ವಿಶ್ವದ ಮೆಂಟಲ್‌ ಡಿಕ್ಟೇಟರ್‌ ಕಿಮ್‌ ಜಾಂಗ್‌ ಉನ್‌ ಬಳಿ ಇರೋ ಫೋನ್‌ ಯಾವ್ದು?

By Santosh NaikFirst Published Jul 14, 2023, 8:13 PM IST
Highlights

ಉತ್ತರ ಕೊರಿಯಾದಲ್ಲಿ ಇಂಟರ್ನೆಟ್‌ ಇಲ್ಲ. ಇನ್ನು ಮೊಬೈಲ್‌ ಬಳಕೆಗೂ ಅಲ್ಲಿ ಮಿತಿ ಇದೆ. ಆದರೆ, ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಮಾತ್ರ ಐಷಾರಾಮಿ ಮೊಬೈಲ್‌, ಇಂಟರ್ನೆಟ್‌ ಬಳಸಿಕೊಂಡು ಆರಾಮವಾಗಿದ್ದಾನೆ. ಈತ ಬಳಸುವ ಮೊಬೈಲ್‌ ಯಾವುದು ಅನ್ನೋದು ಇತ್ತೀಚೆಗೆ ಬಹಿರಂಗವಾಗಿದೆ.
 

ನವದೆಹಲಿ (ಜು.14): ತನ್ನ ಹುಚ್ಚು ನಿರ್ಧಾರಗಳು ಹಾಗೂ ಸರ್ವಾಧಿಕಾರಿ ನಿಯಮಗಳ ಕಾರಣದಿಂದಾಗಿಯೇ ವಿಶ್ವದ ಅತ್ಯಂತ ಮೆಂಟಲ್‌ ಡಿಕ್ಟೇಟರ್‌ ಎಂದು ಹೆಸರುವಾಸಿಯಾದವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌. ಇತ್ತೀಚಿನ ವರೆಗೂ ಈತ ಇನ್ನು ಬದುಕೋದೇ ಡೌಟು ಅನ್ನೋ ರೀತಿಯ ಸುದ್ದಿಗಳು ಬರುತ್ತಿದ್ದವು. ತನ್ನ ಉತ್ತರಾಧಿಕಾರಿಯ ಬಗ್ಗೆ ಯೋಚನೆ ಮಾಡ್ತಾ ಇದ್ದಾನೆ ಅಂತಾನೂ ಸುದ್ದಿಯಾಗಿತ್ತು. ಆದರೆ, ಈಗ ಕಿಮ್‌ ಜಾಂಗ್‌ ಉನ್‌ ಗುಣಮುಖನಾಗಿದ್ದಾನೆಯಂತೆ. ಫುಲ್‌ ಫಿಟ್‌ ಆಂಡ್‌ ಫೈನ್‌ ಆಗಿರುವ ಕಿಮ್‌ ಜಾಂಗ್‌ ಉನ್. ಇತ್ತೀಚೆಗೆ ಉತ್ತರ ಕೊರಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲೂ ಕಾಣಿಸಿಕೊಂಡಿದ್ದಾರೆ. ಈ ವೇಳೆ ಎಲ್ಲರ ಗಮನ ಹೋಗಿದ್ದು ಆತನ ಸ್ಮಾರ್ಟ್‌ಫೋನ್‌ ಮೇಲೆ. ನೆನಪಿರಲಿ, ಉತ್ತರ ಕೊರಿಯಾಗೆ ವಿಶ್ವಸಂಸ್ಥೆಯ ಸಂಪೂರ್ಣ ನಿಷೇಧವಿದೆ. ಯಾವುದೇ ಎಲೆಕ್ಟ್ರಾನಿಕ್ಸ್‌ ಸರಕುಗಳನ್ನು ಉತ್ತರ ಕೊರಿಯಾಗಿ ತಲುಪಿಸುವಂತಿಲ್ಲ. ಹಾಗಿದ್ದರೂ, ವಿಶ್ವದ ನಿರ್ದಯಿ ಸರ್ವಾಧಿಕಾರಿಯ ಬಳಿಕ ಸ್ಮಾರ್ಟ್‌ಫೋನ್‌ ಹೇಗೆ ಬಂತು ಅನ್ನೋದು ಒಂದು ಕುತೂಹಲವಾಗಿದ್ದರೆ, ಆತ ಯಾವ ಕಂಪನಿಯ ಮೊಬೈಲ್‌ ಬಳಸ್ತಾನೆ ಅನ್ನೋದು ಕೂಡ ಇನ್ನೊಂದು ಕುತೂಹಲ. 

