ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕಿಯ ಹೆಲ್ಮೆಟ್‌ ಸರಿಪಡಿಸಿದ ಪೊಲೀಸ್‌ಗೆ ಕ್ಯಾಂಡಿ ನೀಡಲು ಮುಂದಾದ ಪೋರಿ: ವಿಡಿಯೋ ವೈರಲ್‌

Published : Mar 02, 2023, 02:37 PM IST
ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕಿಯ ಹೆಲ್ಮೆಟ್‌ ಸರಿಪಡಿಸಿದ ಪೊಲೀಸ್‌ಗೆ ಕ್ಯಾಂಡಿ ನೀಡಲು ಮುಂದಾದ ಪೋರಿ: ವಿಡಿಯೋ ವೈರಲ್‌

ಸಾರಾಂಶ

ಪೊಲೀಸ್‌ ಸಿಬ್ಬಂದಿ ಮತ್ತು ಮಗುವಿನ ನಡುವಿನ ಸಿಹಿ ವಿನಿಮಯವನ್ನು ಹಲವು ಜನರು ಇಷ್ಟಪಟ್ಟಿದ್ದಾರೆ. ಮಕ್ಕಳು ಎಷ್ಟು ಮುಗ್ಧರು ಎಂಬುದನ್ನು ಹಲವರು ಕಮೆಂಟ್‌ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಕ್ಕಳ ವಿಡಿಯೋ ನೋಡೋದು ಅಂದ್ರೆ ಬಹುತೇಕರಿಗೆ ಇಷ್ಟ ಅಲ್ವಾ.. ಇಂತಹ ವಿಡಿಯೋಗಳು ಸಾಕಷ್ಟು ವಿನೋದಮಯವಾಗಿರುತ್ತದೆ. ಕೆಲವೊಮ್ಮೆ ಮಕ್ಕಳು ಹೆಚ್ಚು ತುಂಟತನದಿಂದ ವರ್ತಿಸುತ್ತಾರೆ ಮತ್ತು ಕೆಲವೊಮ್ಮೆ ತುಂಬಾ ಸ್ವೀಟಾಗಿ ವರ್ತಿಸುತ್ತಾರೆ. ಈ ಸ್ವೀಟ್‌ ಕ್ಯೂಟ್‌ ವರ್ತನೆಗೆ ಹಲವರ ಖುಷಿಗೆ ಪಾರವೇ ಇರಲ್ಲ. ಅಂತಹ ಒಂದು ವಿಡಿಯೋ  ಇಲ್ಲಿದೆ ನೋಡಿ.. ಈ ಪುಟ್ಟ ಹುಡುಗಿಯ ವಿಡಿಯೋ ನೋಡಿದರೆ ನೀವು ತುಂಬಾ ಖುಷಿ ಪಡೋದಂತೂ ಖಂಡಿತ. 

ದಿ ಫಿಗೆನ್‌ ಎಂಬುವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಅಂಬೆಗಾಲಿಡುವ ಮಗು ತನ್ನ ಅಪ್ಪನನ್ನು ಹಿಡಿದಿಟ್ಟುಕೊಂಡು ದ್ವಿ ಚಕ್ರ ವಾಹನದಲ್ಲಿ ಕುಳಿತಿರುವುದನ್ನು ತೋರಿಸುತ್ತದೆ. ಪಿಂಕ್‌ ಬಣ್ಣದ  ಹೆಲ್ಮೆಟ್ ಧರಿಸಿರೋ ಈ ಮಗು ಕೈಯಲ್ಲಿ ಕ್ಯಾಂಡಿ ಸ್ಟಿಕ್‌ ಅನ್ನೂ ಇಟ್ಟುಕೊಂಡಿದೆ. ಇನ್ನು, ಈ ಮಗುವನ್ನು ನೋಡಿದ ಪೊಲೀಸ್‌ ಅಧಿಕಾರಿ ಅವರ ಬೈಕು ಟ್ರಾಫಿಕ್‌ನಲ್ಲಿ ಪಕ್ಕದಲ್ಲಿ ನಿಲ್ಲಿಸುತ್ತಿದ್ದಂತೆ, ಪುಟ್ಟ ಮಗು ಪೊಲೀಸ್‌ಗೆ ಕ್ಯಾಂಡಿ ಸ್ಟಿಕ್‌ ನೀಡಲು ಮುಂದಾಗುತ್ತಾಳೆ. 

