ಸಾಕುಪ್ರಾಣಿಗಳು ಮನುಷ್ಯರೊಂದಿಗೆ ಬಹಳ ಆಪ್ತವಾಗಿರುತ್ತವೆ. ಮನೆಯವರ ನೋವಿಗೆ ಪ್ರಾಣಿಗಳು ಸ್ಪಂದಿಸುತ್ತವೆ. ಕೆಲ ದಿನಗಳ ಹಿಂದೆ ಭಜನೆ ಹಾಡಿಗೆ ಹಸುವೊಂದು ತಲೆಯಾಡಿಸಿ ನರ್ತಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈಗ ಬೆಕ್ಕೊಂದು ತನ್ನ ಮಾಲೀಕನ ಅಳುವಿಗೆ ಸ್ಪಂದಿಸುತ್ತಿದೆ. ಬೆಕ್ಕೊಂದು ಅಳುತ್ತಿರುವ ಮಾಲೀಕನನ್ನು ಸಮಾಧಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ.
ಈ ವಿಡಿಯೋವನ್ನು Buitengebieden ಎಂಬ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಟ್ವಿಟ್ಟರ್‌ನ Buitengebieden ಖಾತೆಯಲ್ಲಿ ಯಾವಾಗಲೂ ಪ್ರಾಣಿ ಪಕ್ಷಿಗಳ ಮುದ್ದಾದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡಲಾಗುತ್ತಿರುತ್ತದೆ. ಅದೇ ರೀತಿ ಈಗ ವಿಡಿಯೋದಲ್ಲಿ ಕಾಣಿಸುವಂತೆ ಬೆಕ್ಕೊಂದು(Cat) ತನ್ನ ಮಾಲೀಕ(Owner) ಅಳುವುದನ್ನು ಗಮನಿಸಿದೆ. ಬಳಿಕ ಆತನ ಬಳಿ ಹೋಗಿ ಆತನ ಮುಖದ ಮೇಲೆ ಕೈ ಇರಿಸಿ ಅಳಬೇಡ ನಿನಗೆ ನಾನಿರುವೆ ಎಂಬಂತೆ ಸಂತೈಸಿದೆ. ಅಲ್ಲದೇ ಆತನ ಎದೆಯ ಮೇಲೆ ಹೋಗಿ ಮಲಗಿಕೊಂಡಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ(Twitter) ಎರಡು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 1700 ಕ್ಕೂ ಹೆಚ್ಚು ಜನ ರಿಟ್ವಿಟ್ ಮಾಡಿದ್ದು, ಜೊತೆಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಕೆಲವರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈ ವಿಡಿಯೋ ತುಂಬಾ ಮುದ್ದಾಗಿದೆ. ನನಗೆ ದುಃಖವಾದಾಗಲೂ ನಾನು ಹೀಗೆ ನನ್ನ ಬೆಕ್ಕಿನೊಂದಿಗೆ ಸಮಯ ಕಳೆಯುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬೆಕ್ಕಿನಂತೆ ಮನುಷ್ಯರು ಕೂಡ ಭಾವನೆಗಳಿಗೆ (Feelings) ಸ್ಪಂದಿಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಪ್ರಾಣಿಗಳಿಂದ ಸಂತೈಸಿಕೊಳ್ಳುವುದಕ್ಕಿಂತ ಸಿಹಿಯಾದ ಭಾವ ಬೇರೆ ಏನಿದೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.
ಮನುಷ್ಯರಿಗಿಂತ(Human) ಪ್ರಾಣಿಗಳೇ ಹೆಚ್ಚಾಗಿ ತನ್ನ ಪ್ರೀತಿಯ (Love) ಮಾಲೀಕನ ಬಗ್ಗೆ ಅತೀಯಾದ ಕಾಳಜಿ ತೋರುತ್ತವೆ. ಮನುಷ್ಯನ ನೋವಿಗೆ ಸ್ಪಂದಿಸುತ್ತವೆ. ಅದರಲ್ಲೂ ಶ್ವಾನಗಳಂತು ಮನುಷ್ಯನ ಅತ್ಯಾಪ್ತ ಗೆಳೆಯರಾಗಿರುತ್ತಾರೆ. ದುಃಖದಲ್ಲಿರುವ ಮಾಲೀಕನ ಹಿಂದೆ ಮುಂದೆ ಸುತ್ತುತ್ತಾ ಆತನ ಬೇಸರ ಕಳೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತವೆ. ಶ್ವಾನಗಳ ಒಡನಾಟದಿಂದ ಮನುಷ್ಯರ ಖಿನ್ನತೆ, ಮಾನಸಿಕ ಒತ್ತಡ (Mental Pressure) ದೂರಾಗುತ್ತವೆ ಎಂಬುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ.
