ಟ್ರಂಪ್ ಆಯ್ಕೆ ಮಾಡಿದ ಉಪಾಧ್ಯಕ್ಷ ಅಭ್ಯರ್ಥಿಗಿದೆ ಭಾರತೀಯ ಹಿನ್ನೆಲೆ

By Anusha Kb  |  First Published Jul 16, 2024, 4:45 PM IST

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಈ ಮಧ್ಯೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ತಮ್ಮ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಜೆಡಿ ವಾನ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. 


ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಈ ಮಧ್ಯೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ತಮ್ಮ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಜೆಡಿ ವಾನ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗಿರುವಾಗ ಜೆಡಿ ವಾನ್ಸ್‌ ಅವರು ತಮ್ಮ ಪತ್ನಿ ಹಾಗೂ ಆಕೆಯ ಹಿಂದೂ ನಂಬಿಕೆಗಳು ತನ್ನ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಸವಾಲುಗಳನ್ನು ಎದುರಿಸಲು ಸಹಾಯ ಹೇಗೆ ಸಹಾಯ ಮಾಡಿದವರು ಎಂಬುದನ್ನು ಹೇಳಿಕೊಂಡಿದ್ದಾರೆ. ತಾವು ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆಯಾಗುವ ವಾರಕ್ಕೂ ಮೊದಲು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

38 ವರ್ಷದ ವಾನ್ಸ್ ಕ್ರೈಸ್ತ ಪ್ರೊಟೆಸ್ಟೆಂಟ್ ಆಗಿ ಬೆಳೆದಿದ್ದು, 2016ರ ಸಮಯದಲ್ಲಿ ಕ್ಯಾಥೂಲಿಕ್ ಆಗಿ ಪರಿವರ್ತನೆಗೊಂಡಿದ್ದರು. ತಮ್ಮ ಹಿಂದೂ ಪತ್ನಿ ಉಷಾ ತನಗೆ ಕ್ರಿಶ್ಚಿಯನ್ ನಂಬಿಕೆಯ ಶೋಧ ಮಾಡುವುದಕ್ಕೆ ಪ್ರೋತ್ಸಾಹಿಸಿದರು ಎಂದು ವಾನ್ಸ್ ಹೇಳಿಕೊಂಡಿದ್ದಾರೆ.  ನಾನು ಯಾವತ್ತೂ ಕೂಡ ಬ್ಯಾಪ್ಟೈಜ್ ಆಗಿರಲಿಲ್ಲ, ನಾನು ಕ್ರಿಶ್ಚಿಯನ್ ಆಗಿ ಬೆಳೆದಿದ್ದೆ. ಆದರೆ ಬ್ಯಾಪ್ಟೈಜ್ ಆಗಿರಲಿಲ್ಲ, ಆದರೆ 2018ರಲ್ಲಿ ಮೊದಲ ಬಾರಿಗೆ ನಾನು ಬ್ಯಾಪ್ಟೈಜ್ ಆದೆ. ಆದರೆ ಉಷಾ ಕ್ರಿಶ್ಚಿಯನ್ ಅಲ್ಲ, ಆಕೆ ಬೆಳೆದಿದ್ದೆ ಕ್ರಿಶ್ಚಿಯನ್ನೇತರಳಾಗಿಯೇ, ಆದರೆ ನಾನು ನನ್ನದೇ ನಂಬಿಕೆಯ ಜೊತೆ ಮತ್ತೆ ನನ್ನನ್ನು ಜೋಡಿಸಿಕೊಳ್ಳಲು ಮುಂದಾದಾಗ ಉಷಾ ನನಗೆ ತುಂಬಾ ಬೆಂಬಲ ನೀಡಿದರು. ಇದು ನನಗೆ ನೆನಪಿದೆ. ಉಷಾ ಧಾರ್ಮಿಕತೆಯಿಂದ ಕೂಡಿದ ವಾತಾವರಣದಲ್ಲಿ ಬೆಳೆದವಳು ಎಂದು ಜೆಡಿ ವಾನ್ಸ್ ಹೇಳಿದ್ದಾರೆ.

Latest Videos

undefined

'ಗುಂಡಿನ ದಾಳಿ ವೇಳೆ ಸತ್ತೇ ಹೋದೆ ಅಂತ ಭಾವಿಸಿದ್ದೆ, ದೇವರ ದಯೆಯಿಂದ ಬದುಕಿದೆ' :ಡೊನಾಲ್ಡ್‌ ಟ್ರಂಪ್‌