ಇದನ್ನು ಓದಿ: ಮಕ್ಕಳು ಹಠ ಮಾಡದೆ ಬೇಗ ಮಲಗ್ಬೇಕು ಅಂದ್ರೆ ಮಲಗಿಸುವಾಗ ಇಂಥಾ ತಪ್ಪು ಮಾಡ್ಬೇಡಿ

ಇನ್ನು, ಇದನ್ನು ನೋಡಿದ ಪೊಲೀಸ್‌ ಆ ಬಾಲಕಿಯ ಹೆಲ್ಮೆಟ್ ಅನ್ನು ಸರಿಪಡಿಸುತ್ತಾರೆ ಮತ್ತು ಮಗು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಈ ಮನಮೋಹಕ ದೃಶ್ಯವನ್ನು ನೋಡ್ಲೇಬೇಕಾಗಿದೆ. 
 
ವಿಡಿಯೋ ನೋಡಿ:

ಈ ವಿಡಿಯೋವನ್ನು 1.1 ಮಿಲಿಯನ್‌ಗೂ ಹೆಚ್ಚು ನೆಟ್ಟಿಗರು ವೀಕ್ಷಿಸಿದ್ದು, ಇದಕ್ಕೆ 56 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಸಿಕ್ಕಿದೆ. ಅಲ್ಲದೆ, 6 ಸಾವಿರಕ್ಕೂ ಹೆಚ್ಚು ರೀಟ್ವೀಟ್‌, ಸಾಕಷ್ಟು ಕಮೆಂಟ್‌ ಅಥವಾ ಪ್ರತಿಕ್ರಿಯೆಗಳೂ ಲಭ್ಯವಾಗಿದೆ. ಪೊಲೀಸ್‌ ಸಿಬ್ಬಂದಿ ಮತ್ತು ಮಗುವಿನ ನಡುವಿನ ಸಿಹಿ ವಿನಿಮಯವನ್ನು ಹಲವು ಜನರು ಇಷ್ಟಪಟ್ಟಿದ್ದಾರೆ. ಮಕ್ಕಳು ಎಷ್ಟು ಮುಗ್ಧರು ಎಂಬುದನ್ನು ಹಲವರು ಕಮೆಂಟ್‌ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಮಗುವಿನ ಆರೈಕೆ ಮಾಡಿದ ಪೊಲೀಸ್‌ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: ನೀರಿಲ್ಲದ ಬಾವಿಗೆ ಎಸೆದ ಮಗುವನ್ನು ಕಾಪಾಡಿದ ನಾಗರಹಾವು, ಕಂದನ ಹೊಟ್ಟೆ ಸುತ್ತಿಕೊಂಡು ರಾತ್ರಿ ಇಡೀ ಕಾದ ಸರ್ಪ!

"ಪ್ರೀತಿ ಮತ್ತು ಸಹಾನುಭೂತಿಯಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ" ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಬರೆದಿದ್ದಾರೆ. ಟ್ರಾಫಿಕ್ ಪೊಲೀಸ್ ಅಧಿಕಾರಿಯಿಂದ ಸಂಪೂರ್ಣವಾಗಿ ಅದ್ಭುತವಾದ ಗೆಸ್ಚರ್, ಅವರು ಮಗುವಿನ ಹೆಲ್ಮೆಟ್ ಅನ್ನು ಸರಿಹೊಂದಿಸಿದರು. ಇವರು ಒಳ್ಳೆಯ ಅಥವಾ ಸಹಾಯ ಮಾಡುವ ಹವ್ಯಾಸವುಳ್ಳ ವ್ಯಕ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ಒಳ್ಳೆಯ ಮನುಷ್ಯ ಅಲ್ಲೇ ಇದ್ದಾರೆ. ಅವಳ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ಇದೆ ಎಂದೂ ಮತ್ತೊಬ್ಬರು ನೆಟ್ಟಿಗರು ಟ್ವೀಟ್‌ ಮಾಡಿದ್ದಾರೆ. 

ಈ ಘಟನೆ ಯಾವ ದೇಶದಲ್ಲಿ ಹಾಗೂ ಯಾವಾಗ ನಡೆದಿದೆ ಎಂಬುದು ಸರಿಯಾಗಿ ತಿಳಿದುಬಂದಿಲ್ಲ. ಆದರೆ, ಇಂಟರ್‌ನೆಟ್‌ನಲ್ಲಿ, ಮುಖ್ಯವಾಗಿ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಸಾಕಷ್ಟು ಹರಿದಾಡುತ್ತಿದೆ. ಇಂತಹ ವಿಡಿಯೋಗಳನ್ನು ಹೆಚ್ಚೆಚ್ಚು ನೋಡಿದ್ರೆ ನಮ್ಮ ಮನಸ್ಸಿನ ಯೋಚನೆಗಳನ್ನೂ ಮರೆತು ಬಿಡ್ಬಹುದು ಅಲ್ವಾ..?

ಇದನ್ನೂ ಓದಿ: ಅಯ್ಯೋ.. ಕಂದಮ್ಮ! ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಶಿಶು ಕೊಂದ ಬೀದಿ ನಾಯಿಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!