ವಿಚಿತ್ರವೋ ವಿಶೇಷವೋ ಈ ಕುಟುಂಬದಲ್ಲಿರುವವರೆಲ್ಲರೂ ಹುಟ್ಟಿದ್ದು ಒಂದೇ ದಿನ

By Anusha Kb  |  First Published Jul 14, 2023, 1:46 PM IST

ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರ ಇಬ್ಬರ ಹುಟ್ಟುಹಬ್ಬ ಒಂದೇ ದಿನ ಬರಬಹುದು. ಅಥವಾ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವೂ ಮಕ್ಕಳ ಜನ್ಮ ದಿನವೂ ಒಂದೇ ದಿನ ಆಗಿರಬಹುದು.  ಆದರೆ ಇಡೀ ಕುಟುಂಬದವರೆಲ್ಲರ ಜನ್ಮ ದಿನ ಒಂದೇ ದಿನವಾಗಿರಲು ಸಾಧ್ಯನಾ, ಹೌದು ಅಂತಿದೆ  ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ,  


ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರ ಇಬ್ಬರ ಹುಟ್ಟುಹಬ್ಬ ಒಂದೇ ದಿನ ಬರಬಹುದು. ಅಥವಾ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವೂ ಮಕ್ಕಳ ಜನ್ಮ ದಿನವೂ ಒಂದೇ ದಿನ ಆಗಿರಬಹುದು.  ಆದರೆ ಇಡೀ ಕುಟುಂಬದವರೆಲ್ಲರ ಜನ್ಮ ದಿನ ಒಂದೇ ದಿನವಾಗಿರಲು ಸಾಧ್ಯನಾ, ಹೌದು ಅಂತಿದೆ  ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ,  ಪಾಕಿಸ್ತಾನದ ಕುಟುಂಬವೊಂದು ವಿಶೇಷ ವಿಭಿನ್ನವೆನಿಸಿದ ದಾಖಲೆಯನ್ನು ಆಕಸ್ಮಿಕವಾಗಿ ಮಾಡಿದೆ. ಹುಟ್ಟು ಹಾಗೂ ಸಾವು ದೈವ ನಿಶ್ಚಿತ ನಾನು ನಿಶ್ಚಿಯಿಸಿದ ದಿನ ಸಾಯಬಹುದೇನೋ ಆದರೆ ಹುಟ್ಟಲಂತೂ ಸಾಧ್ಯವೇ ಇಲ್ಲ, ಹೀಗಿರುವಾಗ ಇಲೊಂದು ಕುಟುಂಬದಲ್ಲಿರುವ 7 ಮಕ್ಕಳು ಹಾಗೂ ಅಪ್ಪ ಅಮ್ಮ ಎಲ್ಲರೂ ಒಂದೇ ದಿನ ಜನಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 

ಪಾಕಿಸ್ತಾನದ ಲಕ್ರಾನಾದಲ್ಲಿ ಈ ವಿಶೇಷ ಕುಟುಂಬವಿದೆ. ಈ ಕುಟುಂಬದ ಅಮೀರ್ ಹಾಗೂ ಖುದೇಜಾ ದಂಪತಿಯ ವಿವಾಹ ವಾರ್ಷಿಕೋತ್ಸವವೂ ಕೂಡ ಆಗಸ್ಟ್  ಒಂದು ಆಗಿದ್ದು, ಇವರಿಬ್ಬರ ಜನ್ಮ ದಿನವೂ ಆಗಸ್ಟ್ ಒಂದು ಇದರ ಜೊತೆಗೆ ಇವರಿಗೆ ಜನಿಸಿದ ಏಳು ಮಕ್ಕಳ ಜನ್ಮ ದಿನವೂ ಆಗಸ್ಟ್ 1 ಕೇಳೋದಿಕೆ ವಿಚಿತ್ರ ಅನಿಸುತ್ತೆ ಅಲ್ವಾ ಆದ್ರೂ ಇದು ನಿಜ, ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಪ್ರಕಾರ,   ಈ ಕುಟುಂಬದ ಯಜಮಾನ ಅಮೀರ್ ಅಲಿ, ಪತ್ನಿ ಖುದೇಜಾ, 19 ರಿಂದ 30  ವರ್ಷದೊಳಗಿನ ಮಕ್ಕಳೆಲ್ಲರ ಜನ್ಮ ದಿನವೂ ಆಗಸ್ಟ್ ಒಂದು.  ಮೊದಲಿಗೆ ಈ ದಂಪತಿಗೆ ಸಿಂಧು ಎಂಬ ಮಗಳು ಜನಿಸಿದ್ದಾಳೆ. ನಂತರ ಅವಳಿ ಮಕ್ಕಳಾದ ಸ್ವಪ್ನಾ ಹಾಗೂ ಸೌಸಿ,  ಇದಾದ ಬಳಿಕ ಹುಟ್ಟಿದವರು ಕ್ರಮವಾಗಿ ಅಮಿರ್, ಅಂಬರ್‌ ನಂತರ ಅವಳಿ ಗಂಡು ಮಕ್ಕಳಾದ ಅಮ್ಮರ್ ಹಾಗೂ ಅಹ್ಮರ್, ಇವರೆಲ್ಲರ ಬರ್ತ್‌ಡೇ ಒಂದೇ ದಿನವಾಗಿದೆ. ಇದಕ್ಕಿಂತಲೂ ವಿಶೇಷ ಎಂದರೆ ಇವರ ವಿವಾಹ ವಾರ್ಷಿಕೋತ್ಸವವೂ ಅದೇ ದಿನವಾಗಿದೆ. ಅವರು ತಮ್ಮ ಹುಟ್ಟುಹಬ್ಬದ ದಿನದಂದೇ 1991 ರಂದು ಆಗಸ್ಟ್  1 ರಂದು ಜನಿಸಿದ್ದರು. ಇದಾಗಿ ಒಂದು ವರ್ಷದ ನಂತರ ಮದುವೆಯ ವಾರ್ಷಿಕೋತ್ಸವದಂದೇ ಮೊದಲ ಪುತ್ರಿ ಸಿಂಧು ಜನಿಸಿದ್ದಳು. 

