ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ, ಅಮೆರಿಕಾದ ಉದ್ಯಮಿ, ದಿವಂಗತ ಸ್ಟೀವ್ ಜಾಬ್ ಅವರು ಧರಿಸಿದ್ದ ಚಪ್ಪಲಿಯೊಂದು ಬರೋಬ್ಬರಿ 1.7 ಕೋಟಿ ಮೊತ್ತಕ್ಕೆ ಹರಾಜಾಗಿದೆ. ಆದರೆ ಈ ಚಪ್ಪಲಿಯನ್ನು ಖರೀದಿಸಿದ ವ್ಯಕ್ತಿಯ ಗುರುತನ್ನು ಹರಾಜು ಸಂಸ್ಥೆ ಬಹಿರಂಗಪಡಿಸಿಲ್ಲ.
ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯವರಿಗೆ ದೊರಕಿದ್ದ ಗಿಫ್ಟ್‌ಗಳು ಅವರು ಧರಿಸಿದ್ದ ಕೆಲ ಧಿರಿಸುಗಳು ಭಾರಿ ಮೊತ್ತಕ್ಕೆ ಹರಾಜಾಗಿದ್ದವು. ಕೇಂದ್ರ ಸರ್ಕಾರ ಇದಕ್ಕಾಗಿ ವೆಬ್‌ಸೈಟ್ ಸ್ಥಾಪಿಸಿ ಆನ್ಲೈನ್ ಮೂಲಕವೇ ಹರಾಜು ಹಾಕಿತ್ತು. ಅನೇಕರು ಭಾರಿ ಮೊತ್ತ ನೀಡಿ ಆ ಉಡುಗೊರೆಗಳನ್ನು ಖರೀದಿಸಿದ್ದರು. ಹಾಗೆಯೇ ವಿಶ್ವದ ಕೆಲ ಗಣ್ಯ ಐತಿಹಾಸಿಕ ನಾಯಕರ, ಪ್ರಭಾವಿಗಳು ಬಳಸಿದ ವಸ್ತುಗಳನ್ನು , ಫೋಟೋಗಳನ್ನು ಅವರ ಅಭಿಮಾನಿಗಳು ಭಾರಿ ಮೊತ್ತಕ್ಕೆ ಖರೀದಿಸುತ್ತಾರೆ. ಆದರೆ ಗಣ್ಯರು ಧರಿಸಿದ್ದ ಚಪ್ಪಲಿಯನ್ನು ಖರೀದಿಸುವುದು ತೀರಾ ವಿರಳ. ಆದರೂ ಈಗ ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ, ಅಮೆರಿಕಾದ ಉದ್ಯಮಿ, ದಿವಂಗತ ಸ್ಟೀವ್ ಜಾಬ್ ಅವರು ಧರಿಸಿದ್ದ ಚಪ್ಪಲಿಯೊಂದು ಬರೋಬ್ಬರಿ 1.7 ಕೋಟಿ ಮೊತ್ತಕ್ಕೆ ಹರಾಜಾಗಿದೆ. ಆದರೆ ಈ ಚಪ್ಪಲಿಯನ್ನು ಖರೀದಿಸಿದ ವ್ಯಕ್ತಿಯ ಗುರುತನ್ನು ಹರಾಜು ಸಂಸ್ಥೆ ಬಹಿರಂಗಪಡಿಸಿಲ್ಲ.
ಅಮೆರಿಕಾದ(America) ಕ್ಯಾಲಿಫೋರ್ನಿಯಾದಲ್ಲಿರುವ (California) ಜೂಲಿಯನ್ ಹರಾಜು ಸಂಸ್ಥೆ ಈ ಸ್ಟೀವ್ ಅವರ ಈ ಚಪ್ಪಲ್‌ನ್ನು ಹರಾಜು (Auctions) ಹಾಕಿದೆ. ಸಾಮಾನ್ಯವಾಗಿ ಕಾಲುಗಳಿಗೆ ಧರಿಸುವ ಚಪ್ಪಲುಗಳಿಗೆ ಯಾರು ಕೋಟ್ಯಾಂತರ ರೂ ವ್ಯಯಿಸುವುದಿಲ್ಲ. ಹೆಚ್ಚೆಂದರೆ ಸಾಮಾನ್ಯರ ಜನರು ಹೆಚ್ಚೆಂದರೆ ಸಾವಿರ ರೂ. ವ್ಯಯಿಸಬಹುದು. ಶ್ರೀಮಂತರೆನಿದರೆ ಹತ್ತು ಸಾವಿರದಿಂದ 50 ಸಾವಿರದವರೆಗೆ ವೆಚ್ಚ ಮಾಡಬಹುದೇನೋ.. ಇನ್ನು ಸಿನಿಮಾ ನಟಿಯರು ಸೆಲಬ್ರಿಟಿಗಳಾದಲ್ಲಿ ಅದನ್ನು ಊಹೆ ಮಾಡುವಂತಿಲ್ಲ. ಚಪ್ಪಲಿ ಶೂ ಅಂತ ಲಕ್ಷಾಂತರ ರೂ ವ್ಯಯಿಸಬಹುದು. ಆದರೆ ಕೋಟಿಗಿಂತ ಅಧಿಕ ಮೊತ್ತ ನೀಡುವವರು ತೀರಾ ವಿರಳ. ಆದರೂ ಇಲ್ಲಿ ಯಾರೋ ಒಬ್ಬರು ಸ್ಟೀವ್ ಜಾಬ್ ಅವರು ಹಿಂದೊಮ್ಮೆ ಧರಿಸಿದ್ದ ಚಪ್ಪಲಿಯನ್ನು 1.7 ಕೋಟಿ ನೀಡಿ ಖರೀದಿಸಿದ್ದಾರೆ.
undefined
15 ವರ್ಷದ ಹಿಂದೆ ಲಾಂಚ್ ಆದ ಐಫೋನ್ 32 ಲಕ್ಷಕ್ಕೆ ಈಗ ಹರಾಜು... ಅಂತದ್ದೇನಿದೆ ಇದ್ರಲ್ಲಿ?
ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಆ ಚಪ್ಪಲಿಯ ಮೂಲ ಬೆಲೆ. ಅಂದಹಾಗೆ ಸ್ಟೀವ್ ಜಾಬ್ ಅವರ ಆ ಚಪ್ಪಲಿಯ ಮೂಲ ಬೆಲೆ 200 ಡಾಲರ್ ಅಂತೆ ಅಂದರೆ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಅಂದಾಜು ಬೆಲೆ 16 ಸಾವಿರ ರೂಪಾಯಿಗಳು. ಹೀಗಾಗಿಯೇ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಕಾರಣವಾಗಿದೆ. ಕೆಲವರು ನಮ್ಮ ಬಳಿಯೂ ಅದೇ ರೀತಿಯ ಚಪ್ಪಲಿ ಇದೆ ಎಂದು ಫೋಟೋ ತೆಗೆದು ಪೋಸ್ಟ್ ಮಾಡುತ್ತಿದ್ದಾರೆ. Birkenstock ಬ್ರಾಂಡ್‌ನ ಅದೇ ರೀತಿ ಕಾಣುವ ಚಪ್ಪಲಿ ನಮ್ಮ ಮನೆಯಲ್ಲೆಲ್ಲೋ ಇದ್ದು, ಅದಕ್ಕೆ ಕನಿಷ್ಠ 200 ಡಾಲರ್ ಹಣ ಸಿಕ್ಕಿದರೆ ಅದೇ ನನಗೆ ದೊಡ್ಡ ಅಚ್ಚರಿಯಾಗಲಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
A ragged pair of Birkenstocks once worn by Apple founder Steve Jobs fetched the highest price ever paid for a pair of sandals at an auction, according to Julien’s. https://t.co/JF5QhFu598
— The Washington Post (@washingtonpost)
ಇನ್ನು ಈ ಚಪ್ಪಲಿಯನ್ನು ಹರಾಜು ಮಾಡಿದ ಹರಾಜು ಸಂಸ್ಥೆ ಜೂಲಿಯನ್ (Julien’s Auction) ಈ ಚಪ್ಪಲಿಯ ಬಗ್ಗೆ ವಿವರ ನೀಡಿದ್ದು, ಒಂದು ಜೊತೆ ಕಂದು ಬಣ್ಣದ ಸ್ಯೂಡ್ ಲೆದರ್ ಬರ್ಕೆನ್‌ಸ್ಟಾಕ್ ಅರಿಜೋನಾ ಚಪ್ಪಲ್‌ಗಳನ್ನು (brown suede leather Birkenstock Arizona sandals) ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ (Steve Jobs) ಅವರು ಧರಿಸಿದ್ದರು. ಅವರ ಬದುಕಿನ ಪ್ರಮುಖ ಸಂದರ್ಭಗಳಲ್ಲಿ ಈ ಚಪ್ಪಲಿಯನ್ನು ಅವರು ಧರಿಸಿದ್ದರು. 1976ರಲ್ಲಿ ಸ್ಟೀವ್ ಜಾಬ್ಸ್ ಅವರು ಸ್ಟೀವ್ ವೋಜ್ನಿಯಾಕ್ (Steve Wozniak) ಅವರೊಂದಿಗೆ ಸೇರಿಕೊಂಡು ಲಾಸ್ ಆಲ್ಟೋಸ್ ಗ್ಯಾರೇಜ್‌ನಲ್ಲಿ (Los Altos garage) ಆಪಲ್ ಕಂಪ್ಯೂಟರ್‌ಗಳಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಗಲೂ ಈ ಪಾದರಕ್ಷೆ ಅವರ ಕಾಲಿನಲ್ಲಿತ್ತು ಎಂದು ಹರಾಜು ಸಂಸ್ಥೆ ಹೇಳಿಕೊಂಡಿದೆ. ಅಲ್ಲದೇ ಈ ಚಪ್ಪಲಿಗಳನ್ನು ಈ ಹಿಂದೆ ಇಟಲಿಯಲ್ಲಿ(Italy) ನಡೆದ 'ಸಲೋನ್ ಡೆಲ್ ಮೊಬೈಲ್' ಎಂಬ ವಸ್ತು ಪ್ರದರ್ಶನದಲ್ಲೂ ಪ್ರದರ್ಶನಕ್ಕೆ ಇಡಲಾಗಿತ್ತು.
iPhone 14: ನೂತನ ಫೋನ್‌ಗಳ ಬಿಡುಗಡೆ ವಿರುದ್ಧ ಕಿಡಿ ಕಾರಿದ ಸ್ಟೀವ್ ಜಾಬ್ಸ್ ಪುತ್ರಿ