ತನ್ನ ಹಾಗೂ ಆತನ ಧರ್ಮ ನಂಬಿಕೆಗಳು ಬೇರೆಯೇ ಆದರೂ ತಾನು ಏಕೆ ಆತನನ್ನು ಬೆಂಬಲಿಸಿದೆ ಎಂದು ಉಷಾ ಅವರನ್ನು ಕೇಳಿದಾಗ ಅವರು ಹೇಳಿದ್ದು, ಇದಕ್ಕೆ ಕಾರಣ ನನ್ನ ಪೋಷಕರ ಪ್ರಭಾವ ಅವರು ನನ್ನನ್ನು ಬೆಳೆಸಿದ ರೀತಿ ಎಂದು.  ನನ್ನ ಪೋಷಕರು ಹಿಂದೂಗಳು,  ಅದೇ ಅವರನ್ನು ಒಳ್ಳೆಯ ಪೋಷಕರು ಹಾಗೂ ಒಳ್ಳೆಯ ಮನುಷ್ಯರನ್ನಾಗಿಸಿತು. ಆ ಶಕ್ತಿಯನ್ನು ನಾನು ನನ್ನದೇ ಜೀವನದಲ್ಲಿ ಕಂಡಿದ್ದೇನೆ ಎಂದು ಉಷಾ ಹೇಳಿದ್ದಾರೆ. ನನಗೆ ಗೊತ್ತು ಜೆಡಿ ವಾನ್ಸ್ ಏನನ್ನೂ ಹುಡುಕಾಟ ನಡೆಸುತ್ತಿದ್ದರು. ಹೀಗಿರುವಾಗ ಇದು ಅವರಿಗೆ ಸರಿ ಎನಿಸಿತು ಎಂದು ಉಷಾ ಹೇಳಿದ್ದಾರೆ. 

ಎರಡು ವಿಭಿನ್ನ ಪರಂಪರೆ ಸಮುದಾಯದಲ್ಲಿ ಬೆಳೆದಿರುವ ನೀವು ಹೇಗೆ ನಿಮ್ಮ ಮಕ್ಕಳನ್ನು ಬೆಳೆಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಷಾ, ಕುಟುಂಬದ ವಿಚಾರ ಬಂದಾಗ ಕೆಲವೊಂದು ವಿಚಾರಗಳನ್ನು ದಂಪತಿ ಕೇವಲ ಒಪ್ಪಿಕೊಳ್ಳಬೇಕಷ್ಟೇ, ಇದಕ್ಕೆ ಉತ್ತರ ನಾವು ತುಂಬಾ ವಿಚಾರಗಳನ್ನು ಮಾತನಾಡುತ್ತೇವೆ ಎಂದು ಉತ್ತರಿಸಿದರು.

ಟ್ರಂಪ್ ಪ್ರಾಣ ಉಳಿಸಿದ ಭಗವಾನ್ ಜಗನ್ನಾಥ, ಮಾಜಿ ಅಧ್ಯಕ್ಷನಿಗೆ ನೆರವಾದ 1976ರ ರಥ ಯಾತ್ರೆ!

ಅಂದಹಾಗೆ ಉಷಾ ಚಿಲ್ಕುರಿ ಹಾಗೂ ಜೆಡಿ ವಾನ್ಸ್ ಮೊದಲು ಭೇಟಿಯಾಗಿದ್ದು, ಯಾಲೆಯ ಲಾ ಸ್ಕೂಲ್‌ನಲ್ಲಿ 2014ರಲ್ಲಿ ಮದುವೆಯಾದ ಇವರಿಗೆ ಮೂವರು ಮಕ್ಕಳಿದ್ದಾರೆ. ಆರು ವರ್ಷದ ಇವನ್, 4 ವರ್ಷದ ವಿವೇಕ್ ಹಾಗೂ 2 ವರ್ಷದ ಮೀರಾಬೆಲ್ ಎಂಬ ಎರಡು ಗಂಡು ಒಂದು ಹೆಣ್ಣು ಮಗುವನ್ನು ದಂಪತಿ ಹೊಂದಿದ್ದಾರೆ.  ಪ್ರಸ್ತುತ ಓಹಿಯೋದ ಸೆನೆಟರ್ ಆಗಿರುವ ಜೆಡಿ ವಾನ್ಸ್ ಅವರನ್ನು ದಿನಗಳ ಹಿಂದೆ ಅಮೆರಿಕಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ ಡೊನಾಲ್ಡ್ ಟ್ರಂಪ್ ಉಪಾಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. 

ಉಷಾ ಚಿಲ್ಕುರಿ ಅವರ ಪೋಷಕರು ಮೂಲತಃ ಭಾರತದಿಂದ ಅಮೆರಿಕಾಗೆ ವಲಸೆ ಹೋಗಿ ಅಲ್ಲೇ ನೆಲೆಸಿರುವ ದಂಪತಿಯಾಗಿದ್ದಾರೆ. ಕಾನೂನು ಪದವೀಧರೆಯಾಗಿರುವ ಉಷಾ ಚಿಲ್ಕುರಿ ಅಮೆರಿಕಾದ ಸುಪ್ರೀಂಕೋರ್ಟ್‌ನಲ್ಲಿ ಮುಖ್ಯನ್ಯಾಯಾಧೀಶರಾಗಿ ಕೆಲಸ ಮಾಡಿದ್ದ ಜಾನ್ ಜಿ ರಾಬರ್ಟ್ಸ್ ಜೂನಿಯರ್ ಹಾಗೂ ನ್ಯಾಯಾಧೀಶ ಬ್ರೆಟ್ ಕವನಾಗ್ ಮತ್ತು ನ್ಯಾಯಾಧೀಶ ಅಮುಲ್ ಥಾಪರ್ ಅವರ ಬಳಿಯೂ ಕೆಲಸ ಮಾಡಿದ್ದಾರೆ.

There’s another Great Indian Wedding to celebrate…

🙂 pic.twitter.com/WGDKAvcrv1

— anand mahindra (@anandmahindra)

 

click me!