ಇಸ್ರೇಲ್ ಅಮೆರಿಕಾ ದಾಳಿ ಮುಂದುವರಿದರೆ ಈ ಪ್ರದೇಶದಿಂದ ಒಂದೇ ಒಂದು ಲೀಟರ್ ತೈಲ ಸಾಗಣೆಗೆ ಬಿಡುವುದಿಲ್ಲ: ಇರಾನ್ ಎಚ್ಚರಿಕೆ

Published : Mar 10, 2026, 03:39 PM IST
Iran asks countries to expel US Israel ambassadors

ಸಾರಾಂಶ

ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ, ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಇರಾನ್ ಹೊಸ ಷರತ್ತುಗಳನ್ನು ವಿಧಿಸಿದೆ. ಇಸ್ರೇಲ್ ಮತ್ತು ಅಮೆರಿಕದ ರಾಯಭಾರಿಗಳನ್ನು ತೆಗೆದುಹಾಕಿದರೆ ಮಾತ್ರ ಹಡಗುಗಳಿಗೆ ಅನುಮತಿ ನೀಡುವುದಾಗಿ ಹೇಳಿದ್ದು, ದಾಳಿ ಮುಂದುವರಿದರೆ ತೈಲ ರಫ್ತು ತಡೆಯುವುದಾಗಿ ಐಆರ್‌ಜಿಸಿ ಬೆದರಿಸಿದೆ. 

ತೈಲ ಸಾಗಣೆಗೆ ಇರಾನ್ ಸರ್ಕಾರದ ಹೊಸ ಷರತ್ತು:

ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷ 11 ನೇ ದಿನ ತಲುಪಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಇರಾನ್ ಹೊಸ ಷರತ್ತುಗಳನ್ನು ವಿಧಿಸಿದೆ. ಇಸ್ರೇಲ್ ಹಾಗೂ ಅಮೆರಿಕಾದ ರಾಯಭಾರಿಗಳನ್ನು ತೆಗೆದು ಹಾಕಿದರೆ ಮಾತ್ರ ಹರ್ಮುಜ್ ಜಲಸಂಧಿಯ ಮೂಲಕ ಸಾಗಣೆಗೆ ಅವಕಾಶ ನೀಡುವುದಾಗಿ ಇರಾನ್ ಹಲವು ದೇಶಗಳಿಗೆ ಸವಾಲು ಹಾಕಿದೆ ಎಂದು ವರದಿಯಾಗಿದೆ. ಇಸ್ರೇಲಿ ಮಾಧ್ಯಮ ಚಾನೆಲ್ ವಲ್ಲಾ ಪ್ರಕಾರ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ಕೆಲವು ದೇಶಗಳ ಹಡಗುಗಳು ಮೊದಲು ಇಸ್ರೇಲ್ ಮತ್ತು ಯುಎಸ್‌ನಿಂದ ತಮ್ಮ ರಾಯಭಾರಿಗಳನ್ನು ತೆಗೆದು ಹಾಕಿದರೆ ಮಾತ್ರ ಹರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಅನುಮತಿಸಲಾಗುತ್ತದೆ ಎಂದು ಹೇಳಿದೆ.

ಇರಾನ್ ಅಧಿಪತ್ಯದಲ್ಲಿರುವ ಹಾರ್ಮುಜ್ ಜಲಸಂಧಿಯು ಒಂದು ನಿರ್ಣಾಯಕ ಹಡಗು ಮಾರ್ಗವಾಗಿದ್ದು, ಪ್ರತಿ ವರ್ಷ ವಿಶ್ವದ ತೈಲ ಪೂರೈಕೆಯ ಸುಮಾರು ಶೇಕಡಾ 20ರಷ್ಟು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ತೈಲ ಟ್ಯಾಂಕರ್‌ಗಳು ಮತ್ತು ವಾಣಿಜ್ಯ ಹಡಗುಗಳು, ವಿಶೇಷವಾಗಿ ಅಮೆರಿಕ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಭದ್ರತಾ ಶುಲ್ಕ ವಿಧಿಸಲು ಇರಾನ್ ಯೋಜಿಸಿದೆ ಎಂದು ಅಮೆರಿಕದ ಮಾಧ್ಯಮ ಸಿಎನ್‌ಎನ್ ವರದಿ ಮಾಡಿದೆ.

