ಕಸ್ಟಮ್ಸ್‌ ಅಧಿಕಾರಿಗಳಿಗೆ ವ್ಯಕ್ತಿಯ ಬಟ್ಟೆಯೊಳಗೆ ಸಿಕ್ತು 52 ಜೀವಂತ ಹಾವು, ಹಲ್ಲಿ

Suvarna News   | Asianet News
Published : Mar 10, 2022, 03:03 PM IST
ಕಸ್ಟಮ್ಸ್‌ ಅಧಿಕಾರಿಗಳಿಗೆ ವ್ಯಕ್ತಿಯ ಬಟ್ಟೆಯೊಳಗೆ  ಸಿಕ್ತು 52 ಜೀವಂತ ಹಾವು, ಹಲ್ಲಿ

ಸಾರಾಂಶ

ಹಾವು ಹಲ್ಲಿಗಳ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಟ್ಟೆಯೊಳಗೆ ಅಡಗಿಸಿಕೊಂಡಿದ್ದ 52 ಹಾವು, ಹಲ್ಲಿಗಳ ಜಪ್ತಿ ಮೆಕ್ಸಿಕೋದಲ್ಲಿ ಘಟನೆ 

ತನ್ನ ಬಟ್ಟೆಗಳಡಿ ಹಾವು ಹಲ್ಲಿಗಳನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದು ಆತನ ಬಳಿ ಇದ್ದ 52 ಜೀವಂತ ಹಾವು ಹಲ್ಲಿಗಳನ್ನು ಜಪ್ತಿ ಮಾಡಿದ್ದಾರೆ. ಈ ವ್ಯಕ್ತಿ ಫೆಬ್ರವರಿ 25 ರಂದು ಮೆಕ್ಸಿಕೋದ ( Mexico ) ಸ್ಯಾನ್ ಯಿಸಿಡ್ರೊ ಗಡಿ (San Ysidro border) ಮೂಲಕ ಈ ಹಾವುಗಳೊಂದಿಗೆ ಗಡಿ ದಾಟಲು ಮುಂದಾಗಿದ್ದ ಎಂದು ಅಮೆರಿಕಾದ ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಪಡೆ ಸಿಬ್ಬಂದಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಈ ವ್ಯಕ್ತಿ ಟ್ರಕ್‌ನ್ನು ಓಡಿಸುತ್ತಿದ್ದು, ಅದನ್ನು  ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಫೆಬ್ರವರಿ 25 ರಂದು ಮುಂಜಾನೆ 3 ಗಂಟೆಗೆ ಈ ಘಟನೆ ನಡೆದಿದೆ. 2018 GMC ಟ್ರಕ್ ಅನ್ನು ಚಾಲನೆ ಮಾಡಿಕೊಂಡು  ಸ್ಯಾನ್ ಯಿಸಿಡ್ರೊ ಗಡಿ ದಾಟುತ್ತಿದ್ದ 30 ವರ್ಷದ ಪುರುಷ ಅಮೆರಿಕಾ ಪ್ರಜೆಯನ್ನು ಅನಮಾನದ ಮೇರೆಗೆ ಅಮೆರಿಕಾದ ಕಸ್ಟಮ್ಸ್‌ ಹಾಗೂ ಗಡಿ ರಕ್ಷಣಾ ತಂಡ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

ಬುರ್ಕಾದಲ್ಲಿ 18 ಲಕ್ಷದ ಚಿನ್ನ ಪೋಣಿಸಿ ಕಳ್ಳಸಾಗಣೆ: ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ
 

ಈ ಗುರುತು ಪತ್ತೆಯಾಗದ ವ್ಯಕ್ತಿಯನ್ನಯ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಈತ  52 ಜೀವಂತ ಸರೀಸೃಪಗಳನ್ನುಆತನ  ಜಾಕೆಟ್, ಪ್ಯಾಂಟ್ ಪಾಕೆಟ್‌ಗಳು ಮತ್ತು ತೊಡೆಸಂದಿ ಜಾಗದಲ್ಲಿ ಮರೆಮಾಚಿದ್ದ. ಇದರಲ್ಲಿ 43 ಕೊಂಬಿನ ಹಲ್ಲಿಗಳು ಮತ್ತು ಒಂಬತ್ತು ಹಾವುಗಳು ಇದ್ದವು. 

