10 ವರ್ಷದ ಕಂದನ ಕೈಗೆ ಟ್ಯಾಟೂ... ಅಮ್ಮ ಹಾಗೂ ಟ್ಯಾಟೂ ಕಲಾವಿದ ಅಂದರ್

Published : Nov 16, 2022, 10:13 PM IST
10 ವರ್ಷದ ಕಂದನ ಕೈಗೆ ಟ್ಯಾಟೂ... ಅಮ್ಮ ಹಾಗೂ ಟ್ಯಾಟೂ ಕಲಾವಿದ ಅಂದರ್

ಸಾರಾಂಶ

ಪುಟ್ಟ ಬಾಲಕನೋರ್ವನಿಗೆ ಯಾರೋ ದೊಡ್ಡವರ ಕೈ ನೋಡಿ ತನಗೂ ಟ್ಯಾಟೂ ಹಾಕಿಸಿಕೊಳ್ಳುವ ಆಸೆ ಆಗಿದೆ. ಟ್ಯಾಟೂ ಬೇಕೆಂದು ಹಠ ಹಿಡಿದ 10 ವರ್ಷದ ಮಗನಿಗೆ ಬುದ್ದಿ ಹೇಳಿ ಸುಮ್ಮನಿರಿಸುವ ಬದಲು ತಾಯಿಯೊಬ್ಬಳು ಮಗನಿಗೆ ಟ್ಯಾಟೂ ಹಾಕಿಸಿಕೊಳ್ಳಲು ಅನುಮತಿ ನೀಡಿದ್ದು, ಇದರಿಂದ ಈಗ ಆಕೆ ಜೈಲುಪಾಲಾಗುವಂತಾಗಿದೆ.

ನ್ಯೂಯಾರ್ಕ್‌: ಟ್ಯಾಟೂ ಹಾಕಿಸಿಕೊಳ್ಳುವುದು ಈಗ ಸಣ್ಣ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಯುವ ಸಮೂಹದ ದೊಡ್ಡ ಕ್ರೇಜ್, ಕಾಲೇಜು ಹೋಗುವ ಹುಡುಗ ಹುಡುಗಿ ಕೈಯಲ್ಲಿ ಟ್ಯಾಟೂ ಇಲ್ಲ ಎಂದಾದರೆ ಅವರು ಈಗಿನ ಟ್ರೆಂಡ್‌ನಲ್ಲಿ ಇಲ್ಲ ಎಂದು ನಿರ್ಧರಿಸಿ ಬಿಡುವಷ್ಟು ಟ್ಯಾಟೂ ಕ್ರೇಜ್ ಇಂದಿನ ಯುವ ಸಮೂಹದಲ್ಲಿದೆ. ದೊಡ್ಡವರ ಕೈ ಕಾಲುಗಳಲ್ಲಿ ಟ್ಯಾಟೂ ನೋಡಿದ ಪುಟ್ಟ ಮಕ್ಕಳು ಕೂಡ ನಂಗೆ ಟ್ಯಾಟೂ ಬೇಕು ಎಂದು ತೊದಲು ನುಡಿಗಳಿಂದಲೇ ಬೇಡಿಕೆ ಇರಿಸಲು ಶುರು ಮಾಡಿದ್ದಾರೆ. ಅದಕ್ಕೆ ಎಷ್ಟು ವೆಚ್ಚವಾದರೂ ಪರವಾಗಿಲ್ಲ, ಕೈಯಲ್ಲಿ ದುಡ್ಡಿಲ್ಲದಿದ್ದರೂ ಪರವಾಗಿಲ್ಲ. ಕೈಯಲ್ಲೊಂದು ಟ್ಯಾಟೂ ಮಾತ್ರ ಬೇಕೆ ಬೇಕು ಎಂದು ಕಾಲೇಜು ತರುಣರು ದುಡ್ಡಿಗಾಗಿ ಪೋಷಕರನ್ನು ಪೀಡಿಸುತ್ತಾರೆ. ಇದು ಯುವ ಪೀಳಿಗೆಯ ಟ್ಯಾಟೂ ಕ್ರೇಜ್.

