ಭಾರತದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗ್ರೇಟಾ; ಅಸಲಿ ಮುಖ ಬಹಿರಂಗ ಎಂದ ಅಮೇರಿಕ ಲೇಖಕಿ!

By Suvarna NewsFirst Published Feb 16, 2021, 10:01 PM IST
Highlights

ರೈತ ಹೋರಾಟ ಬೆಂಬಲಿಸಿ ಟೂಲ್‌ಕಿಟ್ ಪೋಸ್ಟ್ ಮಾಡಿದ ಪರಿಸರ ಹೋರಾಟಗಾರ್ತಿಯ ಅಸಲಿ ಮುಖ ಬಹಿರಂಗವಾಗಿದೆ. ಭಾರತದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗ್ರೇಟಾ ಕುರಿತು ಅಮೆರಿಕ ಮಾಜಿ ಅಧ್ಯಕ್ಷ ವರ್ಷಗಳ ಹಿಂದೇಯೇ ಎಚ್ಚರಿಕೆ ನೀಡಿದ್ದರು. ಈ ಕುರಿತು ಅಮೆರಿಕ ಹೇಳುತ್ತಿರುವುದೇನು? 

ನ್ಯೂಯಾರ್ಕ್(ಫೆ.16): ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬೆಂಬಲಿಸಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಪೋಸ್ಟ್ ಮಾಡಿದ ಟೂಲ್ ಕಿಟ್ ಇದೀಗ ಗ್ರೇಟಾ ಮಾತ್ರವಲ್ಲ, ಭಾರತದಲ್ಲಿ ಕೆಲವರನ್ನು ಸಂಕಷ್ಟಕ್ಕೀಡು ಮಾಡಿದೆ.  ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ಕುರಿತು ತನಿಖೆ ಚುರುಕುಗೊಳ್ಳುತ್ತಿದ್ದಂತೆ ಭಾರತದಲ್ಲಿ ಕೆಲವರು ಅರೆಸ್ಟ್ ಆಗಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರೇಟಾ ಥನ್ಬರ್ಗ್ ಮುಖವಾಡ ಕಳಚಿ ಬಿದ್ದಿದೆ.

ರೈತ ಪ್ರತಿಭಟನೆ ಹೆಸರಿನಲ್ಲಿ ಭಾರತ ವಿರೋಧಿ ಪಿತೂರಿಗೆ ಟೂಲ್ ಕಿಟ್ ನೀಡಿದ ಗ್ರೇಟಾ ಧನ್ಬರ್ಗ್!
 
ಪ್ರತಿಭಟನೆಗೆ ಹಣ ಪಡೆದು ತನ್ನ ಬೇಳೆ ಬೇಯಿಸಿಕೊಳ್ಳುವ ಗ್ರೇಟಾ ಥನ್ಬರ್ಗ್ ಭಾರತದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂದು ಅಮೆರಿಕ ರಾಜಕೀಯ ವಿಶ್ಲೇಷಕಿ, ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಕ್ಯಾಂಡೈಸ್ ಒವೆನ್ಸ್ ಹೇಳಿದ್ದಾರೆ.

ಅಮೆರಿಕದಲ್ಲಿ ಎಲ್ಲರೂ ಗ್ರೇಟಾ ಥನ್ಬರ್ಗ್ ಹುತ್ತು ಕತೆ ಗಮನಿಸುತ್ತೀದ್ದೀರಿ ಎಂದು ಭಾವಿಸುತ್ತೇನೆ. ನಮಗೆಲ್ಲಾ ಗ್ರೇಟಾ ಥನ್ಬರ್ಗ್ ಕುರಿತು ಅರಿತಿದ್ದೇವೆ. ಈಕೆ ಭಾರತದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬ್ದಿದ್ದಾಳೆ. ಗ್ರೇಟಾ ಹಣ ಪಡೆದು ವಿಶ್ವಾದ್ಯಂತ ಅಶಾಂತಿ ಸೃಷ್ಟಿಸುವ ಪ್ರತಿಭಟನೆಗೆ ಪ್ರಚೋದನೆ ನೀಡುವ ಹಾಗೂ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಕೆಲಸ ಮಾಡುತ್ತಿದ್ದಾಳೆ. ಬಹಳ ಹಿಂದೆ ಟ್ರಂಪ್ ಡಿಸ್ಟರ್ಬ್‌ಡ್ ಚೈಲ್ಡ್ ಎಂದು ಕರೆದಿದ್ದರು ಎಂದು ಕ್ಯಾಂಡೈಸ್ ಒವೆನ್ಸ್ ಟ್ವೀಟ್ ಮಾಡಿದ್ದಾರೆ.

 

I hope everyone in America is following this insane story. We all knew it but really got caught red-handed in India. She is a paid, global propagandist that incites protests and unrest around the world.
A disturbed child—just as Trump warned.
Chill, Greta, chill. https://t.co/uQhaK2Rv80

— Candace Owens (@RealCandaceO)

ರೈತರ ದಿಲ್ಲಿ ಹೋರಾಟದ ಹಿಂದೆ ಖಲಿಸ್ತಾನಿ ಪಾತ್ರ!

ಗ್ರೇಟಾ ಥನ್ಬರ್ಗ್ ಟ್ವೀಟ್ ಹಾಗೂ ಟೂಲ್‌ಕಿಟ್ ಹಿಂದೆ ಪ್ರವರ್ತಿಸಿರುವ ಬೆಂಗಳೂರಿನ 21 ವರ್ಷದ ಸಾಮಾಜಿಕ ಹೋರಾಟಗಾರ್ತಿ ದಿಶಾ ಅರೆಸ್ಟ್ ಮಾಡಲಾಗಿದೆ. ಇನ್ನು ಮುಂಬೈನ ವಕೀಲೆ ನಿಕಿತಾ ಜಾಕೋಬ್, ಶಂತನುಗೆ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ. ಇದರಲ್ಲಿ ಶಂತನು ಆಂಟಿಸಿಪೇಟರ್ ಬೇಲ್ ಪಡೆದುಕೊಂಡಿದ್ದಾರೆ.

ಗ್ರೆಟಾ ಥನ್ಬರ್ಗ್ ಟೂಲ್‌ ಕಿಟ್ ವಿವಾದ: ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅರೆಸ್ಟ್!.
 

click me!