ಸಮುದ್ರದಲ್ಲಿ ಬೃಹತ್ ಅಲೆಗೆ ಸಿಲುಕಿ ಪಲ್ಟಿಯಾದ ಆಯಿಲ್ ಟ್ಯಾಂಕರ್ ಹಡಗು-13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆ

By Mahmad RafikFirst Published Jul 17, 2024, 1:39 PM IST
Highlights

ಒಮನ್ ಆಯಿಲ್ ಟ್ಯಾಂಕರ್ ಸಂಪೂರ್ಣವಾಗಿ ಮುಗುಚಿದೆ. ಅಲೆಗಳಿಗೆ ಸಿಲುಕಿರುವ ಟ್ಯಾಂಕರ್ ತೇಲುತ್ತಿದ್ದು, ಮೇಲ್ಭಾಗ ಮಾತ್ರ ಗೋಚರಿಸುತ್ತಿದೆ.

ಒಮನ್: ಆಯಿಲ್ ಟ್ಯಾಂಕರ್ ಹಡಗು ಸಮುದ್ರದಲ್ಲಿ ಬೃಹತ್ ಅಲೆಗೆ ಸಿಲುಕಿ ಪಲ್ಟಿಯಾಗಿದೆ. ಹವಾಮಾನ ವೈಪರೀತ್ಯದಿಂದ ದಿಢೀರ್ ಅಂತ ಸಮುದ್ರ ಪ್ರಕ್ಷುಬ್ಧಗೊಂಡ ಪರಿಣಾಮ ಅವಘಡ ಸಂಭವಿಸಿದೆ. ಮುಳಗಡೆಯಾದ ಹಡಗಿನಲ್ಲಿ 13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಇದೀಗ 16 ಜನರು ಸಹ ನಾಪತ್ತೆಯಾಗಿದ್ದು, ಶೋಧ ಕಾರ್ಯ ಆರಂಭಗೊಂಡಿದೆ. ಇನ್ನುಳಿದ ಮೂವರು ಸಿಬ್ಬಂದಿ ಶ್ರೀಲಂಕಾ ಮೂಲದವರು ಎಂದು ವರದಿಯಾಗಿದೆ. ಒಮನ್‌ನಿಂದ ಹೊರಟಿದ್ದ ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ಪ್ರೆಸ್ಟೀಜ್ ಫಾಲ್ಕನ್‌ನಲ್ಲಿ ಒಟ್ಟು 16 ಸಿಬ್ಬಂದಿ ಇದ್ದರು. ಒಮಾನಿ ಬಂದರಿನ ಡುಕ್ಮ್ ಬಳಿ ರಾಸ್ ಮದರಕಾದಿಂದ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟ್ಯಾಂಕರ್ ಪಲ್ಟಿಯಾದ ಕಾರಣ ಎಲ್ಲಾ ಸಿಬ್ಬಂದಿ ಸಮುದ್ರದಲ್ಲಿ ಕಾಣೆಯಾಗಿದ್ದಾರೆ. ಒಮನ್ ಆಯಿಲ್ ಟ್ಯಾಂಕರ್ ಸಂಪೂರ್ಣವಾಗಿ ಮುಗುಚಿದೆ. ಅಲೆಗಳಿಗೆ ಸಿಲುಕಿರುವ ಟ್ಯಾಂಕರ್ ತೇಲುತ್ತಿದ್ದು, ಮೇಲ್ಭಾಗ ಮಾತ್ರ ಗೋಚರಿಸುತ್ತಿದೆ. ಟ್ಯಾಂಕರ್‌ನಿಂದ  ಇಂಧನ ಸೋರಿಕೆ ಆಗ್ತಿದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. 

Latest Videos

ಹೌತಿ ಉಗ್ರರ ಶಸ್ತ್ರ ಬಲ ಹೆಚ್ಚಿಸುತ್ತಿದೆ ಚೀನಾ?; 'ಸೀ ಡ್ರೋನ್' ದಾಳಿಗೆ ತತ್ತರಿಸಿದ ಕೆಂಪು ಸಮುದ್ರ!

2007ರಲ್ಲಿ ನಿರ್ಮಾಣವಾಗಿದ್ದ ಹಡಗು

ಎಲ್‌ಎಸ್‌ಇಜಿ ಶಿಫ್ಟಿಂಗ್ ಡೇಟಾ ಪ್ರಕಾರ, 117 ಮೀಟರ್ ಎತ್ತರದ ಈ ಹಡಗನ್ನು 2007ರಲ್ಲಿ ನಿರ್ಮಿಸಲಾಗಿತ್ತು. ಕಡಿಮೆ ದೂರದ ಸಮುದ್ರ ಪ್ರಯಾಣಕ್ಕಾಗಿ ಈ ತರಹದ ಚಿಕ್ಕ ಹಡಗುಗಳನ್ನು ಬಳಕೆ ಮಾಡಲಾಗುತ್ತದೆ. ಈ ಮಾದರಿಯ  ಹಡಗುಗಳ ಮೂಲಕವೇ ಒಮನ್ ಮತ್ತು ಯಮನ್ ನಡುವೆ ಸಮುದ್ರ ಮಾರ್ಗವಾಗಿ ಆಮದು-ರಫ್ತು ವ್ಯವಹಾರಗಳು ನಡೆಯುತ್ತಿವೆ.

ಒಮನ್ ಸಮುದ್ರದಲ್ಲಿ ಹಡಗು ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಒಮನ್ ಸರ್ಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೆಲವು ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ರೂ ಇದುವರೆಗೂ ಯಾವ ಸಿಬ್ಬಂದಿಯೂ ಪತ್ತೆಯಾಗಿಲ್ಲ.

Rain in Karnataka: ರೌದ್ರರೂಪ ತಾಳಿದ ಸಮುದ್ರದ ಅಲೆಗಳು..! ಮಳೆಯ ಅವಾಂತರಕ್ಕೆ ಜನ ಸುಸ್ತೋ ಸುಸ್ತು..!

click me!