ಸಾಮಾನ್ಯವಾಗಿ ಪಾರ್ಕಿಂಗ್ ಇಲ್ಲದ ಸ್ಥಳದಲ್ಲಿ ವಾಹನವನ್ನು ಪಾರ್ಕಿಂಗ್ ಮಾಡುವ ಮೂಲಕ ಕೆಲವರು ಇತರರಿಗೆ ತೊಂದರೆ ಮಾಡುತ್ತಾರೆ. ಮಹಾನಗರಗಳಲ್ಲಿ ಇದರಿಂದ ಟ್ರಾಫಿಕ್ ಜಾಮ್ ಆಗುವುದು ಕೆಲವರು ಬೇರೆಯವರ ಮನೆಯ ಮುಂದೆ ವಾಹನವನ್ನು ನಿಲ್ಲಿಸುವುದರಿಂದ ಮನೆ ಮಂದಿ ಎಲ್ಲದರೂ ಹೊರಗೆ ಹೋಗಬೇಕು ಎಂದರೆ ಈ ವಾಹನದ ಮಾಲೀಕರು ಬಂದು ತಮ್ಮ ಗಾಡಿಯನ್ನು ತೆಗೆಯುವವರೆಗೆ ಕಾಯಬೇಕಾಗುತ್ತದೆ. ಆದರೆ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಈ ರೀತಿ ತಮ್ಮ ಮನೆ ಮುಂದೆ ವಾಹನವನ್ನು ಪಾರ್ಕಿಂಗ್ ಮಾಡುವುದನ್ನು ತಪ್ಪಿಸಲು ವಿನೂತನ ಐಡಿಯಾ ಮಾಡಿದ್ದು, ಈತನ ಕ್ರಿಯೇಟಿವಿಟಿ ಈಗ ಸಖತ್ ವೈರಲ್ ಆಗಿದೆ.
ಮನೆ ಮಾಲೀಕ ಮಾಡಿದ್ದೇನು?
ತನ್ನ ಮನೆಯ ಗೇಟ್ ಮುಂದೆ ಅಪರಿಚಿತರು ವಾಹನ ಪಾರ್ಕಿಂಗ್ ಮಾಡುವುದನ್ನು ನೋಡಿ ನೋಡಿ ಬೇಸತ್ತ ಆತ ಇದನ್ನು ತಡೆಯಲು ಮನೆ ಮುಂದೆ ಮೋಷನ್-ಆಕ್ಟಿವೇಟೆಡ್ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿದ್ದಾನೆ. ವೀಡಿಯೋದಲ್ಲಿ ಕಾಣಿಸುವಂತೆ ಅಪರಿಚಿತ ವಾಹನ ಚಾಲಕರು ವಾಹನವನ್ನು ಈ ವ್ಯಕ್ತಿಯ ಮನೆ ಗೇಟ್ ಮುಂದೆ ನಿಲ್ಲಿಸಿ ವಾಹನದಿಂದ ಇಳಿಯಲು ಮುಂದಾಗುತ್ತಿದ್ದಂತೆ ಸ್ಪಿಂಕ್ಲರ್ ಹಾರಲು ಶುರುವಾಗಿ ಅವರು ಒದ್ದೆಯಾಗುತ್ತಾರೆ. ಕೂಡಲೇ ವಾಹನ ಸವಾರರು ವಾಹನದಿಂದ ಇಳಿಯುವ ಬದಲು ಡೋರ್ ಹಾಕಿಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮೈ ಮೇಲೇ ನೀರು ಹಾರುತ್ತಿದ್ದಂತೆ ಅವರು ಗಾಬರಿಗೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ವ್ಯಕ್ತಿಯ ಈ ಕ್ರಿಯೇಟಿವ್ ಐಡಿಯಾಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಾಲೀಕನ ಸಮೇತ ಸ್ಕೂಟರ್ ಟೋಯಿಂಗ್ ಮಾಡಿದ ಅಧಿಕಾರಿಗಳು: ವಿಡಿಯೋ ವೈರಲ್
ಮನೆ ಮಾಲೀಕನ ಐಡಿಯಾಗೆ ವ್ಯಾಪಕ ಶ್ಲಾಘನೆ
ಮನೆಗೆ ಹೋಗುವ ಗೇಟ್‌ನಲ್ಲೇ ಯಾರೋ ಅಪರಿಚಿತರು ತಮ್ಮ ವಾಹನವನ್ನು ಪಾರ್ಕಿಂಗ್ ಮಾಡುತ್ತಿದ್ದಿದ್ದರಿಂದ ಮನೆ ಮಾಲೀಕನಿಗೆ ಬಹಳ ಕಿರಿಕಿರಿಯಾಗಿತ್ತು. ವಾಹನ ಸವಾರರಿಗೆ ಹೇಳಿ ಹೇಳಿ ಸುಸ್ತಾದ ಅವರು ಸೆನ್ಸರ್ ಆಧರಿತ ಸ್ಪಿಂಕ್ಲರ್ ಅಳವಡಿಸಿದ್ದರು. ಹೀಗಾಗಿ ಅಲ್ಲಿ ಅನಧಿಕೃತವಾದ ವಾಹನಗಳು ಬಂದು ಪಾರ್ಕಿಂಗ್ ಮಾಡಲು ಮುಂದಾದಗಲೆಲ್ಲಾ ವಾಹನ ಸವಾರರಿಗೆ ಹಠಾತ್ ಆಗಿ ನೀರಿನ ಸಿಂಚನವಾಗುತ್ತಿತ್ತು.ಇದರಿಂದ ಏನಾಗುತ್ತಿದೆ ಎಂಬುದನ್ನು ತಿಳಿಯದೇ ವಾಹನ ಸವಾರರು ಗಾಬರಿಯಾಗುತ್ತಿದ್ದರು. ಅವರು ಅಳವಡಿಸಿದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದ್ದು ಅನೇಕರು ಮಾಲೀಕನ ಈ ಸೃಜನಶೀಲ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆ ಬೋರ್ಡ್ ಏನಪ್ಪಾ? ನೋ ಪಾರ್ಕಿಂಗ್‌ನಲ್ಲಿ ವಾಹನ, ಟ್ರಾಫಿಕ್ ಪೊಲೀಸರಿಗೆ ಉಪಲೋಕಾಯುಕ್ತರ ಕ್ಲಾಸ್!
ಇದೊಂದು ಅದ್ಭುತವಾದ ಐಡಿಯಾ ಎಂದು ಒಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನೀರಿನ ಬಿಲ್ ಜಾಸ್ತಿಯಾಗುತ್ತೆ ತಾಳ್ಮೆ ಕಡಿಮೆಯಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಸ್ಮಾರ್ಟ್ ನಡೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತ್ತು. ಕಾಮೆಂಟ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