ಗಲ್ಲಿಗೇರಲು ಸಿದ್ಧವಾಗಿದ್ದ ಭಾರತೀಯನ 1 ಕೋಟಿ ಕೊಟ್ಟು ಉಳಿಸಿದ ಉದ್ಯಮಿ

By Kannadaprabha NewsFirst Published Jun 4, 2021, 9:43 AM IST
Highlights
  • ಯುಎಇನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ
  • 1 ಕೋಟಿ ರು.ಕೊಟ್ಟು ಸಾವಿನಿಂದ ಪಾರು ಮಾಡಿದ ಉದ್ಯಮಿ
  • ಯುಎಇ ಕೋರ್ಟ್‌ ಕೃಷ್ಣನ್‌ಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು

ಅಬುಧಾಬಿ (ಜೂ.04): ಯುಎಇನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯನನ್ನು ಉದ್ಯಮಿಯೊಬ್ಬರು 1 ಕೋಟಿ ರು.ಕೊಟ್ಟು ಸಾವಿನಿಂದ ಪಾರು ಮಾಡಿರುವ ಅಪರೂಪದ ಘಟನೆ ನಡೆದಿದೆ.

ಕೇರಳ ಮೂಲದ ಕೃಷ್ಣನ್‌ ಎಂಬಾತ 2012ರಲ್ಲಿ ಮನಸೋಇಚ್ಛೆ ಕಾರು ಚಯಲಾಯಿಸಿ ಸುಡಾನ್‌ ದೇಶದ ಯುವಕನೊಬ್ಬನ ಸಾವಿಗೆ ಕಾರಣನಾಗಿದ್ದ. ಈ ಕೇಸಲ್ಲಿ ಯುಎಇ ಕೋರ್ಟ್‌ ಕೃಷ್ಣನ್‌ಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಬಳಿಕ ಸಾವಿಗೀಡಾದ ಯುವಕನ ಕುಟುಂಬದವರು ಸುಡಾನ್‌ಗೆ ವಾಪಸ್‌ ಆಗಿದ್ದರಿಂದ ಕೃಷ್ಣನ್‌ ಬಿಡುಗಡೆಗೆ ಕುಟುಂಬ ಸದಸ್ಯರು ನಡೆಸಿದ ಯತ್ನ ವಿಫಲವಾಗಿತ್ತು. ಈ ಮಧ್ಯೆ ಕೃಷ್ಣನ್‌ ಕುಟುಂಬ ಉದ್ಯಮಿ ಹಾಗೂ ಸಮಾಜ ಸೇವಕ ಎಂ.ಕೆ. ಯೂಸಫ್‌ ಅಲಿ ಅವರ ನೆರವು ಕೋರಿತ್ತು.

68 ವರ್ಷದಲ್ಲೇ ಮೊದಲ ಬಾರಿ ಅಮೆರಿಕದಲ್ಲಿ ಮಹಿಳೆಗೆ ಮರಣದಂಡನೆ! .

 ಪ್ರಕರಣದ ಮಾಹಿತಿ ಪಡೆದ ಯೂಸಫ್‌ ಅಲಿ ತಮ್ಮ ಸಂಸ್ಥೆಯ ಮೂಲಕ ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿದ್ದು, ಅವರು ಕೃಷ್ಣನ್‌ನನ್ನು ಕ್ಷಮಿಸಿರುವುದಾಗಿ ಹೇಳಿದ್ದರು. ಬಳಿಕ ಪರಿಹಾರವಾಗಿ 500,000 ದಿನಾರ್‌ (1 ಕೋಟಿ ರು.) ಅನ್ನು ಕೋರ್ಟ್‌ಗೆ ನೀಡಿ ಕೃಷ್ಣನ್‌ ಬಿಡುಗಡೆಗೆ ಯೂಸಫ್‌ಅಲಿ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಸಾವಿನ ದಿನಗಳನ್ನು ಎಣಿಸುತ್ತಿದ್ದು ಕೃಷ್ಣನ್‌ ಜೈಲಿನಿಂದ ಬಿಡುಗಡೆಯಾಗಿ ಹೊಸ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

click me!