ಇತ್ತೀಚೆಗೆ ಕಳ್ಳಸಾಗಾಣಿಕೆದಾರರು (Smuggler) ತಮ್ಮ ಉತ್ಪನ್ನಗಳ ಸಾಗಾಟಕ್ಕೆ  ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಈ ಪ್ರಕರಣದಲ್ಲಿ ಜೀವಂತ ಸರೀಸೃಪಗಳು ಗಡಿ ದಾಟಿವೆ ಎಂದು ಸ್ಯಾನ್ ಡಿಯಾಗೋದಲ್ಲಿನ ಕ್ಷೇತ್ರ ಕಾರ್ಯಾಚರಣೆಗಳ CBP ನಿರ್ದೇಶಕ ಸಿಡ್ನಿ ಅಕಿ (Sidney Aki) ಹೇಳಿದರು. ಕಳ್ಳಸಾಗಣೆದಾರನು ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಈ ಪ್ರಾಣಿಗಳನ್ನು  ಅಮೆರಿಕಾಗೆ ತರಲು ನಾನಾ ಮಾರ್ಗ ಅನುಸರಿಸಿ CBP ಅಧಿಕಾರಿಗಳನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದರು.

ಜೀವಂತ ಸರೀಸೃಪಗಳನ್ನು (reptiles) ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ನಂತರ ಬಂಧಿಸಲಾಗಿದೆ. ಅಲ್ಲದೇ ಆತ ಓಡಿಸುತ್ತಿದ್ದ ವಾಹನ ಹಾಗೂ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಆರೋಪಿಯನ್ನು ಮೆಟ್ರೋಪಾಲಿಟನ್ ತಿದ್ದುಪಡಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಫ್ಲೈಟ್ ಏರಿ ಮಲೇಷ್ಯಾಕ್ಕೆ ಹಾರಿದ ಹಾವು... ವಿಡಿಯೋ ವೈರಲ್‌
ಕೆಲ ದಿನಗಳ ಹಿಂದೆಬುರ್ಖಾದ ಮೇಲೆ ಡಿಸೈನ್‌ನಂತೆ ಹೊಳೆಯುವ ರೋಡಿಯಂ ಲೇಪಿತ ಮಣಿಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ತಂದಿದ್ದ ಮಹಿಳೆಯೊಬ್ಬರು ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದರು. ಅವರ ಬುರ್ಕಾದಲ್ಲಿದ್ದ  18 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಣಿಗಳನ್ನು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆ ಫೆ. 27 ರಂದು ದುಬೈನಿಂದ ಹೈದರಾಬಾದ್‌ಗೆ ಆಗಮಿಸಿದ್ದರು. 

ಇತ್ತೀಚಿನ ದಿನಗಳಲ್ಲಿ, ಚಿನ್ನ ಮತ್ತು ಮಾದಕವಸ್ತು ಕಳ್ಳಸಾಗಣೆದಾರರು ಭಾರಿ ಸೃಜನಶೀಲತೆಯನ್ನು ತೋರುತ್ತಿದ್ದಾರೆ. ಕಳ್ಳಸಾಗಣೆಗೆ ಎಂತಹದೇ ತಂತ್ರ ತೋರಿದರು ನಮ್ಮ ಕಸ್ಟಮ್ಸ್‌ ಅಧಿಕಾರಿಗಳ ತಪಾಸಣೆ ವೇಳೆ ಏರ್‌ಪೋರ್ಟ್‌ನಲ್ಲಿ ಖದೀಮರು ಸಿಕ್ಕಿ ಬೀಳುವುದು ಸಾಮಾನ್ಯವಾಗಿದೆ. ಆದಾಗ್ಯೂ ಬುದ್ದಿ ಕಲಿಯದ ಕೆಲವರು ಹೊಸ ತಂತ್ರಗಳನ್ನು ಪ್ರಯೋಗಿಸುತ್ತಲೆ ಇರುತ್ತಾರೆ. ಹಾಗೆಯೇ ತೆಲಂಗಾಣದ ( Telangana) ಹೈದರಾಬಾದ್‌ನ (Hyderabad)  ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Shamshabad International Airport)  ಕಸ್ಟಮ್ಸ್ ಅಧಿಕಾರಿಗಳು ಸುಮಾರು 18 ಲಕ್ಷ ರೂಪಾಯಿ ಮೌಲ್ಯದ, 350 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನವನ್ನು ಬುರ್ಖಾದಲ್ಲಿರುವ ಡಿಸೈನ್‌ನಂತೆ ಮಣಿಗಳ ರೂಪದಲ್ಲಿ ಹೊಲಿಯಲಾಗಿತ್ತು. ಫೆಬ್ರವರಿ 26 ರಂದು ದುಬೈನಿಂದ ಬಂದ ಮಹಿಳೆಯೊಬ್ಬರು ಬುರ್ಖಾದ ಮೇಲೆ ರೋಡಿಯಂ ಲೇಪಿತ ಮಣಿಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!