85 ಲಕ್ಷ ಮೊತ್ತದ ಬಾಳೆಹಣ್ಣು ನಿಮಿಷದಲ್ಲಿ ಸ್ವಾಹಾ ಮಾಡಿದ!

By Web Desk  |  First Published Dec 8, 2019, 2:29 PM IST

85 ಲಕ್ಷ ಬೆಲೆಬಾಳುವ ಬಾಳೆಹಣ್ಣು ಒಂದೇ ನಿಮಿಷದಲ್ಲಿ ತಿಂದ ಭೂಪ| ಆರ್ಟ್ ಗ್ಯಾಕಲರಿಗೆ ಬಂದವರೆಲ್ಲಾ ಶಾಕ್| ಏನಿದು ವಿವಾದ? ಇಲ್ಲಿದೆ ವಿವರ


ರೋಮ್[ಡಿ.08]: ಇಟಲಿಯ ಅತ್ಯಂತ ಫೇಮಸ್ ಆರ್ಟಿಸ್ಟ್ ಮ್ಯಾರಿಜಿಯೋ ಬಾಳೆಹಣ್ಣೊಂದನ್ನು ಟೇಪ್ ಮೂಲಕ ಗೊಡೆಗೆ ಅಂಡಿಸಿದ್ದರು. ಇದೊಂದು ಕಲಾಕೃತಿಯಾಗಿದ್ದು, ಇದರ ಬೆಲೆ ಬರೋಬ್ಬರಿ 85 ಲಕ್ಷ ರೂಪಾಯಿ ನಿಗದಿಯಾಗಿತ್ತು. ಫ್ರಾನ್ಸ್ ನ ವ್ಯಕ್ತಿಯೊಬ್ಬ ಇದನ್ನು ಖರೀದಿಸಿದ್ದು, ವಿಶ್ವದ ಮೂಲೆ ಮೂಲೆಯಿಂದ ಜನರು ಇದನ್ನು ನೋಡಲು ಬರುತ್ತಿದ್ದರು. ಆದರೆ ಈ ನಡುವೆ ಕಲಾಕೃತಿಗಳನ್ನು ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬ ಅಂಟಿಸಿಟ್ಟಿದ್ದ ಬಾಳೆಹಣ್ಣನ್ನು ತೆಗೆದು ತಿಂದಿದ್ದಾನೆ. 

ಹೌದು ಈ ಕಲಾಕೃತಿ 85 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಕಲಾಕೃತಿ ವೀಕ್ಷಿಸಲು David Datuna ಹೆಸರಿನ ಅಮೆರಿಕನ್ ಆರ್ಟಿಸ್ಟ್ ಈ ಘಟನೆಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಕಲಾಕೃತಿಯನ್ನು 'ಕಾಮಿಡಿಯನ್' ಎಂದಿರುವ ಅವರು ಬಾಳೆಹಣ್ಣನ್ನು ತೆಗೆದು ತಿಂದಿದ್ದಾರೆ.

 
 
 
 
 
 
 
 
 
 
 
 
 

Tap to resize

Latest Videos

undefined

“Hungry Artist” Art performance by me 🙂 I love Maurizio Cattelan artwork and I really love this installation It’s very delicious 🙂

A post shared by David Datuna (@david_datuna) on Dec 7, 2019 at 11:49am PST

ಗ್ಯಾಲರಿಯ ಡೈರೆಕ್ಟರ್ Lucien Terras ಈ ಕುರಿತು ಪ್ರತಿಕ್ರಿಯಿಸುತ್ತಾ 'ಈ ಕೃತ್ಯದಿಂದ ಈ ಕಲಾಕೃತಿ ಹಾಳಾಗಿಲ್ಲ. ಬಾಳೆಹಣ್ಣು ಇದರ ಪ್ರಮುಖ ಆಕರ್ಷಣೆಯಾಗಿತ್ತು. ಡೇವಿಡ್ ಬಾಳೆಹಣ್ಣು ತಿಂದ 15 ನಿಮಿಷದೊಳಗೆ ಬೇರೆ ಬಾಳೆಹಣ್ಣು ತಂದಿಟ್ಟಿದ್ದೇವೆ' ಎಂದಿದ್ದಾರೆ. ಅದೇನಿದ್ದರೂ ಡೇವಿಡ್ 85 ಲಕ್ಷ ಬೆಲೆಬಾಳುವ ಕಲಾಕೃತಿಯಲ್ಲಿದ್ದ ಬಾಳೆಹಣ್ಣು ತಿನ್ನುವುದನ್ನು ನೋಡಿ ಅಲ್ಲಿಗಾಗಮಿಸಿದ್ದ ಜನರೆಲ್ಲರೂ ಅಚ್ಚರಿಗಿಡಾಗಿದ್ದರು.

 
 
 
 
 
 
 
 
 
 
 
 
 

🍌 Maurizio Cattelan's new sculpture 'Comedian' at Art Basel Miami marks the artist's first major debut at an art fair in over 15 years! Comprised of a real banana affixed to the wall with a piece of duct tape, this new work is no different than Cattelan's hyper-realistic sculptures lampooning popular culture and offer a wry commentary on society, power, and authority. In the same vein as Cattelan's America (2016), this piece offers insight into how we assign worth and what kind of objects we value. The idea of this work came to the artist’s mind a year ago. Back then, Cattelan was thinking of a sculpture that was shaped like a banana. Every time he traveled, he brought a banana with him and hung it in his hotel room to find inspiration. He made several models: first in resin, then in bronze and in painted bronze for finally coming back to the initial idea of a real banana. Discover it on our booth D24! — Art Basel Miami Beach 📍 Perrotin Booth D24 📆 December 5 – 8, 2019 — #MaurizioCattelan #ArtBaselMiami #ArtBaselMiamiBeach #ArtBasel #Perrotin — Courtesy Maurizio Cattelan.

A post shared by Perrotin Gallery (@galerieperrotin) on Dec 4, 2019 at 5:44am PST

ಈ ಬಾಳೆಹಣ್ಣು ಗ್ಲೋಬಲ್ ಬ್ಯುಸಿನೆಸ್ ಹಾಗೂ ಹಾಸ್ಯದ ಪ್ರತೀಕವಾಗಿತ್ತು. ಇನ್ನು ಈ ಕಲಾಕೃತಿ ತಯಾರಿಸಿದ ಮ್ಯಾರಿಜಿಯೋ ಕ್ಯಾಟೆಲಿನ್, ಈ ಹಿಂದೆ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಸೀಟ್ ನಿರ್ಮಿಸುವ ಮೂಲಕ ಸದ್ದು ಮಾಡಿದ್ದರು.

ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!