ಸ್ಮಾರ್ಟ್ ಕ್ಯಾಟ್: ಹೊಂಡಕ್ಕೆ ಬಿದ್ದ ಕೀಯನ್ನು ಸಾಹಸದಿಂದ ತೆಗೆದ ಮೀಯಾಂವ್
ಮಾಲೀಕನ ಹುಡುಕಿಕೊಟ್ಟ ಸಾಕು ನಾಯಿ ಟಾಮಿ
ಕೆಲ ದಿನಗಳ ಹಿಂದೆ ರಾಜ್ಯದ ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಶ್ವಾನವೊಂದು ತನ್ನ ಮಾಲೀಕನ ಜೀವ ರಕ್ಷಿಸಿತ್ತು. ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ತಲೆ ಸುತ್ತು ಬಂದು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯಿಂದ ಆತ ಇರುವ ಜಾಗ ಪತ್ತೆಯಾಗಿತ್ತು. ಹೊಸನಗರ ತಾಲೂಕಿನ ಸೂಡೂರಿನಲ್ಲಿ ಈ ಘಟನೆ ನಡೆದಿತ್ತು. ಸೂಡೂರಿನ ಶೇಖರಪ್ಪ ಎಂಬವರು ಆಯನೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದಂದು ಬೆಳಗ್ಗೆ ಸುಮಾರು 6 ಗಂಟೆಗೆ ಕಟ್ಟಿಗೆ ತರೋದಿಕ್ಕೆ ಕಾಡಿಗೆ ಹೋದ ಅವರು 10 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬದವರು ಊರಿನ ಒಂದಿಷ್ಟು ಜನರಿಗೆ ವಿಚಾರ ತಿಳಿಸಿದ್ದಾರೆ.
ಕಣ್ಣಿಗೆ ಸೌತೆಕಾಯಿ ಪೀಸು, ಕೂಲ್ ಕೂಲ್ ಮಾಸ್ಕ್... ಈ ಮಾರ್ಜಾಲದ ಶೋಕಿ ನೋಡಿ...
ಊರಿನವರು ಶೇಖರಪ್ಪ ಅವರನ್ನು ಹುಡುಕಲು ಕಾಡಿಗೆ ಹೋಗಿದ್ದಾರೆ. ಕಾಡಿನಲ್ಲಿ ಎಷ್ಟು ಹುಡುಕಿದರು ಶೇಖರಪ್ಪ ಅವರ ಸುಳಿವು ಸಿಗಲೇ ಇಲ್ಲ. ಆದರೆ, ಈತ ಸಾಕಿದ್ದ ನಾಯಿಯೊಂದು ಶೇಖರಪ್ಪ ಇರುವ ಜಾಗ ಪತ್ತೆ ಹಚ್ಚಿದೆ. ಶ್ವಾನವು ಸುಮಾರು 4 ಗಂಟೆ ಸುಮಾರಿಗೆ ಶೇಖರಪ್ಪ ಇರುವ ಜಾಗಕ್ಕೆ ಊರಿನವರನ್ನು ಕರೆ ತಂದಿದೆ. ಅಸ್ವಸ್ಥಗೊಂಡಿದ್ದ ಶೇಖರಪ್ಪ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ನಾಯಿ ಪ್ರತಿನಿತ್ಯ ಮಾಲೀಕನ ಜೊತೆಯಲ್ಲಿ ಹೋಗುತ್ತಿತ್ತಂತೆ. ಹಾಗಾಗಿಯೇ, ಶೇಖರಪ್ಪ ಅವರನ್ನು ಕಾಡಿನಲ್ಲಿ ಪತ್ತೆ ಮಾಡಿದೆ ಎನ್ನಲಾಗಿದೆ.
ಕಲ್ಲಿನ ಪ್ರತಿಮೆಯ ಮಡಿಲಲ್ಲಿ ಮಲಗಿ ಆಟವಾಡ್ತಿರುವ ಮಾರ್ಜಾಲ : ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