೆಯಿರಿ ಎಂದು ಸೂಚಿಸಿದ್ದಾನೆ. ಬಳಿಕ ಗಗನಸಖಿಯನ್ನು ತಳ್ಳಿ ವಿಮಾನದ ಬಾಗಿಲುನತ್ತ ವೇಗವಾಗಿ ಸಾಗಿದ್ದಾನೆ.
ಕಿರುಚಾಡುತ್ತಾ ಸಾಗಿದ ಈತನ ನೋಡಿದ ಇತರ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಆತರೆ ಇಬ್ಬರು ಸಹ ಪ್ರಯಾಣಿಕರು ಬಾಕ್ಸರ್‌ನನ್ನು ತಡೆದಿದ್ದಾರೆ. ಗಟ್ಟಿ ಹಿಡಿದು ಕೆಳಕ್ಕೆ ಬೀಳಿಸಿದ್ದಾರೆ. ಬಳಿಕ ಆತನ ಕೈಗಳನ್ನು ಹಾಗೂ ಕಾಲನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಇದರಿಂದ ವಿಮಾನದ ಬಾಗಿಲು ತೆರೆಯುವ ಪ್ರಯತ್ನವನ್ನು ಸಹ ಪ್ರಯಾಣಿಕರು ತಡೆದು ಆತಂಕ ದೂರ ಮಾಡಿದ್ದಾರೆ.
ಮಧ್ಯ ಆಗಸದಲ್ಲಿ ವಿಮಾನದ ಡೋರ್ ತೆಗೆಯಲು ಯತ್ನ: ಯುವಕನ ಹಗ್ಗದಿಂದ ಸೀಟಿಗೆ ಕಟ್ಟಿದ ಸಿಬ್ಬಂದಿ
ಈತನ ರಂಪಾಟದಿಂದ ವಿಮಾನ ಟೇಕ್ ಆಫ್ ಆಗಿಲ್ಲ. ವಿಮಾನವನ್ನು ಮತ್ತೆ ನಿಲ್ದಾಣದತ್ತ ತಿರುಗಿಸಲಾಗಿದೆ. ರೇಗಾಡಿದ ಬಾಕ್ಸರ್‌ನನ್ನು ಸಹ ಪ್ರಯಾಣಿಕರು ಹಿಡಿದುಕೊಂಡೇ ನಿಂತಿದ್ದರು. ಇತ್ತ ವಿಮಾ ನಿಲ್ದಾಣಕ್ಕೆ ಆಗಮಿಸಿದ ಬೆನ್ನಲ್ಲೇ ಪೊಲೀಸರು ದೌಡಾಯಿಸಿದ್ದಾರೆ. ಈತನ ಬಂಧಿಸಿ ಕರೆದೊಯ್ದಿದ್ದಾರೆ. ಇತ್ತ ಪೊಲೀಸರು ಬಾಕ್ಸರ್‌ನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಈತನ ಮೇಲೆ ಕೆಲ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇತ್ತ ರಂಪಾಟದಲ್ಲಿ ಗಗನಸಖಿ ಹಾಗೂ ಇತರ ಸಹ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಇತ್ತೀಚೆಗೆ ಮುಂಬೈ-ದಿಲ್ಲಿ ಏರ್ ಇಂಡಿಯಾ ವಿಮಾನದ ನೆಲದ ಮೇಲೆ ಪ್ರಯಾಣಿಕನೊಬ್ಬ ಮೂತ್ರ ಹಾಗೂ ಮಲವಿಸರ್ಜನೆ ಮಾಡಿಕೊಂಡ ಘಟನೆ ನಡೆದಿತ್ತು. ವಿಮಾನದ 9ನೇ ಸಾಲಿನಲ್ಲಿ ಈತ ಮೂತ್ರ ವಿಸರ್ಜನೆ ಮಾಡಿ ಮಲ ವಿಸರ್ಜನೆ ಮಾಡಿಕೊಂಡ ಹಾಗೂ ಉಗುಳಿದ. ಇದನ್ನು ನೋಡಿದ ಸಹ ಪ್ರಯಾಣಿಕರು ಕ್ರುದ್ಧರಾದರು ಹಾಗೂ ಅಸಹ್ಯಪಟ್ಟುಕೊಂಡರು. ಕೂಡಲೇ ಆತನನ್ನು ತರಾಟೆಗೆ ತೆಗೆದುಕೊಂಡ ವಿಮಾನ ಸಿಬ್ಬಂದಿ, ಆತನನ್ನು ಪ್ರಯಾಣಿಕರಿಂದ ಪ್ರತ್ಯೇಕಿಸಿದರು. ದಿಲ್ಲಿಗೆ ವಿಮಾನ ಬಂದ ಕೂಡಲೇ ಅತನನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಈತ ಮೇಲೆ ಐಪಿಸಿ ಸೆಕ್ಷನ್ 294 (ಅಶ್ಲೀಲ ಮಡತೆ) ಹಾಗೂ 510 (ದುರ್ವರ್ತನೆ) ಪ್ರಕರಣ ದಾಖಲಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