ಅಮೆರಿಕ(ಜೂ.03): ಕೊರೋನಾ ಕುರಿತು ಕಾಲಕ್ಕೆ ತಕ್ಕಂತೆ ಮಾರ್ಗಸೂಚಿಗಳು ಪ್ರಕಟಗೊಳ್ಳುತ್ತಲೇ ಇದೆ. ಆದರೆ ಗೊಂದಲಗಳು ಬೆಟ್ಟದಷ್ಟಿವೆ. ಇದರಲ್ಲಿ ಲಸಿಕೆ ಹಾಕಿದ ಬಳಿಕ ಪದೇ ಪದೇ ಕೊರೋನಾ ಟೆಸ್ಟ್ ಮಾಡಿಸಬೇಕೆ ಅನ್ನೋ ಪ್ರಶ್ನೆ ಹಲವರು ಕೇಳುತ್ತಲೇ ಇದ್ದಾರೆ. ಇದೀಗ ಸ್ಪಷ್ಟ ಉತ್ತರ ಲಭ್ಯವಾಗಿದೆ. ಕೊರೋನಾ ಲಸಿಕೆ ಹಾಕಿಸಿಕೊಂಡರವರು ಪದೇ ಪದೇ ಕೋವಿಡ್ ಟೆಸ್ಟ್ ಮಾಡಿಸಿ ರಿಪೋರ್ಟ್ ಸಲ್ಲಿಸಬೇಕಾದ ಅವಶ್ಯಕತೆ ಇಲ್ಲ. ಆದರೆ ಈ ಮಾರ್ಗಸೂಚಿ ಇರುವುದು ಅಮೆರಿದಲ್ಲಿ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್(CDC) ಈ ಮಾರ್ಗಸೂಚಿ ಪ್ರಕಟಿಸಿದೆ. ಈ ನಡೆ ಕೊರೋನಾ ಲಸಿಕೆ ಹಾಕಿಸಿದವರಿಗೆ ಸಮಾಧಾನ ತಂದಿದೆ.
ಮತ್ತೊಂದು ಸ್ವದೇಶೀ ಲಸಿಕೆ: 30 ಕೋಟಿ ಡೋಸ್ ಆರ್ಡರ್ ಮಾಡಿದ ಕೇಂದ್ರ!.
ಕೊರೋನಾ ಲಸಿಕೆ ಹಾಕಿದವರೂ ಸಾಮಾನ್ಯ ಕೊರೋನಾ ಪರೀಕ್ಷೆಯಿಂದ ಮುಕ್ತ ಎಂದು ಅಮೆರಿಕ ಡಿಸೀಸ್ ಕಂಟ್ರೋಲ್ ಸಂಸ್ಥೆ ಹೇಳಿದೆ. ಆದರೆ ಕೆಲ ಕಂಡೀಷನ್ ಇವೆ. ಲಸಿಕೆ ಹಾಕಿದ ವ್ಯಕ್ತಿ ಜ್ವರ, ಕೆಮ್ಮು, ಆಯಾಸ ಸೇರಿದಂತೆ ಕೊರೋನಾ ಲಕ್ಷಣದಿಂದ ಬಳಲುತ್ತಿದ್ದರೆ ಪರೀಕ್ಷೆ ಕಡ್ಡಾಯವಾಗಿದೆ. ಇದನ್ನು ಹೊರತು ಪಡಿಸಿದರೆ ಪ್ರತಿ ಬಾರಿ ಎಲ್ಲಾ ಕಡೆ ಕೇಳುವ ಕೊರೋನಾ ಪರೀಕ್ಷೆ ನೆಗಟೀವ್ ರಿಪೋರ್ಟ್ ಲಸಿಕೆ ಹಾಕಿದವರಿಗೆ ಬೇಕಿಲ್ಲ ಎಂದಿದೆ.
ಅಧ್ಯಯನ ವರದಿ ಪ್ರಕಾರ, ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಕೊರೋನಾ ಕಾಣಿಸಿಕೊಂಡರೂ ಹರಡು ಸಾಧ್ಯತೆ ಕಡಿಮೆ. ದೇಹದಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗಿರುವ ಕೊರೋನಾ ವೈರಸ್ ಮತ್ತೊಬ್ಬರಿಗೆ ಹರಡುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ ಎಂದು ವರದಿ ಹೇಳುತ್ತಿದೆ.
ತೀವ್ರ ಸಂಕಷ್ಟದಲ್ಲಿ ಭಾರತದ ಲಸಿಕೆ ಅವಲಂಬಿಸಿದ 91 ರಾಷ್ಟ್ರ; ವಿಶ್ವ ಆರೋಗ್ಯ ಸಂಸ್ಥೆ!
ಈ ಕಾರಣಕ್ಕಾಗಿ ಲಸಿಕೆ ಹಾಕಿದ ಜನ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದಾಗಿ ನೆಗಟೀವ್ ವರದಿ ನೀಡಬೇಕಾದ ಅಥವಾ ಕೋವಿಡ್ ಪರೀಕ್ಷೆಯಿಂದ ಮುಕ್ತ ಎಂದು CDC ಹೇಳಿದೆ. ಆದರೆ ಈ ಮಾರ್ಗಸೂಚಿ ವೈದ್ಯರು, ನರ್ಸ್, ದಾದಿಯರು ಸೇರಿದಂತೆ ಆರೋಗ್ಯ ಕಾರ್ಯತರ್ತರಿಗೆ ಅನ್ವಯವಾಗುವುದಿಲ್ಲ ಎಂದು CDC ಹೇಳಿದೆ.
ಇದರ ಜೊತೆಗೆ ಮತ್ತೊಂದು ಕಂಡೀಷನ್ ಇದೆ. ವಿದೇಶದಿಂದ ಆಗಮಿಸುವ ಅಮೆರಿಕ ಪ್ರಜೆಗಳು ಕೋವಿಡ್ ನೆಗಟೀವ್ ವರದಿಯನ್ನು ವಿಮಾನ ಹತ್ತುವ ಮೊದಲೇ ನೀಡಬೇಕು. ಲಸಿಕೆ ಹಾಕಿದ್ದರೂ ನೆಗಟೀವ್ ವರದಿ ಕಡ್ಡಾಯವಾಗಿದೆ. ಇದರಲ್ಲಿ ಬದಲಾವಣೆ ಇಲ್ಲ. ಒಂದು ವೇಳೆ ವರದಿ ನೆಗಟೀವ್ ಇದ್ದರೆ 10 ದಿನ ಐಸೋಲೇಶನ್‌ಗೆ ಒಳಗಾಗಬೇಕು ಎಂದು CDC ಹೇಳಿದೆ