Tap to resize

Latest Videos

Hampi G20 summit: ಲಂಬಾಣಿ ಕಸೂತಿಗೆ ಉದ್ದಿಮೆ ರೂಪ: ಪ್ರಹ್ಲಾದ್‌ ಜೋಶಿ

ಇದರ ಜೊತೆ ಒಂದೇ ದಿನ ಜನಿಸಿದ ಒಡಹುಟ್ಟಿದವರು ಎಂಬ ದಾಖಲೆಯೂ ಇವರ ಹೆಸರಿಗೆ ಸೇರ್ಪಡೆಯಾಗಿದೆ.  ಇದಕ್ಕೂ ಮೊದಲು ಅಮೆರಿಕಾದ ಕಮಿನ್ಸ್ ಕುಟುಂಬದ ಹೆಸರಲ್ಲಿ ಈ ರೀತಿಯ ದಾಖಲೆ ಇತ್ತು ಎಂದು ಗಿನ್ನೆಸ್ ಸಂಸ್ಥೆ ಮಾಹಿತಿ ನೀಡಿದೆ. ಈ ಕುಟುಂಬದಲ್ಲಿ ಐವರು ಮಕ್ಕಳಿದ್ದು ಎಲ್ಲರೂ 1952 ರಿಂದ 1966ರ ಮಧ್ಯೆ ಫೆಬ್ರವರಿ 20 ರಂದೇ ಜನಿಸಿದ್ದರು. ಇದರ ನಂತರ ಯಾರೂ ಕೂಡ ಈ ರೀತಿ ಕಾಕಾತಾಳೀಯವಾಗಿ ಒಂದೇ ದಿನ ಜನಿಸಿರಲಿಲ್ಲ, ಆದರೆ ಈಗ ಪಾಕ್‌ನಲ್ಲಿ ಅಂತಹದ್ದೇ ಒಂದು ದಾಖಲೆ ಕುಟುಂಬದಿಂದ ನಿರ್ಮಾಣವಾಗಿದೆ. 

ಅಮೀರ್ ಹಾಗೂ ಖುದೀಜಾ ತಮ್ಮ ಮೊದಲ ಪುತ್ರಿ ಸಿಂಧೂ 1992 ರ ಆಗಸ್ಟ್ ಒಂದರಂದು ಜನಿಸಿದಾಗ  ಅಚ್ಚರಿ ಹಾಗೂ ಬಹಳ ಸಂತಸಗೊಂಡಿದ್ದರು, ಏಕೆಂದರೆ ಅದು ಅವರ ಜನ್ಮದಿನವೂ ಆಗಿತ್ತು. ಜೊತೆಗೆ ಅದು ಅವರ ವಿವಾಹ ವಾರ್ಷಿಕೋತ್ಸವವೂ ಆಗಿತ್ತು. ಇದು ದೇವರ ಆಶೀರ್ವಾದವಷ್ಟೇ ಎಂದು ದಂಪತಿ ಹೇಳಿದ್ದಾರೆ. ಇನ್ನು ಇವರಿಗೆ ಹುಟ್ಟಿರುವ ಏಳು ಮಕ್ಕಳೂ ಕೂಡ ಸಹಜವಾಗಿ ಗರ್ಭಧರಿಸಿ ಸಹಜ ಹೆರಿಗೆಯಲ್ಲಿ ಜನಿಸಿದ ಮಕ್ಕಳಾಗಿದ್ದಾರೆ. 

Rocky ಇಷ್ಟುದ್ಧ ನಾಲಿಗೆನಾ ನಿಂಗೆ : ನಾಯಿ ನಾಲಗೆಗೆ ಸಿಕ್ತು ಗಿನ್ನೆಸ್ ಅವಾರ್ಡ್?

click me!