ನ್ಯೂಯಾರ್ಕ್(ಡಿ. 28): ಬೃಹತ್ ಉದ್ದಿಮೆದಾರ ಹಾಗೂ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾದ ಸಂಸ್ಥಾಪಕ ಎಲಾನ್ ಮಸ್ಕ್(Elon Musk) ಅವರ ತದ್ರೂಪಿಯಂತೆ ಕಾಣುವ ವ್ಯಕ್ತಿ ಮಾಡಿದ ವಿಡಿಯೋವೊಂದು ಎಲ್ಲೆಡೆ ವೈರಲ್ ಆದ ಬಳಿಕ ಇದಕ್ಕೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಇದು ನೆಟ್ಟಿಗರಲ್ಲಿ ಸಂಚಲನವನ್ನೂ ಮೂಡಿಸಿದೆ. ಎಲಾನ್ ಮಸ್ಕ್ ಅವರು ತಮಗೆ ಸಂಬಂಧಿಸಿದ ಪೋಸ್ಟ್‌ಗಳಿಗೆ ಪ್ರತ್ಯುತ್ತರಿಸಲು ಆಗಾಗ್ಗೆ ಟ್ವಿಟರ್‌ಗೆ ಹೋಗುತ್ತಾರೆ. ಹೀಗೆ ಅವರು ತಮ್ಮ ತದ್ರೂಪಿ (doppelganger) ಯಂತಿರುವ ವ್ಯಕ್ತಿ ಮಾಡಿದ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಇದನ್ನು ಅನೇಕರು ಡೀಪ್‌ಫೇಕ್ ಎಂದೆಲ್ಲಾ ಕರೆದಿದ್ದರು. ಆದಾಗ್ಯೂ ಇದಕ್ಕೆ ಎಲೋನ್ ಮಸ್ಕ್ ಅವರ ಪ್ರತಿಕ್ರಿಯೆ ಈ ವಿಡಿಯೋಗೆ ಇನ್ನಷ್ಟು ಪ್ರಚಾರ ನೀಡುತ್ತಿದೆ. ಅಲ್ಲದೇ ನೆಟ್ಟಿಗರಲ್ಲಿ ನಗು ತರಿಸಿದೆ.
ಟೆಕ್ ಬಿಲಿಯನೇರ್ ಆಗಿರುವ ಎಲಾನ್ ಮಸ್ಕ್ ತಮ್ಮ ತೆರಿಗೆಗಳ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಚಾರ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವಿಟ್ಟರ್ ಬಳಕೆದಾರರೊಬ್ಬರು ಒಂದು ಕಡೆ ಎಲಾನ್ ಮಸ್ಕ್ ಹಾಗೂ ಮತ್ತೊಂದು ಕಡೆ ಅವರ ತದ್ರೂಪಿಯಂತಿರುವ ವ್ಯಕ್ತಿ ಇರುವ ಕೊಲಾಜ್ ಆಗಿರುವ ಫೋಟೋವೊಂದನ್ನು ಪೋಸ್ಟ್ ಮಾಡುತ್ತಾರೆ. ಇದಕ್ಕೆ ಎಲಾನ್ ಮಸ್ಕ್ ಬಹುಶಃ ನಾನು ಭಾಗಶಃ ಚೈನೀಸ್ ಆಗಿರಬೇಕು ಎಂದು ಪ್ರತಿಕ್ರಿಯಿಸುತ್ತಾರೆ. ಕೆಲ ದಿನಗಳ ಹಿಂದೆ ಈ ಸಂಭಾಷಣೆಯ ಪೋಸ್ಟ್ ಶೇರ್ ಆಗಿದ್ದು ಅದಕ್ಕೆ 9,000 ಕ್ಕೂ ಹೆಚ್ಚು ಲೈಕ್ ಬಂದಿವೆ. ಅಲ್ಲದೇ ಅನೇಕರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
For those wondering, I will pay over $11 billion in taxes this year
— Elon Musk (@elonmusk)undefined
Maybe I’m partly Chinese!