ಕಿಮ್‌ ಜಾಂಗ್‌ ಉನ್‌ ಬಗ್ಗೆ ಎಷ್ಟೇ ಬೈದರೂ ಆತನ ಜೀವನದ ಬಗ್ಗೆ ಕುತೂಹಲ ಎಂದೂ ಕೊನೆಯಾಗೋದಿಲ್ಲ. ಜಗತ್ತಿನ ಸಂಪರ್ಕವೇ ಇಲ್ಲದ ಆತ ಹೇಗೆ ಬದುಕುತ್ತಾನೆ ಅನ್ನೋ ಕುತೂಹಲ ಯಾವಾಗಲೂ ಇರುತ್ತದೆ. ಆತ ಬಳಸುವಂಥ ವಸ್ತುಗಳು ಹಾಗೂ ಗ್ಯಾಜೆಟ್‌ಗಳ ಬಗ್ಗೆ ಜನಸಾಮಾನ್ಯನ ಕುತೂಹಲ ಎಂದಿಗೂ ಕಡಿಮೆಯಾಗೋದಿಲ್ಲ.

ಇತ್ತೀಚೆಗೆ ಉತ್ತರ ಕೊರಿಯಾ ತನ್ನ ಹ್ವಾಸಾಂಗ್‌-18 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿತು. ಇದರ ಚಿತ್ರಗಳನ್ನು ಉತ್ತರ ಕೊರಿಯಾ ಸರ್ಕಾರ ಕೂಡ ಬಿಡುಗಡೆ ಮಾಡಿತು. ಈ ವೇಳೆ ಕಿಮ್‌ ಜಾಂಗ್‌ ಉನ್‌ ಬಳಸುವ ಫೋನ್‌ನತ್ತ ಎಲ್ಲರ ಕಣ್ಣು ಹೋಗಿದೆ. ಮೂಲಗಳ ಪ್ರಕಾರ ಕಿಮ್‌ ಜಾಂಗ್‌ ಉನ್‌ ಸ್ಯಾಮ್‌ಸಂಗ್‌ ಝಡ್‌ ಪ್ಲಸ್‌ ಅಥವಾ ಹುವಾವೆ ಪಾಕೆಟ್‌ ಎಸ್‌ ಫೋನ್‌ ಬಳಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಅದರೊಂದಿಗೆ ಆ ದೇಶದ ಅಧಿಕೃತ ಪತ್ರಿಕೆ ಎಂದು ಹೇಳಲಾಗುವ ರೊಡಾಂಗ್ ಸಿನ್ಮುನ್ ಈ ಉಡಾವಣೆಯ ಫೋಟೋವನ್ನು ಪ್ರಕಟ ಮಾಡಿದೆ. ಫೋಟೋದಲ್ಲಿ ಕುರ್ಚಿಯಲ್ಲಿ ಕಿಮ್‌ ಜಾಂಗ್‌ ಉನ್‌ ಕುಳಿತಿದ್ದು, ಕಪ್ಪು ಬಣ್ಣದ ಮಡಚಬಹುದಾದ ಫೋನ್‌ಅನ್ನು ತನ್ನ ಮೇಜಿನ ಮುಂಭಾಗದಲ್ಲಿ ಇರಿಸಿಕೊಂಡಿದ್ದ. ಉತ್ತರ ಕೊರಿಯಾದ ಮೇಲೆ ಯುಎನ್ ನಿರ್ಬಂಧಗಳಿಂದಾಗಿ ಕಿಮ್ ಜಾಂಗ್ ಆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಮದು-ರಫ್ತು ಮಾಡಲು ಸಾಧ್ಯವಿಲ್ಲ. ಕಿಮ್ ಜಾಂಗ್ ಉನ್ ಬಳಿ ಸ್ಯಾಮ್‌ಸಂಗ್ ಅಥವಾ ಹುವಾವೇ ಫೋನ್ ಇದೆಯೇ ಎಂಬ ಪ್ರಶ್ನೆಯನ್ನು ದಕ್ಷಿಣ ಕೊರಿಯಾದ ಪತ್ರಿಕೆಯೊಂದು ಎತ್ತಿದೆ. ಹಾಗೇನಾದರೂ ಇದಲ್ಲಿ ಈ ಫೋನ್‌ ಅಲ್ಲಿಗೆ ಹೋಗಿದ್ದು ಹೇಗೆ ಎನ್ನುವುದನ್ನೂ ಪ್ರಶ್ನೆ ಮಾಡಿದೆ.