ಹಾಗೆಯೇ ಪುಟ್ಟ ಬಾಲಕನೋರ್ವನಿಗೆ ಯಾರೋ ದೊಡ್ಡವರ ಕೈ ನೋಡಿ ತನಗೂ ಟ್ಯಾಟೂ ಹಾಕಿಸಿಕೊಳ್ಳುವ ಆಸೆ ಆಗಿದೆ. ಟ್ಯಾಟೂ ಬೇಕೆಂದು ಹಠ ಹಿಡಿದ 10 ವರ್ಷದ ಮಗನಿಗೆ ಬುದ್ದಿ ಹೇಳಿ ಸುಮ್ಮನಿರಿಸುವ ಬದಲು ತಾಯಿಯೊಬ್ಬಳು ಮಗನಿಗೆ ಟ್ಯಾಟೂ ಹಾಕಿಸಿಕೊಳ್ಳಲು ಅನುಮತಿ ನೀಡಿದ್ದು, ಇದರಿಂದ ಈಗ ಆಕೆ ಜೈಲುಪಾಲಾಗುವಂತಾಗಿದೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದೆ. ಹೀಗೆ ಟ್ಯಾಟೂ ಹಾಕಿಸಿಕೊಳ್ಳಲು ಅನುಮತಿ ನೀಡಿ ಬಂಧನಕ್ಕೊಳಗಾದ ತಾಯಿಯನ್ನು ಹೈಲ್ಯಾಂಡ್‌ನ ನಿವಾಸಿ ಕ್ರಿಸ್ಟಲ್ ಥಾಮಸ್ (Crystal Thomas) ಎಂದು ಗುರುತಿಸಲಾಗಿದೆ. 

ಕೈಕೊಟ್ಟ ಬಾಯ್‌ಫ್ರೆಂಡ್‌ : ಮುಖದ ಮೇಲೆ ಟ್ಯಾಟೋ ಹಾಕಿಸಿಕೊಂಡ ಯುವತಿ

ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ವಯಸ್ಸಿನ ಮಿತಿ ಇದೆ. ಪುಟ್ಟ ಮಕ್ಕಳು ಟ್ಯಾಟೂ ಹಾಕಿಸಿಕೊಳ್ಳುವಂತಿಲ್ಲ. ಅಲ್ಲದೇ ಇದು ನೋವನ್ನು ಕೂಡ ಉಂಟು ಮಾಡುತ್ತದೆ. ಹಲವು ದಿನಗಳ ಕಾಲ ಈ ನೋವು ಇರುತ್ತದೆ. ಹಾಗೆಯೇ ಇಲ್ಲಿ ಟ್ಯಾಟೂ ಹಾಕಿಸಿಕೊಂಡ ಪುಟ್ಟ ಬಾಲಕನಿಗೆ ಶಾಲೆಯಲ್ಲಿ ಅದು ನೋಯಲು ಆರಂಭಿಸಿದೆ. ಈ ವೇಳೆ ಬಾಲಕ ಶಾಲೆಯಲ್ಲಿ ಶಿಕ್ಷಕಿ ಬಳಿ ಟ್ಯಾಟೂ ಹಾಕಿದ ಜಾಗಕ್ಕೆ ಹಚ್ಚಲು ವ್ಯಾಸ್‌ಲೀನ್ ನೀಡುವಂತೆ ಕೇಳಿದ್ದಾನೆ. ಇದರಿಂದ ಪುಟ್ಟ ಬಾಲಕ ಟ್ಯಾಟೂ ಹಾಕಿಸಿಕೊಂಡಿರುವುದು ಶಾಲಾಡಳಿತದ ಗಮನಕ್ಕೆ ಬಂದಿದೆ. ಮಗುವಿನ ಕೈ ತೋಳಿನ ಮುಂಭಾಗದಲ್ಲಿ ಇಂಗ್ಲೀಷ್‌ನ ದೊಡ್ಡ ಅಕ್ಷರಗಳಲ್ಲಿ ಆತನ ಹೆಸರನ್ನು ಟ್ಯಾಟೂ ಹಾಕಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಲೆಫ್ಟ್ ಹೋ ಅಲ್ಲಲ್ಲಾ ರೈಟ್: ಹೀಗೇ ಹೇಳಿ ನೀವೂ ಕ್ಯಾಬ್ ಡ್ರೈವರ್ ದಾರಿ ತಪ್ಪಿಸಿದ್ದೀರಾ?

