17ರ ಹರೆಯದ ವಿದ್ಯಾರ್ಥಿ ಜೊತೆ ಟೀಚರ್ ಚುಮ್ಮಾ ಚುಮ್ಮಾ, ಶಾಲೆಯಲ್ಲೇ ನಡೀತು ಘಟನೆ

Published : Mar 02, 2025, 03:54 PM ISTUpdated : Mar 02, 2025, 04:07 PM IST
17ರ ಹರೆಯದ ವಿದ್ಯಾರ್ಥಿ ಜೊತೆ ಟೀಚರ್ ಚುಮ್ಮಾ ಚುಮ್ಮಾ, ಶಾಲೆಯಲ್ಲೇ ನಡೀತು ಘಟನೆ

ಸಾರಾಂಶ

ಹೈಸ್ಕೂಲ್ ವಿದ್ಯಾರ್ಥಿ ಜೊತೆ ಶಾಲಾ ಟೀಚರ್ ಲವ್ವಿ ಡವ್ವಿ ಶುರುಮಾಡಿದ್ದಾರೆ. ಹದಿಹರೆಯದ ವಯಸ್ಸಿನ ಹುಡುಗ ಟೀಚರ್ ಮೋಹದ ಜಾಲದಲ್ಲಿ ಬಿದ್ದಿದ್ದಾನೆ. ಆದರೆ ಟೀಚರ್‌ಗೆ ತನ್ನ ಆಸೆ ಆಕಾಂಕ್ಷೆ ಇಲ್ಲಿಗೆ ನಿಲ್ಲಿಸುವ ಯಾವುದೇ ಯೋಚನೆ ಇರಲಿಲ್ಲ. ಪರಿಣಾಮ ವಿದ್ಯಾರ್ಥಿ ಜೊತೆಗಿರುವಾಗಲೇ ಟೀಚರ್ ಸಿಕ್ಕಿ ಬಿದ್ದಿದ್ದಾರೆ.

ಕ್ಯಾಲಿಫೋರ್ನಿಯಾ(ಮಾ.2) ವಿದ್ಯಾರ್ಥಿಗಳು ಹಾಗೂ ಗುರುಗಳ ನಡುವಿನ ಸಂಬಂಧ ಅತ್ಯಂತ ಪವಿತ್ರ. ಆದರೆ ಈ ಸಂಬಧಕ್ಕೆ ಅಪವಾದ ಎಂಬಂತೆ ಹಲವು ಘಟನೆಗಳು ನಡೆದಿದೆ. ಇದೀಗ ಬೆಚ್ಚಿ ಬೀಳಿಸುವ ಘಟನೆಯೊಂದು ಶಾಲೆಯಲ್ಲಿ ನಡೆದಿದೆ. ಆತ ಹೈಸ್ಕೂಲ್ ವಿದ್ಯಾರ್ಥಿ. ವಯಸ್ಸು ಕೇವಲ 17. ಈ ಹದಿಹರೆಯದ ಹುಡುಗನ ಮೇಲೆ ಅದೇ ಶಾಲೆಯ ಮಹಿಳಾ ಟೀಚರ್‌ಗೆ  ಮನಸ್ಸಾಗಿದೆ. ಅದು ಪ್ರೀತಿ ಆಗಿರಲಿಲ್ಲ. ಉದ್ದೇಶ ಬೇರೆನೇ ಇತ್ತು. ಹೀಗಾಗಿ ವಿದ್ಯಾರ್ಥಿಯೊಂದಿಗೆ ಸಲುಗೆಯಿಂದ ಇದ್ದ ಟೀಚರ್, ಅಷ್ಟೇ ಬೇಗ ಸಿಹಿ ಮುತ್ತಿನ ಹಂತಕ್ಕೆ ತಲುಪಿದ್ದಾರೆ. ಕೆಲವೇ ದಿನಗಳಲ್ಲಿ ದೈಹಿಕ ಸಂಪರ್ಕವೂ ನಡೆದು ಹೋಗಿದೆ. ಆದರೆ ಇಲ್ಲಿಗೆ ನಿಲ್ಲಲಿಲ್ಲ. ಇದು ನಿರಂತರವಾಗ ತೊಡಗಿದೆ. ಇದೀಗ ಈ ಟೀಚರ್ ಚುಮ್ಮಾ ಚುಮ್ಮಾ ಆಟ ಬಯಲಾಗಿದೆ. ಪೊಲೀಸರು ಈಕೆಯನ್ನು ಬಂಧಿಸಿದ್ದು, ವಿದ್ಯಾರ್ಥಿಗೆ ಕೌನ್ಸಲಿಂಗ್ ನೀಡಲಾಗುತ್ತಿದೆ.

17ರ ಹರೆಯದ ವಿದ್ಯಾರ್ಥಿ ಜೊತೆಗೆ  ದೈಹಿಕ ಸಂಪರ್ಕ ಬೆಳೆಸಿ ಶಿಕ್ಷಕಿ ಅರೆಸ್ಟ್ ಆದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ರಿವರ್‌ಬ್ಯಾಂಕ್ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಡ್ಯೂಲ್ಸ್ ಫ್ಲೋರೆಸ್ ಅರೆಸ್ಟ್ ಆದ ಟೀಚರ್. ಟೀಚರ್ ಸುಂದರಿ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಆಸೆ ಆಕ್ಷಾಂಕ್ಷೆಗಳಿಗೆ ಮಿತಿ ಇರಲಿಲ್ಲ. ಪರಿಣಾಮ ವಿದ್ಯಾರ್ಥಿಗಳನ್ನೇ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದೀಗ ವಿದ್ಯಾರ್ಥಿ ಪೊಲೀಸರ ಅತಿಥಿಯಾಗಿದ್ದಾರೆ.

17ರ ಹರೆಯದ ವಿದ್ಯಾರ್ಥಿ ತರಗತಿಯಲ್ಲಿ ಉತ್ತಮ ಅಂಕಗಳಿಸುತ್ತಿದ್ದ. ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದ. ಶೇಕಡಾ 100 ರಷ್ಟು ಹಾಜರಾತಿಯೊಂದಿಗೆ ಉತ್ತಮ ವಿದ್ಯಾರ್ಥಿ ಅನ್ನೋ ಬಿರುದು ಪಡೆದಿದ್ದ. ಈ ವಿದ್ಯಾರ್ಥಿಯನ್ನೇ ಡ್ಯೂಲ್ಸ್ ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಪ್ರೀತಿಯ ಮಾತು, ಕಾಫಿ ಡೇಟ್, ಜ್ಯೂಸ್, ಐಸ್‌ಕ್ರೀಮ್, ನೋಡ್ಸ್, ಡೌಟ್ ಕ್ಲೀಯರ್ ಹೀಗೆ ಟೀಚರ್ ಒಂದಷ್ಟು ಆಸಕ್ತಿ ವಹಿಸಿ ವಿದ್ಯಾರ್ಥಿ ಜೊತೆಗೆ ಆತ್ಮಿಯವಾಗಿದ್ದಾಳೆ. ಬಳಿಕ ಫೋನ್ ಮೂಲಕ ಚಾಟಿಂಗ್ ಶುರು ಮಾಡಿದ್ದಾಳೆ.

