
ಫಿನ್ ಲ್ಯಾಂಡ್(ಜೂ. 03) ಕೊರೋನಾ ಸಂಕಷ್ಡಟದ ಸಂದರ್ಭ ಐಷಾರಾಮಿ ಕಾರು ಖರೀದಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂದಕ್ಕೆ ಹಾಕಿದ್ದರು. ಫಿನ್ ಲ್ಯಾಂಡ್ ಪ್ರಧಾನಿ ಸಾನಾ ಮ್ಯಾರಿನ್ ತಮ್ಮ ಕುಟುಂಬಕ್ಕೆ ಸರ್ಕಾರ ನೀಡುತ್ತಿದ್ದ ಊಟದ ಭತ್ಯೆ ತ್ಯಜಿಸುವುದಾಗಿ ಘೋಷಣೆ ಮಾಡಿದ್ದಾರೆ.
35 ವರ್ಷದ ಪ್ರಧಾನಿ ಇನ್ನು ಮುಂದೆ ಊಟದ ಭತ್ಯೆ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ವಾರಾಂತ್ಯದ ಊಟಗಳಿಗೆ ತಾವು ಪಡೆದುಕೊಂಡ 14 ಸಾವಿರ ಯುರೋ( 12.5 ಲಕ್ಷ ರೂ.) ಗಳನ್ನು ಖಜಾನೆಗೆ ವಾಪಸ್ ನೀಡುವುದಾಗಿ ತಿಳಿಸಿದ್ದಾರೆ.
ಕೋವಿಡ್ ಲ್ಯಾಬ್ ನೌಕರರಿಗೆ ಅಪಾಯದ ಭತ್ಯೆ
ಊಟದ ಭತ್ಯೆ ವಿಚಾರಕ್ಕೆ ಸಂಬಂಧಿಸಿ ತೀವ್ರ ವಿರೋಧಗಳು ಎದ್ದಿವೆ. ಈ ಎಲ್ಲ ವಿವಾದಕ್ಕೆ ಕೊನೆ ಹಾಡಲಿದ್ದೇನೆ ಎಂದು ತಿಳಿಸಿದ್ದಾರೆ. ಕಾನೂನು ಪ್ರಕಾರವಾಗಿಯೇ ಊಟದ ಭತ್ಯೆ ಸಿಗುತ್ತಿದ್ದರೂ ಇನ್ನು ಮುಂದೆ ಅದನ್ನು ಪಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಟುಂಬದ ವಿಚಾರ ಬಿಟ್ಟು ಮಾತನಾಡಲು ಹಲವು ಸಂಗತಿಗಳಿವೆ ಆ ಬಗ್ಗೆ ಗಮನ ನೀಡುತ್ತೇನೆ ಎಂದು ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.
ಫಿನ್ ಲ್ಯಾಂಡ್ ಮಾಧ್ಯಮವೊಂದು ಪ್ರಧಾನಿಯವರು ತಿಂಡಿಯ ಖರ್ಚನ್ನು ಸರ್ಕಾರದಿಂದ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಬೆಳಗಿನ ತಿಂಡಿಗಾಗಿ 300 ಯುರೋ ಪಡೆಯುತ್ತಿದ್ದಾರೆ ಎಂದು ವರದಿ ಮಾಡಿತ್ತು. ಅಧಿಕಾರಿಗಳು ಸಹ ಈ ಪ್ರಕರಣವನ್ನು ಪರಿಶೀಲನೆಗೆ ಒಳಪಡಿಸಿದ್ದರು. ಪ್ರತಿವಾರ ಮ್ಯಾರಿನ್ 845 ಯುರೋ ಭತ್ಯೆ ಪಡೆದುಕೊಂಡಿದ್ದಾರೆ ಎನ್ನುವುದು ಗೊತ್ತಾಗಿತ್ತು.
ಈ ವಿಚಾರದಲ್ಲಿ ಇನ್ನು ಮುಂದೆ ಯಾರೂ ನನ್ನ ಕಡೆ ಬೆರಳು ಮಾಡಿ ತೋರಿಸುವ ಅಗತ್ಯ ಇಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ವಿಪಕ್ಷಗಳು ಸಲ್ಲದ ಕಾರಣ ಹುಡುಕಿ ಟೀಕೆ ಮಾಡುತ್ತಿವೆ ಎಂದು ಪ್ರಧಾನಿ ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