ನಾವು ಟಾಯ್ಲೆಟ್‌ಗೆ ಹಾಕೋ ಹವಾಯಿ ಚಪ್ಪಲಿಗೆ ಸೌದಿಯಲ್ಲಿ ಬರೋಬ್ಬರಿ 1 ಲಕ್ಷ ರೂ,ವಿಡಿಯೋ ವೈರಲ್!

By Chethan Kumar  |  First Published Jul 16, 2024, 4:42 PM IST

ಭಾರತದಲ್ಲಿ ಇತ್ತೀಗೆ ಟಾಯ್ಲೆಟ್‌ಗೆ ಹಾಕಲು ಈ ಚಪ್ಪಲಿ ಕಾಣಸಿಗುತ್ತಿಲ್ಲ. ಆದರೆ ಸೌದಿ ಅರೇಬಿಯಾದಲ್ಲಿ ಈ ಚಪ್ಪಲಿಗಳು ಬರೋಬ್ಬರಿ 1 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ. ಚಿನ್ನದ ರೀತಿ ಶೂ ರೂಂನ ಗಾಜಿನೊಳಗೆ ಈ ಚಪ್ಪಲಿಗಳನ್ನು ಇಡಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.
 

Indian Hawaii sandals priced rs 1 lakh in Saudi Arabia netizen react to viral video ckm

ದುಬೈ(ಜು.16) ದಶಗಳ ಹಿಂದೆ ಬೈಕಾಫ್ ಚಪ್ಪಲಿಗಳು ಭಾರಿ ಜನಪ್ರಿಯವಾಗಿತ್ತು. 40 , 80 ರೂಪಾಯಿ ಒಳಗೆ ನೀಲಿ ಹಾಗೂ ಬಿಳಿ ಬಣ್ಣದ ಈ ಸ್ಯಾಂಡಲ್ಸ್ ದೊರೆಯುತ್ತಿತ್ತು. ಇದೀಗ ಹಳೇ ಕಾಲದ ಸ್ಯಾಂಡಲ್ಸ್ ಬದಲು ಹೆಚ್ಚು ಸ್ಟೈಲೀಶ್ ಚಪ್ಪಲಿಗಳು 100 ರಿಂದ 150 ರೂಪಾಯಿಯಲ್ಲಿ ಭಾರತದಲ್ಲಿ ಲಭ್ಯವಿದೆ. ಶೌಚಾಲಯದ ಬಾಗಿಲ ಬಳಿ ಹೆಚ್ಚಾಗಿ ಕಾಣಸಿಗುವ ಈ ನೀಲಿ ಬಿಳಿ ಬಣ್ಣದ ಹವಾಯಿ ಚಪ್ಪಲಿ ಸೌದಿ ಅರೇಬಿಯಾದಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿ ಮಾರಾಟ ಮಾಡಲಾಗುತ್ತಿದೆ.  ಈ ಚಪ್ಪಲಿ ಅಂಗಡಿಯ ವಿಡಿಯೋ ಭಾರಿ ವೈರಲ್ ಆಗಿದೆ.

ಸೌದಿ ಅರೇಬಿಯಾ ಚಪ್ಪಲ್ ಸ್ಟೋರ್‌ನ ಈ ವಿಡಿಯೋ ನೋಡಿದ ಭಾರತೀಯರು ಹೌಹಾರಿದ್ದಾರೆ. ಇದೀಗ ಈ ರೀತಿ ಪ್ಲೇನ್ ಚಪ್ಪಲಿ ಯಾರಿಗೂ ಬೇಡ. ಸದ್ಯ 100 ರೂಪಾಯಿ ಬಗೆ ಬಗೆಯ ಸ್ಟೈಲಿಶ್ ಚಪ್ಪಲಿಗಳು ಲಭ್ಯವಿದೆ. ಹೀಗಾಗಿ ಇಲ್ಲಿ ಟಾಯ್ಲೆಟ್‌ಗೂ ಬೇಡವಾದ ಈ ಹವಾಯಿ ಚಪ್ಪಲಿ 1 ಲಕ್ಷ ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯರಿಗೆ ಅಚ್ಚರಿಯಾಗಿದೆ.

