ಇರಾನ್: ಹಿಜಾಬ್ ಹೋರಾಟದಲ್ಲಿ ಬಳಿಕ ಇರಾನ್‌ನಲ್ಲಿ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಹತ್ಯೆಗಳಾಗುತ್ತಿವೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಇರಾನ್ ಆತಂಕವಾದಿಗಳು ಈಗ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದಾರೆ. ನವಂಬರ್‌ನಿಂದ ಇಲ್ಲಿಯವರೆಗೆ ಇರಾನ್‌ನಲ್ಲಿ 1000ಕ್ಕೂ ಹೆಚ್ಚು ಓದುವ ಹೆಣ್ಣು ಮಕ್ಕಳನ್ನು ವಿಷವುಣಿಸಿ ಕೈಕಾಲು ಬಾರದಂತೆ ಮಾಡಲಾಗಿದೆ.
ಮೊದಲಬಾರಿಗೆ ಈ ಪ್ರಕರಣ 2022ರ ನವಂಬರ್ 30 ರಂದು ಕೋಮ್‌ನಲ್ಲಿ (Qom)ಪತ್ತೆಯಾಗಿತ್ತು. ವಿಷಾನಿಲ ಉಸಿರಾಟದಿಂದ 18 ಮಕ್ಕಳು ಆಸ್ಪತ್ರೆ ಸೇರಿದ್ದರು. ಇದಾಗಿ ಎರಡು ವಾರ ಕಳೆಯುವಷ್ಟರಲ್ಲಿ ಅದೇ ಶಾಲೆಯಲ್ಲಿ ಸುಮಾರು 50 ವಿದ್ಯಾರ್ಥಿನಿಯರು ಮತ್ತೆ ಇದೇ ರೀತಿಯ ಪ್ರಕರಣದಲ್ಲಿ ಆಸ್ಪತ್ರೆ ಸೇರಿದ್ದರು. ಇದಾದ ಬಳಿಕ ಇತ್ತೀಚೆಗೆ ಫೆಬ್ರವರಿ 14 ರಂದು ಕೋಮ್‌ನಾದ್ಯಂತ ಇರುವ ಒಟ್ಟು 13 ಶಾಲೆಗಳ 100ಕ್ಕೂ ಹೆಚ್ಚು ವಿದ್ಯಾರ್ಥನಿಯರು ಅಸ್ವಸ್ಥರಾಗಿದ್ದರು.
ಬಾಲಕಿಯರ ಶಿಕ್ಷಣ ತಡೆಯಲು 100ಕ್ಕೂ ಹೆಚ್ಚು ಮಕ್ಕಳಿಗೆ ವಿಷವುಣಿಸಿದ ದುರುಳರು; ಇರಾನ್ ಸರ್ಕೌರ ಮೌನ!
ಕಳೆದ ವಾರ ನನ್ನ ಒಬ್ಬಳು ಮಗಳು ಈ ವಿಷ ಪ್ರಕರಣದಿಂದ ಅಸ್ವಸ್ಥಳಾಗಿದ್ದು, ಈಗ ಆಕೆಗೆ ಕಾಲಿನಲ್ಲಿ ತೊಂದರೆಯಾಗಿದ್ದು, ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕರಣದ ಸಂತ್ರಸ್ತೆಯಾದ ವಿದ್ಯಾರ್ಥಿನಿಯೊಬ್ಬರ ತಾಯಿ ಹೇಳಿಕೊಂಡಿದ್ದಾರೆ. ಮಾರ್ಚ್ 1ರವರೆಗೆ ಒಟ್ಟು 26 ಶಾಲೆಗಳ ಮೇಲೆ ಈ ರೀತಿಯ ವಿಷ ದಾಳಿ ನಡೆದಿದೆ. ತೆಹ್ರಾನ್ (Tehran, ಅರ್ದಬಿಲ್ (Ardabill), ಶಾಹಿನ್ಶಹರ್ (Shahinshar), ಕೆರ್ಮನ್ಶಹಹ್ (Kermanshah) ನಗರಗಳ ಶಾಲೆಗಳಲ್ಲಿ ಈ ವಿಷ ದಾಳಿ ಕಂಡು ಬಂದು ಮಕ್ಕಳು ಅಸ್ವಸ್ಥರಾಗಿದ್ದಾರೆ. ಕರಜ್ ಹಾಗೂ ಬೆರುಜೆರ್ಡ್‌ನ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿನಿ ನಿಲಯಗಳನ್ನು ಕೂಡ ಇದು ತಲುಪಿದೆ.
ಈ ಬಗ್ಗೆ ಕಳೆದ ಭಾನುವಾರ ಪ್ರತಿಕ್ರಿಯಿಸಿದ ಇರಾನ್ ಸರ್ಕಾರ (Iran Govt) ಆರೋಗ್ಯ ಸಚಿವ ಯೂನಸ್ ಪನ್ಹಿ(Younes Panahi) ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ಸಲುವಾಗಿ ಈ ದಾಳಿ ನಡೆಯುತ್ತಿದೆ ಎಂದಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಮಕ್ಕಳು ಈ ವಿಷ ಸರಪಣಿಯಿಂದಾಗಿ ಆಸ್ಪತ್ರೆಗಳಲ್ಲಿ ನರಳಾಡುತ್ತಿದ್ದಾರೆ. ವಾಂತಿ, ತಲೆನೋವು, ಉಸಿರಾಟಕ್ಕೆ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಯ ಕೈಕಾಲುಗಳಲ್ಲಿ ನಡುಕ ಮುಂತಾದ ಲಕ್ಷಣಗಳು ಈ ಸರಣಿ ವಿಷವುಣಿಸುವಿಕೆಯಿಂದ ಸಾಮೂಹಿಕವಾಗಿ ಮಕ್ಕಳಲ್ಲಿ ಕಂಡು ಬಂದಿದೆ.
ಹಿಜಾಬ್ ಧರಿಸಿದರೆ ನಾ ನಾನಾಗಿರಲ್ಲ ಎಂದ ಇರಾನ್‌ನ ಚೆಸ್ ಆಟಗಾರ್ತಿ
ಇಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ಅದರಲ್ಲೂ ವಿದ್ಯಾರ್ಥಿಗಳು ಮಹಿಳೆ, ಜೀವನ ಸ್ವಾತಂತ್ರ್ಯದ ಬಗ್ಗೆ ಇರಾನ್‌ನಲ್ಲಿ ಕ್ರಾಂತಿಗೆ ಮುಂದಾಗಿರುವುದರಿಂದ ಹೆಣ್ಣು ಮಕ್ಕಳೇ ಈ ಮೂಲಭೂತವಾದಿಗಳ ಪ್ರಮುಖ ಗುರಿಯಾಗಿದ್ದಾರೆ. ಇತ್ತ ಇರಾನ್ ಆಡಳಿತವೂ ಈ ಹೆಣ್ಣು ಮಕ್ಕಳ ಶಾಲೆಗಳಲ್ಲಿ ವಿಷವುಣಿಸುವಿಕೆಯನ್ನು ತಡೆಯಲು ವಿಫಲವಾಗಿದೆ. ಇದು ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿದೆ. ಇರಾನ್‌ನ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸುರಕ್ಷತೆಯ ಮೇಲಿನ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಅಂತಾರಾಷ್ಟ್ರೀಯ ಸಮುದಾಯವೂ ಇದರ ಬಗ್ಗೆ ಗಮನಹರಿಸಬೇಕು ಎಂಬುದು ಅಲ್ಲಿನ ಹೆಣ್ಣು ಮಕ್ಕಳ ಅಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