Omicron Effect: ಹೆಚ್ಚಿದ ಅಪಾಯ, ಒಂದೇ ದಿನ ವಿಶ್ವಾದ್ಯಂತ 14 ಲಕ್ಷ ಕೇಸ್‌

By Suvarna News  |  First Published Dec 29, 2021, 3:00 AM IST
  • ವಿಶ್ವದಲ್ಲಿ ಕೊರೋನಾ ದಾಖಲೆ ಏರಿಕೆ
  • ಒಮಿಕ್ರೋನ್‌ ಎಫೆಕ್ಟ್ನಿಂದ ಒಂದೇ ದಿನ ವಿಶ್ವಾದ್ಯಂತ 14 ಲಕ್ಷ ಕೇಸ್‌
  • ಅಮೆರಿಕದಲ್ಲಿ ಒಂದೇ ದಿನ 2.28 ಲಕ್ಷ ಕೇಸ್‌, ಫ್ರಾನ್ಸ್‌, ಬ್ರಿಟನ್‌ನಲ್ಲೂ ತಲಾ 1 ಲಕ್ಷಕ್ಕೂ ಅಧಿಕ ಪ್ರಕರಣ

ವಾಷಿಂಗ್ಟನ್‌(ಡಿ.29): ಪ್ರಪಂಚಾದ್ಯಂತ ಕೊರೋನಾ ವೈರಸ್‌ ಮಹಾ ಸ್ಫೋಟ ಉಂಟಾಗಿದೆ. ಸೋಮವಾರ ಒಂದೇ ದಿನ ವಿಶ್ವಾದ್ಯಂತ ದಾಖಲೆಯ 14.4 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. 2019ರಲ್ಲಿ ಮೊದಲ ಬಾರಿ ಕೋವಿಡ್‌ ಕೇಸು ಪತ್ತೆಯಾದ ಬಳಿಕ ಯಾವುದೇ ಒಂದು ದಿನದಲ್ಲಿ ಇಷ್ಟುಕೇಸು ಪತ್ತೆಯಾಗಿದ್ದು ಇದೇ ಮೊದಲು. ಇಷ್ಟೊಂದು ಪ್ರಮಾಣದಲ್ಲಿ ಕೇಸುಗಳು ಏರಲು ಕೋವಿಡ್‌ ಹೊಸ ತಳಿ ಒಮಿಕ್ರೋನ್‌ ಕಾರಣ ಎಂದು ಹೇಳಲಾಗಿದೆ. ತೀವ್ರತೆ ಕಡಿಮೆ ಇದ್ದರೂ ಅತ್ಯಂತ ಸಾಂಕ್ರಾಮಿಕ ಎಂಬ ಕುಖ್ಯಾತಿ ಹೊಂದಿರುವ ಒಮಿಕ್ರೋನ್‌ ರೂಪಾಂತರಿ ಕೋವಿಡ್‌ ವೈರಸ್‌, ಜಾಗತಿಕ ಮಟ್ಟದಲ್ಲಿ ತನ್ನ ಹಾವಳಿಯನ್ನು ಸಾಬೀತುಪಡಿಸಿದೆ.

ಪತ್ತೆಯಾದ ಎಲ್ಲಾ ಪ್ರಕರಣಗಳು ಒಮಿಕ್ರೋನ್‌ ಎಂದು ದೃಢಪಟ್ಟಿಲ್ಲವಾದರೂ, ಸೋಂಕಿನ ಪ್ರಮಾಣ ಏರಿಕೆಗೆ ಒಮಿಕ್ರೋನ್‌ ಕಾರಣ ಎಂಬುದನ್ನು ಅಂಕಿ ಅಂಶಗಳು ಸಾಬೀತುಪಡಿಸಿವೆ. ಕಳೆದ 1 ವಾರದಲ್ಲಿ ನಿತ್ಯ ಸರಾಸರಿ 8.41 ಲಕ್ಷ ಪ್ರಕರಣಗಳು ವರದಿಯಾಗಿವೆ. ನ.24ರಂದು ಆಫ್ರಿಕಾದಲ್ಲಿ ಮೊದಲ ಒಮಿಕ್ರೋನ್‌ ಪತ್ತೆಯಾದ ವಾರಕ್ಕೆ ಹೋಲಿಸಿದರೆ, ಸರಾಸರಿ ವಾರದ ಕೋವಿಡ್‌ ಪ್ರಮಾಣದಲ್ಲಿ ಶೇ.49ರಷ್ಟುಏರಿಕೆಯಾದಂತಾಗಿದೆ.

Tap to resize

Latest Videos

Covid 19 Variant: ಒಮಿಕ್ರೋನ್‌ ಸ್ಫೋಟ: ಸೋಮವಾರ ದಾಖಲೆಯ 156 ಹೊಸ ಕೇಸ್‌!

ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನಿಯಾಗಿದ್ದು ನಿತ್ಯ ಸರಾಸರಿ 1.76 ಲಕ್ಷ ಪ್ರಕರಣ ದಾಖಲಾಗತೊಡಗಿವೆ. ಸೋಮವಾರ 2.28 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದು ಈ ವರ್ಷದ ಜ.8ರ ನಂತರದ ಗರಿಷ್ಠವಾಗಿದೆ. ನಂತರದ ಸ್ಥಾನದಲ್ಲಿರುವ ಬ್ರಿಟನ್‌ನಲ್ಲಿ ನಿತ್ಯ ಸುಮಾರು 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಫ್ರಾನ್ಸ್‌ನಲ್ಲೂ 2 ದಿನದ ಹಿಂದೆ 1 ಲಕ್ಷ ಪ್ರಕರಣ ದಾಖಲಾಗಿದ್ದವು. ಆಸ್ಪ್ರೇಲಿಯಾ, ಥಾಯ್ಲೆಂಡ್‌ನಲ್ಲೂ ಒಮಿಕ್ರೋನ್‌ ಕಾರಣದಿಂದ ಕೋವಿಡ್‌ ಹೆಚ್ಚುತ್ತಿದೆ. ಒಮಿಕ್ರೋನ್‌ ಹೆಚ್ಚಳ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ 11500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ.

ಆದರೆ ಸಮಾಧಾನದ ವಿಷಯವೆಂದರೆ ಡೆಲ್ಟಾಗಿಂತ ಒಮಿಕ್ರೋನ್‌ 3 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ಹೆಚ್ಚು ಪ್ರಾಣಾಂತಿಕವಲ್ಲ ಹಾಗೂ ತೀವ್ರತರದ ಸೋಂಕು ಉಂಟು ಮಾಡಲ್ಲ ಎಂಬುದು ಈವರೆಗಿನ ಅಧ್ಯಯನದಲ್ಲಿ ತಿಳಿದುಬಂದಿದೆ.

Omicron Threat: ಜ.3ರಿಂದ ರಾಜ್ಯದ 43 ಲಕ್ಷ ಮಕ್ಕಳಿಗೆ ಲಸಿಕೆ

ಒಟ್ಟಾರೆಯಾಗಿ ವಿಶ್ವದ 108 ದೇಶಗಳಲ್ಲಿ ಈವರೆಗೆ 1.51 ಲಕ್ಷ ಒಮಿಕ್ರೋನ್‌ ಪ್ರಕರಣ ದಾಖಲಾಗಿದ್ದು, 26 ಜನರು ಸಾವನ್ನಪ್ಪಿದ್ದಾರೆ. ಇನ್ನು ಇದುವರೆಗೂ ವಿಶ್ವದಲ್ಲಿ 28 ಕೋಟಿ ಜನರಿಗೆ ಸೋಂಕು ತಗುಲಿದ್ದು, 54 ಲಕ್ಷ ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೋನಾ (Coronavirus) ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಇಂದು (ಮಂಗಳವಾರ)  356 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 

ಇದರೊಂದಿಗೆ ಸೋಂಕಿತರ ಸಂಖ್ಯೆ 30,05,232ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 38,318ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್‌ ಬುಲೆಟಿನ್ ಹೊರಡಿಸಿದೆ.  ಇದುವರೆಗೆ ರಾಜ್ಯದಲ್ಲಿ 30,05,23 ಸೋಂಕಿತರ ಪೈಕಿ 2959429 ಜನ ಗುಣಮುಖರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ 7456 ಸಕ್ರಿಯ ಪ್ರಕರಗಳಿವೆ. ಇನ್ನು ಬೆಂಗಳೂರಿನಲ್ಲಿ (Benglauur) ಮಂಗಳವಾರ 269 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,61,997ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ.

ಆರೋಗ್ಯ ಸಮೀಕ್ಷೆಗೆ ಸರ್ಕಾರದಿಂದ ಆದೇಶ

ಕರ್ನಾಟಕ ರಾಜ್ಯದಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ರಾಜ್ಯಾದ್ಯಂತ ಆರೋಗ್ಯ ಸಮೀಕ್ಷೆಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಮನೆ ಮನೆಗೆ ತೆರಳಿ ಆರೋಗ್ಯ ಸರ್ವೆ ಮಾಡುವಂತೆ ಆದೇಶ ನೀಡಲಾಗಿದೆ. ಆರೋಗ್ಯ ಸರ್ವೆ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೇಸ್​ಗಳ ಸರ್ವೆಗೆ ಆದೇಶ ನೀಡಿದೆ.

click me!