ಈ ಹಿನ್ನೆಲೆಯಲ್ಲಿ ಬಾಲಕನ 30 ವರ್ಷದ ತಾಯಿ ಹಾಗೂ ಬಾಲಕನ ಪಕ್ಕದ ಮನೆಯ ನಿವಾಸಿ ಆಗಿರುವ ಟ್ಯಾಟೂ ಕಲಾವಿದ ಆಸ್ಟಿನ್ ಸ್ಮಿತ್ (Austin Smith) ಎಂಬಾತನನ್ನು ಕೂಡ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ತಾಯಿಯ ವಿರುದ್ಧ ಮಗನ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ನಿರ್ಧಾರವನ್ನು ಕೈಗೊಂಡ ಆರೋಪವನ್ನು ಹೊರಿಸಿ ಬಂಧಿಸಲಾಗಿತ್ತು. ಬಳಿಕ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ. ನಂತರ ಮಾತನಾಡಿದ ತಾಯಿ (Mother) ಯಾವ ಮಕ್ಕಳು ಕೂಡ ಟ್ಯಾಟೂ ಹಾಕಿಸಿಕೊಳ್ಳಬಾರದು, ನಾನು ಇದು ತಾತ್ಕಾಲಿಕ ಟ್ಯಾಟೂ ಎಂದು ಭಾವಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ. 

BBK9 ಅಮೂಲ್ಯ ಗೌಡ ಕೈಯಲ್ಲಿದೆ 3 ಇರುವೆ ಟ್ಯಾಟೂ; ರೂಪೇಶ್ ಶೆಟ್ಟಿ ಶಾಕಿಂಗ್ ರಿಯಾಕ್ಷನ್

ಅದರೂ ಅಮೆರಿಕಾದ ಎಲ್ಲಾ ರಾಜ್ಯಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದೇನು ಅಪರಾಧವಲ್ಲ. ಮಕ್ಕಳಿಗೆ ಬೇಕಿರುವುದು ಅಲ್ಲಿ ಪೋಷಕರ ಒಪ್ಪಿಗೆ ಮಾತ್ರ. ಆದರೆ ನ್ಯೂಯಾರ್ಕ್‌ನಲ್ಲಿ ಮಾತ್ರ ಟ್ಯಾಟೂ ಹಾಕಿಸಿಕೊಳ್ಳಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ನ್ಯಾಯಾಲಯದಲ್ಲಿ(court) ವಿಚಾರಣೆ (hearing) ವೇಳೆ ಮಹಿಳೆಯೂ ತಪ್ಪು ತಿಳುವಳಿಕೆಯಿಂದ ಈ ಘಟನೆ ಸಂಭವಿಸಿದ್ದು, ಟ್ಯಾಟೂ ಹಾಕಲು ವಿಧಿಸಲಾದ ವಯಸ್ಸಿನ ನಿರ್ಬಂಧಗಳನ್ನು ಬೆಂಬಲಿಸುವುದಾಗಿ ಹೇಳಿದರು. ಇನ್ನು ಮಗುವಿಗೆ ಟ್ಯಾಟೂ ಹಾಕಿದ ಕಲಾವಿದ ಕೂಡ ತನ್ನ ನಿರ್ಧಾರಕ್ಕೆ ವಿಷಾದಿಸುವುದಾಗಿ ತಿಳಿಸಿದ್ದಾನೆ. ಒಟ್ಟಿನಲ್ಲಿ ಮಗನ ಆಸೆ ಈಡೇರಿಸಲು ಹೋಗಿ ಅಮ್ಮ ಕಂಬಿ ಎಣಿಸುವುದು ಸ್ವಲ್ಪದರಲ್ಲಿ ತಪ್ಪಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