ಮರದ ಕೆಳಗೆ ಪ್ರೆಸ್‌ಮೀಟ್... ಮೇಲಿನಿಂದ ಕಕ್ಕ ಮಾಡಿದ ಗೂಬೆ... ವಿಡಿಯೋ

Suvarna News   | Asianet News
Published : Mar 11, 2022, 10:13 AM ISTUpdated : Mar 11, 2022, 12:09 PM IST
ಮರದ ಕೆಳಗೆ ಪ್ರೆಸ್‌ಮೀಟ್... ಮೇಲಿನಿಂದ ಕಕ್ಕ ಮಾಡಿದ ಗೂಬೆ... ವಿಡಿಯೋ

ಸಾರಾಂಶ

  ಸುದ್ದಿಗೋಷ್ಠಿ ವೇಳೆ ಮೇಲಿನಿಂದ ಹಿಕ್ಕೆ ಹಾಕಿದ ಗೂಬೆ ಕ್ವಿನ್ಸ್‌ಲ್ಯಾಂಡ್ ಅಧ್ಯಕ್ಷರ ಪತ್ರಿಕಾಗೋಷ್ಠಿಯಲ್ಲಿ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಮರದ ಕೆಳಗೆ ಸುದ್ದಿಗೋಷ್ಠಿ ನಡೆಸುತ್ತಿದ್ದವರ ಮೇಲೆ ಗೂಬೆಯೊಂದು ಕಕ್ಕ ಮಾಡಿ ಮುಜುಗರಕ್ಕೀಡು ಮಾಡಿದ ಘಟನೆ ಆಸ್ಟ್ರೇಲಿಯಾದ ಕ್ವಿನ್ಸ್‌ಲ್ಯಾಂಡ್‌ನಲ್ಲಿ ನಡೆದಿದೆ.  ಕ್ವೀನ್ಸ್‌ಲ್ಯಾಂಡ್ (Queensland) ಮುಖ್ಯಸ್ಥ ಅನ್ನಾಸ್ಟಾಸಿಯಾ ಪಲಾಸ್‌ಝುಕ್ (Annastacia Palaszczuk) ಬುಧವಾರ ಬ್ರಿಸ್ಬೇನ್‌ನಲ್ಲಿ (Brisbane) ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸ್ಟೀವನ್ ಮೈಲ್ಸ್ (Steven Miles)ಮಾತನಾಡುತ್ತಿದ್ದರು. ಅವರ ಮಾತುಗಳನ್ನು ಮೈಕ್ ವೆಬ್‌ ಮೂಕಿ ಭಾಷೆಗೆ ಭಾಷಾಂತರಿಸುತ್ತಿದ್ದರು. 

ಈ ವೇಳೆ ಮೇಲೆ ಕೂತಿದ್ದ ಗೂಬೆಗೆ (Owl)ಅರ್ಜೆಂಟ್ ಆಗಿದ್ದು,  ಮೈಕ್ ವೆಬ್‌  ಮೇಲೆಯೇ ಗೂಬೆ ಕಕ್ಕ ಮಾಡಿದೆ. ಇದರಿಂದ ಮುಜುಗರಕ್ಕೀಡಾದರೂ ತಕ್ಷಣವೇ ಸವರಿಸಿಕೊಂಡ ಅವರು ತಮ್ಮ ಕೋಟು ಬಿಚ್ಚಿ ಕರ್ಚಿಫ್‌ನಿಂದ ಕೈ ಹಾಗೂ ಹಣೆಯ ಮೇಲೆ ಬಿದ್ದ ಗೂಬೆಯ ಹಿಕ್ಕೆಯನ್ನು ಸ್ವಚ್ಛಗೊಳಿಸಿಕೊಂಡರು. ಅಲ್ಲದೇ ಕೂಡಲೇ ಏನು ಆಗದಂತೆ  ತಮ್ಮ ಕಾರ್ಯವನ್ನು ಮುಂದುವರಿಸಿದರು. ಆದರೆ ಇದು ಪ್ರೆಸ್‌ಮೀಟ್ ಆಗಿದುದರಿಂದ ಎಲ್ಲಾ ಮಾಧ್ಯಮಗಳ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.