Tap to resize

Latest Videos

undefined

ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೌದಿಯ ಮೊದಲ ಪುರುಷ ರೋಬೋಟ್! ವಿಡಿಯೋ ವೈರಲ್

ಸೌದಿ ಅರೇಬಿಯಾ ಚಪ್ಪಲಿ ಅಂಗಡಿಯ ವಿಡಿಯೋ ಆರಂಭದಲ್ಲೇ ಅಚ್ಚರಿ ನೀಡಲಿದೆ. ನೀಲಿ ಬಣ್ಣದ ಹವಾಯಿ ಚಪ್ಪಲಿ ಸೇರಿದಂತೆ ಇತರ ಚಪ್ಪಲಿಗಳನ್ನು ಜ್ಯೂವೆಲ್ಲರಿ ಶೋ ರೂಂನಲ್ಲಿ ಚಿನ್ನಇಟ್ಟಂತೆ ಗಾಜಿನೊಳಗೆ ಇಡಲಾಗಿದೆ. ಪಳಪಳ ಹೊಳೆಯುತ್ತಿರುವ ಗಾಜಿನ ಒಳಗಿಂದ  ಈ ನೀಲಿ ಬಣ್ಣದ ಹವಾಯಿ ಚಪ್ಪಲಿ ತೆಗೆದ ಸಿಬ್ಬಂದಿ, ಗ್ರಾಹಕರಿಗೆ ತೋರಿಸಿದ್ದಾರೆ. ಈ ಚಪ್ಪಲಿ ಉತ್ತಮ ಬಾಳಿ ಬರಲಿದೆ. ಪಾದಕ್ಕೆ ಹಿತ ನೀಡಲಿದೆ. ಬಾಳಿಕೆ ಹೆಚ್ಚಿದೆ ಎಂದು ಗಟ್ಟಿಯಾಗಿಲ್ಲ. ಸಾಫ್ಟ್ ಆಗಿ ಹೆಚ್ಚು ಸುರಕ್ಷತೆಯನ್ನು ನೀಡುತ್ತದೆ. ಇನ್ನು ಚಪ್ಪಲಿಯನ್ನು ಯಾವುದೇ ರೀತಿ ಬೆಂಡ್ ಮಾಡಿದರೂ ಸಮಸ್ಯೆ ಇಲ್ಲ ಎಂದು ಸಿಬ್ಬಂದಿ ಹವಾಯಿ ಚಪ್ಪಲಿ ಗುಣಗಾನ ಮಾಡಿದ್ದಾರೆ.

 

We Indians use these sandals as a toilet footwear 😀 pic.twitter.com/7EtWY27tDT

— Rishi Bagree (@rishibagree)

 

ಇದರ ಬೆಲೆ 4,500 ರಿಯಾಲ್ಸ್. ಭಾರತೀಯ ರೂಪಾಯಿಗಳಲ್ಲಿ 1,00,305 ರೂಪಾಯಿ. ಇಷ್ಟೊಂದು ಬೆಲೆ ನೀಡಿ ಈ ಹವಾಯಿ ಚಪ್ಪಲಿ ಭಾರತೀಯರು ಯಾರು ಖರೀದಿಸುತ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ. ಈ ಕುರಿತು ವಿಡಿಯೋವನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಿಶಿ ಬಗ್ರಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ, ನಾವು ಭಾರತೀಯರು ಈ ಹವಾಯಿ ಚಪ್ಪಲಿಯನ್ನು ಶೌಚಾಲಯಕ್ಕೆ ಬಳಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದೀಗ ಶೌಚಾಲಯಕ್ಕೂ ಈ ಚಪ್ಪಲಿ ಬಳಕೆ ಮಾಡುತ್ತಿಲ್ಲ. ಇದಕ್ಕಿಂತ ಹಚ್ಚು ಆಕರ್ಷಕ ಹಾಗೂ ಉತ್ತಮ ವಿನ್ಯಾಸದ ಚಪ್ಪಲಿಗಳು ಲಭ್ಯವಿದೆ ಎಂದಿದ್ದಾರೆ. ಭಾರತೀಯರು 100 ರೂಪಾಯಿಗೆ ಚಪ್ಪಲಿ ಖರೀದಿಸಿ ದುಬೈನಲ್ಲಿ 1,00,000 ರೂಪಾಯಿಗೆ ಮಾರಾಟ ಮಾಡುವ ಉದ್ಯಮ ಆರಂಭಿಸಬಹುದು ಎಂದು ಸಲಹೆ ನೀಡಿದ್ದಾರೆ.

ದುಬೈನ ಬುರ್ಜ್ ಖಲೀಫಾಗೆ ಸೆಡ್ಡು, ನಿರ್ಮಾಣವಾಗುತ್ತಿದೆ ವಿಶ್ವದ ಅತೀ ಎತ್ತರದ ಕಟ್ಟಡ!
 

vuukle one pixel image
click me!