ಹೇಳಿದ್ದು ಒಂದೇ ವಾಕ್ಯ, ಟಾಪ್ ಟ್ರೆಂಡ್ ಆದ ಪಾಕ್ ಹುಡುಗಿ

Suvarna News   | Asianet News
Published : Feb 16, 2021, 01:58 PM ISTUpdated : Feb 16, 2021, 07:00 PM IST
ಹೇಳಿದ್ದು ಒಂದೇ ವಾಕ್ಯ, ಟಾಪ್ ಟ್ರೆಂಡ್ ಆದ ಪಾಕ್ ಹುಡುಗಿ

ಸಾರಾಂಶ

ಪಾಶ್ಚಾತ್ಯ ಸಂಸ್ಕೃತಿಯ ಬೆನ್ನು ಬಿದ್ದು ಹೋಗುತ್ತಿರುವವರನ್ನು ಬರ್ಗರ್ ಬಚ್ಚಾ ಅನ್ನುವ ಪಾಕಿಸ್ತಾನದ ಯುವತಿಯೊಬ್ಬಳು ತನ್ನ ಒಂದು ಲೈನ್ ಮೂಲಕವೇ ಹಿಟ್ ಆಗಿದ್ದಾಳೆ. ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದ್ದಾಳೆ. ಏನದು ನೋಡಿ

ಕಳೆದ ಕೆಲವೊಂದು ದಿನಗಳಿಂದ ಯಶ್‌ರಾಜ್ ಮುಖಟೆ ಅವರ ಮ್ಯೂಸಿಕಲ್ ಟ್ವಿಸ್ಟ್ ಪ್ರಸಿದ್ಧ ಪಾವ್ರಿ ಹೋ ನಹೀ ಹೇ ಟ್ರೆಂಡ್‌ನಲ್ಲಿದೆ. ಪಾಕಿಸ್ತಾನಿ ಯುವತಿ ದನನೀರ್ ಎಂಬವಳು ತನ್ನ ಆಪ್ತರ ಜೊತೆ ಫನ್ ಮಾಡ್ತಾ ವಿಡಿಯೋ ಮಾಡಿದ ಶೇರ್ ಮಾಡಿದ್ದು ಈಗ ವೈರಲ್ ಆಗಿದೆ.
ಯೇ ಹಮಾರಿ ಕಾರ್, ಯೇ ಹಮ್, ಔರ್ ಯೇ ಹಮಾರಿ ಪಾರ್ವಿ ಹೋ ರಹೀ ಹೇ ಎಂದು ಯುವತಿ ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು.

ಸದ್ಯ #pawrihorihai ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಸುಮಾರು 17 ಸಾವಿರ ಟ್ವೀಟ್‌ಗಳು ಈ ಹ್ಯಶ್‌ಡ್ಯಾಗ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರೋ ದನನೀರ್‌ಗೆ ಸುಮಾರು 4 ಲಕ್ಷ ಫಾಲೋವರ್ಸ್ ಇದ್ದಾರೆ.

ಅಮೆರಿಕನ್ ಮಾಡೆಲ್‌ನ ಬಿಕಿನಿ ಫೋಟೋಶೂಟ್ ನೋಡಿ ಭಾರತದ ಲೇಖಕಿ ಹೇಳಿದ್ದಿಷ್ಟು

ಆಕೆ ಇದರಲ್ಲಿ ಬರ್ಗರ್ಸ್‌ಗಳನ್ನು ತಮಾಷೆ ಮಾಡಿ ಸಾಕಷ್ಟು ವಿಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಫಾಲೋ ಮಾಡುವ ಸಿಕ್ಕಾಪಟ್ಟೆ ಹುಚ್ಚಿರೋ ಜನರನ್ನು ಪಾಕಿಸ್ತಾನ ಸ್ಟೈಲ್‌ನಲ್ಲಿ ಬರ್ಗರ್ ಬಚ್ಚಾ ಎಂದೇ ಕರೆಯುತ್ತಾರೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ ದನನೀರ್ ಈಗ ಫೇಮಸ್ ಅಗಿದ್ದಾಳೆ. ತನ್ನ ಆಪ್ತರ ಜೊತೆ ಫನ್ ಮಾಡೋ ಸೆಲ್ಫೀ ವಿಡಿಯೋ ಶೇರ್ ಮಾಡಿದ್ದು, ಈ ವಿಡಿಯೋ ತುಣುಕು ವೈರಲ್ ಆಗಿದೆ. ಫ್ರೆಂಡ್ಸ್ ಜೊತೆ ಇದು ನಮ್ಮ ಕಾರು, ಇದು ನಾವು ಮತ್ತು ನಾವು ಪಾರ್ಟಿ ಮಾಡುತ್ತಿದ್ದೇವೆ ಎಂದಿದ್ದಾರೆ.

ನವ ಜೋಡಿಯೊಂದರ ಫಸ್ಟ್‌ನೈಟ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್

 ಇಲ್ಲಿ ಟ್ರೆಂಡ್ ಆಗಿರುವುದು ಈಕೆ ಪಾರ್ಟಿಯನ್ನು ಉಚ್ಛರಿಸಿದ ರೀತಿಗಾಗಿ. ಪಾರ್ಟಿ ಅನ್ನೋದನ್ನು ಸ್ಟೈಲಾಗಿ ವೆಸ್ಟರ್ನ್ ಸ್ಟೈಲ್‌ನಲ್ಲಿ ಹೇಳೋದನ್ನು ಮಾಕ್ ಮಾಡಿದ್ದಾರೆ ಈಕೆ. ಇದೀಗ ಈಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದರ ಒರಿಜಿನಲ್ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ 2.7 ಮಿಲಿಯನ್ ವ್ಯೂಸ್ ಪಡೆದಿದೆ. ಇದೀಗ ಇದಕ್ಕೆ ಭಾರತದ ಯಶ್‌ರಾಜ್ ಮುಖಟೆ ಮ್ಯೂಸಿಕಲ್ ಟಚ್ ಕೊಟ್ಟಿದ್ದು ಇದಕ್ಕೆ 3.7 ಮಿಲಿಯನ್ ವ್ಯೂಸ್ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!