ಬೈಬಲ್‌ ಇರಿಸಿಕೊಂಡಿದ್ದ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ ನೀಡಿದ ಕಿಮ್ ಜಾಂಗ್‌ ಉನ್‌!

ಅದರೊಂದಿಗೆ ಚೀನಾ ಬೆಂಬಲದಿಂದ ಅಕ್ರಮವಾಗಿ ಉತ್ತರ ಕೊರಿಯಾಗೆ ಸ್ಮಾರ್ಟ್‌ಫೋನ್‌ ಹೋಗುತ್ತಿದೆ. ಕಿಮ್‌ಗೆ ಗ್ಯಾಜೆಟ್‌ಗಳ ಮೇಲೆ ಒಲವು ಹೆಚ್ಚು. ಈ ಹಿಂದೆ ಆತ ಆಪಲ್‌ ಗ್ಯಾಜೆಟ್‌ಗಳಾದ ಐಪ್ಯಾಡ್‌ ಹಾಗೂ ಮ್ಯಾಕ್‌ಬುಕ್‌ಗಳೊಂದಿಗೆ ಅವರು ಕಾಣಿಸಿಕೊಂಡಿದ್ದರು.

ಗರ್ಭಿಣಿ, ಸಲಿಂಗಿಗಳಿಗೆ ನೇಣುಶಿಕ್ಷೆ, ಅಂಗವಿಕಲರಿಗೆ ವಿಷ, ಕಿಮ್‌ ಜಾಂಗ್‌ಗೆ ಕ್ರೌರ್ಯಕ್ಕಿಲ್ಲ ಕೊನೆ!

ಕೆಲ ವರ್ಷಗಳ ಹಿಂದೆ ಕಿಮ್‌ ಜಾಂಗ್‌ ಉನ್‌ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದಾರೆ ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿತ್ತು. ಇದು ಎಲ್ಲಿಯವರೆಗೂ ಹೋಗಿತ್ತೆಂದರೆ ಸ್ವತಃ ಸ್ಯಾಮ್‌ಸಂಗ್‌ ಈ ಸುದ್ದಿಯನ್ನು ನಿರಾಕರಿಸಿತ್ತು. ಉತ್ತರ ಕೊರಿಯಾದ ಸರ್ವಾಧಿಕಾರಿಯೊಂದಿಗೆ ಕಾಣಿಸಿಕೊಂಡಿರುವ ಫೋನ್ ಅವರು ತಯಾರಿಸಿದ ಫೋನ್ ಅಲ್ಲ ಎಂಬುದು 100 ಪ್ರತಿಶತ ಖಚಿತವಾಗಿದೆ ಎಂದು ಕಂಪನಿ ಹೇಳಿದೆ. ಇನ್ನೊಂದೆಡೆ ಎಚ್‌ಟಿಸಿ ಕಂಪನಿ ಕೂಡ ಇದನ್ನು ಒಪ್ಪಲು ನಿರಾಕರಿಸಿದೆ.

click me!