— Elon Musk (@elonmusk)
ಎಲಾನ್ ಮಸ್ಕ್ ಅವರು ಇತ್ತೀಚೆಗೆ ಪ್ರತಿಷ್ಠಿತ ಟೈಮ್ಸ್ ನಿಯತಕಾಲಿಕದ 2021 ವರ್ಷದ ವ್ಯಕ್ತಿ ಪಟ್ಟಿಗೆ ಆಯ್ಕೆಯಾಗಿದ್ದರು. ಎಲಾನ್ ಮಸ್ಕ್ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ. ಆದಾಗ್ಯೂ ಸ್ವಂತ ಮನೆ ಹೊಂದಿಲ್ಲ ಮತ್ತು ಇತ್ತೀಚೆಗೆ ತನ್ನ ಸಂಪತ್ತನ್ನು ಮಾರುತ್ತಿದ್ದಾರೆ. ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದ್ದಾರೆ ಹಾಗೂ ಸೂರ್ಯನನ್ನು ಬಳಸಿಕೊಂಡಿದ್ದಾರೆ. ಅವರು ಅನಿಲವನ್ನು ಬಳಸದ ಮತ್ತು ಕೇವಲ ಚಾಲಕನ ಅಗತ್ಯವಿಲ್ಲದ ಕಾರನ್ನು ಓಡಿಸುತ್ತಾರೆ. ಅವರ ಬೆರಳಿನಿಂದ, ಸ್ಟಾಕ್ ಮಾರುಕಟ್ಟೆಯು ಗಗನಕ್ಕೇರುತ್ತದೆ ಅಥವಾ ಪಾತಾಳಕ್ಕೆ ಇಳಿಯುತ್ತದೆ ಎಂದು ಟೈಮ್ಸ್ ಮ್ಯಾಗಜಿನ್ ಉಲ್ಲೇಖ ಮಾಡಿತ್ತು.
SpaceX Launches Starlink: 52 ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್ ಉಡಾವಣೆ ಮಾಡಿದ ಎಲಾನ್ ಮಸ್ಕ್ ಕಂಪನಿ!
ಅವರ ಕಾರ್ ಕಂಪನಿ, ಟೆಸ್ಲಾ, ಮಲ್ಟಿಬಿಲಿಯನ್ ಡಾಲರ್ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ ಮೂರನೇ ಎರಡರಷ್ಟು ನಿಯಂತ್ರಣವನ್ನು ಹೊಂದಿದೆ. ಇದು ಒಂದು ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ. ರೋಬೋಟ್‌ಗಳು ಮತ್ತು ಸೌರ, ಕ್ರಿಪ್ಟೋಕರೆನ್ಸಿ ಮತ್ತು ಹವಾಮಾನ, ಮೆದುಳು ಕಂಪ್ಯೂಟರ್ ಇಂಪ್ಲಾಂಟ್‌ಗಳು ಕೃತಕ ಬುದ್ಧಿಮತ್ತೆ ಮತ್ತು ಭೂಗತ ಸುರಂಗಗಳ ಬೆದರಿಕೆಯನ್ನು ತಡೆಯಲು, ಜನರನ್ನು ಮತ್ತು ಸರಕುಗಳನ್ನು ಸೂಪರ್ ವೇಗದಲ್ಲಿ ಸಾಗಿಸುವ ಆಟಗಾರ ಎಲಾನ್ ಮಸ್ಕ್ ಆಗಿದ್ದಾರೆ ಎಂದು ಟೈಮ್ಸ್ ಮ್ಯಾಗಜಿನ್ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದಾಗ ಎಲಾನ್ ಮಸ್ಕ್ ಬಗ್ಗೆ ವಿವರಿಸಿತ್ತು.
Satellites Launchedಆಕಾಶದಲ್ಲಿ ಕೃತಕ ಉಪಗ್ರಹಗಳ ಮೆರವಣಿಗೆ, 12 ಸಾವಿರ ಉಪಗ್ರಹ ಯೋಜನೆಗೆ ಎಲನ್ ಮಸ್ಕ್ ಚಾಲನೆ!
ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಎಲಾನ್ ಮಸ್ಕ್ ಇತ್ತೀಚೆಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದರು. ಕಂಪನಿ ಸಿಇಓ ಆಗಿರುವ ಮಸ್ಕ್, ಉದ್ಯೋಗ ತೊರೆದು ಹೊಸ ವೃತ್ತಿ ಆರಂಭಿಸುವ ಸೂಚನೆ ನೀಡಿದ್ದರು. ಟ್ವೀಟ್ ಮೂಲಕ ಉದ್ಯೋಗ ತೊರೆಯುವುದಾಗಿ ಹೇಳಿದ ಅವರು. ನಾನು ಉದ್ಯೋಗ ತೊರೆಯಲು ಚಿಂತಿಸುತ್ತಿದ್ದೇನೆ. ಹುದ್ದೆ ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಮಾಜದಲ್ಲಿ ಸಂದೇಶದ ಮೂಲಕ ಪ್ರಭಾವ ಬೀರುವ ನಾಯಕನಾಗಿ ಹೊರಹೊಮ್ಮಲು ಚಿಂತಿಸುತ್ತಿದ್ದೇನೆ ಎಂದು ಮಸ್ಕ್ ಹೇಳಿದ್ದರು.