ಭಾರತದ ಲಸಿಕೆ ರಾಜತಾಂತ್ರಿಕ ನೀತಿಗಳಿಗೆ ಬೆಚ್ಚಿಬಿದ್ದ ಚೀನಾ!

By Suvarna News  |  First Published Feb 16, 2021, 8:11 AM IST

ಭಾರತದ ಲಸಿಕೆ ರಾಜತಾಂತ್ರಿಕ ನೀತಿಗಳಿಗೆ ಬೆಚ್ಚಿಬಿದ್ದ ಚೀನಾ!| ತನ್ನ ಪ್ರಜೆಗಳಿಗೆ ನೀಡುವುದಕ್ಕಿಂತ ರಫ್ತಿಗೆ ಹೆಚ್ಚಿನ ಉತ್ತೇಜನ


ಬೀಜಿಂಗ್(ಫೆ.16)‌: ಭಾರತ ತಾನು ಉತ್ಪಾದಿಸಿದ ಕೊರೋನಾ ಲಸಿಕೆಯನ್ನು ಉಚಿತವಾಗಿ ಮತ್ತು ಅಗ್ಗದ ದರದಲ್ಲಿ ಮಿತ್ರದೇಶಗಳಿಗೆ ಹಂಚುವ ಮೂಲಕ ಪ್ರದರ್ಶಿಸಿದ ಲಸಿಕೆ ರಾಜತಾಂತ್ರಿಕ ನೀತಿಗೆ ನೆರೆಯ ಚೀನಾ ಬೆಚ್ಚಿಬಿದ್ದಿದೆ. ಇದರ ಪರಿಣಾಮ ಎಂಬಂತೆ ತಾನು ಉತ್ಪಾದಿಸುತ್ತಿರುವ ಲಸಿಕೆಯನ್ನು ತನ್ನ ಪ್ರಜೆಗಳಿಗೆ ನೀಡುವುದಕ್ಕಿಂತ ಹೆಚ್ಚಾಗಿ, ಮಿತ್ರ ದೇಶಗಳಿಗೆ ರಫ್ತು ಮಾಡುವುದಕ್ಕೆ ಉತ್ತೇಜನ ನೀಡುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಸೇನೆ ಹಿಂಪಡೆತ ಚೀನಾಕ್ಕೆ ಭಾರತ ಶರಣಾಗತಿ ಸಂಕೇತ!

Latest Videos

undefined

ಹಾಂಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಪ್ರಕಾರ, ಚೀನಾ ಇದುವರೆಗೆ ತನ್ನ ದೇಶದಲ್ಲಿ 4.05 ಕೋಟಿ ಜನರಿಗೆ ಲಸಿಕೆ ನೀಡಿದ್ದರೆ, ಇದೇ ಅವಧಿಯಲ್ಲಿ ವಿದೇಶಗಳಿಗೆ 4.6 ಕಟಿ ಡೋಸ್‌ ಲಸಿಕೆ ಪೂರೈಸಿದೆ.

ದೇಶೀ ಲಸಿಕೆಗಳ ಕಾರ್ಯಕ್ಷಮತೆಯಲ್ಲಿ ವಿಫಲವಾಗಿರುವುದು, ಲಸಿಕೆ ಪಡೆಯಲು ಚೀನಿ ಜನರು ನಿರಾಸಕ್ತಿ ತೋರಿಸುತ್ತಿರುವ ಕಾರಣ ಜನವರಿಯೊಳಗೆ 5 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಮುಟ್ಟಲು ಚೀನಾ ವಿಫಲವಾಗಿದೆ. ಆದರೆ ಇದೇ ವೇಳೆ ಭಾರತ ತನ್ನ ನಾಗರಿಕರಿಗೆ ನೀಡುವ ದೇಶ ತನ್ನ ಮಿತ್ರದೇಶಗಳಿಗೆ ಲಸಿಕೆ ನೀಡಿ ಜಾಗತಿಕ ಮನ್ನಣೆ ಪಡೆಯುತ್ತಿರುವುದು ಚೀನಾವನ್ನು ಕಂಗೆಡಿಸಿದೆ. ಹೀಗಾಗಿ ಅದು ಲಸಿಕೆ ರಫ್ತಿನ ಪ್ರಮಾಣ ಹೆಚ್ಚಿಸಿದೆ ಎಂದು ವರದಿಗಳು ತಿಳಿಸಿವೆ.

click me!