18ನೇ ಬರ್ತ್ ಡೇಗೆ ತಾಯಿ ಕೊಟ್ಟ ಗಿಫ್ಟ್ ನೋಡಿ ಮಗ ಶಾಕ್; ಇವರು Naughty Mummy ಎಂದ ನೆಟ್ಟಿಗರು

Published : Mar 02, 2025, 12:07 PM ISTUpdated : Mar 02, 2025, 12:10 PM IST
18ನೇ ಬರ್ತ್ ಡೇಗೆ ತಾಯಿ ಕೊಟ್ಟ ಗಿಫ್ಟ್ ನೋಡಿ ಮಗ ಶಾಕ್; ಇವರು Naughty Mummy ಎಂದ ನೆಟ್ಟಿಗರು

ಸಾರಾಂಶ

Mother Gift: ಮಗನ 18ನೇ ಹುಟ್ಟುಹಬ್ಬಕ್ಕೆ ತಾಯಿಯೊಬ್ಬಳು ನೀಡಿದ ಗಿಫ್ಟ್ ವೈರಲ್ ಆಗಿದೆ. ಗಿಫ್ಟ್ ಕಂಡು ಮಗ ಶಾಕ್ ಆಗಿದ್ದಾನೆ. ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.

Mother gave him the best gift: ಮಕ್ಕಳ ಹುಟ್ಟುಹಬ್ಬ ಅಂದ್ರೆ ತಾಯಂದಿರಿಗೆ ಹಬ್ಬದ ವಾತಾವರಣವನ್ನೇ ಕ್ರಿಯೆಟ್ ಮಾಡ್ತಾರೆ. ಮಕ್ಕಳು ಇಷ್ಟಪಡುವ ಅಡುಗೆ, ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಮಕ್ಕಳು ಸಹ ತನ್ನ ಪೋಷಕರು ಹಾಗೂ ಬರ್ತ್ ಡೇ ಪಾರ್ಟಿಗೆ ಆಗಮಿಸುವ ಅತಿಥಿಗಳು ನೀಡುವ ಕಾಣಿಕೆಗಳಿಗಾಗಿ ಕಾಯುತ್ತಿರುತ್ತಾರೆ. ಮಕ್ಕಳು ದೊಡ್ಡವರಾದಂತೆ ಅವರು ಇಷ್ಟಪಡೋ ವಸ್ತುಗಳು ಸಹ ಬೇರೆ ಬೇರೆಯಾಗುತ್ತವೆ. ಚಿಕ್ಕ ಮಕ್ಕಳಾದ್ರೆ ಬಟ್ಟೆಯನ್ನೇ ಗಿಫ್ಟ್ ಆಗಿ ನೀಡುತ್ತಾರೆ. ಟೀನೇಜ್ ಮಕ್ಕಳಾದ್ರೆ ಸ್ಟೈಲಿಶ್ ವಾಚ್, ಬ್ರ್ಯಾಂಡೆಡ್ ಉತ್ಪನ್ನಗಳತ್ತ ಆಕರ್ಷಿತರಾಗುತ್ತಿರುತ್ತಾರೆ. ಪೋಷಕರು ತಮ್ಮಿಷ್ಟದ ವಸ್ತುಗಳನ್ನೇ ಕಾಣಿಕೆಯಾಗಿ ನೀಡಲೆಂದು ಬಯಸುತ್ತಾರೆ. ಇಂದು ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿಯೊಬ್ಬಳು ಮಗನ 18ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕೇಕ್ ಕತ್ತರಿಸಿದ ಬಳಿಕ ತಾಯಿ ನೀಡಿದ ಕಾಣಿಕೆಯನ್ನು ನೋಡಿ ಮಗ ಫುಲ್ ಶಾಕ್ ಆಗಿ ಮುಖ ಮುಚ್ಚಿಕೊಂಡಿದ್ದಾನೆ. 

ಮಹಿಳೆ ಮಗನ 18ನೇ ಬರ್ತ್ ಡೇ ಆಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಮ್ಮ ಕೊಟ್ಟ ಗಿಫ್ಟ್ ನೋಡಿ 18ರ ಮಗ ಫುಲ್ ಶಾಕ್ ಆಗಿದ್ದಾನೆ. ನೆಟ್ಟಿಗರು ಇವರು "ನಾಟಿ ಮಮ್ಮಿ" ಎಂದು ಕಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು globalastar ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋಗೆ 14,34,438ಕ್ಕೂ ಅಧಿಕ ಲೈಕ್ಸ್, ಸಾವಿರಾರು ಕಮೆಂಟ್‌ಗಳು ಬಂದಿವೆ. 

