ಮಗನಿಗಾಗಿ ವಿಡಿಯೋ ಗೇಮ್ ಆರ್ಡರ್ ಮಾಡಿದ ತಂದೆ| ಡೆಲಿವರಿಯಾದ ಪ್ಯಾಕ್ ನೋಡಿದ್ರೆ ಇತ್ತು ಕಾಂಡೋಂ| ಇನ್ನೂ ಹಲವರಿಗೆ ಚಿತ್ರ ವಿಚಿತ್ರ ವಸ್ತು ಡೆಲಿವರಿ ಮಾಡಿದ ಅಮೆಜಾನ್
ಲಂಡನ್[ಡಿ.09]: ಇಂಗ್ಲೆಂಟ್ ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಹಲವಾರು ಮಂದಿಗೆ ತಾವು ಆರ್ಡರ್ ಮಾಡಿದ ವಸ್ತುವನ್ನು ಹೊರತುಪಡಿಸಿ ಚಿತ್ರ ವಿಚಿತ್ರ ವಸ್ತುಗಳು ಡೆಲಿವರಿಯಾಗಿವೆ. ಕೆಲವರಿಗಂತೂ ಕಾಂಡೋಂ, ಏರ್ ಫ್ರೆಶ್ ನರ್ ಹಾಗೂ ಬೆಡ್ ಶೀಟ್ ಹೀಗೆ ಏನೇನೋ ಕಂಪೆನಿ ಕಳುಹಿಸಿ ಕೊಟ್ಟಿದೆ.
Jake Lawrence ಎಂಬಾತ ತನ್ನ ಮಗನಿಗಾಗಿ ವಿಡಿಯೋ ಗೇಮ್ ಆರ್ಡರ್ ಮಾಡಿದ್ದ. ಆದರೆ ಕಂಪೆನಿ ಮಾತ್ರ ಆತನಿಗೆ ಕಾಂಡೋಂ ಕಳುಹಿಸಿಕೊಟ್ಟಿದೆ. ಇದು ಕೇವಲ ಜ್ಯಾಕ್ ಎದುರಿಸಿದ ಸಮಸ್ಯೆಯಲ್ಲ. Viki ಹೆಸರಿನ ವ್ಯಕ್ತಿಯೂ ಗೇಮ್ ಕಂಸೋಲ್ ಆರ್ಡರ್ ಮಾಡಿದ್ದ ಆದರೆ ಆತನಿಗೆ ಕಂಪನಿಯು ಬೆಡ್ ಶೀಟ್ ಕಳುಹಿಸಿಕೊಟ್ಟಿದೆ.
ತಮಾಷೆಯೇ ಅಲ್ಲರೀ... ಲೈಂಗಿಕ ಸುಖ ಜೀವನ ನಡೆಸೋದ್ರಲ್ಲಿ ಕೃಷಿಕರೇ ನಂಬರ್ 1 ಅಂತೆ!
Steve Handy ಎನ್ನುವಾತ ಆಫರ್ ನೋಡಿ ಸ್ವಿಚ್ ಒಂದನ್ನು ಆರ್ಡರ್ ಮಾಡಿದ್ದ ಇದಕ್ಕಾಗಿ ಅವರು ಬರೋಬ್ಬರಿ 300 ಯೂರೋ ಪಾವತಿಸಿದ್ದರು. ಆದರೆ ಡೆಲಿವರಿಯಾದಾಗ ಮಾತ್ರ 10 ಯೂರೋ ಬೆಲೆ ಬಾಳುವ ಲ್ಯಾಪ್ ಟಾಪ್ ಫ್ಯಾನ್ ಕೂಲರ್ ಸಿಕ್ಕಿದೆ.
ಕ್ಷಮೆ ಯಾಚಿಸಿದ ಅಮೆಜಾನ್
ಆನ್ ಲೈನ್ ಶಾಪಿಂಗ್ ಸಂಸ್ಥೆ ಅಮೆಜಾನ್ ಈ ಎಡವಟ್ಟಿಗೆ ಕ್ಷಮೆ ಯಾಚಿಸಿದೆ. ತಾಂತ್ರಿಕ ಕಾರಣದಿಂದಾಗಿ ಈ ಸಮಸ್ಯೆಯಾಗಿದೆ ಎಂದಿದೆ. ಸುಮಾರು 10 ರಿಂದ 12 ಮಂದಿ ಈ ಸಮಸ್ಯೆ ಎದುರಿಸಿದ್ದಾರೆ.
ಕಾರಿನ ಪ್ರಥಮ ಚಿಕಿತ್ಸೆ ಬಾಕ್ಸ್‌ನಲ್ಲಿ ಕಾಂಡೋಮ್ ಇಲ್ದಿದ್ರೆ ದಂಡ!