ಇತ್ತ ಗೂಬೆಯೂ ಮೈಕ್ ವೆಬ್‌ ಅವರ ಹಣೆ ಹಾಗೂ ಹೆಗಲ ಮೇಲೆ ಹಿಕ್ಕೆ ಹಾಕಿತ್ತು. ಮೇಲಿನಿಂದ ಗೂಬೆ ಹಿಕ್ಕೆ ಹಾಕುತ್ತಿದ್ದಂತೆ ಓಹ್‌ ಶಟ್ ಎಂದ ಅವರು ಕೂಡಲೇ ತಮ್ಮ ಜಾಕೆಟ್‌ನ್ನು ತೆಗೆದು ಹಾಕಿದರು. ಈ ವೇಳೆ ಅಲ್ಲೇ ಇದ್ದ ಕೆಲವರು ಅವರಿಗೆ ಸ್ವಚ್ಛಗೊಳಿಸಲು ಟಿಶ್ಯೂಪೇಪರ್ ನೀಡಿದರು. ಕ್ವಿನ್ಸ್‌ಲ್ಯಾಂಡ್‌ ಉಪಾಧ್ಯಕ್ಷರ ಭಾಷಣದ ವೇಳೆ ಈ ಮುಜುಗರಕ್ಕೀಡು ಮಾಡುವ ಘಟನೆ ನಡೆದಿತ್ತು. ಘಟನೆಯಿಂದ ಕೆಲ ಕಾಲ ಗೊಂದಲ ಉಂಟಾಗಿದ್ದರು. ಕೂಡಲೇ ಸವರಿಸಿಕೊಂಡ ಮೂಕಿ ಭಾಷೆಯ ಅನುಭವಿ ಭಾಷಾಂತರಕಾರ (sign language interpreter)  ಮೈಕ್ ವೆಬ್‌ (Mike Webb) ತಮ್ಮ ಜಾಕೆಟ್‌ನ್ನು ಬಿಚ್ಚಿಟ್ಟು ತಮ್ಮ ಕಾರ್ಯವನ್ನು ಮುಂದುವರೆಸಿದರು. 

ಮೋದಿಗೆ ಹಕ್ಕಿ ಹಿಕ್ಕೆ ಎಂದ ರಮ್ಯಾಗೆ ಇಕ್ಕಿದ ನೆಟ್ಟಿಗರು!

ಆದರೆ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ನೋಡುಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಕ್ಕಿ ಹಿಕ್ಕೆ ಮಾಡಿದರು ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೇ ತಮ್ಮ ಕಾರ್ಯ ಮುಂದುವರೆಸಿದ ಮೈಕಿ ಅವರ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಮೇಲಿನಿಂದ ಹಿಕ್ಕೆ ಮಾಡಿದ್ದು ಗೂಬೆ ಎಂಬುದು ಮೊದಲು ಗೊತ್ತಿರಲಿಲ್ಲ. ಆದರೆ ನಂತರ ತಿಳಿದಿದ್ದು, ಈ ಘಟನೆಯ ತಪ್ಪಿತಸ್ಥರು ಗೂಬೆ ಎಂದು ಸುದ್ದಿಗೋಷ್ಠಿಯ ನಂತರ ಅವರು ಟ್ವಿಟ್ ಮಾಡಿ ತಿಳಿಸಿದ್ದಾರೆ.

ಹಕ್ಕಿ ಹಿಕ್ಕೆಗೆ ಪ್ರಧಾನಿ ಹೋಲಿಸಿದ ರಮ್ಯಾ!
ಕೆಲ ವರ್ಷಗಳ ಹಿಂದೆ ಮಂಜೇಶ್ವರದ ಕವಿ ನಿವಾಸದ ಎದುರು ನಿರ್ಮಿಸಿದ್ದ ವೇದಿಕೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಉದ್ಘಾಟನಾ ಭಾಷಣ ಮಾಡುತ್ತಿದ್ದರು. ಈ ಸಂದರ್ಭ ರಾಜ್ಯದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಮೇಲೆ ಪಕ್ಕದ ಮರದಲ್ಲಿ ಕುಳಿತ ಕಾಗೆಯೊಂದು ಹಿಕ್ಕೆ ಹಾಕಿತ್ತು. ಬಳಿಕ ಶಾಸಕ ಮೊಯ್ದೀನ್‌ ಬಾವ ಅವರು ಟಿಶ್ಯೂ ಪೇಪರ್‌ ಮೂಲಕ ಅದನ್ನು ಸ್ವಚ್ಛಗೊಳಿಸಲು ಮುಂದಾದರು. ಹಾಜರಿದ್ದ ಯೋಜನಾ ನಿರ್ದೇಶಕ ಹಾಗೂ ಟ್ರಸ್ಟಿ ಕೆ.ತೇಜೋಮಯ ಅವರು ಕೂಡಲೇ ಕಾಗೆ ಹಿಕ್ಕೆಯನ್ನು ಉಜ್ಜಿ ಸ್ವಚ್ಛಗೊಳಿಸಿದರು. ಇದರಿಂದ ಸಿದ್ದರಾಮಯ್ಯ ಅವರ ಮುಖಛಾಯೆ ಒಮ್ಮೆಲೆ ಬದಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