ಒಂದು ಲೀಟರ್ ತೈಲವನ್ನೂ ರಫ್ತು ಮಾಡಲು ಬಿಡಲ್ಲ:

ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ಒಂದು ಲೀಟರ್ ತೈಲವನ್ನೂ ರಫ್ತು ಮಾಡಲು ಅನುಮತಿಸುವುದಿಲ್ಲ ಎಂದು ಇರಾನ್ ಐಆರ್‌ಜಿಸಿ ಬೆದರಿಕೆಯೊಡ್ಡಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹರಿವನ್ನು ತಡೆಯಲು ಪ್ರಯತ್ನಿಸಿದರೆ, ಅಮೆರಿಕವು ಮೊದಲಿಗಿಂತ ಇಪ್ಪತ್ತು ಪಟ್ಟು ಕಠಿಣವಾಗಿ ದಾಳಿ ಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್‌ನೊಂದಿಗಿನ ಯುದ್ಧವು ಬಹಳ ಬೇಗ ಕೊನೆಗೊಳ್ಳುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ, ಇರಾನ್‌ನ ವಿದೇಶಾಂಗ ಸಚಿವರು ತಮ್ಮ ದೇಶವು ಅಗತ್ಯವಿರುವಷ್ಟು ಕಾಲ ದಾಳಿಗಳನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ತಿರುಗೇಟು ನೀಡಿದ್ದು, ಇಸ್ರೇಲ್ ಅಮೆರಿಕಾ ಜೊತೆ ಮಾತುಕತೆಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ದೇಶವು ಕ್ಷಿಪಣಿ ದಾಳಿಯನ್ನು ಮುಂದುವರಿಸಲು ಸಿದ್ಧವಾಗಿದೆ ಮತ್ತು ಅಮೆರಿಕದೊಂದಿಗೆ ಮಾತುಕತೆಗಳು ಇನ್ನು ಮುಂದೆ ಚಾಲನೆಯಲ್ಲಿ ಇರುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಇದನ್ನೂ ಓದಿ: ಗೆಳತಿ ಹಾಗೂ ಸ್ನೇಹಿತರ ಮುಂದೆ ಅಪ್ರಾಪ್ತ ಬಾಲಕನ ಬಿಲ್ಡಪ್‌: ಪ್ರಶ್ನಿಸಿದ್ದಕ್ಕೆ ಹದಿಹರೆಯದ ಯುವಕನ ಕೊಲೆ

ಅಮೆರಿಕ ಜೊತೆಗಿನ ಮಾತುಕತೆಗಳು ಚಾಲನೆಯಲ್ಲಿ ಇರುವುದಿಲ್ಲ, ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಮುಂದುವರಿದರೆ ಇರಾನ್ ಈ ಪ್ರದೇಶದಿಂದ ಒಂದೇ ಒಂದು ಲೀಟರ್ ತೈಲವನನ್ನು ಕೂಡ ಸಾಗಿಸಲು ಬಿಡುವುದಿಲ್ಲ ಎಂದು ಐಆರ್‌ಜಿಸಿ ಹೇಳುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಈ ನಡುವೆ ಇರಾನ್ ಸಂಘರ್ಷ ಮತ್ತು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಒಂದು ಗಂಟೆ ಮಾತನಾಡಿದರು. ಇರಾನ್ ಯುದ್ಧವನ್ನು ಕೊನೆಗೊಳಿಸಲು ಪುಟಿನ್ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ರಷ್ಯಾ-ಉಕ್ರೇನ್ ಸಂಘರ್ಷವನ್ನು ಪರಿಹರಿಸುವತ್ತ ರಷ್ಯಾ ಗಮನಹರಿಸುವುದು ಉತ್ತಮ ಎಂದು ತಾನು ಸಲಹೆ ನೀಡಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಪ್ರೇಮಕ್ಕೆ ಮನೆಯವರ ವಿರೋಧ: ತುಂಗಭದ್ರ ನದಿಗೆ ಹಾರಿದ ಹಿಂದೂ ಹುಡುಗಿ ಮುಸ್ಲಿಂ ಹುಡುಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?