ವೈರಲ್ ವಿಡಿಯೋದಲ್ಲಿ ಏನಿದೆ? 
18 ವರ್ಷದ ಪುತ್ರ ಕುರ್ಚಿ ಮೇಲೆ ಕುಳಿತಿರುತ್ತಾನೆ. ತಾಯಿ ಆತನ ಮಂದೆ ಸುಂದರವಾದ ಕೇಕ್ ಹಿಡಿದಿರುತ್ತಾರೆ. ಕೇಕ್ ಮೇಲೆ 18 ಸಂಖ್ಯೆಯ ಕ್ಯಾಂಡಲ್ ಇರಿಸಲಾಗಿರುತ್ತದೆ. ಮಗ ಕ್ಯಾಂಡಲ್ ಊದುತ್ತಿದ್ದಂತೆ ತಾಯಿ ಆತನ ಕಣ್ಣುಗಳನ್ನು ಮುಚ್ಚುತ್ತಾಳೆ.  ಆಗ ಹೊರಗಿನಿಂದ ತುಂಡುಡುಗೆ ಧರಿಸಿರುವ ಓರ್ವ ಮಾದಕ ಚೆಲುವೆ ಬಂದು ಬರ್ತ್ ಡೇ ಬಾಯ್ ಮುಂದೆ ಬಂದು ನಿಲ್ಲುತ್ತಾಳೆ. ತಾಯಿಯ ಕೈ ಸರಿಸಿ ನೋಡಿದಾಗ ಯುವಕನಿಗೆ ಮಾದಕ ಚೆಲುವೆ ಕಾಣುತ್ತಾಳೆ. ಸುಂದರಿಯನ್ನು ನೋಡುತ್ತಲೇ ಯುವಕ ಶಾಕ್ ಆಗಿ ಮುಖ ಮುಚ್ಚಿಕೊಂಡು ನಗುತ್ತಾಳೆ. ಅಷ್ಟರಲ್ಲಿಯೇ ಮ್ಯೂಸಿಕ್ ಸ್ಟಾರ್ಟ್ ಆಗುತ್ತದೆ. ತಾಯಿ ಮತ್ತು ಗಿಫ್ಟ್ ಆಗಿ ಬಂದಿರುವ ಮಾದಕ ಸುಂದರಿ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ. 

ಇದನ್ನೂ  ಓದಿ: ಎರಡು AI ಡಿವೈಸ್‌ಗಳ ನಡುವಿನ ಸಂಭಾಷಣೆ ಕಂಡು ಆತಂಕಕ್ಕೊಳಗಾದ ಜಗತ್ತು; ಇದು ಮುಂದಿನ ಅಪಾಯದ ಮುನ್ಸೂಚನೆಯೇ?

ಕಾಂಡೋಮ್ ಕೊಡಿಸು ಎಂದು ನೆಟ್ಟಿಗರು
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಮಿಂಚಿನಂತೆ ಹರಿದಾಡುತ್ತಿದೆ. ಮಗನಿಗೆ ಹುಡುಗಿಯನ್ನು ಕೊಟ್ಟಿದ್ದೀರಿ. ಆದರ ಜೊತೆಗೆ ಕಾಂಡೋಮ್ ಸಹ ಗಿಫ್ಟ್ ನೀಡಿ ಮತ್ತು ಅದರ ಬಳಕೆ ಬಗ್ಗೆಯೂ ಮಾಹಿತಿ ನೀಡಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಆತನ ಜೀವನದ ಅತಿದೊಡ್ಡ ಗಿಫ್ಟ್ ಆಗಲಿದೆ. ತಾಯಿಯೊಬ್ಬಳು ಮಗನಿಗೆ ನೀಡಿದ ಬೆಸ್ಟ್ ಗಿಫ್ಟ್ ಇದಾಗಿರಬಹುದು. ಇಂತಹ ತಾಯಿ ನಮಗೆ ಸಿಗಲಿಲ್ಲವಾ ಎಂದು ಕೆಲ ನೆಟ್ಟಿಗರು ಕೈ ಕೈ ಹಿಸುಕಿಕೊಂಡಿದ್ದಾರೆ. 

ಇನ್ನು ಒಂದಿಷ್ಟು ವರ್ಗದ ಜನರು ಮಕ್ಕಳ ಮುಂದೆಯೇ ತಾಯಿ ಇಷ್ಟು ಅಸಭ್ಯವಾಗಿ ವರ್ತನೆ ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. 18ರ ಮಗನಿಗೆ ಆತನಿಗೆ ಆದ ಖಾಸಗಿ ಬದುಕು ಅನ್ನೋದು ಇರುತ್ತದೆ. ಆತನ ಖಾಸಗಿ ಜೀವನವನ್ನು ತಾಯಿ ಗೌರವಿಸಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸ್ವಾಮೀಜಿಯನ್ನ ತಳ್ಳಿ ಬಿಟ್ರು; ಮೋಹ, ಮಾಯೆ ಇನ್ನೂ ಹೋಗಿಲ್ವಾ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು