ಹದಗೆಟ್ಟ ಷರೀಫ್ ಆರೋಗ್ಯ: ಅಮೆರಿಕಕ್ಕೆ ಕೊಂಡೊಯ್ಯಲು ಸಲಹೆ!

By Suvarna NewsFirst Published Dec 10, 2019, 9:20 PM IST
Highlights

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ ಸ್ಥಿತಿ ಗಂಭೀರ| ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿ ಪಾಕ್ ಮಾಜಿ ಪ್ರಧಾನಿ| ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕೊಂಡೊಯ್ಯಲು ವೈದ್ಯರ ಸಲಹೆ| ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಾಜ್ ಷರೀಫ್| ಮೆದುಳು ಸಂಬಂಧಿತ ರೋಗದಿಂದ ಬಳಲುತ್ತಿರುವ ನವಾಜ್ ಷರೀಫ್|

ಲಾಹೋರ್(ಡಿ.10): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ ತೀವ್ರ ಹದಗೆಟ್ಟಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ನವಾಜ್ ಶರೀಫ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯುವ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ಕೂಡ ನೀಡಿದ್ದಾರೆ.

ಪಾಕ್ ಮಾಜಿ ಪ್ರಧಾನಿ ಷರೀಫ್‌ಗೆ ಜೈಲಲ್ಲಿ ಸೇವೆಯೂ ಇಲ್ಲ!

ಪ್ರಸ್ತುತ ಷರೀಷ್ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಯಾವ ಸುಧಾರಣೆಯೂ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.  

ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ವಕ್ತಾರೆ ಮರಿಯಮ್ ಔರಂಗ್’ಜೇಬ್,ಶರೀಷ್ ಅವರನ್ನು ಚಿಕಿತ್ಸೆಗಾಗಿ ಲಂಡನ್’ನಿಂದ ಅಮೆರಿಕಾಗೆ ಕರೆದೊಯ್ಯುವುದೇ ವೈದ್ಯಕೀಯ ತಂಡಕ್ಕೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. 

ನವಾಜ್ ಷರೀಫ್ ಗೆ 10 ವರ್ಷ ಜೈಲು

ವೈದ್ಯಕೀಯ ವರದಿಗಳ ಪ್ರಕಾರ ಷರೀಫ್ ಮೆದುಳಿಗೆ ರಕ್ತ ಪರಿಚನೆ ಮಾಡುವ ಅಪಧಮನಿಗಳಲ್ಲಿ ಶೇ.88ರಷ್ಟು ರಕ್ತ ಹೆಪ್ಪುಗಟ್ಟಿದೆ.

click me!