ಚಾಟಿಂಗ್ ಬೇರೆಡೆಗೆ ತಿರುಗಿದೆ. ಹದಿಹರೆಯದ ಹುಡುಗನಿಗೆ ಟೀಚರ್ ಬಿಚ್ಚಿಟ್ಟ ಕುತೂಹಲ ಪ್ರಪಂಚದಲ್ಲಿ ಎಲ್ಲೆ ಮೀರಿದ್ದಾನೆ. ಇತ್ತ ತನ್ನ ಉದ್ದೇಶ ಈಡೇರಿಸಿಕೊಳ್ಳಲು ವಿದ್ಯಾರ್ಥಿಯನ್ನು ಮೋಹದ ಬಲೆಗೆ ಬೀಳಿಸಿ ಕಾರ್ಯ ಸಾಧಿಸಿದ್ದಾಳೆ. ಆದರೆ ಇದು ನಿರಂತವಾಗಿದೆ. ಹೀಗಾಗಿ ಉತ್ತಮ ವಿದ್ಯಾರ್ಥಿಯ ಹಾಜರಾತಿ ಕಡಿಮೆಯಾಗಿದೆ. ಅಂಕ ಕುಸಿದಿದೆ. ವಿದ್ಯಾರ್ಥಿಯ ಹಾದಿ ತಪ್ಪಿದೆ. ವರ್ತನೆ ಬದಲಾಗಿದೆ. ಪೋಷಕರಿಗೂ ಆತಂಕ ಶುರುವಾಗಿದೆ. ಈ ಕುರಿತು ಶಾಲೆಯಲ್ಲಿ ವಿಚಾರಿಸಿದ್ದಾರೆ. ದೂರು ನೀಡಿದ್ದಾರೆ. ಇತ್ತ ಶಾಲೆ ಕೂಡ ಈ ಕುರಿತು ಗಮನ ಹರಿಸಲು ಮುಂದಾಗಿದೆ. ಈ ವೇಳೆ ಸಣ್ಣ ಸುಳಿವೊಂದು ಸಿಕ್ಕಿದೆ. ಈ ಸುಳಿವಿನ ಆಧಾರದಲ್ಲಿ ಶಾಲಾ ಆಡಳಿತ ಮಂಡಳಿ ಪೊಲೀಸರ ಸಂಪರ್ಕಿಸಿದೆ. 

ರಿವರ್‌ಬ್ಯಾಂಕ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇತ್ತ ಪೊಲೀಸರ ವಿಚಾರಣೆ ಆರಂಭಗೊಂಡಿರುವ ಸುಳಿವು ಸಿಕ್ಕ ಬೆನ್ನಲ್ಲೇ ಟೀಚರ್ ರಜೆ ಹಾಕಿ ತೆರಳಿದ್ದಾರೆ. ಆದರೆ ಪಟ್ಟು ಬಿಡದ ಪೊಲೀಸರು ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ. ದಾಖಲೆಯೊದಿಗೆ ಶಿಕ್ಷಕಿಯನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಟೀಚರ್ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರ. ಶಾಲಾ ಶಿಕ್ಷಕಿಯನ್ನು ಶಾಲಾ ಆಡಳಿ ಮಂಡಳಿ ಅಮಾನತು ಮಾಡಿದೆ. ಇತ್ತ ವಿದ್ಯಾರ್ಥಿಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ. 

ಈ ಪ್ರಕರಣದಿಂದ ಇದೀಗ ರಿವರ್‌ಬ್ಯಾಂಕ್ ಹೈಸ್ಕೂಲ್‌ಗೆ ಕೆಟ್ಟ ಹೆಸರು ಬಂದಿದೆ. ಕಾರಣ ಇತ್ತೀಚಿನ ವರ್ಷಗಳಲ್ಲಿ 2ನೇ ಪ್ರಕರಣವಾಗಿದೆ. ಈ ಹಿಂದೆ ಕೂಡ ಶಿಕ್ಷಕಿಯೊಬ್ಬರು ವಿದ್ಯಾರ್ಥಿ ಜೊತ ಈ ರೀತಿ ಸಂಬಂಧ ಇಟ್ಟುಕೊಂಡಿದ್ದರು. ಇದು ಬಹಿರಂಗವಾಗಿತ್ತು. ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದರರು. ಎರಡು ಪ್ರಕರಣಗಳು ನಡೆದಿರುವ ಕಾರಣ ಇದೀಗ ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